ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ
ಶ್ರೀನಗರ, ಜುಲೈ 17: ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಇಂದು ಮುಂಜಾನೆ 4:55 ಗಂಟೆಗೆ ಕಟ್ರಾ ನಗರದಲ್ಲಿ ಭೂಮಿ ಕಂಪಿಸಿದೆ. ಆದಾಗ್ಯೂ, ಭೂಕಂಪದ ಕಡಿಮೆ ತೀವ್ರತೆಯಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಜೂನ್ 27 ರಂದು, ರಿಕ್ಟರ್ ಮಾಪಕದಲ್ಲಿ 4.4 ರಷ್ಟಿರುವ ಸೌಮ್ಯ-ತೀವ್ರತೆಯ ಭೂಕಂಪವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿತ್ತು.
ಏತನ್ಮಧ್ಯೆ, ರಿಕ್ಟರ್ ಮಾಪಕದಲ್ಲಿ 4.1 ಮತ್ತು 2.6 ತೀವ್ರತೆಯ ಎರಡು ಭೂಕಂಪಗಳು ಗುರುವಾರ ಅಸ್ಸಾಂನ ಕೆಲವು ಭಾಗಗಳಲ್ಲಿ ಮತ್ತು ಪಕ್ಕದ ಈಶಾನ್ಯ ಪ್ರದೇಶಗಳಲ್ಲಿ ಸಂಭವಿಸಿತ್ತು. ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ. ಕೆಲವು ಸೆಕೆಂಡುಗಳ ಕಾಲ ನಡೆದ ಭೂಕಂಪನದ ಕೇಂದ್ರಬಿಂದು 18 ಕಿ.ಮೀ ಮತ್ತು 11 ಕಿ.ಮೀ ಆಳದಲ್ಲಿತ್ತು. ಮೇಘಾಲಯದಲ್ಲೂ ಭೂಮಿ ಕಂಪಿಸಿತ್ತು.








