ದೈವಭಕ್ತಿ ಉಳ್ಳವರೆಲ್ಲರೂ ಮನದಲ್ಲಿ – ಮನೆಯಲ್ಲಿ ದೇವರನ್ನು ಪೂಜಿಸುತ್ತಾರೆ. ದೇವಾಲಯಗಳಿಗೂ ಹೋಗುತ್ತಾರೆ. ಲಕ್ಷಾರ್ಚನೆ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕ ಮಾಡಿಸುತ್ತಾರೆ. ದೇವರಿಗೆ ಬೆಣ್ಣೆ ಅಲಂಕಾರ, ಗೋಡಂಬಿ ಅಲಂಕಾರ, ಅರಿಶಿನ ಕುಂಕುಮ ಅಲಂಕಾರ, ಪುಷ್ಪಾಲಂಕಾರ ಮಾಡಿಸುತ್ತಾರೆ.
ಈ ಅಭಿಷೇಕಗಳನ್ನು, ಅರ್ಚನೆಗಳನ್ನು ಮಾಡಿಸುವುದು ಏಕೆ? ನಿಜವಾಗಿಯೂ ದೇವರಿಗೆ ಅರ್ಚನೆ, ಅಭಿಷೇಕ ಮಾಡಿಸಬೇಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲೂ ಮೂಡಿರ ಬಹುದು. ಗುರು ಮೂಲ, ಋಷಿ ಮೂಲ, ದೈವ ಮೂಲ ಹುಡುಕ ಬಾರದು ಎಂಬ ಹಿರಿಯರ ಮಾತು ಈ ಬಗ್ಗೆ ಮುಂದಡಿ ಇಡಲು ಹಿಂಜರಿಯುವಂತೆ ಮಾಡಿರಲೂ ಬಹುದು.
ನಮಗೂ ಈ ಪ್ರಶ್ನೆ ಉದ್ಭವಿಸಿತ್ತು. ಪಂಡಿತ – ಪುರೋಹಿತರೊಂದಿಗೆ ಚರ್ಚಿಸಿದ ಬಳಿಕ ಅವರು ಹೇಳಿದ ಅಭಿಪ್ರಾಯಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ವೇದಕಾಲ : ಪರಬ್ರಹ್ಮ ಸೃಷ್ಟಿಯಾದ ವೇದಕಾಲದಲ್ಲಿ ಮೂರ್ತಿ ಪೂಜೆಯ ಪರಿಕಲ್ಪನೆಯೇ ಇರಲಿಲ್ಲವಂತೆ. ದೇವರನ್ನು ನಿರಾಕಾರ, ನಿರ್ಗುಣ ಎಂದು ಪೂಜಿಸುತ್ತಿದ್ದರು. ನಿರಾಕಾರ, ಆಕಾರ, ಸಾಕಾರ ಎಂದದ್ದು ಆಗಲೇ.
ಆನಂತರ ಅಂದರೆ 60 ಸಾವಿರ ವರ್ಷಗಳ ಹಿಂದೆ ವ್ಯಾಸ ಮಹರ್ಷಿಗಳು ವೇದಗಳನ್ನು ನಾಲ್ಕು ಭಾಗವಾಗಿ ಮಾಡಿದರು. ಆಚಾರ್ಯ ತ್ರಯರಾದ ಶ್ರೀ ಶಂಕರಾಚಾರ್ಯರು, ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರು ಬದಲಾಗುತ್ತಿದ್ದ ಸನ್ನಿವೇಶಗಳಿಗೆ ಅನುಗುಣವಾಗಿ ಪಂಡಿತ – ಪಾಮರರಿಗೂ ಅರಿವು ನೀಡುವ ರೀತಿಯಲ್ಲಿ ಮೂರ್ತಿಪೂಜೆಯನ್ನು ಸಕ್ರಮಗೊಳಿಸಿದರು.
ಅಷ್ಟಾದಶ ಪುರಾಣಗಳಲ್ಲಿನ ಉಲ್ಲೇಖ, ಮಹಾಭಾರತ, ರಾಮಾಯಣಗಳಲ್ಲಿ ಬರುವ ಮೂರ್ತಿ ಪೂಜೆಯ ಕಲ್ಪನೆ ಹಾಗೂ ಭಾಗವತಗಳನ್ನನುಸರಿಸಿ ದೇವರ ಮೂರ್ತಿಗಳನ್ನು ಕಡೆಯಲಾಯಿತು. ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರು ವಿಷ್ಣು ಮೂರ್ತಿಗಳ ಪೂಜೆಗೆ ಕಾರಣಾದರೆ, ಶಂಕರರು ಶಿವ ಹಾಗೂ ಶಕ್ತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದರು.
ಕಲಿಯುಗದಲ್ಲಿ ಮನುಷ್ಯನ ಮನಸ್ಸು ಚಂಚಲವಾದ್ದರಿಂದ ಹಾಗೂ ದೇವರು ನಿರ್ವಿಕಾರ, ನಿರ್ಗುಣ ಎಂದರೆ ಆ ಸತ್ಯವನ್ನು ಅರಿಯಲಾರದ ಪಾಮರನಿಗೆ ಇದುವೇ ದೇವರು, ದೇವರು ಹೀಗಿದ್ದ ಎಂದು ತೋರಿಸಲು ಅಂದು ದೇವರ ಮೂರ್ತಿಗಳ ಪ್ರತಿಷ್ಠಾಪನೆ ಅನಿವಾರ್ಯವಾಗಿತ್ತು ಎನ್ನುತ್ತಾರೆ ಗಜೇಂದ್ರನಗರದ ಈಶ್ವರಂ ಶ್ರೀನಿವಾಸ ಶಾಸ್ತ್ರೀಗಳು.
ಈ ಮೂರ್ತಿಗಳನ್ನು ಪೂಜಿಸಿ, ದೇವರನ್ನು ಮೆಚ್ಚಿಸಿ ಫಲ ಪಡೆಯಲು ಶೋಡಷೋಪಚಾರ (16 ಬಗೆಯ ಪೂಜೆ)ಗಳನ್ನು ವಿವರಿಸಲಾಯಿತು. ಆ ಪ್ರಕಾರವಾಗಿ ಧ್ಯಾನ, ಆಸನ, ಪಾದ್ಯ, ಅರ್ಘ್ಯ, ಆಚಮನ, ಸ್ನಾನ, ವಸ್ತ್ರ, ಉತ್ತರೀಯ, ಆಭರಣ, ಗಂಧ, ಮಂಗಳದ್ರವ್ಯ, ಪುಷ್ಪ, ಆರ್ಚನ, ದೂಪ-ದೀಪ-ನೀರಾಜನ, ನೈವೇದ್ಯ ಹಾಗೂ ಪ್ರಾರ್ಥನೆಗಳು ಅನುಷ್ಠಾನಕ್ಕೆ ಬಂದವು.
ಆಚಾರ್ಯರು ಈ ಒಂದೊಂದು ಪೂಜೆಯ ಕ್ರಮವನ್ನೂ ಜನಸಾಮಾನ್ಯರಿಗೂ ತಿಳಿಯುವಂತೆ ವಿವರಿಸಿ ಜಯಪ್ರಿಯಗೊಳಿಸಿದರು ಎನ್ನುತ್ತಾರೆ ಶ್ರೀನಿವಾಸ ಶಾಸ್ತ್ರೀಗಳು. ಸೂರ್ಯಾರಾಧನೆ, ಸೂರ್ಯ ನಮಸ್ಕಾರ, ಧ್ಯಾನ ಆಗಲೇ ಅಚರಣೆಗೆ ಬಂದದ್ದು. ದೇಹೋ ದೇವಾಲಯ ಪ್ರೋಕ್ತೋ ಜೀವೋ ದೇವಃ ಸನಾತನಃ ತ್ಯಜೇತ್ ನಿರ್ಮಾಲ್ಯಂಸೋ ಅಹಂ ಭಾವೇನ ಪೂಜಯೇತ್ ಎಂಬ ಉಲ್ಲೇಖವನ್ನೇ ಬಸವಣ್ಣನವರು ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂದು ಶ್ರೀಸಾಮಾನ್ಯನಿಗೂ ತಿಳಿಯುವಂತೆ ವಿವರಿಸಿದರೆನ್ನುತ್ತಾರೆ ಅವರು.
ಆದರೆ, ದೇವರನ್ನು ಪೂಜಿಸುವಾಗ ಮನಸ್ಸು, ಪೂಜಾಸ್ಥಳ ಎಲ್ಲವೂ ಅಂತರ್‌ಶುದ್ಧಿ, ಬಹಿರ್‌ಶುದ್ಧಿಯಿಂದಿರಬೇಕು ಎಂಬ ಕಾರಣದಿಂದ ಸ್ನಾನ (ಶುದ್ಧೋದಕ) ರೂಢಿಗೆ ಬಂದಿದೆ. ನಾವು ನಮ್ಮ ಮಕ್ಕಳು ಮಾತು ಕೇಳದಿದ್ದಾಗ ಚಿನ್ನ, ರನ್ನ, ಬಂಗಾರಿ, ಮುದ್ದು ಎಂದು ಪುಸಲಾಯಿಸುವಂತೆಯೇ, ನಮ್ಮ ಕರೆಯನ್ನು ಕೇಳದ ದೇವರಿಗೆ ಹತ್ತಾರು ಹೆಸರುಗಳಿಂದ ಕರೆಯುವ ಮತ್ತು ‘ಕಲೌನಾಮ ಸಂಕೀರ್ತನೆ’(ಕಲಿಯುಗದಲ್ಲಿ ನಾಮ ಸಂಕೀರ್ತನೆಯಿಂದ ಪುರುಷಾರ್ಥ ಸಿದ್ಧಿ) ಮೂಲಕ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನವಾಗಿ ಸಹಸ್ರ ನಾಮಾರ್ಚನೆ, ಲಲಿತಾ ಸಹಸ್ರನಾಮವೇ, ಕೋಟಿ ನಾಮಾರ್ಚನೆ ಮೊದಲಾದವು ಹುಟ್ಟಿಕೊಂಡವು ಎಂಬುದು ಅವರ ಅಂಬೋಣ.
ಅಭಿಷೇಕ : ಮೊದಲೇ ಹೇಳಿದಂತೆ ಅಂತರ್‌ಶುದ್ಧಿ ಬಹಿರ್‌ಶುದ್ಧಿಗಾಗಿ ಮೊದಲು ಶುದ್ಧೋದಕ (ಶುಚಿಯಾದ ನೀರು) ಸ್ನಾನ, ಆನಂತರ ಮಾನವ ನಿರ್ಮಿತವಲ್ಲದ ನೈಸರ್ಗಿಕವಾದ ದ್ರವಗಳಾದ ಕಾಮಧೇನುವಿನಿಂದ ದೊರಕುವ ಹಾಲು-ಮೊಸರು, ತುಪ್ಪ, ಜೇನ್ನೊಣದಿಂದ ಸಿಗುವ ಮಧು, ಕಬ್ಬಿನಿಂದ ಬರುವ ಸಕ್ಕರೆ ಹಾಗೂ ಕಲ್ಪವೃಕ್ಷದಿಂದ ದತ್ತವಾದ ಎಳನೀರಿನಿಂದ ಮಾಡುವ ಅಭಿಷೇಕಕ್ಕೆ ಪಂಚಾಮೃತಾಭಿಷೇಕ ಎನ್ನಲಾಯಿತು. (ಮುಕ್ಕೋಟಿ ದೇವರುಗಳೂ ಗೋವಿನಲ್ಲಿದ್ದಾರೆ ಎಂಬುದು ಪ್ರತೀತಿ ಹೀಗಾಗೇ ಗೋವಿನ ಹಾಲನ್ನು ಮಾತ್ರ ಅಭಿಷೇಕಕ್ಕೆ ಬಳಸಲಾಗುತ್ತದೆ)
ಈ ಅಭಿಷೇಕಗಳನ್ನು ಮಾಡುವಾಗ ಏಕಾಗ್ರತೆ ಹಾಗೂ ದೈವಸ್ತುತಿಗಾಗಿ ಮಂತ್ರಗಳ ಉಗಮವಾಯಿತು. ಚಮಕ, ನಮಕಗಳ ಉಚ್ಚಾರಣೆಯಾಂದಿಗೆ ದೇವರಿಗೆ ಅಭಿಷೇಕ ಮಾಡುವುದು ರೂಢಿಗೆ ಬಂತು.
ಅಲಂಕಾರ : ನಾವು ಸ್ನಾನ ಮಾಡಿ ಶುಚಿಯಾದ ವಸ್ತ್ರ ಧರಿಸುವಂತೆಯೇ ದೇವರಿಗೂ ಅಲಂಕಾರ ಮಾಡಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದವರು, ತಮ್ಮ ಗಂಡು ಮಕ್ಕಳಿಗೇ ಹೆಣ್ಣು ಅಲಂಕಾರ ಹಾಕಿ ನೋಡಿ ಆನಂದಪಡುವಂತೆಯೇ ಭಕ್ತನು, ತನ್ನ ಆರಾಧ್ಯ ದೈವನಿಗೆ ಬೆಣ್ಣೆ, ಗೋಡಂಬಿ, ಪುಷ್ಪ ಮೊದಲಾದುವುಗಳಿಂದ ಅಲಂಕರಿಸಿ ಆನಂದಪಡುತ್ತಾನೆ. ಮನುಷ್ಯನ ಉತ್ಕಟ ಭಕ್ತಿಯಿಂದ ಬೆಳೆದದ್ದೇ ವಿವಿಧ ಬಗೆಯ ಅಲಂಕಾರಗಳು.
ಧೂಪ – ದೀಪ : ವಾತಾವರಣದಲ್ಲಿ ಕಾಣದ ಕಲ್ಮಶಗಳನ್ನು ಹೋಗಲಾಡಿಸಿ ಕಲುಷಿತ ವಾತಾವರಣವನ್ನು ಶುದ್ಧವಾಗಿಡಲು ಸಾಮ್ರಾಣಿ, ದಶಾಂಗ – ಗುಗ್ಗುಳಗಳ ಬಳಕೆ. ಅಲ್ಲದೆ ಶೀತಕ್ಕೆ ಉಷ್ಣವೇ ಮದ್ದು ಅಲ್ಲವೇ ಹೀಗಾಗಿ ಶುದ್ಧೋದಕ- ಪಂಚಾಮೃತ ಅಭಿಷೇಕದಿಂದ ಶೀತವಾದ ದೇವರಿಗೆ ಮಂಗಳಾರತಿ, ದೀಪಾರತಿ, ಸಾಂಮ್ರಾಣಿಯ ಮೂಲಕ ಉಷ್ಣ ಪೂಜೆ ಮಾಡಲಾಗುತ್ತದೆ.
ದೀಪ : ದೀಪ ಶಕ್ತಿ ಸ್ವರೂಪ, ಬೆಳಕಲ್ಲಿ ಆತ್ಮನಿವೇದನಾರ್ಥವಾಗಿ ಹಾಗೂ ಕಣ್ಣತುಂಬ ದೇವರನ್ನು ಬೆಳಕಲ್ಲಿ ತುಂಬಿಕೊಳ್ಳುವ ಸಲುವಾಗಿ ದೀಪಾರಾಧನೆ.
ನೈವೇದ್ಯ : ಇಷ್ಟೆಲ್ಲಾ ಆದ ಮೇಲೆ ದೇವರ ಹಸಿವು ನೀಗಸಲು ಏನಾದರೂ ಕೊಡಬೇಕಲ್ಲವೇ ಅದುವೇ ನೈವೇದ್ಯ. ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಕದಳಿಫಲ ಹಾಗೂ ನಾರಿಕೇಳ (ಬಾಳೆಹಣ್ಣು ಹಾಗೂ ತೆಂಗಿನಕಾಯಿ) ಮಾತ್ರವೇ ಶ್ರೇಷ್ಠ. ಈ ಎರಡೂ ಮಾನವನ ಎಂಜಲಿನ ಸೋಂಕಿಲ್ಲದೆ ಬೆಳೆವ ಫಲಗಳು.
ಮಾವು, ಹಲಸು ಎಲ್ಲವೂ ನಾವು ತಿಂದು ಎಸೆದ ಹಣ್ಣಿನ ಒಳಗಿರುವ ಬೀಜದಿಂದ ಹುಟ್ಟುವುದಾದ್ದರಿಂದ ಇದು ನೈವೇದ್ಯಕ್ಕೆ ಯೋಗ್ಯವಲ್ಲ ಎನ್ನುತ್ತಾರೆ ಹಿರಿಯರು.
ವ್ರತಗಳು : ನಮ್ಮಲ್ಲಿ ಬಹುತೇಕ ವರ್ಷದ 365ದಿನಕ್ಕೂ ಒಂದೊಂದು ವ್ರತವಿದೆ. ಈ ಸ್ಪರ್ಧೆ, ಒತ್ತಡದ ವಿಶ್ವದಲ್ಲಿ ನಿರ್ದಿಷ್ಟ ದಿನಗಳಲ್ಲಾದರೂ ದೇವರನ್ನು ಸ್ಮರಿಸಲಿ ಎಂಬ ಕಾರಣಕ್ಕಾಗಿ ಹಬ್ಬ- ಹರಿದಿನ – ವ್ರತಗಳನ್ನು ಮಾಡಲಾಗಿದೆ. ಹೇಗೆಂದರೆ ಒಂದು ಊರಿಗೆ ಒಂದೇ ಒಂದು ದೇವಾಲಯ ಸಾಕು. ಆದರೂ ಎಲ್ಲ ಬಡಾವಣೆಗಳಲ್ಲೂ ದೇವಾಲಯ ಇರುತ್ತದೆ.
ಇದಕ್ಕೆ ಕಾರಣ ಇಷ್ಟೇ ಬದುಕಿನ ಜಂಜಾಟದಲ್ಲಿ ಮನುಷ್ಯ ದೇವಾಲಯದ ಬಳಿ ಬಂದಾಗಲಾದರೂ, ಕ್ಷಣಕಾಲ ಆ ದೇವರನ್ನು ಸ್ಮರಿಸಲಿ ಎಂಬುದು ಇದರ ಹಿಂದಿರುವ ಉದ್ದೇಶ. ಮನೆಯಲ್ಲಿ ಕುಳಿತು ದೇವರನ್ನು ಗಂಟೆ ಗಟ್ಟಲೆ ಪೂಜಿಸಲಾಗದ ಈ ಯಾಂತ್ರಿಕ ಬದುಕಿನಲ್ಲಿ ದೇವಾಲಯಗಳು ಕಂಡಾಗ, ನಮಗರಿವಿಲ್ಲದೆ ನಾವು ತಲೆಬಾಗಿತ್ತೇವೆ.
ದೇವರನ್ನು ಆರಾಧಿಸುವಾಗ ಅನುಸರಿಸಬೇಕಾದ 30 ನಿಯಮಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸಿ ಪ್ರಾರ್ಥನೆ ಮಾಡಿದರೆ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಪ್ರತಿಯೊಂದು ಶುಭ ಸಂದರ್ಭದಲ್ಲೂ ಪಂಚದೇವರನ್ನು ಪ್ರಾರ್ಥಿಸುವುದು ಕಡ್ಡಾಯವಾಗಿರಬೇಕು. ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣು ದೇವರು ಸೇರಿ ಪಂಚದೇವರು ಎಂದು ಕರೆಯಲಾಗುತ್ತದೆ. ದೈನಂದಿನ ಪ್ರಾರ್ಥನೆಯಲ್ಲಿ ಅವುಗಳನ್ನು ಸೇರಿಸುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ನೀವು ಈ ನಿಯಮವನ್ನು ಸರಿಯಾಗಿ ಪಾಲಿಸಿದರೆ ಸಂಪತ್ತು, ಆರೋಗ್ಯ ಮತ್ತು ಸಂತೋಷ ಯಾವಾಗಲೂ ನಿಮ್ಮ ಸುತ್ತಲೂ ಇರುತ್ತದೆ.
ಗಣೇಶ, ಶಿವ ಮತ್ತು ಭೈರವ ದೇವರಿಗೆ ತುಳಸಿ ಪತ್ರೆಯನ್ನು ಅರ್ಪಿಸಬಾರದು.
ದುರ್ಗಾ ದೇವಿಗೆ ಗರಿಕೆ ಹುಲ್ಲು ಅರ್ಪಿಸಬಾರದು. ಇದನ್ನು ಗಣೇಶನಿಗೆ ವಿಶೇಷವಾಗಿ ಶಿಫಾರಸು ಮಾಡಲಾಗಿದೆ.
ಸೂರ್ಯ ದೇವರಿಗೆ ದೈವಿಕ ಶಂಖದಿಂದ ನೀರು ನೀಡಬಾರದು
ನೀವು ಸ್ನಾನ ಮಾಡದೆ ಎಂದಿಗೂ ತುಳಸಿ ಎಲೆಗಳನ್ನು ಕೀಳಬಾರದು. ಸ್ನಾನ ಮಾಡದೆ ತರಿದುಹಾಕಿದರೆ ಅಥವಾ ತುಳಸಿ ಗಿಡದಿಂದ ಕಿತ್ತುಕೊಂಡರೆ ದೇವರು ಈ ಎಲೆಗಳನ್ನು ಅರ್ಪಿಸಿದಾಗ ಸ್ವೀಕರಿಸುವುದಿಲ್ಲ ಎಂದು ನಂಬಲಾಗಿದೆ.
ನಾವು ದಿನಕ್ಕೆ 5 ಬಾರಿ ಪ್ರಾರ್ಥಿಸಬೇಕು ಎಂದು ಪುರಾಣ ಹೇಳುತ್ತದೆ. ಇದನ್ನು ಅನುಸರಿಸುವ ಕುಟುಂಬಗಳಿಗೆ ಎಂದಿಗೂ ಆರ್ಥಿಕ ಅಥವಾ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ನಂಬಲಾಗಿದೆ.
ಬೆಳಗ್ಗೆ 5 ರಿಂದ 6 ಗಂಟೆಗೆ: ಬ್ರಹ್ಮ ಪೂಜೆ ಹಾಗೂ ಆರತಿ
ಬೆಳಗ್ಗೆ 9 ರಿಂದ 10 ಗಂಟೆಗೆ – ಮತ್ತೆ ಪೂಜೆ ಮಾಡಿ
ಮಧ್ಯಾಹ್ನದ ಪೂಜೆ: ಇದಾದ ಬಳಿಕ ದೇವರನ್ನು ನಿದ್ದೆ ಮಾಡಲು ಬಿಡವೇಕು
ಸಂಜೆ 4 ರಿಂದ 5 ಗಂಟೆಗೆ: ಪೂಜಾ ಹಾಗೂ ಆರತಿ
ರಾತ್ರಿ 8 ರಿಂದ 9 ಗಂಟೆಗೆ: ಶಯನ ಪೂಜೆ
ಗಂಗಾಜಲವನ್ನು ಯಾವುದೇ ಪ್ಲಾಸ್ಟಿಕ್, ಅಲ್ಯೂಮಿನಿಯಂ ಅಥವಾ ಕಬ್ಬಿಣದ ಪಾತ್ರೆಗಳಲ್ಲಿ ಇಡಬಾರದು. ಇದನ್ನು ತಾಮ್ರದ ಪಾತ್ರೆಗಳಲ್ಲಿ ಇಡಲು ಸೂಚಿಸಲಾಗಿದೆ.
ಮಹಿಳೆಯರು ಅಥವಾ ಪುರುಷರು ಯಾವುದೇ ವಿಚಿತ್ರ ಸಂದರ್ಭಗಳಲ್ಲಿ ದೈವಿಕ ಶಂಖವನ್ನು ಊದಬಾರದು. ಹಾಗೆ ಮಾಡಿದರೆ ಲಕ್ಷ್ಮೀ ನಿಮ್ಮ ಮನೆಯಿಂದ ನಿರ್ಗಮಿಸುತ್ತಾಳೆ ಎಂದು ಹೇಳಲಾಗುತ್ತದೆ.
ದೇವರು ಮತ್ತು ದೇವತೆಗಳ ವಿಗ್ರಹಗಳ ಕಡೆಗೆ ನೀವು ಎಂದಿಗೂ ನಿಮ್ಮ ಬೆನ್ನನ್ನು ತೋರಿಸಬಾರದು.
ಕೇತಕಿ ಪುಷ್ಪವನ್ನು ಶಿವನಿಗೆ ಯಾವ ಕಾರಣಕ್ಕೂ ಅರ್ಪಿಸಬಾರದು.
ಯಾವುದೇ ಆಶಯವನ್ನು ಈಡೇರಿಸಲು ನೀವು ಯಾವುದೇ ದೇವರನ್ನು ಬೇಡಿಕೊಳ್ಳುವಾಗ ಯಾವಾಗಲೂ ದಕ್ಷಿಣೆ ನೀಡಬೇಕು. ದಾನ ಮಾಡುವಾಗ ನಿಮ್ಮ ಯಾವುದೇ ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವ ನಿರ್ಣಯವನ್ನು ತೆಗೆದುಕೊಳ್ಳಿ ಅಥವಾ ನಿರ್ಧಾರ ಮಾಡಿ. ನಿಮ್ಮ ನಕಾರಾತ್ಮಕತೆಯನ್ನು ನೀವು ಎಷ್ಟು ಬೇಗನೆ ನಾಶ ಮಾಡುತ್ತೀರೋ ಅಷ್ಟು ಬೇಗ ನಿಮ್ಮ ಆಸೆ ಈಡೇರುತ್ತದೆ.
ಗರಿಕೆಯನ್ನು (ದುರ್ವಾ ಹುಲ್ಲು) ಭಾನುವಾರ ದೇವರಿಗೆ ಅರ್ಪಿಸಬಾರದು.
ಲಕ್ಷ್ಮೀಗೆ ಕಮಲದ ಹೂವನ್ನು ಅರ್ಪಿಸಬೇಕು. ನೀವು 5 ದಿನಗಳವರೆಗೆ ಇದೇ ಹೂವಿಗೆ ನೀರನ್ನು ಸಿಂಪಡಿಸಿ ಮತ್ತೆ ಮತ್ತೆ ಅರ್ಪಿಸಬಹುದು. ಬಿಲ್ವದಣ್ಣು ಶಿವನಿಗೆ ಪ್ರಿಯವಾದುದಾಗಿದ್ದು, 6 ತಿಂಗಳವರೆಗೆ ಇದು ಹಳಸುವುದಿಲ್ಲ. ನೀರನ್ನು ಸಿಂಪಡಿಸಿದ ನಂತರ ಅದನ್ನು ಮತ್ತೆ ಶಿವಲಿಂಗಕ್ಕೆ ಅರ್ಪಿಸಬಹುದು.
ತುಳಸಿ ಎಲೆಗಳನ್ನು ಸಹ 11 ದಿನಗಳವರೆಗೆ ಹಾಳಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ನೀವು ಪ್ರತಿದಿನ ನೀರನ್ನು ಸಿಂಪಡಿಸಿ ಅದೇ ಪತ್ರೆಗಳನ್ನು ದೇವರಿಗೆ ಅರ್ಪಿಸಬಹುದು.
ಜನರು ತಮ್ಮ ಕೈಯಲ್ಲಿ ಹೂವುಗಳನ್ನು ಇಟ್ಟುಕೊಂಡು ದೇವರಿಗೆ ಅರ್ಪಿಸುತ್ತಾರೆ. ಆದರೆ, ಇದು ಸರಿಯಾದ ಮಾರ್ಗವಲ್ಲ ಎಂದು ಹೇಳಲಾಗುತ್ತದೆ. ನಾವು ಹೂವನ್ನು ತಾಮ್ರದ ತಟ್ಟೆಯಲ್ಲಿ ಇರಿಸಿ ಅದರ ಸಹಾಯದಿಂದ ಅರ್ಪಿಸಬೇಕು.
ನಾವು ತಾಮ್ರದ ಪಾತ್ರೆಗಳಲ್ಲಿ ಗಂಧವನ್ನು ಇಟ್ಟುಕೊಳ್ಳಬಾರದು.
ನೀವು ಒಂದು ದೀಪದ ಸಹಾಯದಿಂದ ಮತ್ತೊಂದು ದೀಪವನ್ನು ಬೆಳಗಿಸಬಾರದು. ಹಾಗೆ ಮಾಡುವ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ.
ಬುಧವಾರ ಮತ್ತು ಭಾನುವಾರ ಅರಳಿ ಮರಕ್ಕೆ ನೀರು ಹಾಕಬಾರದು.
ಪೂರ್ವ ಅಥವಾ ಉತ್ತರದ ಕಡೆಗೆ ಮುಖ ಮಾಡಿ ಪೂಜೆಯನ್ನು ಯಾವಾಗಲೂ ಮಾಡಬೇಕು. ಬೆಳಿಗ್ಗೆ 6 ರಿಂದ 8 ರವರೆಗೆ ಪ್ರಾರ್ಥಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ದೇವರ ಪ್ರಾರ್ಥನೆ ಮಾಡಲು ಉಣ್ಣೆಯ ಚಾಪೆಯನ್ನು ಯಾವಾಗಲೂ ಪರಿಗಣಿಸಿ.
ನಿಮ್ಮ ದೇವರ ಕೋಣೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚಿ. ಒಮ್ಮೆ ತುಪ್ಪ ಮತ್ತು ಇನ್ನೊಮ್ಮೆ ಎಣ್ಣೆಯಿಂದ ದೀಪವನ್ನು ಹಚ್ಚಿ.
ಪೂಜೆ ಅಥವಾ ಆರತಿ ಪೂರ್ಣಗೊಂಡ ನಂತರ, ನಾವು 3 ಪರಿಕ್ರಮಗಳನ್ನು ಒಂದೇ ಸ್ಥಳದಲ್ಲಿ ನಿಲ್ಲುವಂತೆ ಮಾಡಬೇಕು.
ಭಾನುವಾರ, ಚಂದ್ರ ಮಾಸದ 11 ನೇ ದಿನ, ಚಂದ್ರ ಮಾಸದ 12 ನೇ ದಿನ ಮತ್ತು ಸಂಕ್ರಾಂತಿಯಂದು ತುಳಸಿ ಪತ್ರೆಯನ್ನು ಗಿಡದಿಂದ ಕೀಳಬಾರದು.
ಆರತಿ ಮಾಡುವಾಗ ಈ ವಿಧಾನವನ್ನು ಅನುಸರಿಸಿ
ದೇವರ ಪಾದಗಳು – 4 ಸುತ್ತು ಆರತಿ ಮಾಡಿ
ಹೊಕ್ಕಳು (ನಾಭಿ) – 2 ಸುತ್ತು ಆರತಿ ಮಾಡಿ
ಮುಖ – 1 ಅಥವಾ 3 ಬಾರಿ ಆರತಿ ಮಾಡಿ
ಕನಿಷ್ಠ 7 ಬಾರಿ ಈ ರೀತಿ ಮಾಡಿ
ಪೂಜಾ ಸ್ಥಳ 1, 3, 5, 7, 9, 11 ಇಂಚುಗಳಷ್ಟು ವಿಗ್ರಹಗಳನ್ನು ಹೊಂದಿರಬೇಕು. ಇದಕ್ಕಿಂತ ದೊಡ್ಡದಾದ ದೇವತೆಗಳನ್ನು ನಾವು ಹೊಂದಿರಬಾರದು. ಗಣೇಶ, ಸರಸ್ವತಿ ಮತ್ತು ಲಕ್ಷ್ಮೀ ವಿಗ್ರಹಗಳ ನಿಂತಿರುವ ರೂಪ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು.
ಗಣೇಶನ ಅಥವಾ ಯಾವುದೇ ದೇವಿಯ ಮೂರು ವಿಗ್ರಹಗಳನ್ನು ಎಂದಿಗೂ ಸ್ಥಾಪಿಸಬೇಡಿ. ಅಲ್ಲದೆ, ಎರಡು ಶಿವಲಿಂಗ, ಎರಡು ಶಾಲಿಗ್ರಾಮ, ಸೂರ್ಯ ದೇವತೆಯ ಎರಡು ವಿಗ್ರಹಗಳು ಮತ್ತು ಎರಡು ಗೋಮತಿ ಚಕ್ರಗಳನ್ನು ಸಹ ಸ್ಥಾಪಿಸಬಾರದು.
ನಿಮ್ಮ ಪೂಜಾ ಸ್ಥಳದಲ್ಲಿ ಪ್ರತಿಷ್ಠಿತ ವಿಗ್ರಹಗಳನ್ನು ಮಾತ್ರ ಇರಿಸಿ. ಉಡುಗೊರೆ ನೀಡಿರುವ ಮತ್ತು ಮರದ ಅಥವಾ ಫೈಬರ್ ವಿಗ್ರಹಗಳನ್ನು ಇಟ್ಟುಕೊಳ್ಳಬೇಡಿ. ಗಾಜು ಒಡೆದುಹೋದರೆ ತಕ್ಷಣ ತೆಗೆದುಹಾಕಿ. ಒಡೆದುಹೋದ ವಿಗ್ರಹಗಳಿಗೆ ಪ್ರಾರ್ಥಿಸಬೇಡಿ. ಅವುಗಳನ್ನು ಶಾಸ್ತ್ರದ ಪ್ರಕಾರ ನಿರ್ಬಂಧಿಸಲಾಗಿದೆ ಮತ್ತು ಅವುಗಳನ್ನು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆ ಒಡೆದ ವಿಗ್ರಹಗಳನ್ನು ವಿಸರ್ಜನೆ ಮಾಡುವ ಮೂಲಕ ವಿಲೇವಾರಿ ಮಾಡಬೇಕು. ಆದರೆ, ಶಿವಲಿಂಗವನ್ನು ಮಾತ್ರ ಯಾವುದೇ ಸ್ಥಿತಿಯಲ್ಲಿದ್ದರೂ ಅದನ್ನು ಮುರಿದುಹೋಗಿದೆ ಎಂದು ಪರಿಗಣಿಸುವುದಿಲ್ಲ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನಿಮ್ಮ ಮಂದಿರದ ಮೇಲೆ ಬಟ್ಟೆ, ಪರಿಕರಗಳು, ಪುಸ್ತಕಗಳು ಅಥವಾ ಪೂಜಾ ಸಾಮಗ್ರಿಗಳನ್ನು ಇಡಬೇಡಿ. ದೇವರ ಕೋಣೆ ಮುಂಭಾಗಕ್ಕೆ ಪರದೆಯನ್ನು ಹಾಕುವುದು ಬಹಳ ಅವಶ್ಯಕ. ಇನ್ನು, ನಿಮ್ಮ ಹೆತ್ತವರ ಫೋಟೋಗಳನ್ನು ಪೂಜಾ ಕೋಣೆಯಲ್ಲಿ ಇಡಬೇಡಿ.
ನೀವು ಈ ಕೆಳಗಿನ ವಿಗ್ರಹಗಳ ಸುತ್ತ ಇಷ್ಟು ಸುತ್ತು ಸುತ್ತಬಹುದು
ವಿಷ್ಣು – 4 ಸುತ್ತು
ಗಣೇಶ – 3 ಸುತ್ತು
ಸೂರ್ಯ ದೇವತೆ – 7 ಸುತ್ತು
ದುರ್ಗಾ – 1 ಸುತ್ತು
ಶಿವ – ಅರ್ಧ ಸುತ್ತು
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು








