ADVERTISEMENT
Friday, February 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪದಗಳು ಸಾಲುತ್ತಿಲ್ಲ..ಈ ಸುಂದರ ಕ್ಷಣವನ್ನು ನೆನಪಿಸಿಕೊಂಡಾಗ..! 9 ಡ್ರೀಮ್ಸ್ ತಂಡದ ಅವಿರತ ಶ್ರಮಕ್ಕೆ ಸಿಕ್ಕ ಗೆಲುವು ಜೇನಿಗಿಂತಲೂ ಸಿಹಿ..!

admin by admin
February 20, 2026
in Newsbeat, Sports, ಕ್ರೀಡೆ
cmcup2026- team 9dreamz

cmcup2026- team 9dreamz

Share on FacebookShare on TwitterShare on WhatsappShare on Telegram
cm cup badminton league 2026
cm cup badminton league 2026

ಬರಿಗಣ್ಣಲ್ಲಿ ಕಂಡ ಕನಸಿನ ಬೆನ್ನೇರಿ ಹೊರಟಾಗ..!
ಕನಸನ್ನು ನನಸು ಮಾಡಲು ಹಗಳಿರುಳು ಶ್ರಮಿಸಿದಾಗ..!
ಸೋಲು- ಹಿತಶತ್ರುಗಳ ಎದುರು ಎದೆಯೊಡ್ಡಿ ನಿಂತಾಗ..!
ಸಿಗುವಂತಹ ಗೆಲುವು ಅದು ಜೇನಿಗಿಂತಲೂ ಸವಿ ಈಗ..!
ಕವಲುದಾರಿಯ ಹಾದಿಯಲ್ಲಿ ಭರವಸೆಯ ಬೆಳಕಾದಾಗ..!
ನೋವು, ನಿರಾಸೆಯ ದಿನಗಳಲ್ಲಿ ಮೌನವೇ ಮಾತಾದಾಗ..!
ಎರಡು ವರ್ಷಗಳ ಹಿಂದೆ ಕಂಡ ಆ ಒಂದು ಕನಸು ನನಸಾದಾಗ..!
ಬಣ್ಣಿಸಲು ಪದಗಳು ಸಾಕಾಗುವುದಿಲ್ಲ ಈ ಸುಂದರ ಕ್ಷಣವನ್ನು ನೆನಪಿಸಿಕೊಂಡಾಗ..!

ಇದು 9ಡ್ರೀಮ್ಸ್ ಸಂಸ್ಥೆಯ ಸಿಎಂ ಕಪ್ 2026 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಹೆಜ್ಜೆ. ಈ ಹೆಜ್ಜೆ – ಗೆಜ್ಜೆಯ ಸಪ್ಪಳಕ್ಕೆ ಹೊಸ ಲಯವೊಂದು ಮೂಡಿದೆ. ಕಲ್ಲು -ಮುಳ್ಳಿನ ಹಾದಿಯಲ್ಲಿ ನಡೆದು ಬಂದು ಗುರಿ ಮುಟ್ಟಿದಾಗ ಹರುಷದ ಕಂಪನ ತಂದಿದೆ. ಪ್ರತಿ ಹೆಜ್ಜೆಯಲ್ಲೂ ಸಾಲು ಸಾಲು ಪ್ರಶ್ನೆಗಳು.. ಹತ್ತಾರು ಸವಾಲುಗಳು. ಆದ್ರೆ ಇಂದು ಅದೇ ಹೆಜ್ಜೆಗಳ ನಾದಕ್ಕೆ ಗೆಲುವಿನ ಹಾಡು ಕೇಳುತ್ತಿದೆ. ಗೆಜ್ಜೆಯ ಪ್ರತಿ ಸಪ್ಪಳವೂ ಶ್ರಮದ ಕಥೆ ಹೇಳುತ್ತಿದೆ.

Related posts

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

February 20, 2026
ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

February 20, 2026

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ. ಇದು ಗೊತ್ತು ಗುರಿ ಇಲ್ಲದೆ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಇಬ್ಬರು ಯುವಕರ ಪರಿಕಲ್ಪನೆ. ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿರುವ ಆಟಗಾರರನ್ನು ಸೇರಿಸಿಕೊಂಡು ವಿನೂತನ ಮಾದರಿಯ ಟೂರ್ನಿಯನ್ನು ಸಂಘಟಿಸುವ ಅಲೋಚನೆ ತಲೆಗೆ ಬಂದ್ರೂ ಅದನ್ನು ಸಂಘಟಿಸುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. ಯಾಕಂದ್ರೆ ಅದಕ್ಕೊಂದು ನಂಬಿಗಸ್ಥ ತಂಡ ಬೇಕು. ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಆಟಗಾರರು ಬೇಕು. ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಒಂದು ಟೂರ್ನಿಯನ್ನು ಆಯೋಜನೆ ಮಾಡೋದು ಅದೊಂದು ಹರಸಾಹಸವೇ ಸರಿ.

ಅಂದ ಹಾಗೇ ಆ ಇಬ್ಬರ ಹುಡುಗರ ಹೆಸರು 9 ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ್ ಗೌಡ ಮತ್ತು ಬ್ಯಾಡ್ಮಿಂಟನ್ ಕೋಚ್ ಆಶೀಕ್ ಶೆಟ್ಟಿ. ಮಂಜುನಾಥ್ ಮಲೆನಾಡು ಶಿವಮೊಗ್ಗದ ತೀರ್ಥಹಳ್ಳಿಯ ಹುಡುಗ. ಸುಮಾರು ಹತ್ತು ವರ್ಷಗಳ ಕಾಲ ಟಿವಿನೈನ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಮಂಜು ಮಹತ್ವಕಾಂಕ್ಷಿ. ಅಷ್ಟೇ ಪ್ರತಿಭಾವಂತ. ಏನಾದ್ರೂ ಸಾಧಿಸಬೇಕು ಅನ್ನೋ ಛಲಗಾರ. ಕೆಲಸದ ವಿಷ್ಯದಲ್ಲಿ ರಾಜೀಯೇ ಇಲ್ಲ. ಎಲ್ಲವೂ ಅಂದುಕೊಂಡಂತೆ ಆಗಬೇಕು.

ಮಂಜು ಅವರ ಕನಸಿನ ಟೂರ್ನಿಗೆ ಆರಂಭದಲ್ಲಿ ಬೆಂಬಲವಾಗಿ ನಿಂತಿರುವುದು ಮಂಜುನಾಥ್ ತಮ್ಮ ಗಿರೀಶ್ ಗರಗ. ಒಂಥರಾ ರಾಮ ಲಕ್ಷ್ಮಣರಿದ್ದ ಹಾಗೇ. ಅಣ್ಣನ ಪ್ರತಿ ಹೆಜ್ಜೆಯಲ್ಲೂ ನೆರಳಿನಂತೆ ಹಿಂಬಾಳಿಸುತ್ತಿರುವ ಗಿರೀಶ್ ಗರಗ ಅಣ್ಣನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಜಾಯಮಾನದವನೇ ಅಲ್ಲ. . ಇವರಿಬ್ಬರ ಅನೋನ್ಯತೆಗೆ ಯಾರ ದೃಷ್ಟಿಯೂ ಬೀಳದಿರಲಿ.

kv prabhakar
kv prabhakar

ಇನ್ನು, ಆಶೀಕ್ ಶೆಟ್ಟಿ. ನೋಡುವುದಕ್ಕೆ ಐದಡಿ ಇದ್ರೂ ಸಂಘಟನಾ ಚತುರ. ಬ್ಯಾಡ್ಮಿಂಟನ್ ಆಟಗಾರನಾಗಿ, ಕೋಚ್ ಆಗಿ,ಫಿಟ್‍ನೆಸ್ ಗುರು ಆಗಿ ಸ್ಯಾಂಡಲ್ ವುಡ್‍ನ ಕ್ರೀಡಾವಲಯದಲ್ಲಿ ಚಿರಪರಿಚಿತ ಹೆಸರು. ನಗು ನಗುತ್ತಲೇ ಮಾತನಾಡುವ ಹುಡುಗ ಆಶೀಕ್, ಮಂಜುವಿನ ನಿಲ್ಲಿಗಣ್ಣಿನ ಹುಡುಗ. ಟೂರ್ನಿ ಸಂಘಟಿಸುವ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡು ಅದನ್ನು ಯಶಸ್ವಿಗೊಳಿಸಲು ಹಗಳಿರುಳು ಶ್ರಮಿಸುವ ಬದ್ದತೆ ಆಶೀಕ್‍ನಲ್ಲಿದೆ.
.
ಹೀಗೆ ಸಿಎಂ ಕಪ್ ಟೂರ್ನಿಯ ಪರಿಕಲ್ಪನೆ ಈ ಮೂವರಿಗೆ ಮಾತ್ರ ಗೊತ್ತಿತ್ತು. ಎಲ್ಲಾ ಪ್ಲಾನ್ ಗಳು ರೆಡಿ ಇವೆ. ಆದ್ರೆ ಮುನ್ನಡೆಯುವುದು ಹೇಗೆ ಎಂದು ಯೋಚನೆ ಮಾಡುತ್ತಿರುವಾಗಲೇ ಕೈ ಹಿಡಿದಿರುವುದು ಸುನೀಲ್ ಧರ್ಮಸ್ಥಳ.

ಸುನೀಲ್ ಧರ್ಮಸ್ಥಳ… ಕನ್ನಡ ಮಾಧ್ಯಮದಲ್ಲಿ ಚಿರಪರಿಚಿತ ಹೆಸರು. ಅದರಲ್ಲೂ ಕ್ರೈಂ ಮತ್ತು ತನಿಖಾ ಪತ್ರಿಕೋಧ್ಯಮದಲ್ಲಿ ಛಾಪು ಮೂಡಿಸಿರುವ ಅಪ್ರತಿಮ ಪತ್ರಕರ್ತ. ಮಂಜು ಮತ್ತು ಆಶೀಕ್ ಅವರ ಸಿಎಂ ಕಪ್ ಟೂರ್ನಿಗೆ ಮತ್ತೊಂದು ಆಯಾಮವನ್ನು ನೀಡಿದ್ದು ಕೂಡ ಸುನೀಲ್ ಧರ್ಮಸ್ಥಳ. ಐಎಎಸ್, ಐಪಿಎಸ್ ಅಧಿಕಾರಿಗಳ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡಿರುವ ಸುನೀಲ್ ಧರ್ಮಸ್ಥಳ ಎಂಟ್ರಿ ಇದೆಯಲ್ವಾ ಅದೊಂದು ರೀತಿಯಲ್ಲಿ ಮಂಜುನಾಥ್‍ಗೆ ಆನೆಬಲ ನೀಡಿದ್ದಲ್ಲದೆ ಸಿಎಂ ಕಪ್ ಟೂರ್ನಿಯ ಕನಸು ಕೂಡ ಚಿಗುರೆಡೆಯಿತ್ತು.

ನಂತ್ರ ತಡ ಮಾಡದ ಮಂಜು ತನ್ನ ಕನಸಿನ ಟೂರ್ನಿಗೆ ದಿಟ್ಟ ಹೆಜ್ಜೆಯನ್ನಿಟ್ಟಾಗ ಸಾಥ್ ಕೊಟ್ಟಿದ್ದು ತೇಜಸ್ ಪವಾರ್. ಕಾರ್ಪೋರೆಟ್ ಮತ್ತು ಸೇಲ್ಸ್ ವಿಭಾಗದಲ್ಲಿ ಅನುಭವವನ್ನು ಹೊಂದಿರುವ ತೇಜಸ್, ಸಿಎಂ ಕಪ್ ಟೂರ್ನಿಗೆ ಮನಿ ಪವರ್ ತುಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಹುಡುಗಾಟಿಕೆಯ ಬುದ್ಧಿ ಇದ್ರೂ ವೃತ್ತಿಪರತೆಯಲ್ಲಿ ಅಷ್ಟೇ ಗಂಭೀರದ ವ್ಯಕ್ತಿತ್ವ. ಸೈಲೆಂಟ್ ಆಗಿಯೇ ಹಣಕಾಸಿನ ವ್ಯವಸ್ಥೆಗೆ ಪೂರಕವಾದ ಬೆಂಬಲವನ್ನು ನೀಡಿದಾಗ ಮಂಜುನಾಥ್‍ಗೆ ಈ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸುವ ಆತ್ಮವಿಶ್ವಾಸವನ್ನು ನೀಡಿರುವುದು ಪವರ್ ಫುಲ್ ತೇಜಸ್ ಪವಾರ್.

ಇನ್ನೊಂದೆಡೆ ಸೋಷಿಯಲ್ ಮೀಡಿಯಾದದಲ್ಲಿ ಅದ್ಭುತವಾದ ಕಂಟೆಂಟ್ ಕ್ರಿಯೇಟ್ ಮಾಡಿ ಟೂರ್ನಿಗೆ ಪ್ರಚಾರವನ್ನು ಹೆಚ್ಚಿಸುವಂತೆ ಮಾಡಿದ್ದು ಅಶ್ವಿನ್ ಗೌತಮ್. ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅಶ್ವಿನ್ ಗೌತಮ್ ಪದಗಳ ಜೊತೆ ಆಟವಾಡಿಕೊಂಡೇ ಸಿಎಂ ಕಪ್ ಟೂರ್ನಿಯ ಕಂಟೆಂಟ್‍ಗಳನ್ನು ಮನೆ – ಮನ ತಲುಪಿಸಿರುವ ಕಂಟೆಂಟ್ ಕ್ರಿಯೇಟರ್. ಮೀಸೆಯ ಮೇಲೆ ಕೈ ಆಡಿಸಿಕೊಂಡು, ಯೋಚನೆ ಮಾಡಿಕೊಂಡು ಮನಸ್ಸು ಮತ್ತು ಹೃದಯದಿಂದ ಹೊರಬರುವ ಪದಗಳು ಪೆÇೀಸ್ಟರ್ ರೂಪದಲ್ಲಿ ಹೊರಹೊಮ್ಮಿರುವ ಅಕ್ಷರಗಳು ಪ್ರತಿಯೊಬ್ಬರ ನಾಲಗೆಯ ಮೇಲೆ ನಲಿದಾಡುತ್ತಿವೆ.

cm cup 2026 team 9 dreamz
cm cup 2026 team 9 dreamz

ಇನ್ನು, ಸಿಎಂ ಕಪ್ ಟೂರ್ನಿಯ ಸಂಪೂರ್ಣ ಸೋಷಿಯಲ್ ಮೀಡಿಯಾದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಅಖಿಲ್ ಮತ್ತು ಸುಹಾಸ್ ಅವರ ಅವಿರತ ಶ್ರಮ, ಬದ್ದತೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಆಕರ್ಷಕವಾದ ವಿನ್ಯಾಸಗಳ ಪೋಸ್ಟರ್‍ಗಳಂತೂ ಕಣ್ಮನ ಸೆಳೆಯುತ್ತಿವೆ. ಹಾಗೇ ಟೂರ್ನಿಯ ಪೆÇ್ರೀಮೋ ಹಾಗೂ ವಿಡಿಯೋ ಕಂಟೆಂಗಳನ್ನು ಮನಮುಟ್ಟುವಂತೆ ಎಡಿಟ್ ಮಾಡಿರುವ ಮಾದೇಶ್ ಹಾಗೂ ಪಾಂಡ್ಯ ಅವರ ಪ್ರಾವೀಣ್ಯತೆಗೊಂದು ಸಲಾಂ.

ಒಂದು ಟೂರ್ನಿಯನ್ನು ಸಂಘಟಿಸುವುದು ಅಂದ್ರೆ ಪ್ರತಿ ಕ್ಷಣವೂ ಸವಾಲು. ಒಂದೊಂದು ವಿಭಾಗವನ್ನು ನೋಡಿಕೊಳ್ಳುವುದು ಅಂದ್ರೆ ಅದು ಸುಲಭದ ಸಂಗತಿಯಲ್ಲ. ಇಲ್ಲಿ ಮಂಜು ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರಿಗೆ ಹಂಚಿದ್ದಾರೆ. ಕಂಟೆಂಟ್, ಸ್ಪಾನರ್‍ಶಿಪ್, ಆಟಗಾರರ ಆಯ್ಕೆ ಪ್ರಕ್ರಿಯೆ, ಸಂಘಟನೆ, ಸೋಷಿಯಲ್ ಮೀಡಿಯಾ.. ಹೀಗೆ ಇಡೀ ಟೆಕ್ನಿಕಲ್ ಮತ್ತು ಪೆÇಡಕ್ಷನ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಪ್ರೀತಿಯ ಬಾಲು ಸಾರ್.. ಎಷ್ಟೇ ಒತ್ತಡ ಇರಲಿ, ಸಂಯಮದಿಂದಲೇ ಅಚ್ಚುಕಟ್ಟಾಗಿ ನಿಭಾಯಿಸುವ ವ್ಯಕ್ತಿ ನಮ್ಮ ಬಾಲು ಸಾರ್. ಇಡೀ ತಂಡಕ್ಕೆ ಹಿರಿಯಣ್ಣನಂತಿರುವ ಬಾಲು ಸಾರ್ ಬೆಂಬಲ ಇಡೀ ತಂಡಕ್ಕೆ ಸ್ಫೂರ್ತಿಯ ಚಿಲುಮೆಯಾಗಿದೆ.

ಸಿಎಂ ಕಪ್ ಟೂರ್ನಿಗೆ ಪೂರ್ವ ಸಿದ್ಧತೆ ನಡೆಯುತ್ತಿರುವಾಗಲೇ ಎಂಟ್ರಿಯಾಗಿದ್ದು ಸನತ್ ರೈ. ಕನ್ನಡ ಮಾಧ್ಯಮದಲ್ಲಿ ಹಲವಾರು ಸಂಸ್ಥೆಗಳಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸಿರುವ ಅನುಭವ ಸನತ್ ರೈ ಅವರದ್ದು. ಕ್ರೀಡಾ ಪತ್ರಕರ್ತನಾಗಿ, ಕ್ರೀಡಾ ವಿಶ್ಲೇಷಕನಾಗಿ, ಸುದ್ದಿ ಸಂಪಾದಕನಾಗಿ ಕನ್ನಡ ಮಾಧ್ಯಮದಲ್ಲಿ ಸನತ್ ರೈ ಅವರ ಹೆಸರು ಚಿರಪರಿಚಿತ. ಅದರಲ್ಲೂ ಮಂಜುನಾಥ್ ಜೊತೆ ಟಿವಿ 9ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ರು. ಕೆಲಸದ ವಿಚಾರದಲ್ಲಿ ಸಾಕಷ್ಟು ಬಾರಿ ಜಗಳ ಕೂಡ ಮಾಡಿಕೊಂಡಿದ್ದಾರೆ. ಈ ಜಗಳ, ಮುನಿಸು ಎಲ್ಲವೂ ಒಂದು ಟೀ – ಕಾಫಿಯಲ್ಲಿ ರಾಜಿಯಾಗುತ್ತಿತ್ತು. ಈ ಪ್ರೀತಿ, ವಿಶ್ವಾಸ, ಗೆಳೆತನವೇ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಇಬ್ಬರನ್ನು ಜೊತೆಯಾಗಿ ಕೆಲಸ ಮಾಡುವಂತೆ ಮಾಡಿತ್ತು. ಅಲ್ಲದೆ ಮಂಜುನಾಥ್ ಅವರ ಯಶಸ್ಸಿನ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಿದ್ದ ಸನತ್ ರೈ ಕೈಜೋಡಿಸಿದಾಗ ಮಂಜುನಾಥ್ ಅವರ ಆತ್ಮವಿಶ್ವಾಸ ಕೂಡ ಇಮ್ಮಡಿಗೊಂಡಿತ್ತು. ಅದಕ್ಕೆ ತಕ್ಕಂತೆ ಸನತ್ ಮತ್ತು ಸುನೀಲ್, ತೇಜಸ್À ಜೊತೆಗಿನ ಒಡನಾಟವೂ ತಂಡಕ್ಕೆ ಹೆಚ್ಚಿನ ಬಲ ನೀಡಿತ್ತು.

ಹೌದು, ಕನ್ನಡ ಮಾಧ್ಯಮ ರಂಗದಲ್ಲೇ ಮಹತ್ವಾಕಾಂಕ್ಷಿ ಹಾಗೂ ಪ್ರತಿಷ್ಠಿತ ಟೂರ್ನಿ ಸಂಘಟಿಸುತ್ತಿರುವ 9 ಡ್ರೀಮ್ಸ್ ತಂಡಕ್ಕೆ ಮುದ್ರಣ ಹಾಗೂ tv ಮಾಧ್ಯಮಗಳ ಸಂಪಾದಕರು, ಮುಖ್ಯವರದಿಗಾರರು, ಕ್ರೀಡಾ ಸಂಪಾದಕರು ಎಲ್ಲರೂ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಅದರಲ್ಲೂ ಹಿರಿಯ ಪತ್ರಕರ್ತ ಹಾಗೂ ಸಂಜೆವಾಣಿ ಪತ್ರಿಕೆಯ ವರದಿಗಾರ ಸ್ವಾಮಿ ಸಾರ್, ಹಿರಿಯ ಪತ್ರಕರ್ತ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ನ ಮಾಜಿ ಅಧ್ಯಕ್ಷ ಪೆÇನ್ನಪ್ಪ ಸಾರ್, ಬೆಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಹಿರಿಯ ಪತ್ರಕರ್ತ ಸುನೀಲ್ ಶಿರಸಂಗಿ. ಪ್ರತಿಧ್ವನಿ ಡಿಜಿಟಲ್ ಸಂಸ್ಥೆಯ ಸಂಸ್ಥಾಪಕ ಎಸ್. ಶಿವಕುಮಾರ್ ಅವರ ಪ್ರೀತಿ, ಬೆಂಬಲಕ್ಕೆ 9 ಡ್ರೀಮ್ಸ್ ತಂಡ ಚಿರಋಣಿಯಾಗಿದೆ.

cm cup 9 dreamz team

ಮತ್ತೊಂದೆಡೆ ನಮ್ಮ ಸಿಎಂ ಕಪ್ ಟೂರ್ನಿಯ ಪ್ರತಿ ಹಜ್ಜೆಯಲ್ಲೂ ನೆರಳಾಗಿ ನಿಂತಿರುವ ರಾಜ್ ಇಂವೆಂಟ್ಸ್ ಸಂಸ್ಥೆಯ ಮುಖ್ಯಸ್ಥ ಸಿದ್ದರಾಜು, ಟೂರ್ನಿಗೆ ಎಲ್ಲಾ ರೀತಿಯ ಬೆಂಬಲ ನೀಡಿರುವ ಮೀಡಿಯಾ ಮೀಡಿಯಾ ಕನೆಕ್ಟ್ ನ ಸಂಸ್ಥಾಪಕಿ ದಿವ್ಯ, ಎಂಟು ಫ್ರಾಂಚೈಸಿ ಮಾಲೀಕರು, ಸಕ್ರಾ ಹಾಸ್ಪಿಟಲ್, ಎನರ್ಜಿ ಪಾಟ್ನರ್ ರಿಲೆಯ್ಯಾನ್ಸ್ ಸಂಸ್ಥೆಯ ಕ್ಯಾಂಪ, ರೆಡಿಯೋ ಪಾಟ್ನರ್ ರೆಡಿಯೋ ಸಿಟಿ, ಬೆಳಕು ಮೀಡಿಯಾ ಪ್ರೈವೆಟ್ ಲಿಮಿಟೆಡ್, ಡಿಜಿಟಲ್ ಪಾಟ್ನರ್ ಸಾಕ್ಷ ಟಿವಿ, ನ್ಯೂಸೋ ನ್ಯೂಸು, ಪ್ರತಿಧ್ವನಿ, ಬಾಸ್ ಟಿವಿ ಸೇರಿದಂತೆ ಎಲ್ಲಾ ಪ್ರಾಯೋಜಕರಿಗೂ ತುಂಬು ಹೃದಯದ ಕೃತಜ್ಞತೆಗಳು.

ಹಾಗೇ, ನಮ್ಮ ಸಹವಾಸಕ್ಕೆ ಬೆಂಬಲವಾಗಿ ನಿಂತ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಸರ್ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಪ್ರತಿ ಹಂತದಲ್ಲೂ ನಾನಿದ್ದೇನೆ.. ಗೋ ಹೆಡ್ ಅಂತ ಸ್ಪೂರ್ತಿಯನ್ನು ನೀಡದೇ ಇರುತ್ತಿದ್ರೆ ಈ ಟೂರ್ನಿಯನ್ನು ಸಂಘಟಿಸಲು ಸಾಧ್ಯವಾಗುತ್ತಿರಲಿಲ್ಲ. ಟೂರ್ನಿಯ ಪರಿಕಲ್ಪನೆಯನ್ನು ಕೆ.ವಿ. ಪ್ರಭಾಕರ್ ಅವರಿಗೆ ವಿವರಿಸಿದಾಗ ಈ ಟೂರ್ನಿಯನ್ನು ಮಾಡೋಣ. ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಲ್ಲದೇ ನಾನು ಆಡುತ್ತೇನೆ ಎಂದು ಹೇಳಿದಾಗ ಹಿಂದೆ ಮುಂದೆ ಯೋಚನೆ ಮಾಡಲಿಲ್ಲ. ಅದಕ್ಕೆ ತಕ್ಕಂತೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್, ರಮೇಶ್ ಬಾನೋಟ್, ಐಎಎಸ್ ಅಧಿಕಾರಿ ಸೆಲ್ವ ಕುಮಾರ್, ಬೆಂಗಳೂರು ಡಿಸಿ ಜಗದೀಶ್, ಸತೀಶ್ ಕುಮಾರ್ ಹೀಗೆ ಟೂರ್ನಿಯಲ್ಲಿ ಆಡುತ್ತಿರುವ ಪ್ರತಿಯೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು, ಸೆಲೆಬ್ರಿಟಿಗಳು, ಮಾಧ್ಯಮ ಮಿತ್ರರ ಸಹಕಾರವನ್ನು ಎಂದೆಂದಿಗೂ 9 ಡ್ರೀಮ್ಸ್ ಸಂಸ್ಥೆ ನೆನಪಿನಲ್ಲಿಟ್ಟುಕೊಳ್ಳುತ್ತದೆ.

ಇನ್ನು ಸಿಎಂ ಕಪ್ ಟೂರ್ನಿಗೆ ಅದ್ಭುತವಾದ ಥೀಮ್ ಸಾಂಗ್ ರಚಿಸಿರುವ ಸಂಗೀತ ನಿರ್ದೇಶಕ ಸಂಭ್ರಮ ಶ್ರೀಧರ್ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ಹಾಗೇ ಅರ್ಥಪೂರ್ಣ ಹಾಡಿಗೆ ಪದ ಜೋಡಣೆ ಮಾಡಿರುವ ನಾಗರ್ಜುನ ಶರ್ಮಾ ಹಾಗೂ ಥೀಮ್ ಸಾಂಗ್‍ನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಚಂದ್ರ ಮಯೂರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.

cm cup 2026- 9dreamz team
cm cup 2026- 9dreamz team

ಒಟ್ಟಿನಲ್ಲಿ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಕರ್ನಾಟಕದಲ್ಲಿ ಹೊಸ ಪರಂಪರೆಗೆ ಮುನ್ನುಡಿ ಬರೆದಿದೆ. ಜೊತೆಯಾಗಿ ಆಡೋಣ.. ಇತಿಹಾಸ ಬರೆಯೋಣ.. ಲೀಡರ್ಸ್ ಪ್ಲೇ.. ಫ್ರೆಂಡ್‍ಶಿಫ್ ವಿನ್ಸ್.. ಈ ಸ್ಲೋಗನ್‍ಗೆ ಅರ್ಥಪೂರ್ಣವಾಗಿ ಟೂರ್ನಿಯನ್ನು ಸಂಘಟಿಸುತ್ತಿದ್ದೇವೆ. ನಮ್ಮ ಶ್ರಮ, ಯೋಚನೆ, ಯೋಜನೆ, ನಮ್ಮ ಕನಸು ನನಸು ಆಗಿದೆ ಎಂಬ ಸಾರ್ಥಕತೆಯ ಭಾವ ನಮಗಿದೆ.
ನಮ್ಮ ಜೊತೆ ಕೈಜೋಡಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿ, ಬೆಂಬಲಿಸಿ, ಧೈರ್ಯ, ಆತ್ಮವಿಶ್ವಾಸ ತುಂಬಿ ಸಹಕರಿಸಿದ ಪ್ರತಿಯೊಬ್ಬರನ್ನು 9 ಡ್ರೀಮ್ಸ್ ತಂಡ ಯಾವತ್ತೂ ಮರೆಯುವುದಿಲ್ಲ. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ

9 ಡ್ರೀಮ್ಸ್ ಸಂಸ್ಥೆ
ಸಿಎಂ ಕಪ್ ಆಯೋಜಕರು.

 

Tags: #9dreamz#cmcup2026#cmcupbadminton#saakshatvbengalurukarnatakamangaluru
ShareTweetSendShare
Join us on:

Related Posts

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

by Shwetha
February 20, 2026
0

ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆಯ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಇಂದು ಮಹತ್ವದ ಸಭೆ...

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಮಾಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿ, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ...

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

by Shwetha
February 20, 2026
0

ದೆಹಲಿ‌ನಲ್ಲಿ ಆಯೋಜಿಸಲಾದ ‘AI ಇಂಪ್ಯಾಕ್ಟ್ ಸಮಿಟ್’ನ ಒಂದು ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುಂದ‌ರ್ ಪಿಚೈ, ಸ್ಯಾಮ್...

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದು ಕಂಡರೂ, ಆಂತರಿಕವಾಗಿ ಭವಿಷ್ಯದ ಅಧಿಕಾರ ಹಂಚಿಕೆಯ ಲೆಕ್ಕಾಚಾರಗಳು ಜೋರಾಗಿವೆ. 2028ರ ವಿಧಾನಸಭಾ...

ಸುಳ್ಳಿನ ಕೊಚ್ಚೆಯಲ್ಲಿ ಹೊರಳಾಡುವ ಬದಲು ಮೋದಿ ಎದುರು ನಿಂತು ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತಿ: ಬಿಜೆಪಿ ನಾಯಕರಿಗೆ ಸಚಿವ ದಿನೇಶ್ ಗುಂಡೂರಾವ್ ಬಹಿರಂಗ ಸವಾಲು

ಸುಳ್ಳಿನ ಕೊಚ್ಚೆಯಲ್ಲಿ ಹೊರಳಾಡುವ ಬದಲು ಮೋದಿ ಎದುರು ನಿಂತು ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತಿ: ಬಿಜೆಪಿ ನಾಯಕರಿಗೆ ಸಚಿವ ದಿನೇಶ್ ಗುಂಡೂರಾವ್ ಬಹಿರಂಗ ಸವಾಲು

by Shwetha
February 20, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷದ ಬಿಜೆಪಿ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರೋಗ್ಯ ಇಲಾಖೆಯ ನಿರ್ವಹಣೆ ಕುರಿತಂತೆ ಬಿಜೆಪಿ ಮಾಡಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram