ನಮ್ಮ ನೆಲದ ಒಂದು ಇಂಚನ್ನೂ ಕಬಳಿಸಲು ಜಗತ್ತಿನ ಯಾವ ತಾಕತ್ತಿಂದಲೂ ಸಾಧ್ಯವಿಲ್ಲ: ರಾಜನಾಥ್..!
ಚೀನಾದಲ್ಲಿ ಲಡಾಕ್ ಹಾಗೂ ಭಾರತ ಸೇನೆಯ ನಡುವೆ ನಡೆದ ಸಂಘರ್ಷದ ಬಳಿಕ ಸೇನೆಗೆ ಧೈರ್ಯ ತುಂಬಲು ಪ್ರಧದಾನಿ ಮೋದಿ ಭೇಟಿ ನೀಡಿರ‍್ರು. ಇದೀಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೨ ದಿನಗಳ ಕಾಲ ಲಡಾಕ್ ಗೆ ಪ್ರವಾಸ ಕಯಗೊಮಡಿದ್ದಾರೆ. ಲಡಾಕ್ ನಲ್ಲಿ ಕುತಂತ್ರಿ ಚೀನಾ ವಿರುದ್ಧ ಅಬ್ಬರಿಸಿರುವ ರಾಜನಾಥ್ ನಮ್ಮ ಭೂಮಿಯ ಒಂದು ಇಂಚನ್ನ ಸಹ ಕಬಳಿಸಲು ಇಡೀ ವಿಶ್ವದ ಯಾವ ತಾಕತ್ತಿನಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸದ್ಯ ಲಡಾಕ್ ನಲ್ಲಿರುವ ರಾಜನಾಥ್ ಸಿಂಗ್ ಭಾರತೀಯ ಸೇನೆ ಹಾಗೂ ಐಟಿಬಿಪಿ ಅಧಿಕಾರಿಗಳೊಂದಿಗೆ ಗಡಿ ಸಂಬAಧಿತ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನೂ ಗಡಿ ಘರ್ಷಣೆ ವಿಚಾರದ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಮಾರತುಕತೆಯಿಂದಲೇ ಸಮಸ್ಯೆ ಬಗೆಹರಿದರೆ ಉತ್ತಮ. ಆದ್ರೆ ಯಾವುದೇ ಕಾರಣಕ್ಕೂ ನಮ್ಮ ಭೂಮಿ ಕಬಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.