ADVERTISEMENT
Monday, February 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್ ಶಾಕ್: ಈ ಸಣ್ಣ ತಪ್ಪು ಮಾಡಿದರೆ ರದ್ದಾಗಲಿದೆ ಗ್ಯಾಸ್ ಕನೆಕ್ಷನ್!

Big shock from the Center for LPG consumers: If you make this small mistake, your gas connection will be canceled!

Shwetha by Shwetha
February 9, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ನೀವು ಅಡುಗೆ ಅನಿಲ ಅಥವಾ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಾಗಿದ್ದರೇ ನಿಮಗೊಂದು ಅತ್ಯಂತ ಮಹತ್ವದ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಕಠಿಣ ಸೂಚನೆಯೊಂದನ್ನು ರವಾನಿಸಿದ್ದು, ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಗ್ಯಾಸ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಹೌದು, ಎಲ್‌ಪಿಜಿ ಗ್ರಾಹಕರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಈಗ ಕಡ್ಡಾಯವಾಗಿದೆ.

ಕೇಂದ್ರ ಸರ್ಕಾರದಿಂದ ಖಡಕ್ ಆದೇಶ

Related posts

ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

February 9, 2026
ಜೆಮಿಮಾಗೆ ಜೀಸಸ್ ನೆರವಾಗಲಿಲ್ಲ ಸ್ಮೃತಿಯನ್ನು ತಿಮ್ಮಪ್ಪ ಕೈಬಿಡಲಿಲ್ಲ: ವಿಕೃತ ಟ್ರೋಲ್ ಗೆ ಪ್ರಕಾಶ್ ರಾಜ್ ಗರಂ

ಜೆಮಿಮಾಗೆ ಜೀಸಸ್ ನೆರವಾಗಲಿಲ್ಲ ಸ್ಮೃತಿಯನ್ನು ತಿಮ್ಮಪ್ಪ ಕೈಬಿಡಲಿಲ್ಲ: ವಿಕೃತ ಟ್ರೋಲ್ ಗೆ ಪ್ರಕಾಶ್ ರಾಜ್ ಗರಂ

February 9, 2026

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಗಟ್ಟಲು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ನಕಲಿ ಖಾತೆಗಳನ್ನು ತಡೆಯಲು ಮತ್ತು ಅರ್ಹರಿಗೆ ಮಾತ್ರ ಸಬ್ಸಿಡಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಗ್ರಾಹಕರು ಬಯೋಮೆಟ್ರಿಕ್ ಅಥವಾ ಆಧಾರ್ ಆಧಾರಿತ ಕೆವೈಸಿಯನ್ನು ಮಾಡಲೇಬೇಕು ಎಂದು ಆದೇಶಿಸಿದೆ.

ನಿರ್ಲಕ್ಷ್ಯ ಮಾಡಿದರೆ ಏನಾಗುತ್ತದೆ?

ಒಂದು ವೇಳೆ ಗ್ರಾಹಕರು ನಿಗದಿತ ಸಮಯದೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಭಾರೀ ಬೆಲೆ ತೆರಬೇಕಾಗುತ್ತದೆ.

1. ಗ್ಯಾಸ್ ಸಂಪರ್ಕ ರದ್ದು: ನಿಮ್ಮ ಹೆಸರಿನಲ್ಲಿರುವ ಗ್ಯಾಸ್ ಸಂಪರ್ಕವನ್ನು ಏಜೆನ್ಸಿಗಳು ರದ್ದುಗೊಳಿಸುವ ಸಾಧ್ಯತೆಯಿದೆ.
2. ಸಬ್ಸಿಡಿ ಸ್ಥಗಿತ: ಸರ್ಕಾರದ ವತಿಯಿಂದ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣ ಶಾಶ್ವತವಾಗಿ ನಿಂತುಹೋಗಲಿದೆ.
3. ಬುಕ್ಕಿಂಗ್ ಸಮಸ್ಯೆ: ಮುಂದಿನ ದಿನಗಳಲ್ಲಿ ಸಿಲಿಂಡರ್ ಬುಕ್ ಮಾಡುವಾಗ ಅಥವಾ ರೀಫಿಲ್ ಮಾಡುವಾಗ ತಾಂತ್ರಿಕ ಅಡಚಣೆಗಳು ಉಂಟಾಗಬಹುದು.

ಆನ್‌ಲೈನ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ?
ಮನೆಯಲ್ಲಿಯೇ ಕುಳಿತು ನೀವು ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು:

1. ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ: https://pmuy.gov.in/index.aspx ವೆಬ್‌ಸೈಟ್‌ಗೆ ಲಾಗಿನ್ ಆಗಿ.
2. ಮುಖಪುಟದಲ್ಲಿ ಕಾಣುವ KYC (ಕೆವೈಸಿ) ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಿಮ್ಮ ಗ್ಯಾಸ್ ಕಂಪನಿಯ (ಇಂಡೇನ್, ಎಚ್‌ಪಿ ಅಥವಾ ಭಾರತ್ ಗ್ಯಾಸ್) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
4. ಇದರ ಜೊತೆಗೆ ಆಧಾರ್ ಫೇಸ್ ಆರ್‌ಡಿ (Aadhaar Face RD) ಆ್ಯಪ್ ಅನ್ನು ಸಹ ಇನ್‌ಸ್ಟಾಲ್ ಮಾಡಿಕೊಳ್ಳಿ.
5. ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ನೋಂದಾಯಿತವಾಗಿರುವ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ.
6. eKYC ವಿಭಾಗಕ್ಕೆ ಹೋಗಿ, ಆಧಾರ್ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಿ.

ಆಫ್‌ಲೈನ್ ಮೂಲಕ ಮಾಡುವುದು ಹೇಗೆ?
ಸ್ಮಾರ್ಟ್ ಫೋನ್ ಬಳಸಲು ಬಾರದವರು ಚಿಂತಿಸುವ ಅಗತ್ಯವಿಲ್ಲ.

ಡೆಲಿವರಿ ಬಾಯ್ ಮೂಲಕ: ನಿಮ್ಮ ಮನೆಗೆ ಸಿಲಿಂಡರ್ ತಲುಪಿಸಲು ಬರುವ ಸಿಬ್ಬಂದಿಯ ಬಳಿ ಬಯೋಮೆಟ್ರಿಕ್ ಯಂತ್ರವಿರುತ್ತದೆ. ಅವರಿಗೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳಿನ ಗುರುತು ನೀಡುವ ಮೂಲಕ ಸ್ಥಳದಲ್ಲಿಯೇ ಕೆವೈಸಿ ಮಾಡಿಸಬಹುದು.

ಏಜೆನ್ಸಿ ಭೇಟಿ: ನೇರವಾಗಿ ನಿಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ, ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪಾಸ್‌ಬುಕ್ ನೀಡಿ ಕೆವೈಸಿ ಅಪ್‌ಡೇಟ್ ಮಾಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ
ಗ್ರಾಹಕರಿಗೆ ಯಾವುದೇ ಗೊಂದಲಗಳಿದ್ದರೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ. ಹೆಚ್ಚಿನ ವಿವರಗಳಿಗಾಗಿ 18002333555 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ರಾಜ್ಯ ಸರ್ಕಾರಗಳ ಯೋಜನೆಗಳಿಗೂ ಕಂಟಕ

ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದಾದ್ಯಂತ ಈಗಾಗಲೇ ಶೇ. 75 ರಷ್ಟು ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಶೇ. 25 ರಷ್ಟು ಮಂದಿ ತಕ್ಷಣವೇ ಇದನ್ನು ಮಾಡಬೇಕಿದೆ. ಪ್ರಮುಖವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಸರ್ಕಾರ ನೀಡುವ ಉಚಿತ ಸಿಲಿಂಡರ್ ಅಥವಾ 500 ರೂಪಾಯಿಗೆ ಸಿಲಿಂಡರ್ ಯೋಜನೆಗಳ ಲಾಭ ಪಡೆಯಲು ಈ ಕೆವೈಸಿ ಕಡ್ಡಾಯವಾಗಿದೆ. ಇಲ್ಲದಿದ್ದರೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವುದಿಲ್ಲ. ಇದೇ ನಿಯಮ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಸಾಮಾನ್ಯ ಸಬ್ಸಿಡಿಗೂ ಅನ್ವಯಿಸುತ್ತದೆ.

ತಡಮಾಡಬೇಡಿ, ಇಂದೇ ನಿಮ್ಮ ಗ್ಯಾಸ್ ಏಜೆನ್ಸಿ ಸಂಪರ್ಕಿಸಿ ಅಥವಾ ಮೊಬೈಲ್ ಮೂಲಕ ಇ-ಕೆವೈಸಿ ಖಚಿತಪಡಿಸಿಕೊಳ್ಳಿ.

ShareTweetSendShare
Join us on:

Related Posts

ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

by Shwetha
February 9, 2026
0

ಬೆಂಗಳೂರು: ಜಮೀನು ಅಥವಾ ನಿವೇಶನ ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ ಕಷ್ಟಪಟ್ಟು ದುಡಿದ ಹಣವನ್ನು ಆಸ್ತಿ ಮೇಲೆ ಹೂಡಿಕೆ ಮಾಡುವಾಗ ಆ ಜಾಗದ ಬಗ್ಗೆ ಸರಿಯಾದ ಮಾಹಿತಿ...

ಜೆಮಿಮಾಗೆ ಜೀಸಸ್ ನೆರವಾಗಲಿಲ್ಲ ಸ್ಮೃತಿಯನ್ನು ತಿಮ್ಮಪ್ಪ ಕೈಬಿಡಲಿಲ್ಲ: ವಿಕೃತ ಟ್ರೋಲ್ ಗೆ ಪ್ರಕಾಶ್ ರಾಜ್ ಗರಂ

ಜೆಮಿಮಾಗೆ ಜೀಸಸ್ ನೆರವಾಗಲಿಲ್ಲ ಸ್ಮೃತಿಯನ್ನು ತಿಮ್ಮಪ್ಪ ಕೈಬಿಡಲಿಲ್ಲ: ವಿಕೃತ ಟ್ರೋಲ್ ಗೆ ಪ್ರಕಾಶ್ ರಾಜ್ ಗರಂ

by Shwetha
February 9, 2026
0

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೋಮು ಭಾವನೆಯ ಪೋಸ್ಟ್ ಒಂದರ ವಿರುದ್ಧ ಬಹುಭಾಷಾ ನಟ ಪ್ರಕಾಶ್...

ಮೆಟ್ರೋ ವಿಸ್ತರಣೆಗೆ ಮೋದಿ ಕಾರಣ, ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆಯೇ? ಬಿಜೆಪಿ ದ್ವಂದ್ವ ನೀತಿಯ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಮೆಟ್ರೋ ವಿಸ್ತರಣೆಗೆ ಮೋದಿ ಕಾರಣ, ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆಯೇ? ಬಿಜೆಪಿ ದ್ವಂದ್ವ ನೀತಿಯ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

by Shwetha
February 9, 2026
0

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆಯೇ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದತ್ತ ಬೆರಳು...

ಸಿದ್ದರಾಮಯ್ಯ ಸುಳ್ಳಿನ ಸರದಾರ, ರೈಲ್ವೆ ಯೋಜನೆಗೆ ಸಹಕರಿಸದಿದ್ದರೆ ಕಾನೂನು ಕ್ರಮ: ಕೇಂದ್ರ ಸಚಿವ ವಿ ಸೋಮಣ್ಣ ಎಚ್ಚರಿಕೆ

ಸಿದ್ದರಾಮಯ್ಯ ಸುಳ್ಳಿನ ಸರದಾರ, ರೈಲ್ವೆ ಯೋಜನೆಗೆ ಸಹಕರಿಸದಿದ್ದರೆ ಕಾನೂನು ಕ್ರಮ: ಕೇಂದ್ರ ಸಚಿವ ವಿ ಸೋಮಣ್ಣ ಎಚ್ಚರಿಕೆ

by Shwetha
February 9, 2026
0

ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದ್ದು, ಸ್ವತಃ ಮುಖ್ಯಮಂತ್ರಿಗಳೇ ಸುಳ್ಳು ಹೇಳುವುದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ...

ಬಿಜೆಪಿಯಿಂದ ಸಂಘಕ್ಕೆ ಅಚ್ಛೇ ದಿನ್ ಬಂದಿಲ್ಲ, ಇದು ನಮ್ಮ ಸ್ವಯಂಸೇವಕರ ಶ್ರಮ: ಮೋಹನ್ ಭಾಗವತ್

ಬಿಜೆಪಿಯಿಂದ ಸಂಘಕ್ಕೆ ಅಚ್ಛೇ ದಿನ್ ಬಂದಿಲ್ಲ, ಇದು ನಮ್ಮ ಸ್ವಯಂಸೇವಕರ ಶ್ರಮ: ಮೋಹನ್ ಭಾಗವತ್

by Shwetha
February 9, 2026
0

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಹೊಸ್ತಿಲಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಅವರು ಅತ್ಯಂತ ಮಹತ್ವದ ಹಾಗೂ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram