ADVERTISEMENT
Tuesday, February 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಛತ್ರಪತಿ ಶಿವಾಜಿ ಮಹಾರಾಜರಿಗೆ ಟಿಪ್ಪು ಸುಲ್ತಾನ್ ಹೋಲಿಕೆ ಪುಣೆಯಲ್ಲಿ ಭುಗಿಲೆದ್ದ ಹಿಂಸಾಚಾರ ಪೊಲೀಸರಿಗೂ ಬಿತ್ತು ಏಟು!

Shwetha by Shwetha
February 17, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಪುಣೆ: ಛತ್ರಪತಿ ಶಿವಾಜಿ ಮಹಾರಾಜರನ್ನು ಟಿಪ್ಪು ಸುಲ್ತಾನ್ ಅವರಿಗೆ ಹೋಲಿಸಿ ಕಾಂಗ್ರೆಸ್ ನಾಯಕನೊಬ್ಬ ನೀಡಿದ ಹೇಳಿಕೆ ಮಹಾರಾಷ್ಟ್ರದ ಪುಣೆಯಲ್ಲಿ ದಳ್ಳುರಿ ಹಬ್ಬಿಸಿದೆ. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ರಣರಂಗವೇ ಸೃಷ್ಟಿಯಾಗಿದೆ. ಎರಡೂ ಕಡೆಯಿಂದ ನಡೆದ ಕಲ್ಲುತೂರಾಟದಲ್ಲಿ ಪೊಲೀಸರು ಮತ್ತು ಪತ್ರಕರ್ತರು ಸೇರಿದಂತೆ ಒಟ್ಟು 9 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಈ ಇಡೀ ವಿವಾದದ ಮೂಲ ಮಹಾರಾಷ್ಟ್ರದ ಮಾಲೇಗಾಂವ್. ಅಲ್ಲಿನ ಉಪಮೇಯರ್ ಶಾನ್ ಎ ಹಿಂದ್ ನಿಹಾಲ್ ಅಹಮದ್ ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರವನ್ನು ಅಳವಡಿಸಿದ್ದರು. ಈ ನಡೆಯನ್ನು ಶಿವಸೇನೆ ಮತ್ತು ವಿವಿಧ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು ಹಾಗೂ ವಿರೋಧ ವ್ಯಕ್ತಪಡಿಸಿದ್ದವು.

Related posts

ಬೆಂಗಳೂರು ಬೇಕರಿಯ ಉದ್ಧಟತನ… ಗ್ರಾಹಕರನ್ನು ಹೀಯಾಳಿಸಿ ವಿವಾದ

ಬೆಂಗಳೂರು ಬೇಕರಿಯ ಉದ್ಧಟತನ… ಗ್ರಾಹಕರನ್ನು ಹೀಯಾಳಿಸಿ ವಿವಾದ

February 17, 2026
ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ… ಕಾನೂನು ಕ್ರಮಕ್ಕೆ ಮುಂದಾದ KMF

ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ… ಕಾನೂನು ಕ್ರಮಕ್ಕೆ ಮುಂದಾದ KMF

February 17, 2026

ವಿವಾದಕ್ಕೆ ತುಪ್ಪ ಸುರಿದ ಹೇಳಿಕೆ

ಟಿಪ್ಪು ಫೋಟೋ ಅಳವಡಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ಹರ್ಷವರ್ಧನ್ ಸಪ್ಕಲ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಬೆಂಕಿಗೆ ತುಪ್ಪ ಸುರಿದರು. ಟಿಪ್ಪು ಫೋಟೋ ಹಾಕಿದ್ದನ್ನು ಸಮರ್ಥಿಸಿಕೊಂಡ ಅವರು ಟಿಪ್ಪು ಸುಲ್ತಾನ್ ನನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸಿದರು. ಶಿವಾಜಿ ಮಹಾರಾಜರು ಸ್ವರಾಜ್ಯಕ್ಕಾಗಿ ಹೇಗೆ ಕರೆ ನೀಡಿದ್ದರೋ ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡರು.

ಕಾಂಗ್ರೆಸ್ ಭವನದ ಎದುರು ರಣರಂಗ

ಹರ್ಷವರ್ಧನ್ ಸಪ್ಕಲ್ ಅವರ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಭಾನುವಾರ ಪುಣೆಯ ಕಾಂಗ್ರೆಸ್ ಭವನದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆಯೇ ಏಕಾಏಕಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನೋಡನೋಡುತ್ತಿದ್ದಂತೆಯೇ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಶಾಂತಿಯುತವಾಗಿದ್ದ ಸ್ಥಳ ಕ್ಷಣಾರ್ಧದಲ್ಲಿ ಯುದ್ಧಭೂಮಿಯಂತಾಯಿತು.

ಪೊಲೀಸರು ಮತ್ತು ಪತ್ರಕರ್ತರಿಗೂ ಗಾಯ

ಈ ಕಲ್ಲು ತೂರಾಟದ ತೀವ್ರತೆ ಎಷ್ಟಿತ್ತೆಂದರೆ ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಮತ್ತು ಬಿಜೆಪಿಯ ಇಬ್ಬರು ಕಾರ್ಯಕರ್ತರು ಗಾಯಗೊಂಡರು. ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ವರದಿ ಮಾಡಲು ಬಂದಿದ್ದ ಇಬ್ಬರು ಪತ್ರಕರ್ತರಿಗೂ ಕಲ್ಲು ತೂರಾಟದಿಂದ ಗಾಯಗಳಾಗಿವೆ.

ಪ್ರಕರಣ ದಾಖಲು

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದ ಉಭಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ. ಶಿವಾಜಿ ಮಹಾರಾಜರಿಗೆ ಟಿಪ್ಪು ಸುಲ್ತಾನ್ ರನ್ನು ಹೋಲಿಕೆ ಮಾಡಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಈಗ ಭಾರಿ ಸಂಚಲನ ಮೂಡಿಸಿದೆ.

ShareTweetSendShare
Join us on:

Related Posts

ಬೆಂಗಳೂರು ಬೇಕರಿಯ ಉದ್ಧಟತನ… ಗ್ರಾಹಕರನ್ನು ಹೀಯಾಳಿಸಿ ವಿವಾದ

ಬೆಂಗಳೂರು ಬೇಕರಿಯ ಉದ್ಧಟತನ… ಗ್ರಾಹಕರನ್ನು ಹೀಯಾಳಿಸಿ ವಿವಾದ

by Shwetha
February 17, 2026
0

ಬೆಂಗಳೂರು ಕೋರಮಂಗಲ ಪ್ರದೇಶದಲ್ಲಿರುವ ‘ಬಾಸ್ಕ್ ಬೇಕರಿ’ (Bask Bakery) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಬೇಕರಿಯ ದರ ಹಾಗೂ ರುಚಿಯ ಕುರಿತು ಟೀಕೆ ಮಾಡಿದ್ದ ಗ್ರಾಹಕರಿಗೆ...

ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ… ಕಾನೂನು ಕ್ರಮಕ್ಕೆ ಮುಂದಾದ KMF

ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ… ಕಾನೂನು ಕ್ರಮಕ್ಕೆ ಮುಂದಾದ KMF

by Shwetha
February 17, 2026
0

ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ಆರೋಪಗಳನ್ನು ಹಬ್ಬಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಸಂಘ (KMF) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ...

ರಾಜ್ಯದ ನಿರುದ್ಯೋಗಿ ಯುವಕರಿಗೆ  ಗುಡ್ ನ್ಯೂಸ್ ಬೆಸ್ಕಾಂನಲ್ಲಿ ಖಾಲಿ ಇವೆ 520 ಹುದ್ದೆಗಳು ಇಂದೇ ಅರ್ಜಿ ಸಲ್ಲಿಸಿ

ರಾಜ್ಯದ ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್ ಬೆಸ್ಕಾಂನಲ್ಲಿ ಖಾಲಿ ಇವೆ 520 ಹುದ್ದೆಗಳು ಇಂದೇ ಅರ್ಜಿ ಸಲ್ಲಿಸಿ

by Shwetha
February 17, 2026
0

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಅಥವಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿರುವ ಯುವಜನತೆಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಒಟ್ಟು...

ಮದ್ಯಪ್ರಿಯರಿಗೆ ಹಾಗೂ ವಾಹನ ಸವಾರರಿಗೆ ಬಂಪರ್ ಸುದ್ದಿ: ಏಪ್ರಿಲ್ 1ರಿಂದ ಸ್ಕಾಚ್ ವಿಸ್ಕಿ ಮತ್ತು ಐಷಾರಾಮಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ

ಮದ್ಯಪ್ರಿಯರಿಗೆ ಹಾಗೂ ವಾಹನ ಸವಾರರಿಗೆ ಬಂಪರ್ ಸುದ್ದಿ: ಏಪ್ರಿಲ್ 1ರಿಂದ ಸ್ಕಾಚ್ ವಿಸ್ಕಿ ಮತ್ತು ಐಷಾರಾಮಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ

by Shwetha
February 17, 2026
0

ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವು (FTA) ಅಂತಿಮ ಹಂತ ತಲುಪಿದ್ದು, ಭಾರತೀಯ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ...

ಗುರುದಕ್ಷಿಣೆ ಎಂದರೆ ದೇಣಿಗೆಯಲ್ಲ ಅದು ಸಮರ್ಪಣಾ ಭಾವ: ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಆರೆಸ್ಸೆಸ್ ಖಡಕ್ ತಿರುಗೇಟು

ಗುರುದಕ್ಷಿಣೆ ಎಂದರೆ ದೇಣಿಗೆಯಲ್ಲ ಅದು ಸಮರ್ಪಣಾ ಭಾವ: ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಆರೆಸ್ಸೆಸ್ ಖಡಕ್ ತಿರುಗೇಟು

by Shwetha
February 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ಆರ್ಥಿಕ ಮೂಲ ಯಾವುದು, ಅದಕ್ಕೆ ವಿದೇಶದಿಂದ ಹಣ ಬರುತ್ತದೆಯೇ ಮತ್ತು ಸಂಘವು ತೆರಿಗೆ ಪಾವತಿಸುತ್ತದೆಯೇ ಎಂದು ಪ್ರಶ್ನಿಸಿದ್ದ ಸಚಿವ ಪ್ರಿಯಾಂಕ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram