ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

Another warning to transport passengers: KSRTC luggage fare hike to come into effect from today

Shwetha by Shwetha
February 16, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಲಗೇಜ್ ಸಾಗಾಣಿಕೆ ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಮುಖ್ಯವಾಗಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ (Unaccompanied Luggage) ದರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಅಂದರೆ ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸದೇ, ಕೇವಲ ವಸ್ತುಗಳನ್ನು ಅಥವಾ ಪಾರ್ಸೆಲ್ ಗಳನ್ನು ಬೇರೆ ಊರಿಗೆ ಕಳುಹಿಸುವ ದರದಲ್ಲಿ ಏರಿಕೆ ಮಾಡಲಾಗಿದೆ.

Related posts

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

February 16, 2026
ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

February 16, 2026

ಪರಿಷ್ಕೃತ ದರಗಳ ವಿವರ ಈ ಕೆಳಗಿನಂತಿದೆ:

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿನ ಲಗೇಜ್ ದರವನ್ನು ಹಂತಗಳಿಗೆ (Stages) ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ.

1 ರಿಂದ 5ನೇ ಹಂತದವರೆಗಿನ (ಅಲ್ಪ ದೂರದ) ಸಾಗಾಣಿಕೆಗೆ 6 ರೂಪಾಯಿ ನಿಗದಿಪಡಿಸಲಾಗಿದೆ.
6 ರಿಂದ 12 ಹಂತದವರೆಗಿನ ದೂರಕ್ಕೆ 12 ರೂಪಾಯಿ ನಿಗದಿಪಡಿಸಲಾಗಿದೆ.
ದೂರದ ಪ್ರಯಾಣಕ್ಕೆ ಅಂದರೆ 156 ರಿಂದ 160 ಹಂತದವರೆಗಿನ ಲಗೇಜ್ ಸಾಗಾಣಿಕೆಗೆ ಬರೋಬ್ಬರಿ 145 ರೂಪಾಯಿ ದರವನ್ನು ಹೆಚ್ಚಳ ಮಾಡಿ ಆದೇಶಿಸಲಾಗಿದೆ.

ಏರಿಕೆ ಏಕೆ?

ಕಳೆದ 2021ರಲ್ಲಿ ಪ್ರಯಾಣಿಕ ರಹಿತ ಲಗೇಜ್ ದರವನ್ನು ಏರಿಕೆ ಮಾಡಲಾಗಿತ್ತು. ಆ ಬಳಿಕ ಸಾರಿಗೆ ನಿಗಮವು ಬಸ್ ಟಿಕೆಟ್ ದರಗಳಲ್ಲಿ ಪರಿಷ್ಕರಣೆ ಮಾಡಿದ್ದರೂ, ಲಗೇಜ್ ದರವನ್ನು ಹೆಚ್ಚಿಸಿರಲಿಲ್ಲ. ಇಂಧನ ಬೆಲೆ ಏರಿಕೆ ಮತ್ತು ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ, ಇದೀಗ ಬಾಕಿ ಉಳಿದಿದ್ದ ಲಗೇಜ್ ದರ ಪರಿಷ್ಕರಣೆಯನ್ನು ಮಾಡಲಾಗಿದೆ.

ಈ ಆದೇಶವು ಇಂದಿನಿಂದಲೇ ಜಾರಿಗೆ ಬರುತ್ತಿದ್ದು, ಬಸ್ ಮೂಲಕ ತಮ್ಮ ಊರುಗಳಿಗೆ ಸರಕು, ಹೂವು, ಹಣ್ಣು ಮತ್ತು ತರಕಾರಿಗಳನ್ನು ಕಳುಹಿಸುವ ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಈ ದರ ಏರಿಕೆಯು ಬಿಸಿ ಮುಟ್ಟಿಸಲಿದೆ.

ShareTweetSendShare
Join us on:

Related Posts

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

by admin
February 16, 2026
0

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..! ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ...

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

by Shwetha
February 16, 2026
0

ಬೆಂಗಳೂರು: ರಾಜ್ಯದ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ತಾಣವಾಗಿರುವ ಕರಾವಳಿ ಕರ್ನಾಟಕದಲ್ಲಿ (ದಕ್ಷಿಣ ಕನ್ನಡ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕೋಮುವಾದ ಮತ್ತು ಅಸಹಿಷ್ಣುತೆಯ ವಾತಾವರಣವು ಆ ಭಾಗದ...

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

by Shwetha
February 16, 2026
0

ಶಿವಮೊಗ್ಗ: ರಾಜ್ಯ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಬರೋಬ್ಬರಿ 37,000 ಕೋಟಿ ರೂ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಮಾರ್ಚ್ 5 ರಂದು...

ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

by Shwetha
February 16, 2026
0

ಹೈದರಾಬಾದ್: ವಂದೇ ಮಾತರಂ ಹಾಡುವುದು ಅಥವಾ ಅದಕ್ಕೆ ಗೌರವ ಸೂಚಿಸುವುದು ಮಾತ್ರ ದೇಶಭಕ್ತಿಯ ಅಳತೆಗೋಲಲ್ಲ. ದೇಶವನ್ನು ಪ್ರೀತಿಸಲು ಹಲವಾರು ಮಾರ್ಗಗಳಿವೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ)...

ಫೆಬ್ರವರಿ 17ಕ್ಕೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಭಾರತದಲ್ಲಿ ಸೂತಕದ ಛಾಯೆ ಇದೆಯೇ

ಫೆಬ್ರವರಿ 17ಕ್ಕೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಭಾರತದಲ್ಲಿ ಸೂತಕದ ಛಾಯೆ ಇದೆಯೇ

by Shwetha
February 16, 2026
0

ಬಾಹ್ಯಾಕಾಶದ ವಿಸ್ಮಯಕಾರಿ ವಿದ್ಯಮಾನಗಳಿಗಾಗಿ ಕಾತರದಿಂದ ಕಾಯುವ ಖಗೋಳಾಸಕ್ತರಿಗೆ ಇದೊಂದು ಸಿಹಿ ಸುದ್ದಿ. 2026ನೇ ಸಾಲಿನ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ ಆರಂಭವಾಗಿದ್ದು, ಜಗತ್ತಿನಾದ್ಯಂತ ಜನರು ರಿಂಗ್ ಆಫ್ ಫೈರ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram