ಬೆಂಗಳೂರು ನಗರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಹೊಸದಾಗಿ ರಚನೆಯಾದ ನಗರ ಪಾಲಿಕೆಗಳು ತಮ್ಮ ಮೊದಲ ಬಜೆಟ್ ಮಂಡಿಸಿದ್ದು, ಜನಪರ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮುಖ್ಯ ಯೋಜನೆಗಳು:
ಸಾರಥಿ ಯೋಜನೆ: ಆಟೋರಿಕ್ಷಾ ಖರೀದಿಗೆ ₹80,000 ಹಾಗೂ ಕಾರು ಖರೀದಿಗೆ ₹1.5 ಲಕ್ಷ ಸಹಾಯಧನ ಘೋಷಣೆ.
ಮಹಿಳೆಯರಿಗೆ ಉಚಿತ ವಾಹನ: ಉದ್ಯೋಗಸ್ಥ ಹಾಗೂ ಪೌರಕಾರ್ಮಿಕ ಮಹಿಳೆಯರಿಗೆ ಉಚಿತ ದ್ವಿಚಕ್ರ ವಾಹನ ನೀಡುವ ಯೋಜನೆ.
ವಸತಿ ಯೋಜನೆ: ಮನೆ ಇಲ್ಲದವರಿಗೆ ವಸತಿ ಒದಗಿಸುವ ಹೊಸ ಯೋಜನೆಗೆ ಚಾಲನೆ.
ಮನೆ ಖರೀದಿಗೆ ನೆರವು: ಮನೆ ಖರೀದಿಗೆ ₹5 ಲಕ್ಷವರೆಗೆ ಸಹಾಯಧನ ನೀಡಲು ನಿರ್ಧಾರ.
ಶಿಕ್ಷಣ ಕ್ಷೇತ್ರದಲ್ಲಿ:
SC/ST ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ
ವಿದೇಶಿ ವ್ಯಾಸಂಗಕ್ಕೆ ಪ್ರೋತ್ಸಾಹಧನ
ಇತರೆ ಪ್ರಮುಖ ಘೋಷಣೆಗಳು:
ಬೀದಿನಾಯಿಗಳ ಆಹಾರಕ್ಕಾಗಿ ₹12 ಕೋಟಿ ರೂ. ಮೀಸಲು
ಈ ಬಜೆಟ್ ಮೂಲಕ ಸಾರ್ವಜನಿಕರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಉದ್ಯೋಗ, ವಸತಿ, ಶಿಕ್ಷಣ ಕ್ಷೇತ್ರಗಳಿಗೆ ಉತ್ತೇಜನ ನೀಡಲು GBA ಮುಂದಾಗಿದೆ.








