ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಮತ್ತೆ ಗಾಯದಿಂದ ಬಳುತ್ತಿದ್ದಾರೆ. ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಮುಂಬರುವ ಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಹೌದು, ವೇಗಿ ಜಸ್ಪ್ರಿತ್ ಬೂಮ್ರಾ ಲಂಕಾ ಪ್ರವಾಸವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಮೊಣಕಾಲಿನ ನೋವಿನಿಂದ ಚೇತರಿಸಿಕೊಳ್ಳುತ್ತಿದ್ರೂ ಟೆಸ್ಟ್ ಸರಣಿಯ ವೇಳೆಗೆ ಫಿಟ್ ಆಗೋದು ಅನುಮಾನವಾಗಿದೆ.
ಹೀಗಾಗಿ ಬೂಮ್ರಾ ಸ್ಥಾನಕ್ಕೆ ಜಮ್ಮು ಕಾಶ್ಮೀರದ ವೇಗಿ ಔಕಿಬ್ ನಬಿ ಆಯ್ಕೆಯಾಗಿದ್ದಾರೆ. ಪರ್ವೇಜ್ ರಸೂಲ್, ಉಮ್ರಾನ್ ಮಲ್ಲಿಕ್ ನಂತರ ಜಮ್ಮು ಕಾಶ್ಮೀರದಿಂದ ಟೀಮ್ ಇಂಡಿಯಾಗೆ ಆಯ್ಕೆಯಾದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ನಬಿ ಪಾತ್ರರಾಗಿದ್ದಾರೆ.
ಬೂಮ್ರಾ ಇನ್ನೂ ಫಿಟ್ ಆಗಿಲ್ಲ. ಅವರ ಬದಲಿಗೆ ನಬಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕಳೆದ ಎರಡು ರಣಜಿ ಋತುವಿನಲ್ಲಿ ಔಕಿಬ್ ನಬಿ ಅವರು ನೂರಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಬ್ಯಾಟಿಂಗ್ನಲ್ಲೂ ಗಮನ ಸೆಳೆದಿದ್ದಾರೆ.
ಇನ್ನು ಬೂಮ್ರಾ ಗಾಯ ಗಂಭೀರವಾಗಿದೆ. ಮೊಣಕಾಲಿನ ಊತ ಜಾಸ್ತಿಯಾಗಿದೆ. ಬೆಂಗಳೂರಿನ ಎನ್ಸಿಎ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೂಮ್ರಾ ಅವರನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ಸಂಪೂರ್ಣ ಗುಣಮುಖರಾದ ಬಳಿಕವೇ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಲಂಕಾ ವಿರುದ್ದದ ಮೊದಲ ಟೆಸ್ ಪಂದ್ಯ ಆಗಸ್ಟ್ 15ರಿಂದ ಗಾಲೆಯಲ್ಲಿ ನಡೆಯಲಿದೆ.







