ಸೋಶಿಯಲ್ ಮೀಡಿಯಾದಲ್ಲಿ ಇದೀಗ ‘ಕಾಕ್ರೋಚ್ ಜನತಾ ಪಾರ್ಟಿ (CJP)’ ಭಾರೀ ಟ್ರೆಂಡ್ ಸೃಷ್ಟಿಸಿದೆ. ಕೆಲ ಯುವ ವಿಮರ್ಶಕರನ್ನು ಉದ್ದೇಶಿಸಿ CJI ನೀಡಿದ್ದ ‘ಕಾಕ್ರೋಚ್’ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ಈ ವ್ಯಂಗ್ಯಾತ್ಮಕ ಡಿಜಿಟಲ್ ಟ್ರೆಂಡ್ಗೆ ಇನ್ಸ್ಟಾಗ್ರಾಂನಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ.
ಇದೀಗ CJP ಖಾತೆಗೆ ಸುಮಾರು 20.2 ಮಿಲಿಯನ್ ಫಾಲೋವರ್ಸ್ ಸೇರ್ಪಡೆಯಾಗಿದ್ದು, ಯುವಕರು ತಾವೇ ಸಿಎಂ, ಎಂ.ಎಮ್ಎ, ಸಚಿವ ಅಭ್ಯರ್ಥಿಗಳೆಂದು ಹೇಳಿಕೊಂಡು ರೀಲ್ಸ್, ಮೀಮ್ಸ್ ಹಾಗೂ ಪೋಸ್ಟ್ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ ಅಭ್ಯರ್ಥಿ ನಾನು ಎಂಬ ಶೈಲಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವಿಶೇಷವಾಗಿ ಕಾಲೇಜು ಯುವಕರು ಮತ್ತು ಮೀಮ್ ಪೇಜ್ಗಳು ಈ ಟ್ರೆಂಡ್ನ್ನು ಇನ್ನಷ್ಟು ಹಾಸ್ಯಮಯವಾಗಿ ಮುಂದುವರಿಸುತ್ತಿದ್ದು, ರಾಜಕೀಯ ವ್ಯಂಗ್ಯ ಹಾಗೂ ಡಿಜಿಟಲ್ ಸಟೈರ್ ರೂಪದಲ್ಲಿ CJP ಚರ್ಚೆಗೆ ಕಾರಣವಾಗಿದೆ.
ಇದರ ಬೆನ್ನಲ್ಲೇ, ಕಾಕ್ರೋಚ್ ಪಕ್ಷಕ್ಕೆ ವಿರೋಧವಾಗಿ ‘HIT ಜನತಾ ಪಕ್ಷ’ ಎಂಬ ಮತ್ತೊಂದು ವ್ಯಂಗ್ಯಾತ್ಮಕ ಆನ್ಲೈನ್ ಗುಂಪು ಕೂಡ ಹುಟ್ಟಿಕೊಂಡಿದೆ. ಎರಡೂ ಪಾಳಯಗಳ ನಡುವೆ ಮೀಮ್ಸ್ ವಾರ್ ಜೋರಾಗಿದ್ದು, #CJP ಮತ್ತು #HITJanataParty ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ ಪಟ್ಟಿಗೆ ಸೇರಿವೆ.








