ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡ್ರಂತೆ ಸಿಎಂ: ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ ತೀವ್ರ ವಾಗ್ದಾಳಿ, ಅಗ್ರಿಮೆಂಟ್ ರಾಮಯ್ಯ ಎಂದು ಟಾಂಗ್

Shwetha by Shwetha
March 4, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯ ಕಾವು ಏರುತ್ತಿರುವ ಬೆನ್ನಲ್ಲೇ, ಇದೀಗ ಫೋನ್ ಕದ್ದಾಲಿಕೆ ಆರೋಪ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಹೊಸ ವೇದಿಕೆಯಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿದ್ದ ಫೋನ್ ಟ್ಯಾಪಿಂಗ್ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಪ್ರತಿಕ್ರಿಯೆಗೆ, ಕುಮಾರಸ್ವಾಮಿ ಅವರು ಈಗ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರಬಲವಾಗಿ ತಿರುಗೇಟು ನೀಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರಂತೆ ಎನ್ನುವ ಗಾದೆಯ ಮೂಲಕ ಸಿಎಂ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ, ಸರಣಿ ಪೋಸ್ಟ್‌ಗಳ ಮೂಲಕ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಂಬಳಕಾಯಿ ಕಳ್ಳ ಎಂದರೆ ನಾನೇ ಎನ್ನುವ ಸ್ಥಿತಿ

Related posts

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

March 4, 2026
ರಿಯಾದ್ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ: ‘ನಮ್ಮ ಪ್ರತಿಕ್ರಿಯೆ ಶೀಘ್ರದಲ್ಲೇ’ – ಟ್ರಂಪ್ ಎಚ್ಚರಿಕೆ

ರಿಯಾದ್ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ: ‘ನಮ್ಮ ಪ್ರತಿಕ್ರಿಯೆ ಶೀಘ್ರದಲ್ಲೇ’ – ಟ್ರಂಪ್ ಎಚ್ಚರಿಕೆ

March 4, 2026

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಕೆಲಸ ಮಾಡುವುದನ್ನು ಬಿಟ್ಟು ಕೌಂಟರ್ ಕೊಡುವುದರಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದೀರಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಎಂದು ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳ ಆಧಾರದ ಮೇಲೆ ನಾನು ಮಾತನಾಡಿದ್ದೇನೆ ಅಷ್ಟೇ. ಆದರೆ ನಿಮ್ಮ ಪ್ರತಿಕ್ರಿಯೆ ನೋಡಿದರೆ ನಿಮಗೆ ಆಡಳಿತಕ್ಕಿಂತ ಹೆಚ್ಚಾಗಿ ಬೇರೆಯವರನ್ನು ಲೇವಡಿ ಮಾಡುವುದರಲ್ಲೇ ಹೆಚ್ಚು ಆಸಕ್ತಿ ಇದ್ದಂತಿದೆ ಎಂದು ಟೀಕಿಸಿದ್ದಾರೆ.

ಅಧಿಕಾರ ನಡೆಸುವುದನ್ನು ಬಿಟ್ಟು ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ

ಜನರು ನಿಮಗೆ 140 ಸ್ಥಾನಗಳನ್ನು ನೀಡಿ ಅಧಿಕಾರ ಕೊಟ್ಟಿದ್ದಾರೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಬದಲು ಅಡ್ನಾಡಿಗಳಂತೆ ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದ ಆಂತರಿಕ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಈ ಫೋನ್ ಕದ್ದಾಲಿಕೆ ಎಂಬುದು ಕೇವಲ ನನ್ನ ಮಾತಲ್ಲ, ಇದು ಮಾಧ್ಯಮಗಳು ಮತ್ತು ಜನರ ಸಂಶಯವಾಗಿದೆ. ಸತ್ಯಮೇವ ಜಯತೇ ಎಂಬುದು ನಿಮ್ಮ ಬರೀ ಘೋಷಣೆಯಾಗಿದೆ, ಆದರೆ ಸತ್ಯ ಹೇಳಲು ಏಕೆ ಹಿಂದೇಟು ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ನನ್ನದು ಕದ್ದಾಲಿಸುವ ಕರ್ಮವಲ್ಲ

ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅದು ಸ್ವತಂತ್ರ ಸರ್ಕಾರವಾಗಿರಲಿಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ಸಿದ್ದವನದಲ್ಲಿ ಕುಳಿತು ಶಾಸಕರಿಗೆ ಬ್ರೈನ್ ವಾಶ್ ಮಾಡಿ ಸರ್ಕಾರ ಬೀಳಿಸುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಅವಧಿಯ ಸರ್ಕಾರ ಮತ್ತು ಈಗಿನ ಗುಪ್ತಚರ ಇಲಾಖೆಯ ಕಾರ್ಯವೈಖರಿ ರಾಜ್ಯದ ಜನರಿಗೆ ತಿಳಿದಿದೆ. ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕಿದ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಅಗ್ರಿಮೆಂಟ್ ರಾಮಯ್ಯ ಎಂದು ವ್ಯಂಗ್ಯ

ಸಿಎಂ ಮತ್ತು ಡಿಸಿಎಂ ನಡುವಿನ ಸಂಬಂಧದ ಬಗ್ಗೆಯೂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ನಿಮ್ಮಿಬ್ಬರ ಕುಚುಕು ಕುಚುಕು ಗೆಳೆತನದ ಬಗ್ಗೆ ನಮಗೇನು ಸಂಕಟವಿಲ್ಲ. ಆದರೆ ನಿಮ್ಮಿಬ್ಬರ ಅಸಹನೆ ವೇದಿಕೆಗಳ ಮೇಲೆಯೇ ಸ್ಫೋಟಗೊಳ್ಳುತ್ತಿದೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವುದು ನಿಮ್ಮ ಜಾಯಮಾನ. ನಿಮ್ಮ ಸ್ನೇಹಿತನಿಗಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ ಎಂದು ಸಿಎಂ ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿ ನೇರವಾಗಿ ಕುಟುಕಿದ್ದಾರೆ.

ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್

ರಾಜ್ಯದಲ್ಲಿನ ತನಿಖಾ ಸಂಸ್ಥೆಗಳ ದುರ್ಬಳಕೆ ಬಗ್ಗೆಯೂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ (SIT) ಏನೇನು ಮಾಡುತ್ತಿದೆ ಎಂಬುದು ಜಗಜ್ಜಾಹೀರು. ಅಧಿಕಾರ ದುರ್ಬಳಕೆ ಮತ್ತು ದ್ವೇಷದ ರಾಜಕಾರಣ ನಿಮ್ಮ ನೈಜ ಗುಣ. ಪ್ರಧಾನಿ ಮೋದಿಯವರ ಹೆಸರನ್ನು ಅನಾವಶ್ಯಕವಾಗಿ ಎಳೆದು ತರುವ ಬದಲು ನಿಮ್ಮ ತಟ್ಟೆಯನ್ನು ಒಮ್ಮೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ದೇವೇಗೌಡರ ತ್ಯಾಗ ನಿಮಗೆ ಮಾದರಿಯಾಗಲಿ

ನನ್ನ ಜತೆಗಿನ ಸಂಘರ್ಷಕ್ಕೆ ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ಪ್ರಧಾನಿ ಹುದ್ದೆಯನ್ನು ವಿರೋಚಿತವಾಗಿ ತ್ಯಜಿಸಿದರು. ವಾಜಪೇಯಿ ಅವರು ಬೆಂಬಲ ನೀಡುತ್ತೇವೆ ಎಂದರೂ ಅವರು ಅಧಿಕಾರಕ್ಕೆ ಅಂಟಿ ಕೂರಲಿಲ್ಲ. ಅವರ ಗರಡಿಯಲ್ಲಿ ಪಳಗಿದ ನೀವು ಅಂಥ ತ್ಯಾಗ ಮನೋಭಾವವನ್ನು ಒಮ್ಮೆ ಪ್ರದರ್ಶಿಸಿ. ಸೋತರೆ ಬಾಹುಬಲಿಯಂತೆ ಸೋಲಬೇಕು, ರಣಹೇಡಿಯಂತೆ ಪಲಾಯನ ಮಾಡಬಾರದು. ನಾನು ಸೋತಿದ್ದೇನೆ ಹೊರತು ಓಡಿ ಹೋಗಿಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ShareTweetSendShare
Join us on:

Related Posts

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

by Shwetha
March 4, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಭಾರತವು ಈ ವಿಚಾರದಲ್ಲಿ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು ಎಂದು ಹೇಳಿದ್ದಾರೆ. ಇರಾನ್...

ರಿಯಾದ್ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ: ‘ನಮ್ಮ ಪ್ರತಿಕ್ರಿಯೆ ಶೀಘ್ರದಲ್ಲೇ’ – ಟ್ರಂಪ್ ಎಚ್ಚರಿಕೆ

ರಿಯಾದ್ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ: ‘ನಮ್ಮ ಪ್ರತಿಕ್ರಿಯೆ ಶೀಘ್ರದಲ್ಲೇ’ – ಟ್ರಂಪ್ ಎಚ್ಚರಿಕೆ

by Shwetha
March 4, 2026
0

ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿರುವುದನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ. ನಮ್ಮ ರಾಯಭಾರ ಕಚೇರಿಯ ಮೇಲಿನ...

ಇಂದಿರಾ ಗಾಂಧಿಗೆ ಬೆನ್ನಿಗೆ ಚೂರಿ ಹಾಕಿದ್ದ ಇರಾನ್ ಈಗ ಕಾಂಗ್ರೆಸ್‌ಗೆ ಆಪ್ತಮಿತ್ರವಾಯಿತೇ 1971ರ ದ್ರೋಹದ ಕರಾಳ ಇತಿಹಾಸ ಅನಾವರಣ

ಇಂದಿರಾ ಗಾಂಧಿಗೆ ಬೆನ್ನಿಗೆ ಚೂರಿ ಹಾಕಿದ್ದ ಇರಾನ್ ಈಗ ಕಾಂಗ್ರೆಸ್‌ಗೆ ಆಪ್ತಮಿತ್ರವಾಯಿತೇ 1971ರ ದ್ರೋಹದ ಕರಾಳ ಇತಿಹಾಸ ಅನಾವರಣ

by Shwetha
March 4, 2026
0

ನವದೆಹಲಿ: ಜಾಗತಿಕ ರಾಜಕೀಯ ವಲಯದಲ್ಲಿ ಉಂಟಾಗಿರುವ ಅಲ್ಲೋಲ ಕಲ್ಲೋಲಗಳು ಇದೀಗ ಭಾರತದ ರಾಜಕೀಯ ಅಂಗಳದಲ್ಲೂ ಪ್ರತಿಧ್ವನಿಸುತ್ತಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ವಿಚಾರದಲ್ಲಿ ಕೇಂದ್ರದ ನರೇಂದ್ರ...

ಹಗಲು ದರೋಡೆಗೆ ಇಳಿದ ಆಟೋ ಚಾಲಕನಿಗೆ ಖಾಕಿ ಬಿಸಿ: ಮೆಜೆಸ್ಟಿಕ್ ನಿಂದ ಕತ್ರಿಗುಪ್ಪೆಗೆ 700 ರೂ ಕೇಳಿ ಸಿಕ್ಕಿಬಿದ್ದ ಚಾಲಕ

ಹಗಲು ದರೋಡೆಗೆ ಇಳಿದ ಆಟೋ ಚಾಲಕನಿಗೆ ಖಾಕಿ ಬಿಸಿ: ಮೆಜೆಸ್ಟಿಕ್ ನಿಂದ ಕತ್ರಿಗುಪ್ಪೆಗೆ 700 ರೂ ಕೇಳಿ ಸಿಕ್ಕಿಬಿದ್ದ ಚಾಲಕ

by Shwetha
March 4, 2026
0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರ ದರ್ಪ ಮತ್ತು ದುಬಾರಿ ದರ ವಸೂಲಿ ಹೊಸದೇನಲ್ಲ. ಪ್ರಾಮಾಣಿಕವಾಗಿ ಆಟೋ ಓಡಿಸುವವರ ನಡುವೆ, ಪ್ರಯಾಣಿಕರಿಂದ ಸುಲಿಗೆ ಮಾಡಲು ಹೊಂಚು...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 4, 2026
0

ದಿನ ಭವಿಷ್ಯ: 04-03-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಿತಾಂಶಗಳು ದೊರೆಯಲಿವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಬಹುದು ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram