ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

Shwetha by Shwetha
March 22, 2026
in ಮನರಂಜನೆ, Cinema, National, Newsbeat, State, ದೇಶ - ವಿದೇಶ, ರಾಜ್ಯ
Share on FacebookShare on TwitterShare on WhatsappShare on Telegram

ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಮಹಾ ಘರ್ಷಣೆಯೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಜಿಎಫ್ 2 ಬಿಡುಗಡೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಯಶ್ ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ವಾರ ಅಕ್ಷರಶಃ ಹಬ್ಬವಾಗಬೇಕಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಟಾಕ್ಸಿಕ್ ಬಿಡುಗಡೆಯಾಗಿ ಟಿಕೆಟ್ ಕೌಂಟರ್ ಗಳು ರಾಕಿಂಗ್ ಸ್ಟಾರ್ ಆರ್ಭಟಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ ಮಾರ್ಚ್ 19ರ ಬದಲಿಗೆ ಜೂನ್ 4ಕ್ಕೆ ಸಿನಿಮಾ ಮುಂದೂಡಲ್ಪಟ್ಟಿದೆ. ಸದ್ಯದ ಬಾಕ್ಸಾಫೀಸ್ ವರದಿಗಳನ್ನು ನೋಡಿದರೆ ಯಶ್ ತೆಗೆದುಕೊಂಡ ಈ ನಿರ್ಧಾರ ಗಾಂಧಿನಗರದಿಂದ ಹಿಡಿದು ಬಾಲಿವುಡ್ ಅಂಗಳದವರೆಗೂ ಭಾರೀ ಚರ್ಚೆ ಹುಟ್ಟುಹಾಕಿದೆ.

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡವೇ ಟಾಕ್ಸಿಕ್ ಮುಂದೂಡಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಬೃಹತ್ ಚಿತ್ರಕ್ಕೆ ಗಲ್ಫ್ ರಾಷ್ಟ್ರಗಳ ಮಾರುಕಟ್ಟೆ ಅತ್ಯಂತ ಪ್ರಮುಖವಾಗಿದೆ. ಯುದ್ಧದ ಆತಂಕದ ನಡುವೆ ಅಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಕಲೆಕ್ಷನ್ ಮೇಲೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇತ್ತು. ಹಾಗಾಗಿ ಚಿತ್ರತಂಡ ಜೂನ್ 4ರಂದು ಬಿಡುಗಡೆ ಮಾಡಲು ತೀರ್ಮಾನಿಸಿತು. ಆದರೆ ಸಿನಿಮಾ ಮುಂದೂಡಿಕೆಯಾದಾಗ ಧುರಂಧರ್ 2 ಚಿತ್ರಕ್ಕೆ ಯಶ್ ಹೆದರಿದರು ಟಾಕ್ಸಿಕ್ ಚಿತ್ರದ ವಿಎಫ್ಎಕ್ಸ್ ಕೆಲಸಗಳು ಮುಗಿದಿಲ್ಲ ಕೆಲ ದೃಶ್ಯಗಳನ್ನು ಮರುಚಿತ್ರೀಕರಣ ಮಾಡಲಾಗುತ್ತಿದೆ ಎಂಬೆಲ್ಲಾ ಊಹಾಪೋಹಗಳು ಕೇಳಿಬಂದಿದ್ದವು.

Related posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

August 7, 2026
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

August 7, 2026

ಆದರೆ ಸದ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸಿದರೆ ಟಾಕ್ಸಿಕ್ ಬಿಡುಗಡೆಯಾಗದೇ ಇರುವುದೇ ಒಂದು ರೀತಿಯಲ್ಲಿ ಅದೃಷ್ಟ ಎನ್ನುವ ಮಾತುಗಳು ಸಿನಿ ಪಂಡಿತರಿಂದ ಕೇಳಿಬರುತ್ತಿದೆ. ಸದ್ಯ ದೇಶಾದ್ಯಂತ ಧುರಂಧರ್ 2 ಚಿತ್ರದ ಅಬ್ಬರ ಮಿತಿಮೀರಿದೆ. ಚಿತ್ರದಲ್ಲಿ ಲಾಜಿಕ್ ಮಿಸ್ ಆಗಿದ್ದರೂ ಸಣ್ಣ ಪುಟ್ಟ ತಪ್ಪುಗಳಿದ್ದರೂ ಪ್ರೇಕ್ಷಕರು ಅದನ್ನೆಲ್ಲಾ ಬದಿಗಿಟ್ಟು ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಒಂದು ವೇಳೆ ಇದೇ ಸಮಯದಲ್ಲಿ ಟಾಕ್ಸಿಕ್ ಬಿಡುಗಡೆಯಾಗಿದ್ದರೆ ಖಂಡಿತವಾಗಿಯೂ ಬಾಕ್ಸಾಫೀಸ್ ನಲ್ಲಿ ಇಬ್ಬಾಗವಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ರಾಕಿ ಭಾಯ್ ಹವಾ ಜೋರಾಗಿದ್ದರೆ ಉತ್ತರ ಭಾರತದಲ್ಲಿ ಧುರಂಧರ್ 2 ತನ್ನ ಪಾರುಪತ್ಯ ಮೆರೆಯುತ್ತಿತ್ತು. ಚಿತ್ರಮಂದಿರಗಳ ಹಂಚಿಕೆ ವಿಚಾರದಲ್ಲಿಯೂ ದೊಡ್ಡ ಯುದ್ಧವೇ ನಡೆಯುತ್ತಿತ್ತು. ಇದರಿಂದ ಎರಡು ಚಿತ್ರಗಳ ಕಲೆಕ್ಷನ್ ಮೇಲೂ ನೇರ ಹಾಗೂ ಭಾರೀ ಪೆಟ್ಟು ಬೀಳುತ್ತಿತ್ತು.

ಇದರ ಜೊತೆಗೆ ಧುರಂಧರ್ 2 ಚಿತ್ರದ ಸುತ್ತ ನಡೆಯುತ್ತಿರುವ ಬಲವಾದ ರಾಜಕೀಯ ಚರ್ಚೆಗಳು ಟಾಕ್ಸಿಕ್ ಗೆ ಮುಳುವಾಗುವ ಸಾಧ್ಯತೆಗಳಿದ್ದವು. ಧುರಂಧರ್ 2 ಕೇವಲ ಒಂದು ಸಿನಿಮಾವಾಗಿ ಉಳಿದಿಲ್ಲ ಅದರಲ್ಲಿ ದೇಶಭಿಮಾನದ ಜೊತೆಗೆ ಪ್ರಸ್ತುತ ಸರ್ಕಾರದ ಪರವಾದ ಪ್ರಾಪಗಂಡಾ ಇದೆ ಎನ್ನುವ ಆರೋಪಗಳಿವೆ. ಪಂಚರಾಜ್ಯಗಳ ಚುನಾವಣೆಯ ಹೊತ್ತಿನಲ್ಲಿ ಈ ಚಿತ್ರಕ್ಕೆ ಒಂದು ನಿರ್ದಿಷ್ಟ ವರ್ಗದಿಂದ ಸಿಗುತ್ತಿರುವ ಬೆಂಬಲ ಊಹೆಗೆ ನಿಲುಕದ್ದು. ಇಂತಹ ಸಮಯದಲ್ಲಿ ಟಾಕ್ಸಿಕ್ ಬಿಡುಗಡೆಯಾಗಿದ್ದರೆ ಧುರಂಧರ್ 2 ಚಿತ್ರವನ್ನು ಎತ್ತಿಹಿಡಿಯುವ ಭರದಲ್ಲಿ ಯಶ್ ಚಿತ್ರದ ಮೇಲೆ ನೆಗೆಟಿವ್ ಪ್ರಚಾರ ಮಾಡುವ ದೊಡ್ಡ ಜಾಲವೇ ಸೃಷ್ಟಿಯಾಗುವ ಅಪಾಯವಿತ್ತು. ರಾಜಕೀಯ ಲಾಭಕ್ಕಾಗಿ ಟಾಕ್ಸಿಕ್ ಚಿತ್ರವನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿರಲಿಲ್ಲ.

ಇದೆಲ್ಲವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ ಯಶ್ ಹಾಗೂ ಟಾಕ್ಸಿಕ್ ಚಿತ್ರತಂಡ ತೆಗೆದುಕೊಂಡ ನಿರ್ಧಾರ ಅತ್ಯಂತ ಜಾಣ್ಮೆಯ ಹೆಜ್ಜೆ ಎನ್ನಬಹುದು. ಈಗ ಧುರಂಧರ್ 2 ತನ್ನ ಪಾಡಿಗೆ ತಾನು ಕಲೆಕ್ಷನ್ ಮಾಡಿ ಮುಗಿಸಲಿದೆ. ಜೂನ್ 4ರಂದು ಟಾಕ್ಸಿಕ್ ಯಾವುದೇ ಅಡೆತಡೆಗಳಿಲ್ಲದೆ ಕಾಂಪಿಟೇಷನ್ ಇಲ್ಲದೆ ಇಡೀ ವಿಶ್ವದಾದ್ಯಂತ ಸೋಲೋ ಆಗಿ ಅಬ್ಬರಿಸಲಿದೆ. ಕೆಜಿಎಫ್ 2 ನಂತರದ ನಿರೀಕ್ಷೆಗಳನ್ನು ತಲುಪಲು ಟೀಸರ್ ಮೂಲಕವೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿರುವ ಟಾಕ್ಸಿಕ್ ಗೆ ಈ ಸಮಯಾವಕಾಶ ಮತ್ತಷ್ಟು ಪ್ಲಸ್ ಆಗಲಿದೆ. ಬಾಕ್ಸಾಫೀಸ್ ಕ್ಲ್ಯಾಶ್ ತಪ್ಪಿದ್ದರಿಂದ ಚಿತ್ರರಂಗಕ್ಕೂ ಲಾಭ ಪ್ರೇಕ್ಷಕರಿಗೂ ಲಾಭ.

ಒಟ್ಟಿನಲ್ಲಿ ತಾಳ್ಮೆಯಿಂದ ಕಾಯುವ ಮೂಲಕ ರಾಕಿ ಭಾಯ್ ಮತ್ತೊಮ್ಮೆ ತಮ್ಮ ಅದ್ಭುತ ಲೆಕ್ಕಾಚಾರದಲ್ಲಿ ಗೆದ್ದಿದ್ದಾರೆ ಎನ್ನುವುದೇ ಸದ್ಯದ ಫಿಲ್ಮಿ ದುನಿಯಾದ ಹಾಟ್ ಟಾಪಿಕ್.

ShareTweetSendShare
Join us on:

Related Posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

by Shwetha
August 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಅವರದ್ದು ಎನ್ನಲಾದ ವೈರಲ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್...

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

by Shwetha
August 7, 2026
0

ಹೊಸ ದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೆಟಾ ವಿರುದ್ಧ ಗಂಭೀರ ಸಮರ ಸಾರಿದ್ದಾರೆ. ಭಾರತದಲ್ಲಿ ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram