2026ರ IPLನ ಮೊದಲ ಪಂದ್ಯವು ಬೆಂಗಳೂರಿನಲ್ಲಿ RCB & SRH ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನ ಗಿರಿನಗರದ ರಾಷ್ಟೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು RCB ಅಭಿಮಾನಿಗಳು ರಕ್ತದಾನ ಮಾಡಿ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
ಪ್ರತಿ ವರ್ಷ ಮ್ಯಾಚ್‌ಗೂ ಮುನ್ನ ರಕ್ತದಾನ ಮಾಡುವುದು ನಮ್ಮ ಸಂಪ್ರದಾಯ ಎಂದು ಅಭಿಮಾನಿಗಳು ಹೇಳಿದ್ದಾರೆ. ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ RCB ಗೆಲ್ಲುವ ವಿಶ್ವಾಸವಿದ್ದು, ಈ ಸೀಸನ್‌ನಲ್ಲಿ ತಂಡ ಟ್ರೋಫಿ ಗೆಲ್ಲಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನೂ, ಮೈದಾನದಲ್ಲಿ ಕೊಹ್ಲಿಯನ್ನು ನೋಡುವುದೇ ನಮಗೆ ದೊಡ್ಡ ಸಂತೋಷ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.








