ADVERTISEMENT
Thursday, August 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

admin by admin
August 6, 2026
in Newsbeat, Sports, ಕ್ರೀಡೆ
hd-kumaraswamy-honours-para-athlete-shilpa-k-shaila-commonwealth-games-bronze-medalist

hd-kumaraswamy-honours-para-athlete-shilpa-k-shaila-commonwealth-games-bronze-medalist

Share on FacebookShare on TwitterShare on WhatsappShare on Telegram

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು

Related posts

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

August 6, 2026
ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

August 6, 2026

ಶಿಲ್ಪಾ ತರಬೇತುದಾರರಾದ ಸತ್ಯನಾರಾಯಣ, ಪುಷ್ಪಾ ಅವರನ್ನು ಗೌರವಿಸಿದ ಸಚಿವರು

2026ರ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಪ್ಯಾರಾ ಅಥ್ಲೀಟ್, ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾ ಅವರನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರ ಸತ್ಕರಿಸಿ ಗೌರವಿಸಿದರು.

ಇಲ್ಲಿನ ತಮ್ಮ ನಿವಾಸಕ್ಕೆ ಶಿಲ್ಪಾ ಅವರನ್ನು ಹಾಗೂ ಅವರ ಇಬ್ಬರು ತರಬೇತುದಾರರನ್ನು ಬರಮಾಡಿಕೊಂಡು ಗೌರವಿಸಿದ ಸಚಿವರು; ಶಿಲ್ಪಾ ಅವರ ಸಾಧನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಲ್ಪಾ ಅವರ ಹಿನ್ನೆಲೆ, ಅವರ ಈವರೆಗಿನ ಸಾಧನೆ ಹಾಗೂ ಅವರ ತಂದೆ ತಾಯಿ ಇನ್ನಿತರ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು; ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ನಿಮ್ಮ ಸಾಧನೆ ಪ್ರೇರಣಾದಾಯಕ, ಐತಿಹಾಸಿಕ. ನೀವು ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆ.ಆರ್.‌ ನಗರ ತಾಲೂಕಿನವರು. ಯುವ ತಲೆಮಾರಿಗೆ ನೀವು ಮಾದರಿ ಆಗಿದ್ದೀರಿ ಎಂದರು.

ಇದೇ ಸಂದರ್ಭದಲ್ಲಿ ಶಿಲ್ಪಾ ಅವರ ತರಬೇತುದಾರರಾದ ಸತ್ಯನಾರಾಯಣ ಹಾಗೂ ಪುಷ್ಪಾ ನಿರಂಜನ್‌ ಪ್ರಸಾದ್ ಅವರನ್ನು ಸಚಿವರು ಸತ್ಕರಿಸಿದರು.

ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಸಾಮಾನ್ಯ ರೈತ ಕುಟುಂಬದ ಕುಡಿಯಾದ ಶಿಲ್ಪಾ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ಭೀಕರ ಅಪಘಾತದಲ್ಲಿ ಎಡಗಾಲು ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಆ ನೋವು ಮತ್ತು ಅಂಗವೈಕಲ್ಯವನ್ನು ದಿಟ್ಟತನದಿಂದ ಮೆಟ್ಟಿ ನಿಂತ ಅವರು, ತಮ್ಮ ಧೃಡ ಸಂಕಲ್ಪದೊಂದಿಗೆ ಇಡೀ ರಾಷ್ಟ್ರವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.

ಶಿಲ್ಪಾ ಅವರ ಸಾಧನೆಯನ್ನು ಕಂಡು ನಾನು ಬಹಳ ಸಂತೋಷಪಟ್ಟಿದ್ದೇನೆ. ಗ್ರಾಮೀಣ ಪ್ರದೇಶದ ಹೆಣ್ಣುಮಗಳು, ಅದರಲ್ಲಿಯೂ ವಿಕಲಚೇತನ ಹೆಣ್ಣುಮಗಳು ಇಂಥ ಅನನ್ಯ ಸಾಧನೆ ಮಾಡಿರುವುದು ಸಮಾಜಕ್ಕೆ ಮತ್ತು ಯುವಜನತೆಗೆ ದಾರಿದೀಪ ಎನ್ನುವುದು ನನ್ನ ಅಭಿಪ್ರಾಯ. ಸದೃಢ ಇಚ್ಛಾಶಕ್ತಿ ಇದ್ದರೆ ಮಾತ್ರ ಯಾವುದೇ ಸಾಧನೆ ಕಷ್ಟವಲ್ಲ ಎಂಬುದನ್ನು ಅವರು ಸಾಭೀತುಪಡಿಸಿದ್ದಾರೆ – ಹೆಚ್.ಡಿ.ಕುಮಾರಸ್ವಾಮಿ

Tags: #ShilpaKShaila #HDKumaraswamy #CommonwealthGames2026 #ParaAthlete #BronzeMedal #ShotPut #ParaSports #TeamIndia #Karnataka #KannadaSports #SportsNews #IndiaSports #saakshatv
ShareTweetSendShare
Join us on:

Related Posts

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

ಬಿಜೆಪಿಯ ದುರಹಂಕಾರಕ್ಕೆ ಬಿಹಾರದ ಜನತೆಯಿಂದ ತಕ್ಕ ಉತ್ತರ :ಬಿಜೆಪಿಯ 30 ವರ್ಷಗಳ ಭದ್ರಕೋಟೆ ಧೂಳಿಪಟ- ಮೂರನೇ ಶಕ್ತಿಯಾಗಿ ಹೊರಹೊಮ್ಮಿದ ಪ್ರಶಾಂತ್ ಕಿಶೋರ್

by Shwetha
August 6, 2026
0

ಭಾರತೀಯ ರಾಜಕಾರಣದ ತೆರೆಮರೆಯ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ (ಪಿಕೆ), ಈಗ ನೇರ ಚುನಾವಣಾ ಕಣದಲ್ಲೂ ತಮ್ಮ ಚಮತ್ಕಾರ ತೋರಿದ್ದಾರೆ. ಬಿಹಾರದ ಅತ್ಯಂತ ಪ್ರತಿಷ್ಠಿತ ಹಾಗೂ...

ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

ಸಚಿವ ಸ್ಥಾನ ಸಿಗದ ಅಸಮಾಧಾನ; ಶಾಸಕರ ಜೊತೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಮಾತುಕತೆ

by Shwetha
August 6, 2026
0

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರು ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸಚಿವ...

ಸಚಿವ ಬಿ. ನಾಗೇಂದ್ರಗೆ ಶಾಕ್; ದೆಹಲಿ ಪ್ರವಾಸಕ್ಕೆ ಅನುಮತಿ ನಿರಾಕರಣೆ

ಸಚಿವ ಬಿ. ನಾಗೇಂದ್ರಗೆ ಶಾಕ್; ದೆಹಲಿ ಪ್ರವಾಸಕ್ಕೆ ಅನುಮತಿ ನಿರಾಕರಣೆ

by Shwetha
August 6, 2026
0

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಬಿ. ನಾಗೇಂದ್ರ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಿನ್ನಡೆ ನೀಡಿದೆ. ಜುಲೈ 27ರಿಂದ ಆಗಸ್ಟ್ 10ರವರೆಗೆ ದೆಹಲಿಗೆ...

ಕಾಂಗ್ರೆಸ್ ಕೋಟೆಯಲ್ಲಿ ಅಸಮಾಧಾನದ ಕಿಚ್ಚು: ವಿಪಕ್ಷ ಸಾಲಿನಲ್ಲಿ ಆಸನ ಕೇಳಿದ ಜಯಚಂದ್ರ, ಕುಮಾರಸ್ವಾಮಿ ಗುಣಗಾನ ಮಾಡಿದ ಶ್ರೀನಿವಾಸ್

ಕಾಂಗ್ರೆಸ್ ಕೋಟೆಯಲ್ಲಿ ಅಸಮಾಧಾನದ ಕಿಚ್ಚು: ವಿಪಕ್ಷ ಸಾಲಿನಲ್ಲಿ ಆಸನ ಕೇಳಿದ ಜಯಚಂದ್ರ, ಕುಮಾರಸ್ವಾಮಿ ಗುಣಗಾನ ಮಾಡಿದ ಶ್ರೀನಿವಾಸ್

by Shwetha
August 6, 2026
0

ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ಕಸರತ್ತಿನ ನಂತರದ ಅಲೆಗಳು ತಲ್ಲಣ ಸೃಷ್ಟಿಸಿವೆ. ಮಂತ್ರಿಸ್ಥಾನ ವಂಚಿತರಾದ ಕೈ ಶಾಸಕರ ಆಕ್ರೋಶ ಈಗ ಬೀದಿಗೆ ಬಂದಿದ್ದು, ಡಿ.ಕೆ. ಶಿವಕುಮಾರ್...

ವಿದೇಶಿ ದೇಣಿಗೆಗೆ ಕೇಂದ್ರದ ಬ್ರೇಕ್: ಭಾರತದ ಆಂತರಿಕ ಮಸೂದೆಯನ್ನು ಕ್ರೈಸ್ತ ವಿರೋಧಿ ಎಂದ ಅಮೆರಿಕ ಸಂಸದ

ವಿದೇಶಿ ದೇಣಿಗೆಗೆ ಕೇಂದ್ರದ ಬ್ರೇಕ್: ಭಾರತದ ಆಂತರಿಕ ಮಸೂದೆಯನ್ನು ಕ್ರೈಸ್ತ ವಿರೋಧಿ ಎಂದ ಅಮೆರಿಕ ಸಂಸದ

by Shwetha
August 6, 2026
0

ಭಾರತ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (FCRA) ತರಲು ಉದ್ದೇಶಿಸಿರುವ ನೂತನ ತಿದ್ದುಪಡಿ ಮಸೂದೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಸೂದೆಯನ್ನು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram