ವಿಶ್ವಪ್ರಸಿದ್ಧ ತಿರುಪತಿಯ ತಿರುಮಲ ದೆವಾಲಯಯದ ಮೇಲೂ ಕೊರೊನಾ ತನ್ನ ಕರಿನೆರಳು ಬೀರಿದೆ. ದೇವಾಲಯದ ೫೦ ಅರ್ಚಕರ ಪೈಕಿ ೧೫ ಜನರಿಗೆ ಕೊರೊನಾ ವಕ್ಕರಿಸಿದೆ. ಇನ್ನೂ ೨೫ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಸಲಾಗಿದದು, ರಿಪೋಟ್ ð ಬಂದ ನಂತರ ಖಚಿತ ಮಾಹಿತಿ ಸಿಗಲಿದೆ. ಈ ಹಿನ್ನೆಲೆಯಲ್ಲಿ ದೇವರ ದರ್ಶನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಕೋರಿ ಟಿಟಿಡಿ ಸಿಬ್ಬಂದಿ ಮತ್ತು ಕೆಲಸಗಾರರ ಒಕ್ಕೂಟ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದೆ.
ಜು.10ರವರೆಗೆ ತಿರುಮಲದಲ್ಲಿ ಕಾರ್ಯನಿರ್ವಹಿಸುವ ಟಿಟಿಡಿಯ 1,865 ಸಿಬ್ಬಂದಿ, ಟಿಟಿಡಿಯ 1,704 ಹಾಗೂ 631 ಭಕ್ತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟು ೯೧ ಜನರಿಗೆ ಸೋಂಕು ತಗುಲಿರುವುದು ದೃಢವಾಗಿದ್ದ ಬಗ್ಗೆ ಆಡಳಿತ ಮಂಡಳಿ ಅಧಿಕೃತ ಮಾಹಿತಿ ನೀಡಿದೆ.