ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

Shwetha by Shwetha
June 24, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ರಾಜಕೀಯ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಯೋಜನೆ ಬೆಂಬಲಿಸುವ ಶಾಸಕರಿಗೆ ನಿವೇಶನ ನೀಡುವ ಭರವಸೆ ನೀಡಲಾಗಿದೆ ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೇರ ಸವಾಲು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ಕುಮಾರಸ್ವಾಮಿ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. ಕೇಂದ್ರ ಸಚಿವರಾಗಿ, ಮಾಜಿ ಮುಖ್ಯಮಂತ್ರಿಯಾಗಿ ಮತ್ತು ಹಿರಿಯ ನಾಯಕರಾಗಿ ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಯಾರು ನಮಗೆ ಸೈಟ್ ಕೊಡುತ್ತಿದ್ದಾರೆ? ಇಂತಹ ಆಧಾರರಹಿತ ಸ್ಟೇಟ್ ಮೆಂಟ್ ಕೊಡುವುದಕ್ಕೆ ಅಸಹ್ಯ ಆಗಲ್ವಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

Related posts

CM ಪಟ್ಟದ ಫೈಟ್ : 3 ವರ್ಷದ ಅಭಿವೃದ್ಧಿ ಮಂತ್ರ ಪಠಿಸಿದ ಮುಖ್ಯಮಂತ್ರಿ

ರಾಜೀನಾಮೆಯ ಬಳಿಕ ವಿಶ್ರಾಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ; ಕೇರಳದ ರೆಸಾರ್ಟ್‌ಗೆ ಭೇಟಿ

June 24, 2026
ಪ್ರೀತಿಯ ನಾಟಕವಾಡಿ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿದ ಕ್ರೂರಿ: ಮದುವೆ ಮಂಟಪ ಏರಬೇಕಿದ್ದ ವರ ಈಗ ಹೆಣ!;ಪ್ರಿಯಕರನ ಜೊತೆಗೂಡಿ ನಿಶ್ಚಿತಾರ್ಥದ ಯುವತಿ ನಡೆಸಿದ ಹೈಟೆಕ್ ಸ್ಕೆಚ್ ಬಯಲು.

ಪ್ರೀತಿಯ ನಾಟಕವಾಡಿ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿದ ಕ್ರೂರಿ: ಮದುವೆ ಮಂಟಪ ಏರಬೇಕಿದ್ದ ವರ ಈಗ ಹೆಣ!;ಪ್ರಿಯಕರನ ಜೊತೆಗೂಡಿ ನಿಶ್ಚಿತಾರ್ಥದ ಯುವತಿ ನಡೆಸಿದ ಹೈಟೆಕ್ ಸ್ಕೆಚ್ ಬಯಲು.

June 24, 2026

ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮಟ್ಟಕ್ಕೆ ಇಳಿದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಇದೆಲ್ಲಾ ಕೇವಲ ಚಿಲ್ಲರೆ ರಾಜಕಾರಣ ಎಂದು ಬಾಲಕೃಷ್ಣ ಲೇವಡಿ ಮಾಡಿದರು.

ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರಿಗೆ ಮುಕ್ತ ಸವಾಲೆಸೆದ ಬಾಲಕೃಷ್ಣ, ಶಾಸಕರಿಗೆ ಸೈಟ್ ನೀಡಲಾಗುತ್ತಿದೆ ಎಂಬ ತಮ್ಮ ಹೇಳಿಕೆಗೆ ಕುಮಾರಸ್ವಾಮಿ ಅವರು ಸೂಕ್ತ ಆಧಾರ ಮತ್ತು ದಾಖಲೆಗಳನ್ನು ಜನರೆದುರು ಇಡಬೇಕು. ಒಂದು ವೇಳೆ ಅವರು ಈ ಆರೋಪವನ್ನು ಸಾಬೀತುಪಡಿಸಿದರೆ ನಾನು ಇಂದೇ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಸಾಬೀತು ಮಾಡಲು ವಿಫಲವಾದರೆ ಅವರು ರಾಜಕಾರಣದಿಂದ ನಿವೃತ್ತಿ ಹೊಂದುತ್ತಾರಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.

ರಾಜ್ಯ ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ, ಬದಲಾಗಿ ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಮತ್ತೊಂದು ಆರೋಪಕ್ಕೂ ಬಾಲಕೃಷ್ಣ ತಿರುಗೇಟು ನೀಡಿದರು. ನಮ್ಮ ವಿರುದ್ಧದ ಈ ಆರೋಪದ ಬಗ್ಗೆ ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದು ಬೇಕಾದರೆ ಸಿಬಿಐ ಮೂಲಕ ತನಿಖೆ ನಡೆಸಲಿ. ಸತ್ಯಾಸತ್ಯತೆ ಕೇಂದ್ರ ತನಿಖಾ ಸಂಸ್ಥೆಗಳಿಂದಲೇ ಹೊರಬರಲಿ ಎಂದು ಸವಾಲು ಹಾಕಿದರು.

ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಟೌನ್ ಶಿಪ್ ಯೋಜನೆ ಇದೀಗ ರಾಮನಗರ ಜಿಲ್ಲೆಯ ನಾಯಕರ ನಡುವೆ ಭಾರೀ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅಭಿವೃದ್ಧಿ ಯೋಜನೆ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ಇದೀಗ ವೈಯಕ್ತಿಕ ಟೀಕೆಗಳ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಈ ವಾಕ್ಸಮರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ShareTweetSendShare
Join us on:

Related Posts

CM ಪಟ್ಟದ ಫೈಟ್ : 3 ವರ್ಷದ ಅಭಿವೃದ್ಧಿ ಮಂತ್ರ ಪಠಿಸಿದ ಮುಖ್ಯಮಂತ್ರಿ

ರಾಜೀನಾಮೆಯ ಬಳಿಕ ವಿಶ್ರಾಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ; ಕೇರಳದ ರೆಸಾರ್ಟ್‌ಗೆ ಭೇಟಿ

by Shwetha
June 24, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಆಪ್ತರೊಂದಿಗೆ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ...

ಪ್ರೀತಿಯ ನಾಟಕವಾಡಿ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿದ ಕ್ರೂರಿ: ಮದುವೆ ಮಂಟಪ ಏರಬೇಕಿದ್ದ ವರ ಈಗ ಹೆಣ!;ಪ್ರಿಯಕರನ ಜೊತೆಗೂಡಿ ನಿಶ್ಚಿತಾರ್ಥದ ಯುವತಿ ನಡೆಸಿದ ಹೈಟೆಕ್ ಸ್ಕೆಚ್ ಬಯಲು.

ಪ್ರೀತಿಯ ನಾಟಕವಾಡಿ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿದ ಕ್ರೂರಿ: ಮದುವೆ ಮಂಟಪ ಏರಬೇಕಿದ್ದ ವರ ಈಗ ಹೆಣ!;ಪ್ರಿಯಕರನ ಜೊತೆಗೂಡಿ ನಿಶ್ಚಿತಾರ್ಥದ ಯುವತಿ ನಡೆಸಿದ ಹೈಟೆಕ್ ಸ್ಕೆಚ್ ಬಯಲು.

by Shwetha
June 24, 2026
0

ಮಹಾರಾಷ್ಟ್ರದ ಪುಣೆ ಸಮೀಪದ ಲೋಹಗಡ್ ಕೋಟೆಯಲ್ಲಿ ನಡೆದಿದ್ದ ಭೀಕರ ಘಟನೆಯೊಂದು ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ...

ಸ್ಟಾಲಿನ್ ಶೈಲಿಯಲ್ಲೇ DMKಗೆ ತಿರುಗೇಟು ನೀಡಿದ ಸಿಎಂ ವಿಜಯ್

ಸ್ಟಾಲಿನ್ ಶೈಲಿಯಲ್ಲೇ DMKಗೆ ತಿರುಗೇಟು ನೀಡಿದ ಸಿಎಂ ವಿಜಯ್

by Shwetha
June 24, 2026
0

ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರದ ನಡುವೆ ಮುಖ್ಯಮಂತ್ರಿ ವಿಜಯ್ ಅವರು DMK ನಾಯಕರ ವಿರುದ್ಧ ತಿರುಗೇಟು ನೀಡಿದ್ದಾರೆ. TVK ಸರ್ಕಾರವನ್ನು...

ನಾಲ್ಕು ಪ್ರಕಾಶ್ ರಾಜ್ ಗಳ ಹೋರಾಟದ ಕಥೆ ಬಿಚ್ಚಿಟ್ಟ ಸೂಲಿಬೆಲೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್

ನಾಲ್ಕು ಪ್ರಕಾಶ್ ರಾಜ್ ಗಳ ಹೋರಾಟದ ಕಥೆ ಬಿಚ್ಚಿಟ್ಟ ಸೂಲಿಬೆಲೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್

by Shwetha
June 24, 2026
0

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ದೇಶದ ನಾಲ್ಕು ಬೇರೆ ಬೇರೆ ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (24-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 24, 2026
0

ದಿನ ಭವಿಷ್ಯ : 24-06-2026 1. ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹಭರಿತವಾದ ದಿನವಾಗಿದೆ. ನಿಮ್ಮ ರಾಶ್ಯಾಧಿಪತಿ ಮಂಗಳನ ಶುಭ ದೃಷ್ಟಿಯಿಂದಾಗಿ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram