ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಕಿಂಗ್ ಕೊಹ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲೇ ವೇಗದ 16ಸಾವಿರ ರನ್ ದಾಖಲಿಸಿದ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.ಈ ಮೂಲಕ ಸಚಿನ್ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಹಿಂದೆ ಸಚಿನ್ 391 ಇನಿಂಗ್ಸ್‍ಗಳಲ್ಲಿ 16ಸಾವಿರ ರನ್ ಗಳಿಸಿದ್ದರು. ಇದೀಗ ವಿರಾಟ್ ಕೊಹ್ಲಿ 330 ಇನಿಂಗ್ಸ್‍ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಈ ಮೂಲಕ 16 ಸಾವಿರ ರನ್ ದಾಖಲಿಸಿದ ಭಾರತದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅದು ಕೂಡ 58ರ ಸರಾಸರಿಯಲ್ಲಿ. ಜೊತೆಗೆ 57 ಶತಕ ಹಾಗೂ 84 ಅರ್ಧಶತಗಳನ್ನು ಸಿಡಿಸಿದ್ದಾರೆ. ಆದ್ರೆ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಭಾರತದ ಪರ ಗರಿಷ್ಠ ರನ್ ಪೇರಿಸಿದ್ದ ದಾಖಲೆ ಸಚಿನ್ ಹೆಸರಿನಲ್ಲೇ ಅಂಟಿಕೊಂಡಿದೆ. ಸಚಿನ್ 60 ಶತಕ ಹಾಗೂ 114 ಅರ್ಧಶತಕಗಳ ನೆರವಿನಿಂದ 538 ಪಂದ್ಯಗಳಲ್ಲಿ 21,999 ರನ್ ಪೇರಿಸಿದ್ದಾರೆ. ಬಹುಶಃ ಈ ದಾಖಲೆ ಸದ್ಯಕ್ಕಂತು ಅಳಿಸಿ ಹೋಗುವ ಸಾದ್ಯತೆಗಳಿಲ್ಲ.
ಇನ್ನು ವಿಶ್ವ ಕ್ರಿಕೆಟ್‍ನಲ್ಲಿ ಇಂಗ್ಲೆಂಡ್‍ನ ಗ್ರಹಾಂ ಗೂಚ್ 601 ಪಂದ್ಯಗಳಲ್ಲಿ 44 ಶತಕ ಹಾಗೂ 139 ಅರ್ಧಶತಕಗಳ ಸಹಾಯದಿಂದ 22,211 ರನ್ ಗಳಿಸಿದ್ದಾರೆ. ಹಾಗೇ ಜಿಂಬಾಬ್ವೆಯ ಗ್ರೇಮ್ ಹಿಕ್630 ಪಂದ್ಯಗಳಲ್ಲಿ 40 ಶತಕ ಮತ್ತು 139 ಅರ್ಧಶತಕಗಳ ನೆರವಿನಿಂದ 22,059 ರನ್ ದಾಖಲಿಸಿದ್ದಾರೆ. ಇನ್ನೊಂದೆಡೆ ಶ್ರೀಲಂಕಾದ ಕುಮಾರ ಸಂಗಕ್ಕರ 501 ಪಂದ್ಯಗಳಲ್ಲಿ 39 ಶತಕ ಹಾಗೂ 120 ಅರ್ಧಶತಕಗಳ ನೆರವಿನಿಂದ 21,999 ರನ್ ಪೇರಿಸಿದ್ದಾರೆ.
ಇನ್ನುಳಿದಂತೆ ವಿವಿ ರಿಚಡ್ರ್ಸ್, ರಿಕಿಪಾಂಟಿಂಗ್, ಗ್ರೀನಿಚ್, ಸನತ್ ಜಯಸೂರ್ಯ ಅವರ ದಾಖಲೆಗಳನ್ನು ಕೊಹ್ಲಿ ಅಳಿಸಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ರಿಚಡ್ರ್ಸ್ 16,955, ಪಾಂಟಿಂಗ್ 16,363, ಗ್ರಿನಿಚ್ 16,349 ಹಾಗೂ ಸನತ್ ಜಯಸೂರ್ಯ 16,128 ರನ್ ಗಳಿಸಿದ್ದಾರೆ.








