ADVERTISEMENT
Thursday, July 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಒಂದು ನ್ಯಾಪ್‍ಕಿನ್ ಮೇಲಿನ ಸಹಿ..ಆಧುನಿಕ ಫುಟ್‍ಬಾಲ್ ಲೋಕದ ಮಹಾಕಾವ್ಯ..!

admin by admin
July 16, 2026
in Newsbeat, Sports, ಕ್ರೀಡೆ
messi goat

messi goat

Share on FacebookShare on TwitterShare on WhatsappShare on Telegram

ಒಂದು ನ್ಯಾಪ್‍ಕಿನ್ ಮೇಲಿನ ಸಹಿ..ಆಧುನಿಕ ಫುಟ್‍ಬಾಲ್ ಲೋಕದ ಮಹಾಕಾವ್ಯ..!

ಸುಮಾರು 26 ವರ್ಷಗಳ ಹಿಂದೆ..!
ಅದೊಂದು ಐಷಾರಾಮಿ ಕೆಫೆಟೇರಿಯಾ. ರೌಂಡ್ ಟೇಬಲ್‍ನಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿಯ ಜೊತೆ ಮೂರು ಮಂದಿ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರು. ಇವರ ಮಾತುಗಳನ್ನು ಬಾಲಕನೊಬ್ಬ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದ…!

Related posts

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

July 16, 2026
108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

July 16, 2026

ಸಡನ್ ಆಗಿ ಆ ಗಣ್ಯ ವ್ಯಕ್ತಿ ಕೈಗೆ ಸಿಕ್ಕ ಒಂದು ನ್ಯಾಪ್‍ಕಿನ್ ಮೇಲೆ ಪೆನ್ನಿನಲ್ಲಿ ನಾಲ್ಕೈದು ಷರತ್ತುಗಳನ್ನು ಬರೆದು ಸಹಿ ಮಾಡುವಂತೆ ಸನ್ನೆ ಮಾಡಿದ್ದ. ಒಂದು ಕ್ಷಣ ಅಲ್ಲಿದ್ದ ನಾಲ್ಕು ಮಂದಿಗೂ ಒಂದು ಶಾಕ್.! ಬರೀ ಕಣ್ಸನ್ನೆಯಲ್ಲಿ ಪರಸ್ಪರ ಒಪ್ಪಿಗೆಯ ಸೂಚನೆ. ಅಷ್ಟೊತ್ತಿಗೆ ಕೈ ಒರೆಸಿಕೊಳ್ಳಬೇಕಿದ್ದ ಕರವಸ್ತ್ರದ ಮೇಲೆ ನಾಲ್ಕು ಮಂದಿಯ ಸಹಿ ಬಿದ್ದಿತ್ತು.

ಹಾಗಂತ ಅದು ಕೇವಲ ಒಂದು ಮಾಮೂಲಿ ಒಪ್ಪಂದ ಪತ್ರದ ರುಜು ಆಗಿರಲಿಲ್ಲ. ಒಬ್ಬ ಹುಡುಗನ ಇಡೀ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದ ಐತಿಹಾಸಿಕ ಕರಾರು ಪತ್ರದಲ್ಲಿದ್ದ ಮುದ್ರೆಯಾಗಿತ್ತು..!

ಸ್ವತಃ ಜನ್ಮ ಕೊಟ್ಟ ತಂದೆಗೂ ಈ ಒಪ್ಪಿಗೆ ಪತ್ರದ ಮಹತ್ವ ತಿಳಿದಿರಲಿಲ್ಲ. 13ರ ಹರೆಯದ ಎಳೆಯ ಹುಡುಗನಿಗೂ ಈ ಹಸ್ತಾಕ್ಷರ ಮುಂದೆ ತನ್ನ ಸಿಗ್ನೇಚರ್ ಸ್ಟೈಲ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಇದೇ ಕರವಸ್ತ್ರ ಮುಂದೆ ಫ್ರೇಮ್ ಆಗಿ ಗಾಜಿನ ಮನೆಯನ್ನು ಅಲಂಕರಿಸುತ್ತೆ ಅನ್ನೋದು ಗೊತ್ತಿರಲಿಲ್ಲ. ಒಂದು ಸಹಿಯ ಕರವಸ್ತ್ರ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತೆ ಅನ್ನೋ ಅಂದಾಜು ಸಹ ಯಾರಿಗೂ ಇರಲಿಲ್ಲ.

ಆದ್ರೆ ಅಲ್ಲಿದ್ದ ಪ್ರಭಾವಶಾಲಿ ವ್ಯಕ್ತಿಗೆ ಮಾತ್ರ ಗೊತ್ತಿತ್ತು. ಈ ಹುಡುಗನ ಭವಿಷ್ಯದ ಜಾತಕ. ಈತ ಸಾಮಾನ್ಯ ಬಾಲಕನಲ್ಲ. ಈತನ ಕೌಶಲ್ಯಕ್ಕೆ ಭವಿಷ್ಯದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಂದು ವೇಳೆ ಈತ ಒಪ್ಪಂದ ಪತ್ರಕ್ಕೆ ಸಹಿ ಹಾಕದಿದ್ರೆ ನಾವು ಕಳೆದುಕೊಳ್ಳುವುದು ಬರೀ ಚಿನ್ನವನ್ನಲ್ಲ. ಅಪ್ಪಟ ಕೋಹಿನೂರ್ ವಜ್ರವನ್ನು ಎಂದು ಮನದಲ್ಲಿ ಲೆಕ್ಕಚಾರ ಹಾಕುತ್ತಿದ್ದ.

ಹಾಗಾಗಿಯೇ ಅಂದು ಗಡಿಬಿಡಿಯಲ್ಲೇ ಈ ಹುಡುಗನ ಜೊತೆಗಿನ ಒಪ್ಪಂದ, ಒಂದು ಮಾಮೂಲಿ ನ್ಯಾಪ್‍ಕಿನ್ ಮೇಲಿನ ಸೈನ್‍ನಲ್ಲಿ ಕೊನೆಗೊಂಡಿತ್ತು. ಅಚ್ಚರಿ ಅಂದ್ರೆ ಆ ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿದ್ದ ಈ ಹುಡುಗನ ತಂದೆಗೆ ಆಟಕ್ಕಿಂತ ಮಗನ ಆರೋಗ್ಯವೇ ಮುಖ್ಯವಾಗಿತ್ತು.

ಆದ್ರೆ ಸಹಿ ಹಾಕಿಸಿಕೊಂಡವನಿಗೆ ಈ ಹುಡುಗನ ಭವಿಷ್ಯ ಕಣ್ಣೇದುರು ಕಾಣುತ್ತಿತ್ತು. ಈ ಬಾಲಕÀ ಮುಂದೆ ಜಾಗತಿಕ ಫುಟ್‍ಬಾಲ್‍ನಲ್ಲಿ ಚರಿತ್ರೆ ಸೃಷ್ಟಿಸುತ್ತಾನೆ ಎಂಬ ಅದಮ್ಯ ವಿಶ್ವಾಸವಿತ್ತು. ತಡ ಮಾಡದ ಆ ಹೆಸರಾಂತ ವ್ಯಕ್ತಿ ನ್ಯಾಪ್‍ಕಿನ್ ಅನ್ನೇ ಐತಿಹಾಸಿಕ ಕರಾರುಪತ್ರವನ್ನಾಗಿಸಿದ್ದ.!

ದಿನಾಂಕ – ಡಿಸೆಂಬರ್ 14, 2000.
ಸ್ಥಳ -ಬಾರ್ಸಿಲೋನಾದ ಪೊಂಪೆಯಾ ಟೆನಿಸ್ ಕ್ಲಬ್‍ನ ಕೆಫೆಟೇರಿಯಾ.

ಅಂದು ನ್ಯಾಪ್‍ಕಿನ್ ಮೇಲೆ ಸಹಿ ಹಾಕಿದ್ದ ಹುಡುಗ : 13ರ ಹರೆಯದ ಲಿಯೋನೆಲ್ ಮೆಸ್ಸಿ

ಒಪ್ಪಂದ ಪತ್ರ ಮಾಡಿಸಿಕೊಂಡವರು : ಬಾರ್ಸಿಲೋನಾ ಫುಟ್‍ಬಾಲ್ ಕ್ಲಬ್‍ನ ಆಗಿನ ನಿದೇರ್ಶಕ ಕಾರ್ಲೆಸ್ ರೆಕ್ಸಾಕ್

ಒಪ್ಪಂದ ಪತ್ರಕ್ಕೆ ಸಾಕ್ಷಿಗಳು
ವರ್ಗಾವಣೆ ಸಲಹೆಗಾರ : ಜೊಸೇಫ್ ಮಿಂಗುವೆಲ್ಲಾ
ಅರ್ಜೆಂಟಿನಾದ ಏಜೆಂಟ್ : -ಹೊರಾಸಿಯೊ ಗ್ಯಾಗ್ಲಿಯೋಲಿ
ಪ್ರತ್ಯಕ್ಷ ಸಾಕ್ಷಿ : ಜಾರ್ಜ್ ಮೆಸ್ಸಿ

ನಂತರ ದಾಖಲಾಗಿದ್ದು ಫುಟ್‍ಬಾಲ್ ಇತಿಹಾಸದ ಪುಟಗಳ ವರ್ಣರಂಜಿತ ಅಧ್ಯಾಯಗಳು. ಬರೆದಷ್ಟು ಮುಗಿಯದ ದಾಖಲೆಗಳು. ವರ್ಣಿಸಲು ಅಸಾಧ್ಯವಾದಂತಹ ಆಟದ ವೈಖರಿಗಳು. ಸಾಲು ಸಾಲು ಪ್ರಶಸ್ತಿಗಳು. ಫುಟ್‍ಬಾಲ್ ಅಂಗಣದಲ್ಲಿ ಮಾಡುತ್ತಿರುವ ಸಾಧನೆಗಳು. ಮುಕುಟಕ್ಕೆ ಸೇರಿಕೊಂಡಿರುವ ಪ್ರತಿಷ್ಠಿತ ಟ್ರೋಫಿಗಳು.. ಮನಸಾರೆ ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳು.. ನೊಂದವರ ಬಾಳಿಗೆ ಬೆಳಕು ನೀಡುವ ಮೆಸ್ಸಿ ಚಾರಿಟಿಯ ದಾನ ಧರ್ಮಗಳು…!

ಜೂನ್ 24, 1987. ಮೆಸ್ಸಿಯ ಡೇಟ್ ಆಫ್ ಬರ್ತ್. ಅರ್ಜೆಂಟಿನಾದ ರೊಸಾರಿಯೊ ಹುಟ್ಟೂರು. ತಂದೆ ಜಾರ್ಜ್ ಮೆಸ್ಸಿ. ತಾಯಿ ಸೆಲಿಯಾ ಕುಸಿಟ್ಟಿನಿ. ಮಧ್ಯಮ ವರ್ಗದ ಕುಟುಂಬ. ಇಬ್ಬರು ಅಣ್ಣಂದಿರ ಪ್ರೀತಿಯ ತಮ್ಮ. ತಂಗಿಯ ನೆಲ್ಮೆಯ ಅಣ್ಣ.

ಮೆಸ್ಸಿಯ ವೃತ್ತಿ ಬದುಕಿಗೆ ಅಜ್ಜಿಯೇ ಪ್ರೇರಣಾ ಶಕ್ತಿ..!

ಹಾಗೇ ನೋಡಿದ್ರೆ ಮೆಸ್ಸಿಯ ಫುಟ್‍ಬಾಲ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಅಜ್ಜಿ ಸಿಲೀಯಾ ಒಲಿವೆರಾ. ಮೆಸ್ಸಿಯ ಫುಟ್‍ಬಾಲ್ ಬದುಕಿಗೆ ಪ್ರೇರಣೆ ತುಂಬಿದ್ದು ಕೂಡ ಅಜ್ಜಿಯೇ. ಸ್ಥಳೀಯ ಕೋಚ್‍ಗಳ ಜೊತೆ ಜಗಳ ಮಾಡಿಕೊಂಡು ನಾಲ್ಕರ ಹರೆಯದ ಪುಟಾಣಿ ಮೆಸ್ಸಿಯನ್ನು ಅಂಗಣಕ್ಕಿಳಿಸಿದ್ದಳು. ಜೊತೆಗೆ ಮೊದಲ ಬೂಟು ಕೊಡಿಸಿ ಮೆಸ್ಸಿಯ ಕಾಲಿಗೆ ಶಕ್ತಿ ತುಂಬಿದ್ದಳು.

ಪ್ರತಿ ದಿನ ಮೆಸ್ಸಿಯನ್ನು ತರಬೇತಿಗೆ ಕರೆದುಕೊಂಡು ಹೋಗುತ್ತಿದ್ದ ಅಜ್ಜಿ, 1998ರಲ್ಲಿ ಇಹಲೋಕ ತ್ಯಜಿಸಿದ್ದಳು. ಅಜ್ಜಿಯ ನಿಧನ ಮೆಸ್ಸಿಯನ್ನು ಘಾಸಿಗೊಳಿಸಿದ್ರೂ, ಕೆಲವೇ ಕೆಲವು ವರ್ಷಗಳಲ್ಲಿ ಅಜ್ಜಿಯ ಕನಸನ್ನು ಸಾಕಾರಗೊಳಿಸಿದ್ದ. ಮೈದಾನದ ಪ್ರತಿ ಸಂಭ್ರಮದಲ್ಲೂ ಮೆಸ್ಸಿ ಅಜ್ಜಿಯನ್ನು ನೆನಪಿಸಿಕೊಳ್ಳುತ್ತಾನೆ. ಎರಡು ತೋರು ಬೆರಳುಗಳನ್ನು ಮೇಲೆತ್ತಿ ಆಗಸವನ್ನು ದಿಟ್ಟಿಸಿನೋಡುವುದು ಬರೀ ಸಂಭ್ರಮಾಚರಣೆಯಲ್ಲ. ಬದಲಾಗಿ ಅಜ್ಜಿ ಸಿಲೀಯಾ ಒಲಿವೆರಾಗೆ ಮೆಸ್ಸಿ ನೀಡುತ್ತಿರುವ ಗೌರವದ ಸಮರ್ಪಣೆ.

ವಿಷಕಾರಿ ಸ್ಪೈಡರ್..!

ಮೆಸ್ಸಿ 6ಹರೆಯದಲ್ಲಿ ನ್ಯೂವೆಲ್ಸ್ ಓಲ್ಡ್ ಬಾಯ್ಸ್ ಕ್ಲಬ್‍ನಲ್ಲಿ ತರಬೇತಿ ಪಡೆಯುತ್ತಿದ್ದ. ಈ ಕ್ಲಬ್‍ನಲ್ಲಿ ಆಡುತ್ತಿದ್ದ ಬಾಲಕರ ತಂಡವನ್ನು ದಿ ಮೆಷಿನ್ ಆಫ್ 87 ಎಂದು ಕರೆಯಲಾಗುತ್ತಿತ್ತು. ಈ ತಂಡ ಯಾವುದೇ ಪಂದ್ಯಗಳನ್ನು ಸೋಲುತ್ತಿರಲಿಲ್ಲ. ಮೆಸ್ಸಿಯ ಗೋಲು ಮೇಲೆ ಗೋಲು ದಾಖಲಿಸುತ್ತಿದ್ದ. ಹೀಗಾಗಿ ಎದುರಾಳಿ ಹುಡುಗರು ಮೆಸ್ಸಿಯನ್ನು ವಿಷಕಾರಿ ಸ್ಪೈಡರ್ ಅಂತ ಕರೆಯುತ್ತಿದ್ದರು.

ಮೆಸ್ಸಿ ಬೆಳವಣಿಗೆಗೆ ಮಾರಕವಾದ ಹಾರ್ಮೊನ್ ಸಮಸ್ಯೆ..!

ಈ ನಡುವೆ, ಮೆಸ್ಸಿ ತನ್ನ 10ರ ಹರೆಯದಲ್ಲೇ ಹಾರ್ಮೊನ್ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ಮೆಸ್ಸಿಯ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತಗೊಂಡಿತ್ತು. ಇದು ಹೆತ್ತವರಿಗೆ ದೊಡ್ಡ ಚಿಂತೆಯಾಗಿ ಕಾಡಿತ್ತು. ಮೆಸ್ಸಿಯ ಚಿಕಿತ್ಸೆಗೆ ಬೇಕಾದ ದುಡ್ಡು ಹೊಂದಿಸಲು ಜಾರ್ಜ್ ಮೆಸ್ಸಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದ. ಆರ್ಥಿಕ ಸಹಾಯ ಮಾಡುವಂತೆ ಸ್ಥಳೀಯ ಕ್ಲಬ್‍ಗಳ ಮೊರೆ ಹೋದ್ರು ಪ್ರಯೋಜನವಾಗಲಿಲ್ಲ. ಕೊನೆಗೂ ಕೈ ಹಿಡಿದಿದ್ದು ಎಳೆಯ ಮೆಸ್ಸಿಯ ಅಮೋಘ ಆಟ ಹಾಗೂ ದಾಖಲಿಸಿದ್ದ ಗೋಲುಗಳ ಸಂಖ್ಯೆ.

ಹೌದು, ಮೆಸ್ಸಿ ತನ್ನ ಅಪ್ರತಿಮ ಕೌಶಲ್ಯಗಳಿಂದಲೇ ಸ್ಥಳೀಯ ಟೂರ್ನಿಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ. ನಾಚಿಕೆ ಸ್ವಭಾವವಿದ್ರೂ ಮೆಸ್ಸಿ ಮೈದಾನದಲ್ಲಿ ಮಾತ್ರ ವಾಮನ ಮೂರ್ತಿ. ತನಗಿಂತ ಹಿರಿಯರ ಜೊತೆ ಆಡಿಕೊಂಡು ನಾಜೂಕಿನಿಂದ ಗೋಲು ಹೊಡೆಯುತ್ತಿದ್ದ. ಮೆಸ್ಸಿಯ ಕಾಲಿನ ಕರಾಮತ್ತಿನ ಸದ್ದಿನ ಸುದ್ದಿ, ದೂರದ ಸ್ಪೇನ್‍ನ ಬಾರ್ಸಿಲೋನಾ ಕ್ಲಬ್‍ನ ಕಿವಿಗೂ ಅಪ್ಪಳಿಸಿತ್ತು. ಆಗ ದಾಖಲಾಗಿದ್ದೇ ನ್ಯಾಪ್‍ಕಿನ್ ಮೇಲಿನ ಐತಿಹಾಸಿಕ ಸಹಿಯ ಒಪ್ಪಂದ ಪತ್ರ.

ಬಾರ್ಸಿಲೋನಾ ಕ್ಲಬ್‍ನಲ್ಲಿ ಅರಳಿದ ಅಪ್ರತಿಮ ಪ್ರತಿಭೆ..!

2001ರ ನಂತರ ಮೆಸ್ಸಿಯ ಫುಟ್‍ಬಾಲ್ ಬದುಕಿಗೆ ಹೊಸ ದಿಕ್ಸೂಚಿ ಸಿಕ್ಕಿತ್ತು. ಆದ್ರೆ ತಂದೆ ಜಾರ್ಜ್‍ಗೆ ಮೆಸ್ಸಿಯ ಆಟಕ್ಕಿಂತಲೂ ಆತನ ಆರೋಗ್ಯದ್ದೇ ದೊಡ್ಡ ಚಿಂತೆಯಾಗಿತ್ತು. ಹೀಗಾಗಿ ಮೆಸ್ಸಿ ಕುಟುಂಬ ಸ್ಪೇನ್‍ಗೆ ಸ್ಥಳಾಂತರಗೊಂಡಿತ್ತು. ಬೆಳಗ್ಗೆ, ಸಂಜೆ ಕಠಿಣ ಅಭ್ಯಾಸ. ಇದರ ಮಧ್ಯೆ ಹಾರ್ಮೋನ್ ಬೆಳವಣಿಗೆಯ ಚಿಕಿತ್ಸೆ. ಮೊದಲೇ ನಾಚಿಕೆ ಸ್ವಭಾವ. ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮಾತನಾಡುತ್ತಿರಲಿಲ್ಲ. ಹೀಗಾಗಿ ಸಹ ಆಟಗಾರರಿಗೂ ಮೆಸ್ಸಿಯ ವರ್ತನೆ ಸ್ವಲ್ಪ ಭಿನ್ನವಾಗಿ ಕಾಣುತ್ತಿತ್ತು.

ಹೀಗೆ ಬಾರ್ಸಿಲೋನಾ ಕ್ಲಬ್‍ನ ವಿವಿಧ ಟೂರ್ನಿಗಳಲ್ಲಿ ಆಡಿದ್ದ ಮೆಸ್ಸಿ,
ಕಾರ್ಲೆಸ್ ರೆಕ್ಸಾಕ್ ಭವಿಷ್ಯವನ್ನು ಹುಸಿಗೊಳಿಸಲಿಲ್ಲ. ತನ್ನ 18ನೇ ಹುಟ್ಟುಹಬ್ಬದಂದೇ ಬಾರ್ಸಿಲೋನಾ ಕ್ಲಬ್ ಜೊತೆ ಅಧಿಕೃತ ಒಪ್ಪಂದಕ್ಕೆ ಸಹಿ ಮಾಡಿದ್ದ. ಈ ನಡುವೆ ಬೇರೆ ಬೇರೆ ಕ್ಲಬ್‍ಗಳು ದುಬಾರಿ ಹಣದ ಆಮೀಷ ಒಡ್ಡಿದ್ರೂ ಮೆಸ್ಸಿಯ ನಿಷ್ಠೆ ಬದಲಾಗಲಿಲ್ಲ. ಯಾಕಂದ್ರೆ ಬಾರ್ಸಿಲೋನಾ ಕ್ಲಬ್ ಬೆಂಬಲ ನೀಡದೇ ಇರುತ್ತಿದ್ರೆ ಇವತ್ತು ಮೆಸ್ಸಿ ಎಂಬ ಹೆಸರು ಮಾಮೂಲಿ ಹೆಸರಾಗಿ ಉಳಿಯುತ್ತಿತ್ತು.

ಬಾರ್ಸಿಲೋನಾ ಕ್ಲಬ್‍ನ ಮಾಣಿಕ್ಯ..!

2000ರಿಂದ 2021ರವರೆಗೆ ಮೆಸ್ಸಿ ಬಾರ್ಸಿಲೋನಾ ಕ್ಲಬ್‍ನ ಭಾಗವಾಗಿದ್ದ. 21 ವರ್ಷಗಳಲ್ಲಿ 17 ಋತುಗಳಲ್ಲಿ ತಂಡದ ಯಶಸ್ಸಿಗೆ ಕಾರಣೀಕರ್ತನಾಗಿದ್ದ. 778 ಪಂದ್ಯಗಳಲ್ಲಿ 672 ಗೋಲು ದಾಖಲಿಸಿದ್ದ. 10 ಲಾ ಲೀಗಾ ಮತ್ತು ನಾಲ್ಕು ಚಾಂಪಿಯನ್ಸ್ ಟ್ರೋಫಿ ಸೇರಿ ಒಟ್ಟು 34 ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದ. ಎಂಟು ಬ್ಯಾಲನ್ ಡಿ ಓರ್ ಪ್ರಶಸ್ತಿಗಳಲ್ಲಿ ಆರು ಪ್ರಶಸ್ತಿಗಳನ್ನು ಬಾರ್ಕಾ ಪರ ಆಡುವಾಗಲೇ ಗೆದ್ದಿದ್ದ. ಇವತ್ತಿನ ಬಾರ್ಸಿಲೋನಾದ ಕೋಟ್ಯಂತರ ಅಭಿಮಾನಿಗಳ ಹಿಂದಿನ ಶಕ್ತಿಯೇ ಮೆಸ್ಸಿ ಎಂಬ ಬ್ರ್ಯಾಂಡ್.

ಬಾರ್ಸಿಲೋನಾಗೆ ಕಣ್ಣೀರಿನ ವಿದಾಯ..!

2021ರಲ್ಲಿ ಬಾರ್ಸಿಲೋನಾ ಕ್ಲಬ್ ಆರ್ಥಿಕ ಸಂಕಷ್ಟದಿಂದ ಸಾಲದ ಸುಳಿಗೆ ಸಿಲುಕಿತ್ತು. ಸ್ಪ್ಯಾನಿಷ್ ಲೀಗ್ ಪ್ರಕಾರ ಕ್ಲಬ್‍ಗಳು ಆಟಗಾರರ ಸಂಬಳಕ್ಕಾಗಿ ನಿರ್ದಿಷ್ಟ ಹಣವನ್ನು ಮೀಸಲಿಡಬೇಕು. ಆದ್ರೆ ಮೆಸ್ಸಿ ತನ್ನ ವೇತನವನ್ನು ಶೇ.50ರಷ್ಟು ಕಡಿತಗೊಳಿಸಲು ಒಪ್ಪಿದ್ರೂ ಕ್ಲಬ್‍ಗೆ ನಿಯಮ ಪಾಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬದುಕು ರೂಪಿಸಿದ್ದ ಕ್ಲಬ್ ಅನ್ನು ಒಲ್ಲದ ಮನಸ್ಸಿನಿಂದಲೇ ಬಿಟ್ಟು ಹೋಗಬೇಕಾಯ್ತು. ಸುದ್ದಿಗೋಷ್ಠಿಯಲ್ಲಿ ಮೌನವಾಗಿಯೇ ತನ್ನೆಲ್ಲಾ ಭಾವನೆಗಳನ್ನ ವ್ಯಕ್ತಪಡಿಸಿ ಕಣ್ಣೀರು ಸುರಿಸಿದ್ದ. ಮೆಸ್ಸಿ ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡಾಗ, 21 ವರ್ಷಗಳ ಹಿಂದೆ ನ್ಯಾಪ್‍ಕಿನ್ ಮೇಲೆ ಬರೆದಿದ್ದ ಒಪ್ಪಂದ ಪತ್ರದÀ ಸಹಿಯು ಕಣ್ಣೀರಿನಲ್ಲಿ ತೊಯ್ದು ಮರೆಯಾಗಿ ಹೋಯ್ತು.

ಅರ್ಜೆಂಟಿನಾದ ಕಣ್ಮನಿ..! ಮೊದಲ ಪಂದ್ಯದಲ್ಲೇ ರೆಡ್ ಕಾರ್ಡ್

17ನೇ ಹರೆಯದಲ್ಲಿ ಮೆಸ್ಸಿ ಅರ್ಜೆಂಟಿನಾ ರಾಷ್ಟ್ರೀಯ ತಂಡಕ್ಕೆ ಎಂಟ್ರಿಯಾಗಿದ್ದ. ಬದುಕು ರೂಪಿಸಿದ್ದ ಸ್ಪೇನ್ ದೇಶವು ತಮ್ಮ ಪರವಾಗಿ ಆಡುವಂತೆ ಆಹ್ವಾನ ನೀಡಿದ್ರೂ, ನಯವಾಗಿಯೇ ತಿರಸ್ಕರಿಸಿದ್ದ. 2005ರಲ್ಲಿ ಹಂಗೇರಿ ವಿರುದ್ದ ಚೊಚ್ಚಲ ರಾಷ್ಟ್ರೀಯ ಪಂದ್ಯವನ್ನಾಡಿದ್ದ. ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಮೆಸ್ಸಿ ಕೇವಲ 44 ಸೆಕೆಂಡುಗಳಲ್ಲಿ ರೆಡ್ ಕಾರ್ಡ್ ಪಡೆದುಕೊಂಡಿದ್ದ..!

2006ರಲ್ಲಿ ಚೊಚ್ಚಲ ವಿಶ್ವಕಪ್ ಆಡಿದ್ದ ಮೆಸ್ಸಿ 2022ರಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಸಫಲನಾಗಿದ್ದ. ಸತತ ನಾಲ್ಕು ಬಾರಿ ವಿಶ್ವಕಪ್ ಸೇರಿದಂತೆ ಪ್ರತಿಷ್ಠಿತ ಟೂರ್ನಿಗಳಲ್ಲಿ ಸೋತಾಗ ಮೆಸ್ಸಿ ಮೇಲೆ ಟೀಕೆಗಳ ಸುರಿಮಳೆಯೇ ಆಗುತ್ತಿತ್ತು. ಅದರಲ್ಲೂ 2014ರಲ್ಲಿ ವೃತ್ತಿ ಬದುಕಿಗೆ ವಿದಾಯ ಹೇಳಿ ನಂತ್ರ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದ.

ಇದೀಗ ಆರನೆ ವಿಶ್ವಕಪ್ ಆಡುತ್ತಿರುವ ಮೆಸ್ಸಿ, ಸತತ ಎರಡನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾನೆ. ಇಲ್ಲಿಯವರೆಗೆ ಫಿಫಾ ವಿಶ್ವಕಪ್‍ನಲ್ಲಿ 21 ಗೋಲು ಹೊಡೆದು ದಾಖಲೆ ಬರೆದಿದ್ದಾನೆ. ದೇಶದ ಪರ 205 ಪಂದ್ಯಗಳನ್ನು ಆಡಿ 125 ಗೋಲು ದಾಖಲಿಸಿದ್ದಾನೆ. ಫಿಫಾ ವಿಶ್ವಕಪ್, ಕೋಪಾ ಅಮೆರಿಕಾ, ಫೈನಲಿಸಿಮಾ ಪ್ರಶಸ್ತಿಗಳನ್ನು ದೇಶದ ಕಿರೀಟಕ್ಕೆ ತೊಡಿಸಿದ್ದಾನೆ. ಹೀಗೆ ಆತನ ದಾಖಲೆ, ಸಾಧನೆಗಳನ್ನು ಬರೆಯಲು ಹೊದ್ರೆ ಅದು ಮುಗಿಯದ ಅಧ್ಯಾಯಗಳಾಗುತ್ತವೆ.

ಸೂಪರ್ ಕಂಪ್ಯೂಟರ್ ಮೈಂಡ್ .. ಮೈದಾನದ ಮುಕ್ಕಣ್ಣ..!

ಮೈದಾನದಲ್ಲಿ ಮೆಸ್ಸಿ ಸೈಲೆಂಟ್ ಕಿಲ್ಲರ್. ತುಂಬಾನೇ ಶಾಂತವಾಗಿರುತ್ತಾನೆ. ಆದ್ರೆ ಆತನ ಮಿದುಳು ಕಂಪ್ಯೂಟರ್‍ನಂತೆ ಓಡುತ್ತಿರುತ್ತದೆ. ಸಹ ಅಟಗಾರರು ಚೆಂಡಿನ ಹಿಂದೆ ವೇಗವಾಗಿ ಓಡುತ್ತಿದ್ರೆ, ಮೆಸ್ಸಿ ಮಾತ್ರ ಮೈದಾನದಲ್ಲಿ ನಡೆಯುತ್ತಿರುತ್ತಾನೆ.

ಆದ್ರೆ ಆತನ ಒಂದು ಕಣ್ಣಿನ ದೃಷ್ಟಿ ಚೆಂಡಿನ ಮೇಲಿರುತ್ತದೆ. ಇನ್ನೊಂದು ಕಣ್ಣಿನ ದೃಷ್ಟಿ ಎದುರಾಳಿ ಆಟಗಾರರ ಚಲನವಲನದ ಮೇಲಿರುತ್ತದೆ. ಅದೇ ಮೂರನೇ ಕಣ್ಣು ತೆರೆದಾಗ, ಹೇಗೆ ಗೋಲು ಹೊಡೆಯಬಹುದು. ನಿಖರವಾದ ಪಾಸ್ ಯಾವ ಆಟಗಾರನಿಗೆ ನೀಡಬೇಕು ಎಂಬುದು ಕ್ಷಣ ಮಾತ್ರದಲ್ಲಿ ಮೆಸ್ಸಿಯ ಮೈಂಡ್‍ನಲ್ಲಿ ರೀಡ್ ಆಗಿರುತ್ತದೆ. ಮೂರನೇ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಮೆಸ್ಸಿ ಚಿರತೆಯಂತೆ ನುಗ್ಗಿ, ಎದುರಾಳಿ ಕೋಟೆನ್ನು ಧ್ವಂಸ ಮಾಡುವಂತಹÀ ಮಾಂತ್ರಿಕ ಶಕ್ತಿಯನ್ನು ಹೊಂದಿದ್ದಾನೆ. ಮೆಸ್ಸಿ ಅಂದ್ರೆ ಬರೀ ಗೋಲು ಹೊಡೆಯುವ ಆಟಗಾರನಲ್ಲ. ಒಬ್ಬ ಅತ್ಯದ್ಭುತ ಪ್ಲೇ ಮೇಕರ್ ಹಾಗೂ ಪರಿಪೂರ್ಣ ಟೀಮ್ ಮೇಟ್

ಮೆಸ್ಸಿಯ ಎಡಗಾಲಿನ ಮೌಲ್ಯ ಎಷ್ಟು.? ಸಂಪತ್ತು ಎಷ್ಟಿದೆ..?

ಇನ್ನು ಮೆಸ್ಸಿಯ ಬಲಗಾಲಿಗಿಂತ ಎಡಗಾಲಿನ ಮ್ಯಾಜಿಕ್ ಅನ್ನು ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಆತನ ಎಡಗಾಲಿನ ವಿಮೆ ಕೇಳಿದ್ರೆ ಒಂದು ಕ್ಷಣ ತಲೆತಿರುಗಬಹುದು. ಯಾಕಂದ್ರೆ ಅದು ಲಕ್ಷಾಂತರ ರೂಪಾಯಿಯಲಿಲ್ಲ. ಬರೋಬ್ಬರಿ 8000 ಸಾವಿರ ಕೋಟಿ ರೂ. ಹಾಗೇ ಮೆಸ್ಸಿಯ ವರ್ಷದ ಆದಾಯ 1330 ಕೋಟಿ. ಹಲವು ಪ್ರತಿಷ್ಠಿತ ಬ್ರ್ಯಾಂಡ್‍ಗಳ ರಾಯಭಾರಿ ಕೂಡ. ಇಲ್ಲಿಯವರೆಗಿನ ಒಟ್ಟು ಸಂಪಾದನೆ 1.1 ಬಿಲಿಯನ್ ಡಾಲರ್. ಅಂದ್ರೆ ಅಂದಾಜು 91,800 ಕೋಟಿ ರೂ.

ಸಂದೇಶದಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ಅಪರೂಪದ ಆಟಗಾರ.

ಮೆಸ್ಸಿ ಅಂದ್ರೆ ತಾಳ್ಮೆಯ ಪ್ರತೀಕ. ಮೈದಾನದಲ್ಲಿ ಸಹ ಆಟಗಾರರಿಗೆ ಕೋಪದಿಂದ ಬೈಯುವುದಿಲ್ಲ. ಆಟಗಾರರು ತಪ್ಪು ಮಾಡಿದಾಗ ಮೈದಾನದಲ್ಲಿ ಸುಮ್ಮನಿರುತ್ತಾನೆ. ಆದ್ರೆ ಮೈದಾನದ ಹೊರಗಡೆ ಬಂದು ವಾಟ್ಸ್‍ಅಪ್‍ನಲ್ಲಿ ಸುದೀರ್ಘ ಸಂದೇಶವನ್ನು ಬರೆದು ಕಳಿಸುತ್ತಾನೆ. 39ರ ಹರೆಯದಲ್ಲೂ ಮೆಸ್ಸಿಯ ಮಗುವಿನಂತ ಮನಸ್ಸಿಗೆ ಸಹ ಆಟಗಾರರು ಫಿಧಾ ಆಗಿದ್ದಾರೆ. ಅದಕ್ಕಾಗಿ ಮೆಸ್ಸಿಗಾಗಿಯೇ ವಿಶ್ವಕಪ್ ಗೆಲ್ಲಬೇಕು ಎಂದು ಅರ್ಜೆಂಟಿನಾ ಆಟಗಾರರು ಪಣತೊಟ್ಟಿರುವುದು.

10ರಿಂದ 12 ಗಂಟೆಗಳ ಕಾಲ ನಿದ್ದೆ ಮಾಡುವ ಮೆಸ್ಸಿ..!

ಮೆಸ್ಸಿ ತರಬೇತಿ ಅವಧಿಯನ್ನು ಮಿಸ್ ಮಾಡಲ್ಲ. ಹಾಗಂತ ಜಿಮ್‍ನಲ್ಲಿ ಹೆಚ್ಚು ಕಾಲ ವರ್ಕೌಟ್ ಕೂಡ ಮಾಡಲ್ಲ. ಬದಲಾಗಿ ನಿದ್ದೆಗೆ ಹೆಚ್ಚಿನ ಆದ್ಯತೆ ನೀಡುತ್ತಾನೆ. ನಿದ್ದೆಯಿಂದ ಹೆಚ್ಚು ನೆಮ್ಮದಿಯನ್ನು ಪಡೆದುಕೊಳ್ಳುತ್ತಾನೆ. ಮಿದುಳು ಮತ್ತು ದೇಹಕ್ಕೆ ರೆಸ್ಟ್ ನೀಡಿದಾಗ ಲವಲವಿಕೆಯಿಂದ ಓಡಾಡಲು ಆಗುತ್ತದೆ ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದಾನೆ.

ಹೌದು, ಲಿಯೋನೆಲ್ ಮೆಸ್ಸಿ ಅಂದ್ರೆ ಅದು ಬರೀ ಹೆಸರಲ್ಲ. ಫುಟ್‍ಬಾಲ್ ಕ್ರೀಡೆಯ ಅಪ್ರತಿಮ ಬ್ರ್ಯಾಂಡ್. ಆತನ ಮ್ಯಾಜಿಕ್ ಆಟವೇ ಜಾಗತಿಕ ಫುಟ್‍ಬಾಲ್‍ನ ಸಿಗ್ನೇಚರ್. ಆಟಗಾರರು ಇಂದು ಬರ್ತಾರೆ, ನಾಳೆ ಹೋಗ್ತಾರೆ.. ಆದ್ರೆ ಮೆಸ್ಸಿ ಹಾಗಲ್ಲ. ಫುಟ್‍ಬಾಲ್ ಪ್ರಪಂಚ ಎಂದೆಂದಿಗೂ ಮರೆಯದ ಆಲ್ ಟೈಮ್ ಗ್ರೇಟೆಸಟ್ ಪ್ಲೇಯರ್. ಆತ ನಡೆದು ಬಂದ ಹಾದಿಯೇ ಒಂದು ರೋಚಕ ನೈಜ ಘಟನೆಯ ಮಹಾಕಾವ್ಯ.

ಸನತ್ ರೈ
saakshatv.com

 

 

 

 

Tags: #LionelMessi #Messi #Football #FCBarcelona #Argentina #GOAT#LionelMessi #Messi #GOAT #Football #Kannada #SanathRa #saakshatv #fifaworldcup2026#saakshatv#sanathrai
ShareTweetSendShare
Join us on:

Related Posts

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

by Shwetha
July 16, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆಯು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಇನ್ನು ಮುಂದೆ ಮನೆ ಮನೆಗೆ...

108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

by Shwetha
July 16, 2026
0

ಯು.ಟಿ. ಖಾದರ್ ನೇತೃತ್ವದ ಆರೋಗ್ಯ ಇಲಾಖೆಯು 108 ಆಂಬ್ಯುಲೆನ್ಸ್ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹೊಸ ನಿಯಮ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತಾವನೆಯ...

ಎನ್‌ಡಿಎಗೆ ಸೇರಲ್ಲ ಆದರೆ ಮಸೂದೆಗಳಿಗೆ ಜೈ: ಸಂಸತ್ತಿನಲ್ಲಿ ಸದ್ದು ಮಾಡಲಿರುವ ಶರದ್ ಪವಾರ್ ಬಣದ ಮಾಸ್ಟರ್ ಪ್ಲಾನ್,ಏನು ಇದರ ಮರ್ಮ?

ಎನ್‌ಡಿಎಗೆ ಸೇರಲ್ಲ ಆದರೆ ಮಸೂದೆಗಳಿಗೆ ಜೈ: ಸಂಸತ್ತಿನಲ್ಲಿ ಸದ್ದು ಮಾಡಲಿರುವ ಶರದ್ ಪವಾರ್ ಬಣದ ಮಾಸ್ಟರ್ ಪ್ಲಾನ್,ಏನು ಇದರ ಮರ್ಮ?

by Shwetha
July 16, 2026
0

ಮುಂಬೈ: ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನವು ದೇಶದ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಪ್ರಬಲ ರಾಜಕೀಯ ಶಕ್ತಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು,...

ಬಿಡದಿ ಟೌನ್‌ಶಿಪ್‌ಗೆ ಬಲವಂತದ ಭೂಸ್ವಾಧೀನ ಇಲ್ಲ: ಸಿಎಂ ಡಿಕೆಶಿ

ಬಿಡದಿ ಟೌನ್‌ಶಿಪ್‌ಗೆ ಬಲವಂತದ ಭೂಸ್ವಾಧೀನ ಇಲ್ಲ: ಸಿಎಂ ಡಿಕೆಶಿ

by Shwetha
July 16, 2026
0

ಡಿ. ಕೆ. ಶಿವಕುಮಾರ್ ಅವರು, ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಮೀನು ನೀಡಲು ಇಷ್ಟವಿಲ್ಲದ...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ನನ್ನನ್ನೇ ಪೊರಕೆಯಿಂದ ಹೊಡೆಯಿರಿ ಆದರೆ ಅಧಿಕಾರಿಗಳ ಮೇಲೆ ಕೈ ಹಾಕಬೇಡಿ. ಬಿಡದಿ ಹಿಂಸಾಚಾರಕ್ಕೆ ಡಿಕೆ ಶಿವಕುಮಾರ್ ಭಾವುಕ ಪ್ರತಿಕ್ರಿಯೆ

by Shwetha
July 16, 2026
0

ಬೆಂಗಳೂರು: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ಮತ್ತು ನೋವು ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram