ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

admin by admin
July 4, 2026
in Newsbeat, Sports, ಕ್ರೀಡೆ
kylian mbappe

kylian mbappe

Share on FacebookShare on TwitterShare on WhatsappShare on Telegram

ಕಾಲಿಗೆ ಸ್ಟಡ್ಸ್ ಕಟ್ಕೊಂಡು.. ಗಂಟೆಗೆ 38 ಕಿಲೋಮೀಟರ್ ವೇಗದಲ್ಲಿ ಓಡಾಡಿಕೊಂಡು.. ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ.. ಎದುರಾಳಿ ಆಟಗಾರರನ್ನು ವಂಚಿಸುವ ಮಾಯಾಕಾರ..!

ಫುಟ್‍ಬಾಲ್ ಅಂಗಣದ ಹಸಿರು ಹುಲ್ಲಿನ ಅಂಗಣದ ಮೇಲೆ ನಲಿದಾಡುತ್ತಾ ಕಾಮನಬಿಲ್ಲಿನಂತೆ ಚಿತ್ತಾರ ಬಿಡಿಸುವ ಜಾದುಗಾರ..! ಮಿಂಚಿನಂತೆ ಕ್ಷಣ ಮಾತ್ರದಲ್ಲೇ ರಕ್ಷಣಾ ಕೋಟೆಯನ್ನು ಭೇದಿಸುವ ಮೋಡಿಗಾರ..!. ಪ್ರತಿ ಪಂದ್ಯದಲ್ಲೂ ಇತಿಹಾಸದ ಹೊಸ ಕಾವ್ಯ ಬರೆಯುತ್ತಿರುವ ಫುಟ್‍ಬಾಲ್ ಜಗತ್ತಿನ ಸೃಷ್ಟಿಕಾರ ..!

Related posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

July 4, 2026
ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

July 4, 2026

ಉಕ್ಕಿನಂತಹ ಬಲಿಷ್ಠ ಕಾಲುಗಳಿಂದಲೇ ಚೆಂಡಿನ ಗತಿಯನ್ನು ಬದಲಾಯಿಸುವಂತಹ ಮಗಧೀರ ..! ಗೋಲು ಕೀಪರ್‍ನ ಕಣ್ಣು ತಪ್ಪಿಸಿ ಚೆಂಡನ್ನು ಗೋಲು ಬಲೆಯೊಳಗೆ ಬೀಳಿಸುವ ಅಪ್ರತಿಮ ಚತುರÀ..! ಪ್ರತಿ ಕ್ಷಣ ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸುವ ಪ್ರೀತಿಯ ಸೊಗಸುಗಾರ..! ಅಂದುಕೊಂಡ ಗುರಿಯನ್ನು ಸಾಧಿಸುವ ಅಪ್ರತಿಮ ಮಹಾ ಶೂರ…!

ಎದುರಾಳಿ ಯಾರೇ ಇರಲಿ, ಜೀವವನ್ನು ಪಣಕ್ಕಿಟ್ಟು ತಂಡಕ್ಕಾಗಿ ಹೋರಾಡುವ ಅಪ್ರತೀಮ ವೀರ..! ಮೈದಾನದಲ್ಲಿ ಜಿಂಕೆಯಂತೆ ಜಿಗಿಯುತ್ತಾ, ಚೆಂಡಿನ ಜೊತೆ ಸರಸವಾಡುವ ಕಲಾಕಾರ. ಕೆಲವೇ ಸೆಕೆಂಡುಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುವ ಫುಟ್‍ಬಾಲ್ ಸಾಮ್ರಾಜ್ಯದ ಯುವ ರಾಜಕುಮಾರ..! ಮೆಸ್ಸಿ, ರೊನಾಲ್ಡೊನೊ ಯುಗದ ನಂತರ ಫುಟ್‍ಬಾಲ್ ಲೋಕಕ್ಕೆ ಸಿಕ್ಕಿರುವ ಹೊಸ ಇತಿಹಾಸಕಾರ..!

ಈತನ ಹೆಸರು ಕೈಲಿಯನ್ ಎಂಬಾಪೆ

ಮೊನಾಕೊ ಕ್ಲಬ್‍ನಲ್ಲಿ ಅರಳಿದ ಪ್ರತಿಭಾವಂತ ಆಟಗಾರ…! ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‍ಜಿ) ತಂಡದ ಹಣೆಬರಹವನ್ನೇ ಬದಲಾಯಿಸಿದ ಗೋಲುಗಳ ಸರದಾರ..! ರಿಯಲ್ ಮ್ಯಾಡ್ರಿಡ್ ತಂಡದ ರಣಬೇಟೆಗಾರ..! ಫ್ರಾನ್ಸ್ ತಂಡದ ಹಿತವನ್ನು ಕಾಯುವ ಕಾವಲುಗಾರ..! 19 ವಯಸ್ಸಿನಲ್ಲೇ ಫ್ರಾನ್ಸ್ ತಂಡಕ್ಕೆ ಫಿಫಾ ವಿಶ್ವಕಪ್ ಕಿರೀಟ ತೊಡಿಸಿದ್ದ ಸೂತ್ರಧಾರ…! 2022ರ ವಿಶ್ವಕಪ್‍ನಲ್ಲಿ ಸೋತ್ರೂ ಮೆಸ್ಸಿಯ ಅಜೆರ್ಂಟಿನಾ ತಂಡದ ನಿದ್ದೆಗೆಡಿಸಿದ್ದ ಏಕಾಂಗಿ ಹೋರಾಟಗಾರ..!

2026ರ ಫಿಫಾ ವಿಶ್ವಕಪ್‍ನಲ್ಲಿ ಗೋಲುಗಳ ಮೇಲೆ ಗೋಲು ದಾಖಲಿಸಿ ದಾಖಲೆ ಬರೆಯುತ್ತಿರುವ ರಣಧೀರ..! ಅದ್ಭುತ ಆಟದಿಂದಲೇ ಕೋಟಿ ಕೋಟಿ ಬೆಲೆಬಾಳುವ ಸಾಹುಕಾರ..! ಬಡವರ ಪಾಲಿನ ಆಶಾಕಿರಣವಾಗಿ, ನೊಂದವರ ಬಾಳಿಗೆ ಬೆಳಕು ನೀಡುವ ದಾನಶೂರ..! ಬಡ ಫುಟ್‍ಬಾಲ್ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವ ಜೊತೆಗಾರ..!

ಹೌದು, ಕೈಲಿಯನ್ ಎಂಬಾಪೆ.. ಸದ್ಯ ಫುಟ್‍ಬಾಲ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಮಹೋನ್ನತ ಆಟಗಾರ. ಮೆಸ್ಸಿ, ರೊನಾಲ್ಡಿನೊ ನಂತರ ಆಧುನಿಕ ಫುಟ್‍ಬಾಲ್ ಸಾಮ್ರಾಜ್ಯದ ನಿಜವಾದ ವಾರಸುದಾರ..!

ವಲಸಿಗ ಕುಟುಂಬದ ಹುಡುಗ ಫ್ರಾನ್ಸ್ ಫುಟ್‍ಬಾಲ್ ತಂಡದ ಚೌಕಿದಾರ..!

ನಿಜ, ಎಂಬಾಪೆ, ಬದುಕು ತೀರಾ ಬಡತನವೂ ಅಲ್ಲ.. ಸಿರಿತನವೂ ಅಲ್ಲ..! ಮಧ್ಯಮ ವರ್ಗದ ಕುಟುಂಬವೂ ಅಲ್ಲ. ಒಂದು ಸಾಮಾನ್ಯ ಕ್ರೀಡಾಮನೆತನದಲ್ಲಿ ಹುಟ್ಟಿ ಬೆಳೆದ ಹುಡುಗ. ಅಪ್ಪ ವಿಲ್‍ಫ್ರೈಡ್. ಮೂಲತಃ ಕ್ಯಾಮರೂನ್‍ನವರು. ಫ್ರಾನ್ಸ್‍ಗೆ ವಲಸೆ ಬಂದು ಫುಟ್‍ಬಾಲ್ ಆಟಗಾರ ಹಾಗೂ ತರಬೇತುದಾರನಾಗಿದ್ದರು. ತಾಯಿ ಫೈಜಾ ಲಮಾರಿ. ಮೂಲತಃ ಅಲ್ಝೀರಿಯಾದವರು. ಅತ್ಯುತ್ತಮ ಹ್ಯಾಂಡ್‍ಬಾಲ್ ಆಟಗಾರ್ತಿ. ಇವರು ಕೂಡ ಫ್ರಾನ್ಸ್‍ನಲ್ಲೇ ಜೀವನ ಸಾಗಿಸುತ್ತಿದ್ದರು. ಹಾಗೇ ನೋಡಿದ್ರೆ ಕೈಲಿಯನ್ ಎಂಬಾಪೆ ಫ್ರಾನ್ಸ್‍ನಲ್ಲೇ ಹುಟ್ಟಿ ಬೆಳೆದ ಹುಡುಗ. ಹೀಗಾಗಿ ಎಂಬಾಪೆ ವಲಸಿಗ ಕುಟುಂಬದವನಾಗಿದ್ರೂ, ಫ್ರಾನ್ಸ್ ದೇಶವೇ ಈತನ ತಾಯ್ನಾಡು. ಪ್ಯಾರೀಸ್‍ನ ಹೊರವಲಯದಲ್ಲಿರುವ ಬಾಂಡಿ ಎಂಬ ಉಪನಗರವೇ ಈತನ ಹುಟ್ಟೂರು. ಡಿಸೆಂಬರ್ 20, 1998 ಎಂಬಪೆಯ ಡೇಟ್ ಆಫ್ ಬರ್ತ್.

ಎಂಬಾಪೆ ಫುಟ್‍ಬಾಲ್ ಪ್ರೀತಿಗೆ ಕ್ರಿಸ್ಟಿಯಾನೊ ರೊನಾಲ್ಡಿನೊ ಆಟವೇ ಸಂಗಾತಿ..!

ಹಿಂಸಾಚಾರ ಮತ್ತು ಬಡತನಕ್ಕೆ ಕುಖ್ಯಾತಿ ಪಡೆದನಗರದಲ್ಲಿ ಹುಟ್ಟಿ ಬೆಳೆದ್ರೂ ಎಂಬಾಪೆ ಮಾತ್ರ ವಿಶ್ವಫುಟ್‍ಬಾಲ್‍ನ ಅಪ್ರತಿಮ ಆಟಗಾರನಾಗಿ ಬೆಳೆದಿದ್ದಾನೆ. ರಕ್ತಗತವಾಗಿ ಬಂದಿರುವ ಫುಟ್‍ಬಾಲ್ ಆಟದ ಪ್ರೀತಿಯೇ ಇಂದು ಎಂಬಾಪೆಯನ್ನು ಈ ಮಟ್ಟಕ್ಕೆ ಬೆಳೆಸಿದೆ. ಆರರ ಹರೆಯದಲ್ಲೇ ತಂದೆಯ ಮಾರ್ಗದರ್ಶನದಲ್ಲಿ ಪಳಗಿದ್ದ ಎಂಬಾಪೆಗೆ ಫುಟ್‍ಬಾಲ್ ಅನ್ನೋದು ಬರೀ ಆಟವಾಗಿರಲಿಲ್ಲ. ಅದು ತಪ್ಪಸ್ಸು ಆಗಿತ್ತು. ಕ್ರಿಸ್ಟಿಯಾನೊ ರೊನಾಲ್ಡಿನೊ ಆಟವನ್ನು ನೋಡುತ್ತಾ ಬೆಳೆದ ಎಂಬಾಪೆ, ಮುಂದೊಂದು ದಿನ ವಿಶ್ವದ ಶ್ರೇಷ್ಠ ಫುಟ್‍ಬಾಲ್ ಆಟಗಾರನಾಗಬೇಕು ಎಂದು ಕನಸು ಕಂಡಿದ್ದ. ಆದ್ರೆ, ಪ್ರತಿ ದಿನ, ಪ್ರತಿ ಕ್ಷಣ ರೊನಾಲ್ಡಿನೊ ಫೆÇೀಟೋಗಳನ್ನು ನೋಡುತಾ,್ತ ಮುಂದೊಂದು ದಿನ ಆತನಂತೆ ಅಪ್ರತಿಮ ಆಟಗಾರನಾಗುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಆದ್ರೆ ರೊನಾಲ್ಡಿನೊನಂತೆ ಫುಟ್‍ಬಾಲ್ ಆಟಗಾರನಾಗಬೇಕು ಎಂಬ ಹಠ ಮತ್ತು ಛಲ ಎಂಬಾಪೆಯಲ್ಲಿತ್ತು.

ಮೊನಾಕೊ ಕ್ಲಬ್‍ನಲ್ಲಿ ಅರಳಿದ ಪ್ರತಿಭೆ.. ರಿಯಲ್ ಮ್ಯಾಡ್ರಿಡ್‍ನ ರಣಬೇಟೆಗಾರ..!

ಅಂದ ಹಾಗೇ, ಎಂಬಾಪೆಯ ಆಟದ ಶೈಲಿ ಎಂಥವರನ್ನು ಕೂಡ ಸೂಜಿಗಲ್ಲಿನಂತೆ ಸೆಳೆಯುತ್ತದೆ. ನಿಖರವಾದ ವೇಗ, ಚೆಂಡಿನ ಮೇಲೆ ಸಾಧಿಸುವ ನಿಯಂತ್ರಣ, ಕ್ಷಣಮಾತ್ರದಲ್ಲೇ ಎದುರಾಳಿ ರಕ್ಷಣಾ ಕೋಟೆಯನ್ನು ಧ್ವಂಸ ಮಾಡುವ ತಾಕತ್ತನ್ನು ಎಂಬಾಪೆ ಎಳವೆಯಿಂದಲೇ ಮೈಗೂಡಿಸಿಕೊಂಡಿದ್ದ. ಹೀಗಾಗಿಯೇ ಫ್ರಾನ್ಸ್‍ನ ಮೊನಾಕೊ ಕ್ಲಬ್‍ಗೆ ತನ್ನ 17ನೇ ವಯಸ್ಸಿನಲ್ಲೇ ಪಾದಾರ್ಪಣೆ ಮಾಡಿದ್ದ. ಅಲ್ಲದೆ ಫ್ರಾನ್ಸ್‍ನ ದಂತಕಥೆ ಥಿಯೆರಿ ಹೆನ್ರಿಯವರ ದಾಖಲೆಗಳನ್ನು ಅಳಿಸಿಹಾಕಿದ್ದ ಎಂಬಾಪೆ ಮೊನಾಕೊ ತಂಡವನ್ನು ಚಾಂಪಿಯನ್‍ಪಟ್ಟಕ್ಕೇರಿಸಿದ್ದ. ನಂತರ ಪಿಎಸ್‍ಜಿ ತಂಡಕ್ಕೆ ಕೋಟಿ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲದೆ, ಮೆಸ್ಸಿ, ನೇಮಾರ್‍ನಂತಹ ದಿಗ್ಗಜರ ಜೊತೆ ಜೊತೆಯಲ್ಲೇ ಆಟವಾಡಿದ್ದ. ಗೋಲುಗಳ ಮೇಲೆ ಗೋಲು ದಾಖಲಿಸಿ ಪಿಎಸ್‍ಜಿ ತಂಡದ ಪರ ಗರಿಷ್ಠ ಗೋಲು ದಾಖಲಿಸಿ ಸಾರ್ವಕಾಲಿಕ ಆಟಗಾರನಾಗಿ ಹೊರಹೊಮ್ಮಿದ್ದ. ಇದೀಗ ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡುವ ಮೂಲಕ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾನೆ.

ಫಿಫಾ ವಿಶ್ವಕಪ್‍ನ ಪ್ರಚಂಡ ಆಟಗಾರ ಕೈಲಿಯನ್ ಎಂಬಾಪೆ..!

ಇನ್ನು 2018ರ ರಷ್ಯಾ ಫಿಫಾ ವಿಶ್ವಕಪ್ ಎಂಬಾಪೆ ಪಾಲಿಗೆ ಮರೆಯಲಾಗದ ಟೂರ್ನಿ. ಮೆಸ್ಸಿಯ ಅಜೆರ್ಂಟಿನಾ ಮತ್ತು ಫೈನಲ್‍ನಲ್ಲಿ ಲುಕಾ ಮಾಡ್ರಿಕ್‍ನ ಕ್ರೊವೇಶಿಯಾ ತಂಡವನ್ನು ಎಂಬಾಪೆ ನಡುಗಿಸಿಬಿಟ್ಟಿದ್ದ. ಅಲ್ಲದೆ ಫೈನಲ್ ಪಂದ್ಯದಲ್ಲಿ ಗೋಲು ದಾಖಲಿಸುವ ಮೂಲಕ ಪಿಲೆಯ ದಾಖಲೆಯನ್ನು ಸಮಗೊಳಿಸಿದ್ದಾನೆ. ಫ್ರಾನ್ಸ್ ತಂಡಕ್ಕೆ ಎರಡನೇ ಬಾರಿ ವಿಶ್ವಕಪ್ ಮುದ್ದಾಡುವಂತೆ ಮಾಡಿದ್ದ ಎಂಬಾಪೆ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದ.

ಹಾಗೇ, 2022ರ ಕತಾರ್ ಫಿಫಾ ವಿಶ್ವಕಪ್‍ನಲ್ಲಿ ಅಜೆರ್ಂಟಿನಾ ವಿರುದ್ಧ ಫ್ರಾನ್ಸ್ ಸೋತೂ,್ರ ಎಂಬಾಪೆ ಮಾತ್ರ ಫುಟ್‍ಬಾಲ್ ಜಗತ್ತಿನ ಅಪ್ರತಿಮ ಆಟಗಾರ ಎಂಬ ಹಿರಿಮೆಗೆ ಪಾತ್ರನಾಗಿದ್ದ. ಪಂದ್ಯದ ಕೊನೆಯ ಕ್ಷಣದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿ ಇಡೀ ಫುಟ್‍ಬಾಲ್ ಜಗತ್ತೇ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ್ದ. ಅಷ್ಟೇ ಅಲ್ಲ, ಫಿಫಾ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದ್ದ ಎರಡನೇ ಆಟಗಾರ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ. ಟೂರ್ನಿಯಲ್ಲಿ ಗರಿಷ್ಠ ಗೋಲು ಬಾರಿಸಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ.

ಇದೀಗ 2026ರ ಫಿಫಾ ವಿಶ್ವಕಪ್‍ನಲ್ಲೂ ಗೋಲುಗಳ ಮೇಲೆ ಗೋಲು ದಾಖಲಿಸಿ ಹೊಸ ಇತಿಹಾಸವನ್ನೇ ಬರೆಯುತ್ತಿದ್ದಾನೆ. ಆರನೇ ವಿಶ್ವಕಪ್ ಆಡುತ್ತಿರುವ ಮೆಸ್ಸಿ, ರೊನಾಲ್ಡಿನೊ ದಾಖಲೆಗಳನ್ನು ಎಂಬಾಪೆ ಕೇವಲ ಮೂರೇ ಮೂರು ವಿಶ್ವಕಪ್‍ಗಳಲ್ಲಿ ಆಡಿ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾನೆ.

ಫುಟ್‍ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

ಹಾಗಂತ, ಎಂಬಾಪೆ ಆಟ ಅಂದ್ರೆ ಅದು ಕೇವಲ ವೇಗ, ಕೌಶಲ್ಯ ಮಾತ್ರವಲ್ಲ. ತಾಳ್ಮೆ, ಏಕಾಗ್ರತೆ ಹಾಗೂ ಬುದ್ಧಿವಂತಿಕೆಯೂ ಇದೆ. ಅಂಗಣದಲ್ಲಿ ತೆಗೆದುಕೊಳ್ಳುವ ಕ್ಷಣ ಮಾತ್ರದ ನಿರ್ಧಾರಗಳನ್ನು ಯಾರು ಕೂಡ ಊಹೆ ಮಾಡಲು ಸಾಧ್ಯವಿಲ್ಲ. ಮೆಸ್ಸಿಯ ತಾಳ್ಮೆ ಹಾಗೂ ರೊನಾಲ್ಡಿನೊ ಆಕ್ರಮಣಕಾರಿ ಪ್ರವೃತ್ತಿಯನ್ನು ಎಂಬಾಪೆ ಆಟದಲ್ಲಿ ನೋಡಬಹುದು. ಆದ್ರೆ ಫುಟ್‍ಬಾಲ್ ಪಂಡಿತರು ಎಂಬಾಪೆ ಆಟವನ್ನು ಬ್ರೆಜಿಲ್‍ನ ರೊನಾಲ್ಡೊ ಮತ್ತು ಹೆನ್ರಿ ಥಿಯರಿಯ ಆಟಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಅದು ಏನೇ ಇರಲಿ, ಕೈಲಿಯನ್ ಎಂಬಾಪೆ ಫುಟ್‍ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ ಎಂಬುದರಲ್ಲ ಎರಡು ಮಾತಿಲ್ಲ.

ನೊಂದವರ ಬಾಳಿಗೆ ಬೆಳಕು ನೀಡುವ ಧ್ರುವ ನಕ್ಷತ್ರ..!

ಮೈದಾನದಲ್ಲಿ ರಕ್ಷಸನಂತೆ ಆಡುವ ಎಂಬಾಪೆ, ಬಡವರ, ನೊಂದವರ ಪಾಲಿಗೆ ಮಿಡಿಯುವ ಹೃದಯವಂತ. ತನ್ನ ಆದಾಯದ ಬಹುಪಾಲು ಹಣವನ್ನು ಬಡ ಮಕ್ಕಳ ಶಿಕ್ಷಣ, ಆರೋಗ್ಯ, ಸಮಾಜ ಸೇವೆಗೆ ನೀಡುತ್ತಿದ್ದಾನೆ. ಇನ್‍ಸ್ಪೈರ್ಯಡ್ ಕೆಎಂ ಸಂಸ್ಥೆಯ ಮೂಲಕ 98 ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾನೆ. 2018ರ ವಿಶ್ವಕಪ್‍ನ ಸುಮಾರು 4 ಕೋಟಿ ಹಣವನ್ನು ವಿಕಲಾಂಗ ಮಕ್ಕಳ ಚಾರಿಟಿ ಸಂಸ್ಥೆಗೆ ನೀಡಿದ್ದಾನೆ. ಅಲ್ಲದೆ ತನ್ನ ತಂದೆಯ ತಾಯ್ನಾಡು ಕ್ಯಾಮರೂನ್‍ನಲ್ಲೂ ಹಲವಾರು ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡುತ್ತಿದ್ದಾನೆ. ಬಡ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣ, ತರಬೇತಿಗೂ ನೆರವು ನೀಡುತ್ತಿದ್ದಾನೆ. ಮಹಾಮಾರಿ ಕೋವಿಡ್ ಸಂದರ್ಭದಲ್ಲೂ ಫ್ರಾನ್ಸ್ ದೇಶದ ಬಡ ಜನರಿಗೆ ಸಹಾಯಹಸ್ತವನ್ನು ನೀಡಿದ್ದಾನೆ.

ಒಟ್ಟಿನಲ್ಲಿ ಕೈಲಿಯನ್ ಎಂಬಾಪೆ ಒಬ್ಬ ಫುಟ್‍ಬಾಲ್ ಆಟಗಾರ ಮಾತ್ರವಲ್ಲ. ಮಾನವೀಯತೆಯ ಸಾಕಾರಮೂರ್ತಿ. ಈಗಾಗಲೇ, ಮೆಸ್ಸಿ, ರೊನಾಲ್ಡಿನೊ ಯುಗ ಬಹುತೇಕ ಮುಗಿದು ಹೋದ ಅಧ್ಯಾಯ. ಇದೀಗ, ಫುಟ್‍ಬಾಲ್ ಆಟದ ಶ್ರೀಮಂತ ಪರಂಪರೆಯ ಮತ್ತೊಂದು ಇತಿಹಾಸದ ಪುಸ್ತಕಕ್ಕೆ ಎಂಬಾಪೆ ಮುನ್ನುಡಿ ಬರೆದಾಗಿದೆ. ಮುಂದಿನ ಒಂದೊಂದು ಅಧ್ಯಾಯದ ಪುಟಗಳಲ್ಲೂ ಕೈಲಿಯನ್ ಎಂಬಾಪೆ, ತನ್ನ ಸಾಧನೆ, ದಾಖಲೆಗಳ ಮೂಲಕ ಫುಟ್‍ಬಾಲ್ ಪ್ರಪಂಚದ ಅದ್ಭುತ ಮಹಾಕಾವ್ಯವನ್ನೇ ಬರೆಯಲಿದ್ದಾನೆ..!

ಸನತ್ ರೈ
saakshatv.com

ShareTweetSendShare
Join us on:

Related Posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

by Shwetha
July 4, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದೆ ಎಂದು...

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

by Shwetha
July 4, 2026
0

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರವಾಗಿ ಆರೋಪಿಸಿರುವ ಇಂಡಿಯಾ ವಿರೋಧ ಪಕ್ಷಗಳ ಒಕ್ಕೂಟವು, ಈ ಆತಂಕಗಳಿಗೆ ನ್ಯಾಯಾಂಗವು ತಕ್ಷಣವೇ ಸ್ಪಂದಿಸದಿದ್ದರೆ ಭಾರತೀಯ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

₹2,000 ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಾಧ್ಯತೆ; ಶೀಘ್ರದಲ್ಲೇ ಮಾರ್ಗಸೂಚಿ

by Shwetha
July 4, 2026
0

ರಾಜ್ಯದ ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರು ಹಾಗೂ ಆದಾಯ ತೆರಿಗೆ (IT) ಮತ್ತು GST ಪಾವತಿದಾರರ ಖಾತೆಗಳಿಗೆ ಸಹ ಹಣ ಜಮೆಯಾಗಿರುವ ಪ್ರಕರಣಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ಕಾಂಗ್ರೆಸ್ ಸರ್ಕಾರಕ್ಕೆ ನಡುಕ ತಂದ ಕುಮಾರಸ್ವಾಮಿ ಹೇಳಿಕೆ 50 ಶಾಸಕರಿಂದ ದಿಲ್ಲಿ ಚಲೋ ಸಿದ್ಧತೆ

SIR ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ; ಸರ್ಕಾರದ ವಿರುದ್ಧ ಹೆಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

by Shwetha
July 4, 2026
0

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram