ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ದೇಶದ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ: 1413 ಕೋಟಿ ಒಡೆಯ ಡಿ ಕೆ ಶಿವಕುಮಾರ್ ನಂಬರ್ 1, ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲಾ ಅತೀ ಬಡ ಸಿಎಂ

Shwetha by Shwetha
August 1, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಸ್ತಿಪಾಸ್ತಿ ವಿವರಕ್ಕೆ ಸಂಬಂಧಿಸಿದಂತೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆಯು ಮಹತ್ವದ ವರದಿಯೊಂದನ್ನು ಹಂಚಿಕೊಂಡಿದೆ. ಒಟ್ಟು 31 ಮುಖ್ಯಮಂತ್ರಿಗಳ ಆಸ್ತಿ ಅಫಿಡವಿಟ್ ಗಳನ್ನು ವಿಶ್ಲೇಷಿಸಿ ಸಿದ್ಧಪಡಿಸಲಾದ ಈ ವರದಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕುಬೇರ ಮುಖ್ಯಮಂತ್ರಿಗಳ ಪಟ್ಟಿ: ಮೊದಲ ನಾಲ್ಕು ಸ್ಥಾನಗಳಲ್ಲಿ ಯಾರಿದ್ದಾರೆ?

Related posts

ಯುವ ಸಮುದಾಯವನ್ನು ಗಟರ್ ಎಂದ ಕಂಗನಾ: ಯುವಕರೇ ನಿಮ್ಮನ್ನು ಬೆಳೆಸಿದ್ದು ಎಂಬುದನ್ನು ಮರೆಯಬೇಡಿ-ಜನರೇಷನ್ ಗಟರ್ ಹೇಳಿಕೆಗೆ ಸೋನು ಸೂದ್ ಕೆಂಡ

ಯುವ ಸಮುದಾಯವನ್ನು ಗಟರ್ ಎಂದ ಕಂಗನಾ: ಯುವಕರೇ ನಿಮ್ಮನ್ನು ಬೆಳೆಸಿದ್ದು ಎಂಬುದನ್ನು ಮರೆಯಬೇಡಿ-ಜನರೇಷನ್ ಗಟರ್ ಹೇಳಿಕೆಗೆ ಸೋನು ಸೂದ್ ಕೆಂಡ

August 1, 2026
ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಕರವೇ ಬೆಂಬಲ ಇಲ್ಲ, ಹೋಟೆಲ್ ಸಂಘದ ನಿರ್ಧಾರ ಬಾಕಿ

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಕರವೇ ಬೆಂಬಲ ಇಲ್ಲ, ಹೋಟೆಲ್ ಸಂಘದ ನಿರ್ಧಾರ ಬಾಕಿ

August 1, 2026

ವರದಿಯ ಪ್ರಕಾರ ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿಯ ಮೌಲ್ಯ ಸುಮಾರು 3,660 ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ ನಾಲ್ವರು ಮುಖ್ಯಮಂತ್ರಿಗಳು ನೂರಾರು ಕೋಟಿ ಒಡೆಯರಾಗಿದ್ದು, ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿದ್ದಾರೆ.

1. ಡಿ ಕೆ ಶಿವಕುಮಾರ್ (ಕರ್ನಾಟಕ): 1,413 ಕೋಟಿ ರೂಪಾಯಿ ಆಸ್ತಿ ಹೊಂದುವ ಮೂಲಕ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

2. ಎನ್ ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ): 931 ಕೋಟಿ ರೂಪಾಯಿ ಆಸ್ತಿಯೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

3. ಸಿ ಜೋಸೆಫ್ ವಿಜಯ್ (ತಮಿಳುನಾಡು): 648 ಕೋಟಿ ರೂಪಾಯಿ ಘೋಷಿತ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

4. ಪೇಮಾ ಖಂಡು (ಅರುಣಾಚಲ ಪ್ರದೇಶ): 332 ಕೋಟಿ ರೂಪಾಯಿ ಆಸ್ತಿ ಹೊಂದುವ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಕಡಿಮೆ ಆಸ್ತಿ ಹೊಂದಿರುವ ಬಡ ಮುಖ್ಯಮಂತ್ರಿಗಳು

ಒಂದು ಕಡೆ ಕೋಟಿ ಕೋಟಿ ಒಡೆಯರಿದ್ದರೆ, ಮತ್ತೊಂದು ಕಡೆ ಕೇವಲ ಲಕ್ಷಗಳಲ್ಲಿ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳೂ ಇದ್ದಾರೆ. ದೇಶದ ಒಟ್ಟು ಸಿಎಂಗಳ ಪೈಕಿ ಕೇವಲ ಶೇಕಡಾ 7 ರಷ್ಟು ಮುಖ್ಯಮಂತ್ರಿಗಳು ಮಾತ್ರ 1 ಕೋಟಿ ರೂಪಾಯಿಗಿಂತ ಕಡಿಮೆ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಒಟ್ಟು ಆಸ್ತಿ ಕೇವಲ 55.24 ಲಕ್ಷ ರೂಪಾಯಿಗಳಾಗಿದ್ದು, ಅವರು ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ 85.87 ಲಕ್ಷ ರೂಪಾಯಿ ಆಸ್ತಿಯೊಂದಿಗೆ ಎರಡನೇ ಅತಿ ಕಡಿಮೆ ಆಸ್ತಿ ಹೊಂದಿದ ಸಿಎಂ ಆಗಿದ್ದಾರೆ. ರಾಜಸ್ಥಾನದ ಭಜನ್ ಲಾಲ್ ಶರ್ಮಾ 1.46 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.

ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಅವರ ಒಟ್ಟು ಆಸ್ತಿ 85 ಲಕ್ಷ ರೂಪಾಯಿಗಳಾಗಿದೆ. ಅವರ ಬಳಿ ಕೇವಲ 12,000 ರೂಪಾಯಿ ನಗದು ಇದ್ದು, 13 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 7.24 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾರೆ. ಸ್ಥಿರ ಠೇವಣಿ ಮತ್ತು ಕಿಸಾನ್ ವಿಕಾಸ್ ಪತ್ರಗಳಲ್ಲಿ ಸುಮಾರು 24.5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ವಿಶೇಷವೆಂದರೆ ಇವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು ಅಥವಾ ಚಿನ್ನಾಭರಣಗಳಿಲ್ಲ ಮತ್ತು ಯಾವುದೇ ಸಾಲದ ಹೊರೆಯೂ ಇಲ್ಲ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಎಡಿಆರ್ ವರದಿಯ ಪ್ರಕಾರ ದೇಶದ ಎಲ್ಲಾ 31 ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ 118 ಕೋಟಿ ರೂಪಾಯಿಗಳಾಗಿದೆ. ಕೇವಲ ಆಸ್ತಿ ಮಾತ್ರವಲ್ಲದೆ ಸಿಎಂಗಳ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ವಿವರವನ್ನೂ ಈ ವರದಿ ಬಹಿರಂಗಪಡಿಸಿದೆ. ಒಟ್ಟು 31 ಮುಖ್ಯಮಂತ್ರಿಗಳ ಪೈಕಿ ಶೇಕಡಾ 45 ರಷ್ಟು (ಅಂದರೆ 14 ಸಿಎಂಗಳು) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಮುಕ್ತವಾಗಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ 11 ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಅಂಶವೂ ವರದಿಯಿಂದ ಬೆಳಕಿಗೆ ಬಂದಿದೆ.

ShareTweetSendShare
Join us on:

Related Posts

ಯುವ ಸಮುದಾಯವನ್ನು ಗಟರ್ ಎಂದ ಕಂಗನಾ: ಯುವಕರೇ ನಿಮ್ಮನ್ನು ಬೆಳೆಸಿದ್ದು ಎಂಬುದನ್ನು ಮರೆಯಬೇಡಿ-ಜನರೇಷನ್ ಗಟರ್ ಹೇಳಿಕೆಗೆ ಸೋನು ಸೂದ್ ಕೆಂಡ

ಯುವ ಸಮುದಾಯವನ್ನು ಗಟರ್ ಎಂದ ಕಂಗನಾ: ಯುವಕರೇ ನಿಮ್ಮನ್ನು ಬೆಳೆಸಿದ್ದು ಎಂಬುದನ್ನು ಮರೆಯಬೇಡಿ-ಜನರೇಷನ್ ಗಟರ್ ಹೇಳಿಕೆಗೆ ಸೋನು ಸೂದ್ ಕೆಂಡ

by Shwetha
August 1, 2026
0

ಮುಂಬೈ: ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರನೌತ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರೈತ ಹೋರಾಟಗಾರರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಕಂಗನಾ, ಈಗ...

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಕರವೇ ಬೆಂಬಲ ಇಲ್ಲ, ಹೋಟೆಲ್ ಸಂಘದ ನಿರ್ಧಾರ ಬಾಕಿ

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಕರವೇ ಬೆಂಬಲ ಇಲ್ಲ, ಹೋಟೆಲ್ ಸಂಘದ ನಿರ್ಧಾರ ಬಾಕಿ

by Shwetha
August 1, 2026
0

ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬೆನ್ನಲ್ಲೇ, ವಿವಿಧ ಸಂಘಟನೆಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕರ್ನಾಟಕ ರಕ್ಷಣಾ...

‘ಮೋದಿ ವಿಷ್ಣುವಿನ ಅವತಾರ; ಅವರ ಪಾದ ತೊಳೆದು ನೀರು ಕುಡಿಯುವೆ’: ನಟ ಸುದೇಶ್ ಬೆರ್ರಿ

‘ಮೋದಿ ವಿಷ್ಣುವಿನ ಅವತಾರ; ಅವರ ಪಾದ ತೊಳೆದು ನೀರು ಕುಡಿಯುವೆ’: ನಟ ಸುದೇಶ್ ಬೆರ್ರಿ

by Shwetha
August 1, 2026
0

ಬಾಲಿವುಡ್ ನಟ ಸುದೇಶ್ ಬೆರ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿದ ಹೇಳಿಕೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು,...

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ  ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

by Shwetha
August 1, 2026
0

ಮಂಡ್ಯ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕೆಆರ್ ಎಸ್ ಅಣೆಕಟ್ಟೆ ಬಳಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ...

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

by Shwetha
August 1, 2026
0

ನವದೆಹಲಿ: ನೀಟ್ ಪರೀಕ್ಷೆಯ ಅಕ್ರಮ ಮತ್ತು ಪೇಪರ್ ಲೀಕ್ ಪ್ರಕರಣದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶದ ಅಲೆ ಎದ್ದಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಮಾಫಿಯಾ ವಿರುದ್ಧ ಕಠಿಣ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram