ಇರಾನ್ ತನ್ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಬಸಿಜ್ ಪಡೆಯ ಕಮಾಂಡರ್ ಘೋಲಮೆಜಾ ಸೊಲೈಮಾನಿ ಹತ್ಯೆಗೀಡಾದ ಹಿನ್ನೆಲೆ ಇಸ್ರೇಲ್ ವಿರುದ್ಧ ತೀವ್ರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಈ ಬೆಳವಣಿಗೆಯ ನಡುವೆ ಇರಾನ್, ಇಸ್ರೇಲ್‌ನ ಮಧ್ಯ ಭಾಗಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಇಸ್ರೇಲ್‌ನ ರಾಮತ್‌ಗಾನ್ ಪ್ರದೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ಪರಿಣಾಮವಾಗಿ ಇಸ್ರೇಲ್‌ನ ಕೇಂದ್ರ ಭಾಗಗಳಲ್ಲಿ ಅಪಾರ ಆಸ್ತಿ ಹಾನಿಯೂ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.








