ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿದ್ದ ಬೆನ್ನಲ್ಲೇ ನಿನ್ನೆ ದಂಪತಿಗಳಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಸ್ವತಃ ಧ್ರುವ ಸರ್ಜಾ ಅವರೇ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ರು. ಕೊರೊನಾ ಟೆಸ್ಟ್ ಮಾಡಿಸಿದ್ದು, ರಿಪೋರ್ಟ್ ಪಾಸಿಟಿವ್ ಬಂದಿದೆ. ಕೆಲ ಸಾಮಾನ್ಯ ರೋಗಲಕ್ಷಣಗಳಿದ್ದು ನಾವಿಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ರು.. ಆದ್ರೆ ಇದೀಗ ಧ್ರುವ ಹಾಗೂ ಅವರ ಪತ್ನಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ.
ಮೈಲ್ಡ್ ಸಿಂಟೆಮ್ಸ್ ಅಂದ್ರೆ ಸೋಂಕು ಇನ್ನೂ ಪ್ರಾಥಮಿಕ ಹಂತದಲ್ಲೇ ಇರುವ ಕಾರಣ ಮನೆಯ್ಲೇ ಕ್ವಾರಂಟೈನಲ್ಲಿದ್ದು ಗುಣಪಡಿಸಿಕೊಳ್ಳುವುದಾಗಿ ಧ್ರುವ ಹೇಳಿಕೊಂಡಿದ್ದಾರೆ. ಹೀಗಾಗಿ ಇದೀಗ ಆಸ್ಪತ್ರೆಯಿಂದ ತಮ್ಮ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಸದ್ಯ ಧ್ರುವ ಅವರಿಗೂ ಕೊರೊನಾ ಧೃಡಪಟ್ಟ ಹಿನ್ನೆಲೆ ಆತಂಕ್ಕೆ ಒಳಗಾಗಿದ್ದ ಅಭಿಮಾನಿಗಳಲ್ಲಿ ಈ ವಿಷಯ ಕೊಂಚ ಸಮಾಧಾನ ಮೂಡಿಸಿದೆ.








