ವಸಂತ ಅಥವಾ ಸರಸ್ವತಿ ಪಂಚಮಿ:-
ಇದೇ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನ ಅಂದರೆ ಪಂಚಮಿ ತಿಥಿಯ ಈ ದಿನ (23-01-2026) ‘ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ. ಈ ದಿನದಿಂದಲೇ ವಸಂತನ ಆಗಮನವಾಗುತ್ತದೆ. ಶ್ರೀ ಕೃಷ್ಣ ಪರಮಾತ್ಮ ವಸಂತನನ್ನು ಋತುಗಳ ರಾಜ ಎಂದು ಹೊಗಳಿದ್ದಾನೆ. ವಸಂತ ಋತುವಿನಲ್ಲಿ ಸೂರ್ಯನು ಪ್ರಕಾಶಮಾನವಾಗಿ ಬೆಳಕನ್ನು ಚೆಲ್ಲುತ್ತಾನೆ. ಹೊಳೆವ ಬೆಳಕಿನ ಕಿರಣಗಳಿಂದ ಪ್ರಕೃತಿಯು ಕಂಗೊಳಿಸುತ್ತದೆ. ಇಂಥ ವಿಶೇಷಗಳಿಗಾಗಿ ‘ವಸಂತ ಋತು’ ವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಇದು ಉತ್ತರ ಭಾರತದ ವರೆಗೆ ಬಹಳ ವಿಶೇಷ ವಾದ ದಿನ. ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನ. ಮುಹೂರ್ತವನ್ನು ನೋಡು ವುದೇ ಬೇಡ. ಇಡೀ ದಿನವೂ ಸರ್ವಾರ್ಥಕ ಸಿದ್ಧಯೋಗವಿದೆ. ದೇವಿ ಭಾಗವತದ ಪ್ರಕಾರ ಸರಸ್ವತಿ ದೇವಿ ಆದಿಶಕ್ತಿಯ ಮೂರು ರೂಪಗಳಲ್ಲಿ ಒಬ್ಬಳಾಗಿದ್ದಾಳೆ. ಜ್ಞಾನ ಸಂಗೀತ, ಕಲೆಗಳ, ಅಧಿದೇವತೆ ಸರಸ್ವತಿಯಾಗಿದ್ದಾಳೆ. ಬುದ್ಧಿ ಚುರುಕಾಗಲು ಕಂಠ ಮಧುರವಾಗಲು, ವಿದ್ಯೆ ಬುದ್ಧಿ ನೆನಪಿನ ಶಕ್ತಿ, ಸಿದ್ಧಿಸಲು ಸರಸ್ವತಿಯನ್ನು ಆರಾಧಿಸುತ್ತೇನೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ವಸಂತ ಋತುವಿನ ದಿನವೇ ಸರಸ್ವತಿ ದೇವಿ ಹುಟ್ಟಿದ ದಿನ ಎನ್ನುತ್ತಾರೆ. ಬ್ರಹ್ಮ ಬ್ರಹ್ಮಾಂಡವನ್ನು ಸೃಷ್ಟಿಸಿದ. ಆದರೆ ಎಲ್ಲೆಲ್ಲೂ ನಿಶಬ್ದ ಶಬ್ದವೇ ಇರದ ಬ್ರಹ್ಮಾಂ ಡದಿಂದ ಬ್ರಹ್ಮನಿಗೆ ಬಹಳ ಬೇಸರವಾಯಿತು. ಬ್ರಹ್ಮಾಂಡವೇ ಖಾಲಿ ಖಾಲಿ ಎನಿಸಿ
ಬ್ರಹ್ಮ ತನ್ನ ಶಂಖದಲ್ಲಿದ್ದ ನೀರನ್ನು ತೆಗೆದು ಭೂಮಿಯ ಮೇಲೆ ಸಿಂಪಡಿಸಿದಾಗ
ಭೂಮಿಗೆ ಬಿಟ್ಟ ನೀರಿನಿಂದ ಭೂಮಿ ಕಂಪಿಸಿತು. ಆಗ ಭೂಮಿಯೊಳಗಿಂದ ದೇವಿ ಉದ್ಭವಿಸಿದಳು. ಆಕೆ ತನ್ನ ನಾಲ್ಕು ಕೈಗಳಲ್ಲಿ, ವೀಣೆ, ಪುಸ್ತಕ, ಜಪದಮಣಿ, ಕಮಂಡಲ, ಹಿಡಿದುಕೊಂಡು ಉದ್ಭವಿಸದ ದೇವಿಯೇ ‘ಸರಸ್ವತಿ’ ಸರಸ್ವತಿ. ವೀಣೆಯಿಂದ ನಾದ ನುಡಿಸುತ್ತಿದ್ದಂತೆ, ಬ್ರಹ್ಮಾಂಡದಲ್ಲಿ ಶಬ್ದ ಉಗಮವಾಗಿ ಬ್ರಹ್ಮಾಂಡವೇ ಲವಲವಿಕೆಯಿಂದ ತುಂಬುತ್ತದೆ. ಹೀಗೆ ‘ ದೇವಿ ಸರಸ್ವತಿ’ ಜನಿಸಿದ ದಿನ ಮಾಘ ಮಾಸದ ಶುಕ್ಲ ಪಕ್ಷದ ವಸಂತ ಮಾಸದ ಆರಂಭದ ದಿನವಾಗಿದ್ದು ‘ಲಕ್ಷ್ಮಿ ಪೂಜೆ’ ಎಂದು ಸರಸ್ವತಿ ಪೂಜೆಯನ್ನು ಆಚರಿಸುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ.
ಸರಸ್ವತಿ ಪಂಚಮಿ ಯನ್ನು‘ ಶ್ರೀ ಪಂಚಮಿ’ ಎಂದು ಕರೆಯುತ್ತಾರೆ. ಈ ದಿನ ಮಕ್ಕಳು ಸರಸ್ವತಿ ದೇವಿ ಯನ್ನು ಆರಾಧಿಸಿ ಸ್ತೋತ್ರ ಪಠಿಸಿದರೆ ಮಕ್ಕಳಿಗೆ ಜ್ಞಾನ ವೃದ್ಧಿಯಾಗುತ್ತದೆ. ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಶಿಲ್ಪ ಕಲೆ, ಸಕಲ ವಿದ್ಯೆಗಳನ್ನು ಅನುಗ್ರಹಿಸುತ್ತಾಳೆ. ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಗೆ ಮುನ್ಸೂಚಕವಾಗಿ ಸರಸ್ವತಿ ಪೂಜೆಯನ್ನು ಇದೇ ದಿನ ಆಚರಣೆ ಮಾಡುತ್ತಾರೆ. ಮಕ್ಕಳಿಗೆ ಸ್ತೋತ್ರ, ಹಾಡು, ಕಂಠಪಾಠದ ಪದ್ಯಗಳನ್ನು, ಹೇಳಿಸುತ್ತಾರೆ. ರಾಮಾಯಣದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ ಶ್ರೀ ರಾಮನ ಬರಬೇಕೆಗಾಗಿ ಕಾಯುತ್ತಿದ್ದ ಶಬರಿಯನ್ನು ‘ವಸಂತ ಪಂಚಮಿ’ ಯಂದೇ ಭೇಟಿಯಾಗಿ ಪ್ರೀತಿಯಿಂದ ಕೊಟ್ಟ ಹಣ್ಣುಗಳನ್ನು ತಿಂದು ಶಬರಿಯ ಅಪೇಕ್ಷೆಯಂತೆ ಮುಕ್ತಿ ಕರುಣಿಸಿದನು. ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು ಕಪಿಲ ಮುನಿಗಳ ಶಾಪದಿಂದ ಸದ್ಗತಿ ದೊರೆಯದೆ ಅಲೆಯುತ್ತಿ ದ್ದರು. ಅವರ ಮೋಕ್ಷಕ್ಕಾಗಿ ಕಠಿಣ ತಪಸ್ಸು ಮಾಡುತ್ತಿದ್ದ ಭಗೀರಥನ ಭಕ್ತಿಗೆ ಮೆಚ್ಚಿ -ಒಪ್ಪಿ, ತಾಯಿ ಗಂಗೆ ಧರೆಗಿಳಿದು ಬಂದು ಇಡೀ ಭೂಮಿಯನ್ನು ತಂಪಾಗಿಸಿ, ಸಗರ ಚಕ್ರವರ್ತಿ ಮಕ್ಕಳಿಗೆ ಮೋಕ್ಷ ಕರುಣಿಸಿದ್ದು ಮಾಘ ಮಾಸ ‘ವಸಂತ ಪಂಚಮಿ’ ದಿನ ಆದುದರಿಂದ ಇಂದು ಗಂಗೆಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ.
ದಕ್ಷ ಪುತ್ರಿ ದಾಕ್ಷಾಣಿಯ ಸಾವಿನಿಂದ ಕಂಗೆಟ್ಟ ಶಿವನು ಧ್ಯಾನದಲ್ಲಿ ಮುಳುಗಿರುವಾಗ ಪರ್ವತರಾಜನ ಪುತ್ರಿ ಪಾರ್ವತಿ ಶಿವನನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸಿನಲ್ಲಿ ನಿರತಳಾಗಿದ್ದಳು. ಇತ್ತ ದೇವತೆಗಳಿಗೆ ಕಂಠಕನಾಗಿದ್ದ ಅಸುರ ತಾರಕಾಸುರನ ಸಂಹಾರಕ್ಕಾಗಿ ಶಿವ ಪಾರ್ವತಿಯರ ವಿವಾಹ ಅನಿವಾರ್ಯವಾಗಿತ್ತು. ದೇವಾನು ದೇವತೆಗಳೆಲ್ಲ ನಿರ್ಧರಿಸಿ ಮನ್ಮಥನನ್ನು ಭೂಮಿಗೆ ಕಳಿಸಿ ಶಿವನ ಧ್ಯಾನ ಭಂಗ ಮಾಡಿ ಪಾರ್ವತಿಯತ್ತ ಮನಸ್ಸು ಒಲಿಯುವಂತೆ ಮಾಡಲು ಪ್ರೇರೇಪಿಸಿದರು. ದೇವತೆಗಳ ಅಪೇಕ್ಷೆಯಂತೆ, ವಸಂತನೊಂದಿಗೆ ಬಂದ ಮನ್ಮಥ ಹೊ ಬಾಣವನ್ನು ಹೂಡಿ ಶಿವನನ್ನು ಎಚ್ಚರಿಸಿದ ದಿನ ಇದೆ ಆಗಿತ್ತು. ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣು ತೆರೆದು. ಮನ್ಮಥನನ್ನು ಕಳೆದುಕೊಂಡ ರತಿಯ ರೋದನ ಹಾಗೂ ಪ್ರಾರ್ಥನೆಗೆ ಮಣಿದ ಶಿವನು ಮನ್ಮಥನನ್ನು ಬದುಕಿಸಿದನು.
ಈ ಮೂಲಕ ‘ಶಿವ ಪಾರ್ವತಿಯರ’ ಕಲ್ಯಾಣಕ್ಕೆ ಮನ್ಮಥನು ಕಾರಣನಾದನು.
ಹೀಗಾಗಿ ಇದನ್ನು ‘ಮದನ ಪಂಚಮಿ’ ಎಂದು ಕರೆಯುತ್ತಾರೆ. ಇಂದು ಮನೆಗಳಲ್ಲಿ ‘ರತಿ ಮನ್ಮಥರ’ ಫೋಟೋ ಇಟ್ಟು ಮದುವೆಯಾದ ಹೆಣ್ಣು ಮಕ್ಕಳು ಪೂಜೆ ಮಾಡಿ ಪ್ರಾರ್ಥಿಸಿದರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎಂದೂ, ಹಾಗೆಯೇ ವಿವಾಹ ಆಗುವ ಹೆಣ್ಣು ಮಕ್ಕಳು ಪೂಜಿಸಿದರೆ, ಮನ್ಮಥನಂತ ಸುಂದರ ರೂಪ, ಶಿವನಂತ ಶಕ್ತಿಶಾಲಿ ಯಾದ ಪತಿ ದೊರೆಯುತ್ತಾನೆ ಎಂಬ ನಂಬಿಕೆ ಇದೆ.‘ವಸಂತ ಋತು’ ಆರಂಭವಾಗಿ, ಚಳಿ ಕಡಿಮೆಯಾಗುತ್ತದೆ ವಸಂತ ಕಾಲದ ವಾತಾವರಣ ಮೈ ಮನಕ್ಕೆ ಹಿತಕರವಾಗಿರುತ್ತದೆ. ಮನಸ್ಸು ಉಲ್ಲಾಸವಾಗಿರುತ್ತದೆ.
ವಿಶೇಷವಾಗಿ ಸರಸ್ವತಿ ಪೂಜೆ ಮಾಡುತ್ತಾರೆ. ಪೂಜೆಗೆ ಸರಸ್ವತಿ ಫೋಟೋವನ್ನು ಇಟ್ಟು, ಮುಂದೆ ಗಣಪತಿ, ಜೊತೆಗೆ ಮಕ್ಕಳ ಕೆಲವು ಪುಸ್ತಕಗಳು ಪೆನ್ನು ಪೆನ್ಸಿಲ್ಲು ಕಂಪಾಸ್ ಬಾಕ್ಸ್ ಇವುಗಳನ್ನು ಜೋಡಿಸುತ್ತಾರೆ. ಸರಸ್ವತಿ ದೇವಿಗೆ ಹಳದಿ ಬಟ್ಟೆ ಇಷ್ಟವಾದ್ದರಿಂದ ಆ ಬಟ್ಟೆಯನ್ನು ಧರಿಸುತ್ತಾರೆ. ಹಳದಿ ಬಣ್ಣದ ಸೇವಂತಿಗೆ, ಗುಲಾಬಿ, ದಾಸವಾಳ, ಮುಂತಾದ ಹೂಗಳಿಂದ ಅಲಂಕರಿಸುತ್ತಾರೆ. ಮೊದಲು ವಿದ್ಯಾಧಿಪತಿ ಗಣಪತಿ ಪೂಜೆ ಮಾಡಿ, ವಿದ್ಯಾದೇವಿ ಸರಸ್ವತಿಗೆ ಮಂಗಳ ದ್ರವ್ಯ ಗಳನ್ನು ಅರ್ಪಿಸಿ ವಿಶೇಷವಾಗಿ ಆರಾಧಿಸುತ್ತಾರೆ. ನೆರೆಹೊರೆ ಮಕ್ಕಳೆಲ್ಲ ಸೇರಿ ಹಾಡುತ್ತಾರೆ. ಪುಟ್ಟ ಮಕ್ಕಳು ಗಟ್ಟಿಯಾಗಿ ಸ್ತೋತ್ರವನ್ನು ಹೇಳುತ್ತಾರೆ. ಸರಸ್ವತಿ ಅಷ್ಟೋತ್ತರ ಹೇಳಿ ಅರ್ಚನೆ ಮಾಡುತ್ತಾರೆ. ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಆರಂಭಿಸುತ್ತಾರೆ. ಈ ದಿನ ಎಷ್ಟು ಶುಭ ಎಂದರೆ, ಗುದ್ದಲಿ ಪೂಜೆ, ಗೃಹಪ್ರವೇಶ, ಮಕ್ಕಳಿಗೆ ಚೌಲ, ಅಕ್ಷರಾಭ್ಯಾಸ, ನೃತ್ಯ ಕಲೆ ಅಥವಾ ಸಂಗೀತ ಅಭ್ಯಾಸ ಇನ್ನು ಏನಾದರೂ ಹೊಸತಾಗಿ ಕಲಿಯಲು ಶುಭಾರಂಭದ ದಿನವಾಗಿದೆ. ವೇದಿಕೆ ಮೇಲೆ ಮೊಟ್ಟಮೊದಲು ನೃತ್ಯ ಪ್ರದರ್ಶನ, ಸಂಗೀತ ಅಥವಾ ಬೇರೆ ಯಾವುದೇ ಕಲೆಯನ್ನು ಆರಂಭ ಮಾಡಲು ಶುಭದಿನ ಶುಭ ಮಹೂರ್ತ. ಸರಸ್ವತಿ ನೈವೇದ್ಯಕ್ಕೆ
ವಿಶೇಷವಾಗಿ ಕೇಸರಿಬಾತು ಮಾಡುತ್ತಾರೆ ಅಥವಾ ಪಂಚಕಜ್ಜಾಯ, ಸಿಹಿ ಅವಲಕ್ಕಿ ಯನ್ನು ಮಾಡಿ ಹಂಚುತ್ತಾರೆ. ಈ ದಿನ ವಸಂತಾಗಮನದ ಸಂತೋಷ ಜೊತೆಗೆ ಪೂಜೆಯ ಕಾರಣ ಒಗ್ಗಟ್ಟಾಗಿ ಸಂಭ್ರಮಿಸುತ್ತಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ವಸಂತ / ಸರಸ್ವತಿ ಪಂಚಮಿ ಜ್ಞಾನ, ಕಲಿಕೆ ಮತ್ತು ಹೊಸ ಆರಂಭಗಳ ಸಂಕೇತವಾಗಿದೆ. ವಸಂತನ ಆಗಮನದೊಂದಿಗೆ ಮನಸ್ಸಿಗೆ ಉಲ್ಲಾಸ, ಜೀವನಕ್ಕೆ ಹೊಸ ಚೈತನ್ಯ ದೊರೆಯುತ್ತದೆ. ಸರಸ್ವತಿ ದೇವಿಯ ಕೃಪೆಯಿಂದ ವಿದ್ಯೆ, ಬುದ್ಧಿ ಮತ್ತು ಸೃಜನಶೀಲತೆ ವೃದ್ಧಿಯಾಗಿ ಎಲ್ಲರ ಬದುಕು ಸಾರ್ಥಕವಾಗಲಿ.
|| ಸರಸ್ವತಿ ಸ್ತೋತ್ರ ||
ಶ್ವೇತಪದ್ಮಾಸನಾ ದೇವೀ
ಶ್ವೇತಪುಷ್ಪಪಶೋಭಿತಾ |
ಶ್ವೇತಾಂಬರಧರಾ ನಿತ್ಯಾ
ಶ್ವೇತಗಂಧಾನುಲೇಪನಾ ॥೧॥
ಶ್ವೇತಾಕ್ಷಸೂತ್ರಹಸ್ತಾ ಚ
ಶ್ವೇತಚಂದನಚರ್ಚಿತಾ |
ಶ್ವೇತವೀಣಾಧರಾ ಶುಭ್ರಾ
ಶ್ವೇತಾಲಂಕಾರಭೂಷಿತಾ ||೨||
ವಂದಿತಾ ಸಿದ್ಧಗಂಧವೈ೯ರಂಚಿತಾ
ಸುರದಾನವೈಃ |
ಪೂಜಿತಾ ಮುನಿಭಿಃ ಸರ್ವೈಕೃಷಿಭಿಃ
ಸೂಯತೇ ಸದಾ ||೩||
ಸ್ತೋತ್ರೇಣಾನೇನ ತಾಂ
ದೇವೀಂ ಜಗದ್ಧಾತ್ರೀಂ ಸರಸ್ವತೀಂ |
ಯೇ ಸ್ಮರಂತಿ ತ್ರಿಸಂಧ್ಯಾಯಾಂ ಸರ್ವಾಂ
ವಿದ್ಯಾಂ ಲಭಂತೇ ತೇ ||೪||








