ವಿಡಿಯೋ ಕಾಲ್ ಮಾಡಿ ನಿನ್ನ ದೇಹ ತೋರಿಸು ಎಂದ ಗೆಳತಿ ಮುಂದೆ ಮಾಡಿದ್ದೇನು ಗೊತ್ತಾ..?
ಬೆಂಗಳೂರು : ಹುಡುಗಿಯ ಮಾತು ಕೇಳಿ ವಿಡಿಯೋ ಕಾಲ್ ನಲ್ಲಿ ಬೆತ್ತಲಾದ ಯುವಕನೊಬ್ಬ ಈಗ ಪೊಲೀಸ್ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಏನಿದು ಘಟನೆ..?
ಸುರೇಶ್ ಎಂಬ ಯುವಕನಿಗೆ ಕೆಲ ದಿನಗಳಿಂದೆ ವಾಟ್ಸಾಪ್ ನಲ್ಲಿ ಯುವತಿ ಒಬ್ಬಳು ಪರಿಚಯವಾಗಿದ್ದಳು. ಲಾಕ್ ಡೌನ್ ಹಿನ್ನೆಲೆ ಬೇರೇನು ಕೆಲಸ ಇಲ್ಲವೆಂಬಂತೆ ಸುರೇಶ್ ಆಕೆಯ ಜೊತೆ ಹಗಲು ರಾತ್ರಿ ಎನ್ನದೇ ಚಾಟಿಂಗ್ ಮಾಡಿದ್ದಾರೆ. ಅಲ್ಲದೇ ಯುವತಿ ಆಗಾಗ ವಿಡಿಯೋ ಕಾಲ್ ಮಾಡಿದ್ದ ಆಕೆಯನ್ನು ನಿಶಾ ಎಂದು ಪರಿಚಯ ಮಾಡಿಕೊಂಡು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಾಳೆ. ಇದನ್ನ ಯುವಕ ಸುರೇಶ್ ನಂಬಿ ತುಂಬಾ ಕ್ಲೋಸ್ ಆಗಿ ಮಾತನಾಡಿದ್ದಾನೆ.
ಹೀಗೆ ಒಂದು ದಿನ ಸುರೇಶ್ ಗೆ ವಿಡಿಯೋ ಕಾಲ್ ಮಾಡಿದ ಯುವತಿ, ಸುರೇಶನಿಗೆ ನಿನ್ನ ದೇಹ ತೋರಿಸು ಎಂದು ಕೇಳಿದ್ದಾಳೆ. ಇದಕ್ಕೆ ಮೊದಲು ಸುತಾರಾಂ ಒಪ್ಪದ ಯುವಕ, ಆಮೇಲೆ ಒಪ್ಪಿ ಬೆತ್ತಲಾಗಿದ್ದಾನೆ. ಆಮೇಲೆ ಇದ್ದಕ್ಕಿದ್ದಂತೆ ಯುವತಿ ನಿಶಾ ಫೋನ್ ಸ್ವಿಚ್ ಆಗಿದೆ.
ನಿಶಾಳ ಫೋನ್ ಸ್ವಿಚ್ ಆಫ್ ಆಗುತ್ತಿದ್ದಂತೆ ಸುರೇಶ್ ಮತ್ತೆ ಯುವತಿಗೆ ಕಾಲ್ ಮಾಡಿದ್ದಾನೆ. ಆದ್ರೆ ಫೋನ್ ಸ್ವಿಚ್ ಆಫ್ ಅಂತ ಬಂದಿದೆ. ಇದರಿಂದ ತಲೆಕಡೆಸಿಕೊಂಡಿದ್ದ ಸುರೇಶ್ ಗೆ ಕೆಲವು ದಿನಗಳ ನಂತರ ಅಪರಿಚಿತ ನಂಬರ್ನಿಂದ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಬೆತ್ತಲೆ ವಿಡಿಯೋ ನಮ್ಮ ಬಳಿ ಇದೆ. 50 ಸಾವಿರ ಕೊಡಿ ಎಂದು ಇಲ್ಲವಾದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇವೆ ಎಂದಿದ್ದಾರೆ. ಇದರಿಂದ ಗಾಬರಿಗೊಂಡ ಯುವಕ ಸುರೇಶ್ ಕೊನೆಗೆ 22 ಸಾವಿರಕ್ಕೆ ಒಪ್ಪಿಸಿ ಅದನ್ನು ಆನ್ಲೈನ್ ಮೂಲಕ ಹಾಕಿದ್ದಾನೆ.
ಆದ್ರೆ ಇದು ಇಲ್ಲಿಗೆ ಮುಗಿದಿಲ್ಲ.. ನಂತರ ಕೆಲದಿನಗಳ ಬಳಿಕ ಮತ್ತೆ ಕರೆ ಬಂದಿದ್ದು, ಹಣದ ಬೇಡಿಕೆ ಒಡ್ಡಿದ್ದಾರೆ. ಈ ಬಾರಿ ಹಣ ನೀಡಲು ಒಪ್ಪದ ಯುವಕ ಸೀದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ, ತನ್ನ ಗೋಳು ಹೇಳಿಕೊಂಡಿದ್ದಾನೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








