ADVERTISEMENT
Wednesday, September 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪತ್ರಕರ್ತನಾಗಿದ್ದ ಲಿಂಗರಾಜು ಯಶಸ್ವಿ ಉದ್ಯಮಿಯಾಗಿ ರೂಪುಗೊಂಡ ಸ್ಪೂರ್ತಿಯ ಕಥೆ..!

admin by admin
February 17, 2026
in Newsbeat, Sports, ಕ್ರೀಡೆ
cmcupbadminton2026- inspirechallengers- lingaraju

cmcupbadminton2026- inspirechallengers- lingaraju

Share on FacebookShare on TwitterShare on WhatsappShare on Telegram

ಜಿ.ಎಸ್. ಲಿಂಗರಾಜು
ಉದ್ಯಮಿ
ಇನ್‍ಸ್ಪೈರ್ ಚಾಲೆಂಜರ್ಸ್ ತಂಡದ ಮಾಲೀಕರು

cmcupbadminton2026- inspirechallengers
cmcupbadminton2026- inspirechallengers

ಜಿ.ಎಸ್. ಲಿಂಗರಾಜು. ಕರ್ನಾಟಕ ಮಾಧ್ಯಮ ರಂಗದಲ್ಲಿ ಚಿರಪರಿಚಿತ ಹೆಸರು. ಪತ್ರಕರ್ತನಾಗಿ ವೃತ್ತಿ ಬದುಕು ಆರಂಭಿಸಿದ್ದ ಲಿಂಗರಾಜು ಅವರು, ಇಂದು ಯಶಸ್ವಿ ಉÀದ್ಯಮಿಯಾಗಿ ರೂಪುಗೊಂಡಿರುವುದರ ಹಿಂದೆ ಕಠಿಣ ಪರಿಶ್ರಮವಿದೆ. ಸೋಲು – ಗೆಲುವಿನ ನಡುವೆ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತು, ಏರಿಳಿತಗಳನ್ನು ಅನುಭವಿಸಿರುವ ಲಿಂಗರಾಜು ಅವರು ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ.

Related posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

September 29, 2026
ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

September 29, 2026

ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಜನಿಸಿರುವ ಲಿಂಗರಾಜು ಅವರು, ಪತ್ರಕರ್ತ, ಉದ್ಯಮಿ, ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಕುವೆಂಪು ವಿವಿಯಲ್ಲಿ ಪದವಿ ಶಿಕ್ಷಣ ಪಡೆದು, ಮೈಸೂರು ವಿವಿಯಲ್ಲಿ ಮಾನವÀಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿವಿಯಲ್ಲಿ ಮಾಸ್ ಕಮ್ಯೂನಿಕೇಷನ್‍ನÀಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2006ರಿಂದ 2008ರವರೆಗೆ ಪ್ರತಿಷ್ಠಿತ ಟಿವಿ 9 ಚಾನೆಲ್‍ನಲ್ಲಿ ವೃತ್ತಿಬದುಕು ಆರಂಭಿಸಿದ್ದರು. ಬಳಿಕ ಸುವರ್ಣ ನ್ಯೂಸ್ ಹಾಗೂ ಸಮಯ ನ್ಯೂಸ್‍ನಲ್ಲಿ ಕ್ರೈಮ್ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು.
ಎಲ್ಲರ ಬದುಕಿನಲ್ಲೂ ಒಂದು ಟನಿರ್ಂಗ್ ಪಾಯಿಂಟ್ ಅಂತ ಇರುತ್ತೆ. ಬಹುಶಃ ಆ ಒಂದು ಘಟನೆ ಲಿಂಗರಾಜು ಅವರ ಬದುಕಿಗೆ ಹೊಸ ತಿರುವು ನೀಡಿತ್ತು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ತನ್ನದೇ ಸ್ವಂತ ಉದ್ಯಮವನ್ನು ಸ್ಥಾಪಿಸಬೇಕು ಎಂಬ ಕನಸಿನೊಂದಿಗೆ 2012ರಲ್ಲಿ ಮನೊಮ್ಯಿಯ ಕ್ರಿಯೇಷನ್ ಎಂಬ ಮೀಡಿಯಾ ಸಂಸ್ಥೆಯನ್ನು ಶುರು ಮಾಡಿದ್ರು. ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟ, ಸೋಲು, ನಿರಾಸೆ ಅನುಭವಿಸಿದ್ರೂ ಲಿಂಗರಾಜು ಎಂದಿಗೂ ಎದೆಗುಂದಲಿಲ್ಲ. ತನ್ನಲ್ಲಿರುವ ಪ್ರತಿಭೆ, ಆತ್ಮವಿಶ್ವಾಸ, ಸ್ನೇಹಮಯ ವ್ಯಕ್ತಿತ್ವದಿಂದ ಮಹತ್ವಕಾಂಕ್ಷೆಯ ಹಾದಿಯತ್ತ ಮುನ್ನುಗಿದ್ದರು. ಆಗ ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ತನ್ನ ಬುದ್ಧಿವಂತಿಕೆ ಮತ್ತು ಜಾಣ್ಮೆಯಿಂದಲೇ ಎಲ್ಲವನ್ನೂ ಸರಿದೂಗಿಸಿಕೊಂಡು ಕನಸಿನ ಬೆನ್ನೇರಿ ಹೊರಟರು. ಅಲ್ಲದೆ ಇನ್‍ಸ್ಪೈರ್ ಮೀಡಿಯಾ ಎಂಬ ಮತ್ತೊಂದು ಸಂಸ್ಥೆಯನ್ನು ಆರಂಭಿಸಿ ತನ್ನ ಉದ್ಯಮವನ್ನು ವಿಸ್ತರಿಸಿದ್ರು. ಕಾಪೆರ್Çೀರೇಟ್ ಮತ್ತು ಸರ್ಕಾರಿ ಇಲಾಖೆಗಳ ಜಾಹೀರಾತು, ಬ್ರ್ಯಾಂಡಿಂಗ್, ಈವೇಂಟ್ ಮ್ಯಾನೇಜ್‍ಮೆಂಟ್, ಸಾಕ್ಷ್ಯ ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಛಾಪು ಮೂಡಿಸಿದ್ದರು. ಜೊತೆಗೆ ಹೊಟೇಲ್ ಉದ್ಯಮದತ್ತ ಆಕರ್ಷಣೆಗೊಂಡ ಲಿಂಗರಾಜು ಅವರು ಈಗ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಮಸಾಲ ರೆಸ್ಟೋರೆಂಟ್ ಅನ್ನು ಯಶಸ್ವಿ ಮುನ್ನಡೆಸುತ್ತಿದ್ದಾರೆ.

ಅಂದ ಹಾಗೇ ಲಿಂಗರಾಜು ಅವರು ಇಂದಿಗೂ ತನ್ನ ಕಷ್ಟದ ದಿನಗಳನ್ನು ಮರೆತಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದ್ರೂ ಎಲ್ಲರ ಜೊತೆ ನಗುಮುಖದೊಂದಿಗೆ ಮಾತನಾಡುತ್ತಾರೆ. ನಿಸ್ವಾರ್ಥಿಯಾಗಿ ಎಲ್ಲರ ಜೊತೆಗೂ ಬೆರೆಯುತ್ತಾರೆ. ಹೀಗಾಗಿಯೇ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ. ತಾನೂ ಬೆಳೆಯಬೇಕು. ಇತರರು ಬೆಳೆಯಬೇಕು ಎಂಬ ಮನೋಭಾವನೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಇನ್ನು ಉದ್ಯಮದ ಜೊತೆಗೆ ಲಿಂಗರಾಜು ಅವರು ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಜನ ಕಲ್ಯಾಣ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮೂಲಕ ಚಿತ್ರದುರ್ಗದಲ್ಲಿ ಪುರಾತನ ಬಾವಿಗಳಿಗೆ ಪುನಶ್ಚೇತನ ನೀಡಿದ್ದಲ್ಲದೆ ಹಲವಾರು ಗ್ರಾಮೀಣ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗೇ ವಿ ಫೆÇೀರ್ ಕಾಸ್ ಎಂಬ ಮತ್ತೊಂದು ಎನ್‍ಜಿಒ ಸಂಸ್ಥೆಯ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಜನಸೇವಕÀನಾಗಿ ಜನನಾಯಕನಾಗರಬೇಕು ಎಂಬುದು ಲಿಂಗರಾಜು ಅವರ ಮುಂದಿರುವ ಗುರಿ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈಗಾಗಲೇ ಅಖಿಲ ಭಾರತ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಈಗ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಸವ ಜಯಂತಿ, ಜ್ಯೋತಿ ರಥಯಾತ್ರೆ, ಶರಣ ಗಣ ಮೇಳ ಸೇರಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದೀಗ 2026ರ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಇನ್‍ಸ್ಪೈಯರ್ ಚಾಲೆಂಜರ್ಸ್ ತಂಡದ ಮಾಲೀಕರಾಗಿದ್ದಾರೆ. ಲಿಂಗರಾಜು ಅವರ ಉದ್ಯಮಕ್ಕೆ ಯಶಸ್ವಿಯಾಗಲಿ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ನಮ್ಮ ಹಾರೈಕೆ.

Tags: #9dreamz#cmcup2026#cmcupbadminton#inspirechallengers#saakshatvbengalurukarnataka
ShareTweetSendShare
Join us on:

Related Posts

ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಜೊತೆಗೆ ಬನ್ನಿ;ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ: ಪ್ರದೀಪ್ ಈಶ್ವರ್

ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್

by Shwetha
September 29, 2026
0

ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ...

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಬರ ಪರಿಸ್ಥಿತಿ, ಕಸ್ತೂರಿರಂಗನ್ ವರದಿ ಕುರಿತು ಸರ್ವಪಕ್ಷ ಸಭೆಗೆ ಡಿಕೆಶಿ ಕರೆ

by Shwetha
September 29, 2026
0

ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

KPSC- ಪ್ರಿಯಾಂಕ್ ಖರ್ಗೆ ಗೆ DK ಶ್ರೀರಕ್ಷೆ:ಅಕ್ರಮ ಮಾಡಿಲ್ಲದಿದ್ದರೆ ಇಡಿ ಬಗ್ಗೆ ನಡುಕವೇಕೆ?ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸಿಎಂ

by Shwetha
September 29, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ...

ಬಿಜೆಪಿ ಜತೆ ರಾಜಿಯಾಗಿದ್ದರೆ ಡಿಕೆಶಿ ಇವತ್ತು ಬೇರೆ ಲೆವೆಲ್ ನಲ್ಲೇ ಇರುತ್ತಿದ್ದರು: ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದ ಬಾಲಕೃಷ್ಣ

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಬಗ್ಗೆ ಸಚಿವರ ಹೇಳಿಕೆ: ಸರ್ಕಾರದೊಳಗೂ ಚರ್ಚೆ

by Shwetha
September 29, 2026
0

ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಪರಿಣಾಮದ ಕುರಿತು ರಾಜ್ಯ ಸರ್ಕಾರದೊಳಗೇ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಸರ್ಕಾರದ...

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

by Shwetha
September 29, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಕುರಿತು ಕೊನೆಗೂ ಸರ್ಕಾರ ಮೌನ ಮುರಿದಿದೆ. ಇದುವರೆಗೂ ವಿರೋಧ ಪಕ್ಷಗಳು ಮಾಡುತ್ತಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram