ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ.
ಈ ಬಾರಿ 8ನೇ ತರಗತಿಗೆ ಸಿದ್ಧಪಡಿಸಿದ್ದ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸವಾಲುಗಳು ಕುರಿತು ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಸುಪ್ರೀಂ ಕೋರ್ಟ್ನ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ NCERT ಅಧಿಕಾರಿಗಳು ಕ್ಷಮೆಯಾಚಿಸಿ, ವಿವಾದವನ್ನು ಶಮನಗೊಳಿಸುವ ಉದ್ದೇಶದಿಂದ ಪೂರ್ಣ ಪಠ್ಯಪುಸ್ತಕವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದಾರೆ.
ಈ ಬೆಳವಣಿಗೆ ಶಿಕ್ಷಣ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಪಠ್ಯಪುಸ್ತಕಗಳ ವಿಷಯವಸ್ತು ಕುರಿತು ಹೆಚ್ಚಿನ ಜಾಗ್ರತೆ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.








