ವಿಜಯಪುರ: ಕೊರೊನಾ ಬಗ್ಗೆ ಜನರು ಭಯಪಡುವುದು ಬೇಡ ಎಂದು ಸರ್ಕಾರ ಹಾಗೂ ವೈದ್ಯರು ಆಗಾಗ ಹೇಳುತ್ತಲೇ ಬಂದಿದ್ದಾರೆ. ಆದರೆ ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾಗೆ ಹೆದರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಿಜಯಪುರದ ನಗರದ ಜೋರಾಪುರ ಪೇಟೆಯಲ್ಲಿ 57 ವರ್ಷದ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಕಾರಣದಿಂದ ಮೂರು ದಿನಗಳ ಹಿಂದೆ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ವೈದ್ಯರು ನಿಮ್ಮಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿವೆ. ಕೆಲ ಔಷಧಿ ನೀಡಿ ಕೋವಿಡ್ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಆದ್ರೆ ಆ ವ್ಯಕ್ತಿ ಕೊವಿಡ್ ಆಸ್ಪತ್ರೆಗೆ ತೆರಳುವ ಬದಲು ಮನೆಗೆ ಮರಳಿದ್ದಾರೆ.
ತನಗೆ ಕೊರೊನಾ ಬಂದಿದ್ದು ಬದುಕುವುದಿಲ್ಲ ಎಂದು ಭಾವಿಸಿಕೊಂಡ ವ್ಯಕ್ತಿ ಮನೆಯಲ್ಲಿ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ದಸರಾ ಹಬ್ಬದ ಸಂಭ್ರಮದ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸುವ ಸಾಂಪ್ರದಾಯಿಕ ಪಥಸಂಚಲನಗಳಿಗೆ ಸಂಬಂಧಿಸಿದಂತೆ ಡಿಕೆಶಿ ಸರ್ಕಾರ ಈಗ ಕಾನೂನಿನ ಚೌಕಟ್ಟನ್ನು ಬಿಗಿಗೊಳಿಸಿದೆ. ಸಾರ್ವಜನಿಕ ರಸ್ತೆಗಳಲ್ಲಿ...







