ಟಾಲಿವುಡ್ ಸಿನಿರಂಗದಲ್ಲಿ ಸೂಪರ್ ಹಿಟ್ ಸಿನೆಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ತೇಜ ಅವರ ಹೊಸ ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ 4-5 ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್ ರ ಪೆಂಗ್ವಿನ್ ಚಿತ್ರವ್ರೂ ಈಗಾಗಲೇ OTTಯಲ್ಲಿ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದೀಗ ಜಯಂ ಖ್ಯಾತಿಯ ತೇಜ ಅವರ ನೂತನ ಚಿತ್ರದಲ್ಲಿ ಕೀರ್ತಿ ಸುರೇಶ್ ಅಭಿನಯಿಸಲಿರುವುದು ಕನ್‌ಫರ್ಮ್ ಆಗಿದೆ.
ಇನ್ನೂ ತೇಜ ಅವರ ಜಯಂ ಚಿತ್ರದಲ್ಲಿ ವಿಲನ್ ರೋಲ್ ನಲ್ಲೇ ಮಿಂಚಿ ಸಕ್ಸಸ್ ಕಂಡಿದ್ದ ಗೋಪಿಚಂದ್ ಅವರು ಚಿತ್ರಕ್ಕೆ ನಾಯಕನಾಗಿ ಈ ಮೊದಲೇ ಆಯ್ಕೆಯಾಗಿದ್ದಾರೆ. ಜಯಂ, ಚಿತ್ರಂ, ಔನನ್ನಾ- ಕಾದನ್ನಾ, ಸೇರಿದಂತೆ ಅನೇಕ ಬ್ಲಾಕ್ ಬಸ್ಟರ್ ಮೂವಿಗಳನ್ನ ನಿರ್ದೇಶಿಸಿರುವ ತೇಜ ಅವರು ಕೆಲ ವರ್ಷಗಳಿಂದ ಸೋಲೇ ಕಂಡಿದ್ದಾರೆ. ಇದೀಗ ಅವರ ಮುಂಬರುವ ಚಿತ್ರದ ಮೇಲೇ ಭಾರೀ ನಿರೀಕ್ಷೆಯಿದ್ದು ಎಷ್ಟರ ಮಟ್ಟಿಗೆ ಸಕ್ಸಸ್ ಕಾಣಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಎದುರು ನೋಡ್ಬೇಕಿದೆ.








