ಒಂದು ಕಡೆ ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕದ ಮಾಧ್ಯಮಗಳು ಶಾಂತಿ ಮಾತುಕತೆಗಳ ಬಗ್ಗೆ ಹೇಳುತ್ತಿದ್ದರೆ, ಇನ್ನೊಂದು ಕಡೆ ಇಸ್ಲಾಮಿಕ್ ರೆವ್ಯೂಲೇಷನರಿ ಗಾರ್ಡ್ ಕಾರ್ಪ್ಸ್ (IRGC) ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ನಿಮ್ಮಂತವರೊಂದಿಗೆ ನಾವು ಎಂದಿಗೂ ಮಾತುಕತೆ ನಡೆಸುವುದಿಲ್ಲ ಎಂದು IRGC ಸ್ಪಷ್ಟಪಡಿಸಿದ್ದು, ಅಮೆರಿಕದೊಂದಿಗೆ ಯಾವುದೇ ಸಮಾಧಾನ ಮಾತುಕತೆ ನಡೆಯುವುದಿಲ್ಲ ಎಂಬ ಸಂದೇಶ ನೀಡಿದೆ.
ಇದೇ ವೇಳೆ ಇರಾನ್ ಕಠಿಣ ಎಚ್ಚರಿಕೆ ನೀಡಿದ್ದು, ಸೋಲನ್ನು ಒಪ್ಪಂದದ ಹೆಸರಿನಲ್ಲಿ ಮುಚ್ಚಿಹಾಕಲು ಯತ್ನಿಸಬೇಡಿ. ನಮ್ಮ ಸೇನೆಯ ಶಕ್ತಿಯ ಮೂಲಕವೇ ಇಲ್ಲಿ ಸ್ಥಿರತೆ ಬರಲಿದೆ ಎಂದು ಹೇಳಿದೆ.
ಅಮೆರಿಕಾ ಈ ವಾಸ್ತವವನ್ನು ಅರಿಯುವವರೆಗೆ ತೈಲ ಬೆಲೆಗಳು ಕಡಿಮೆಯಾಗುವುದಿಲ್ಲ ಎಂದು ಇರಾನ್ ಹೇಳಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಇದರ ಪರಿಣಾಮ ಮುಂದುವರಿಯುವ ಸೂಚನೆ ನೀಡಿದೆ.








