ADVERTISEMENT
Tuesday, July 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

Shwetha by Shwetha
July 21, 2026
in ರಾಜ್ಯ, Cinema, Newsbeat, State, ಮನರಂಜನೆ
Share on FacebookShare on TwitterShare on WhatsappShare on Telegram

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಅಯೋಗ್ಯ 2 ಚಿತ್ರದ ಪ್ರಚಾರ ಕಾರ್ಯ ಈಗ ಭರ್ಜರಿಯಾಗಿ ಸಾಗುತ್ತಿದೆ. ನಟ ಸತೀಶ್ ನೀನಾಸಂ ತಮ್ಮ ಚಿತ್ರತಂಡದೊಂದಿಗೆ ಹುಬ್ಬಳ್ಳಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದು, ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಆಡಿರುವ ಮಾತುಗಳು ಈಗ ಸಿನಿವಲಯದಲ್ಲಿ ಸಂಚಲನ ಮೂಡಿಸಿವೆ.

ದರ್ಶನ್ ಚಿತ್ರರಂಗದ ಆಸ್ತಿ ಎಂದ ಸತೀಶ್

Related posts

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ ಸಾಧ್ಯತೆ

July 21, 2026
ಮನೆಬಾಗಿಲಿಗೆ ಜಾತಿ, ನಿವಾಸ ಪ್ರಮಾಣ ಪತ್ರ: ಸರ್ಕಾರದ ಹೊಸ ಅಭಿಯಾನ ಆರಂಭ

ಮನೆಬಾಗಿಲಿಗೆ ಜಾತಿ, ನಿವಾಸ ಪ್ರಮಾಣ ಪತ್ರ: ಸರ್ಕಾರದ ಹೊಸ ಅಭಿಯಾನ ಆರಂಭ

July 21, 2026

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ನೀನಾಸಂ, ದರ್ಶನ್ ಅವರು ನಮ್ಮ ಚಿತ್ರರಂಗದ ಶಕ್ತಿ ಎಂದು ಬಣ್ಣಿಸಿದರು. ಶಿವಣ್ಣ, ಪುನೀತ್ ರಾಜ್ ಕುಮಾರ್ ಹಾಗೂ ಸುದೀಪ್ ಅವರು ನಮ್ಮ ಚಿತ್ರರಂಗಕ್ಕೆ ಹೇಗೆ ಆಸ್ತಿಯೋ, ಅದೇ ರೀತಿ ದರ್ಶನ್ ಕೂಡ ನಮ್ಮ ಇಂಡಸ್ಟ್ರಿಯ ದೊಡ್ಡ ಆಸ್ತಿ. ಅವರು ಎದುರಿಸುತ್ತಿರುವ ಸಂಕಷ್ಟದಿಂದ ಆದಷ್ಟು ಬೇಗ ಹೊರಗೆ ಬರಲಿ ಎಂದು ನಾನು ಆಶಿಸುತ್ತೇನೆ ಎಂದು ಭಾವುಕರಾಗಿ ನುಡಿದರು. ಅಯೋಗ್ಯ 2 ಚಿತ್ರದ ಪ್ರಚಾರಕ್ಕೆ ದರ್ಶನ್ ಅಭಿಮಾನಿಗಳು ನೀಡುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಸತೀಶ್ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ಅರ್ಪಿಸಿದರು.

ಸಿದ್ದಾರೂಢ ಮಠದಲ್ಲಿ ವಿಶೇಷ ಪೂಜೆ ಮತ್ತು ಮೆರವಣಿಗೆ

ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಚಿತ್ರತಂಡ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿತು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನಟ ಸತೀಶ್ ನೀನಾಸಂ ಅವರಿಗೆ ಹಾಸ್ಯ ನಟರಾದ ದಡಿಯಾ ಗಿರೀಶ್, ಶಿವರಾಜ್ ಕೆ.ಆರ್.ಪೇಟೆ ಹಾಗೂ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಸಾಥ್ ನೀಡಿದರು. ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಹುಡುಗಿಯರು ಡೇಂಜರಸ್ ಎಂಬ ಹಾಡಿಗೆ ಕಲಾವಿದರು ಸಖತ್ ಆಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಆಗಸ್ಟ್ 7ಕ್ಕೆ ಅಯೋಗ್ಯ 2 ಅಬ್ಬರ ಶುರು

ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಅಯೋಗ್ಯ ಸಿನಿಮಾದಲ್ಲಿ ಏನಮ್ಮಿ ಹಾಡು ಎಷ್ಟು ಹಿಟ್ ಆಗಿತ್ತೋ, ಈಗ ಅಯೋಗ್ಯ 2 ಸಿನಿಮಾದ ಮುದ್ದು ಮುದ್ದು ಪುಟ್ಟಲಕ್ಷ್ಮಿ ಮತ್ತು ಹುಡುಗಿಯರು ಡೇಂಜರಸ್ ಹಾಡುಗಳು ಜನರ ಮನ ಗೆಲ್ಲುತ್ತಿವೆ. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಆಗಸ್ಟ್ 7 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಮೊದಲ ಭಾಗದಂತೆ ಈ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ShareTweetSendShare
Join us on:

Related Posts

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ ಸಾಧ್ಯತೆ

by Shwetha
July 21, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಏಳು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು,...

ಮನೆಬಾಗಿಲಿಗೆ ಜಾತಿ, ನಿವಾಸ ಪ್ರಮಾಣ ಪತ್ರ: ಸರ್ಕಾರದ ಹೊಸ ಅಭಿಯಾನ ಆರಂಭ

ಮನೆಬಾಗಿಲಿಗೆ ಜಾತಿ, ನಿವಾಸ ಪ್ರಮಾಣ ಪತ್ರ: ಸರ್ಕಾರದ ಹೊಸ ಅಭಿಯಾನ ಆರಂಭ

by Shwetha
July 21, 2026
0

ರಾಜ್ಯದ ಜನರಿಗೆ ಜಾತಿ ಪ್ರಮಾಣ ಪತ್ರ ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರಗಳನ್ನು ಸುಲಭವಾಗಿ ತಲುಪಿಸುವ ಮಹತ್ವದ ಅಭಿಯಾನಕ್ಕೆ ರಾಜ್ಯ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ವಿಧಾನಸೌಧದ...

ಸಂಸತ್ ಭವನವನ್ನೇ ಕೆಡವುತ್ತೇವೆ ಭಾರತವನ್ನು ಬಾಂಗ್ಲಾ ನೇಪಾಳ ಮಾಡುತ್ತೇವೆ ಚಲೋ ಸಂಸತ್ ರ‍್ಯಾಲಿಯಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ಸಿಜೆಪಿ ಕಾರ್ಯಕರ್ತರು

ಸಂಸತ್ ಭವನವನ್ನೇ ಕೆಡವುತ್ತೇವೆ ಭಾರತವನ್ನು ಬಾಂಗ್ಲಾ ನೇಪಾಳ ಮಾಡುತ್ತೇವೆ ಚಲೋ ಸಂಸತ್ ರ‍್ಯಾಲಿಯಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ಸಿಜೆಪಿ ಕಾರ್ಯಕರ್ತರು

by Shwetha
July 21, 2026
0

ನೀಟ್ ಪರೀಕ್ಷೆ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಸಾಲು ಸಾಲು ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚಲೋ ಸಂಸತ್ ರ‍್ಯಾಲಿ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಾಕ್ರೋಚ್...

ದಿನ ಭವಿಷ್ಯ (07-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 21, 2026
0

ದಿನ ಭವಿಷ್ಯ 21-07-2026 1. ಮೇಷ ರಾಶಿ ಸಾಮಾನ್ಯ ಫಲ: ಮೇಷ ರಾಶಿಯ ಅಧಿಪತಿ ಮಂಗಳನಾಗಿರುವುದರಿಂದ ಇಂದಿನ ದಿನ ನಿಮಗೆ ಅತ್ಯಂತ ಅನುಕೂಲಕರವಾಗಿದೆ. ನಿಮ್ಮಲ್ಲಿ ಹೊಸ ಚೈತನ್ಯ...

astrology

Astro- ಇದನ್ನು ನಿಯಮಿತವಾಗಿ ವಾರಕ್ಕೊಮ್ಮೆ ಮಾಡಿದರೆ ಸಾಕು, ಮನೆಯಲ್ಲಿರಬಹುದಾದ ಎಲ್ಲಾ ಕೆಟ್ಟ ಕಣ್ಣಿನ ದೃಷ್ಟಿಗಳು ದೂರಾಗುತ್ತದೆ.

by admin
July 20, 2026
0

ಕೆಟ್ಟ ಕಣ್ಣಿನ ದೃಷ್ಟಿಯ ಒತ್ತಡದಿಂದ ಪಾರಾಗಲು ನೀವು ಏನು ಮಾಡಬಹುದು? ನಾವು ಏನಾದರೂ ಹೊಸದನ್ನು ಮಾಡುತ್ತಿದ್ದರೆ, ಅದರಲ್ಲಿ ಅಡೆತಡೆಗಳು ಅಥವಾ ಸಮಸ್ಯೆಗಳಿದ್ದರೆ ಅದನ್ನು ಖಾನ್ ತ್ರಿಷ್ಟಿ ಎಂದು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram