ADVERTISEMENT
Monday, June 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

Shwetha by Shwetha
June 22, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುಳಿವು ನೀಡಿದ್ದಾರೆ.

ಡೀಸೆಲ್ ದರದಲ್ಲಿ 40 ರೂಪಾಯಿ ವ್ಯತ್ಯಾಸ: ಆತಂಕ ವ್ಯಕ್ತಪಡಿಸಿದ ಡಿಕೆಶಿ

Related posts

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

June 22, 2026
ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

June 22, 2026

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಬಗ್ಗೆ ವಿವರಿಸಿದರು. ಖಾಸಗಿ ಬಂಕ್‌ಗಳಿಗೂ ಮತ್ತು ಸಾರಿಗೆ ನಿಗಮಗಳ ಡಿಪೋಗಳಿಗೆ ಪೂರೈಕೆಯಾಗುವ ಡೀಸೆಲ್ ದರದ ನಡುವೆ ಬರೋಬ್ಬರಿ 40 ರೂಪಾಯಿಗಳ ವ್ಯತ್ಯಾಸವಿದೆ. ಇದನ್ನು ಕಂಡು ನನಗೂ ಆಶ್ಚರ್ಯವಾಯಿತು. ಈ ಹಿಂದೆ ಡೀಸೆಲ್ ಬೆಲೆ ಹೆಚ್ಚಾದಾಗ ಟಿಕೆಟ್ ದರವನ್ನು ಪರಿಷ್ಕರಿಸುವ ನಿಯಮವಿತ್ತು. ಈಗಿನ ಪರಿಸ್ಥಿತಿಯಲ್ಲಿ ಸಾರಿಗೆ ಸಂಸ್ಥೆಗಳು ಉಳಿಬೇಕು ಎಂದರೆ ದರ ಏರಿಕೆ ಅನಿವಾರ್ಯವೇ ಎಂಬ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ ಎಂದು ತಿಳಿಸಿದರು.

ಬಸ್ ದರ ಏರಿಕೆ ಮಾಡುವಾಗ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಸಂಸ್ಥೆಯ ಉಳಿವು ಮತ್ತು ಜನರ ಅನುಕೂಲ ಎರಡನ್ನೂ ಗಮನದಲ್ಲಿಟ್ಟುಕೊಂಡು ವರದಿ ಬಂದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡರು.

ಒಂದೆಡೆ ದರ ಏರಿಕೆಯ ಮಾತು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ. ಒಟ್ಟು 4235 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಬಸ್ಸುಗಳ ಖರೀದಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಲ್ಲಿ ಕೆಎಸ್ಆರ್‌ಟಿಸಿಗೆ 400 ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 220 ಸೇರಿ ಒಟ್ಟು 620 ಹೊಸ ಬಸ್ಸುಗಳು ಸೇರ್ಪಡೆಯಾಗಲಿವೆ.

ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ 112 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 10 ನಗರಗಳ 11 ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ ಡಿಪೋಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಸಂಡೂರು ತಾಲೂಕು ಕೇಂದ್ರದಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೂ ಒಪ್ಪಿಗೆ ಸಿಕ್ಕಿದೆ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿ ಇಂಧನ ಉಳಿಸುವಂತೆ ಪ್ರಧಾನ ಮಂತ್ರಿಗಳೇ ಕರೆ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ನೆನಪಿಸಿದರು.

ಸಾರಿಗೆ ಇಲಾಖೆಯನ್ನು ಆಧುನೀಕರಣಗೊಳಿಸುವ ಭರವಸೆಯ ನಡುವೆಯೇ, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುತ್ತಿವೆ.

ShareTweetSendShare
Join us on:

Related Posts

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 22, 2026
0

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

by Shwetha
June 22, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ....

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

by Shwetha
June 22, 2026
0

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ವಿವಾದ ಈಗ ಕೇವಲ ರಾಜಕೀಯಕ್ಕೆ ಸೀಮಿತವಾಗದೆ ಧಾರ್ಮಿಕ ತಿರುವು ಪಡೆದುಕೊಂಡಿದೆ. ತನ್ನ ಶಾಸಕರೇ ಪಕ್ಷಕ್ಕೆ ದ್ರೋಹ ಬಗೆದಿರುವುದು ಬಿಜೆಪಿ ನಾಯಕರಿಗೆ...

95 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಭಾರಿ ಸಂಚು: ಬಿಜೆಪಿಯ ಹುನ್ನಾರಕ್ಕೆ ಮದ್ದರೆಯಲು ಕಾಂಗ್ರೆಸ್ ಸನ್ನದ್ಧ – ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್

95 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಭಾರಿ ಸಂಚು: ಬಿಜೆಪಿಯ ಹುನ್ನಾರಕ್ಕೆ ಮದ್ದರೆಯಲು ಕಾಂಗ್ರೆಸ್ ಸನ್ನದ್ಧ – ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್

by Shwetha
June 22, 2026
0

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲ್ಲುವ ಕುದುರೆಗಳನ್ನು...

ನಿಮಗೊಂದು ಸಂವಿಧಾನ ನಮಗೊಂದು ಸಂವಿಧಾನವೇ?ಉತ್ತರ ಸರಿ ಇದ್ದರೆ ಕೇಶವಕೃಪದಲ್ಲೇ ಕ್ಷಮೆ ಕೇಳುವೆ :ಆರೆಸ್ಸೆಸ್‌ ಮುಖ್ಯಸ್ಥರಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ನಿಮಗೊಂದು ಸಂವಿಧಾನ ನಮಗೊಂದು ಸಂವಿಧಾನವೇ?ಉತ್ತರ ಸರಿ ಇದ್ದರೆ ಕೇಶವಕೃಪದಲ್ಲೇ ಕ್ಷಮೆ ಕೇಳುವೆ :ಆರೆಸ್ಸೆಸ್‌ ಮುಖ್ಯಸ್ಥರಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

by Shwetha
June 22, 2026
0

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಮತ್ತು ಅದರ ಪಾರದರ್ಶಕತೆ ಕುರಿತು ರಾಜ್ಯದ ಗೃಹಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಸಂಚಲನ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದಾರೆ. ಸಂಘಟನೆಯ ನೋಂದಣಿ, ಹಣಕಾಸಿನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram