ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿನ್ ಪೈಲಟ್ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಡಿಸಿಎಂ ಸ್ಥಾನದಿಂದ ವಜಾಗೊಂಡಿದ್ದಾರೆ. ಜೊತೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದಲೂ ಅವರನ್ನನು ಕಿತ್ತು ಹಾಕಲಾಗಿದ್ದು, ಈ ಬಗ್ಗೆ ಎಲ್ಲೂ ತುಟಿಬಿಚ್ಚದ ರಾಹುಲ್ ಗಾಂಧಿ, ಈಗ ಮೌನ ಮುರಿದಿದ್ದಾರೆ.
ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನ ಸಭೆಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ.. ಯಾರಾದರೂ ಕಾಂಗ್ರೆಸ್ ಪಕ್ಷ ಬಿಟ್ಟುಹೋಗುವುದಿದ್ದರೆ ಹೋಗಲಿ. ನಿಮ್ಮಂಥ ಯುವನಾಯಕರಿಗಾಗಿ ಪಕ್ಷ ಬಾಗಿಲು ತೆರೆಯಲಿದೆ ಎಂದು ಪೈಲಟ್ ಹೆಸರನ್ನು ಉಲ್ಲೇಖಿಸದೇ ಹೇಳಿದ್ದಾರೆ. ಈ ಮೂಲಕ ಸಚಿನ್ ಪೈಲಟ್ ಪಕ್ಷ ತೊರೆಯುವುದಿದ್ದರೇ ತಮ್ಮ ಅಭ್ಯಂತರ ಇಲ್ಲ ಎಂದು ಸಂದೇಶ ರವಾನಿಸಿದ್ದಾರೆ.








