ADVERTISEMENT
Sunday, November 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ

admin by admin
August 10, 2026
in Cinema, Newsbeat, Uncategorized, ಮನರಂಜನೆ
entertainment/dheeren-ramkumar-pabbar-movie-shooting-completed-release-soon

entertainment/dheeren-ramkumar-pabbar-movie-shooting-completed-release-soon

Share on FacebookShare on TwitterShare on WhatsappShare on Telegram

​ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಪಬ್ಬಾರ್’ ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ‘ಶಾಖಾಹಾರಿ’ ಚಿತ್ರದ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದ ನಿರ್ದೇಶಕ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರು, ಮೈಸೂರು, ಮಡಿಕೇರಿಯ ರಮಣೀಯ ತಾಣಗಳು ಹಾಗೂ ಹಿಮಾಚಲ ಪ್ರದೇಶದ ಮನಮೋಹಕ ವಾತಾವರಣದಲ್ಲಿ ಈ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.
​ಈ ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್ ಅವರು ಹಿಂದೆಂದೂ ಕಾಣಿಸಿಕೊಂಡಿರದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯದ ಹೊಸ ಮಗ್ಗುಲನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ನಾಯಕಿಯಾಗಿ ‘ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಅಭಿನಯಿಸಿದ್ದು, ಧೀರನ್ ಹಾಗೂ ಅಮೃತಾ ಜೋಡಿ ತೆರೆಯ ಮೇಲೆ ಹೊಸ ಅಲೆ ಮೂಡಿಸುವ ನಿರೀಕ್ಷೆಯಿದೆ.

Related posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

November 7, 2026
ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

November 7, 2026

ಇದರೊಂದಿಗೆ ಕೆ.ಜಿ.ಎಫ್ ಖ್ಯಾತಿಯ ಅಯ್ಯಪ್ಪ ಶರ್ಮ, ಅಚ್ಯುತ್ ಕುಮಾರ್ & ಗೋಪಾಲಕೃಷ್ಣ ದೇಶಪಾಂಡೆ ಅವರಂತಹ ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿಮಾಚಲದ ಪಬ್ಬಾರ್ ಕಣಿವೆಯ ಹಿನ್ನೆಲೆಯಲ್ಲಿ ಸಾಗುವ ರೋಚಕ ಅಡ್ವೆಂಚರಸ್ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಅವರ ಸಂಗೀತ ಹಾಗೂ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಬಲ ತುಂಬಿದೆ.

​ಸದ್ಯ ಚಿತ್ರೀಕರಣದ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ‘ಪಬ್ಬಾರ್’ ಸಿನಿಮಾ ತಂಡವು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದೆ. ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಕೆರಳಿಸಿರುವ ಈ ಚಿತ್ರದ ಕ್ಯಾರೆಕ್ಟರ್ ಟೀಸರ್, ನಿರೀಕ್ಷೆಯನ್ನು ಡಬಲ್ ಮಾಡಿದೆ.

ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅದ್ದೂರಿಯಾಗಿ ಘೋಷಿಸಲಿದೆ.

Tags: #DheerenRamkumar #AmruthaPrem #SandeepSunkad #GeethaPictures #GeethaShivarajkumar #Sandalwood #KannadaCinema #PabbarMovie#saakshatv
ShareTweetSendShare
Join us on:

Related Posts

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

ಟ್ರಂಪ್ ನಂಬಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಚುನಾವಣೆಯ ಆಘಾತ: ಆರ್ಥಿಕ ನೆರವಿಗೂ ಕತ್ತರಿ ಬೀಳುವ ಭೀತಿಯಲ್ಲಿ ಇನ್ನೆರಡು ವರ್ಷ ಮೌನಕ್ಕೆ ಶರಣಾಗಲಿದೆಯೇ ಇಸ್ಲಾಮಾಬಾದ್?

by Shwetha
November 7, 2026
0

ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶವು ಕೇವಲ ಶ್ವೇತಭವನದ ರಾಜಕೀಯ ಲೆಕ್ಕಾಚಾರಗಳನ್ನು ಮಾತ್ರ ಬದಲಿಸಿಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ರಣತಂತ್ರಗಳನ್ನು ತಲೆಕೆಳಗಾಗಿಸಿದೆ. ಅದರಲ್ಲೂ ವಿಶೇಷವಾಗಿ, ಬದಲಾದ...

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನೀರು ಹರಿಸಲು CWRC ಶಿಫಾರಸು

by Shwetha
November 7, 2026
0

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ...

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

ಕಬ್ಬು ಬೆಳೆಗಾರರ ಹೋರಾಟಕ್ಕೆ ಸುಖಾಂತ್ಯ; ಸಕ್ಕರೆ ಲಾಭಾಂಶ ರೈತರಿಗೆ ನೀಡಲು ಕಾರ್ಖಾನೆಗಳ ಒಪ್ಪಿಗೆ

by Shwetha
November 7, 2026
0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರೈತರು ಮತ್ತು ಸಂಬಂಧಪಟ್ಟವರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು,...

ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಎಚ್.ಡಿ. ರೇವಣ್ಣ!

ಗಾಂಧಿ ಟೋಪಿ ಹಾಕಿಕೊಂಡು ಜನರಿಗೆ ಟೋಪಿ ಹಾಕಿದ್ದೇ ಇವರ ಸಾಧನೆ: ಗ್ರಾಮೀಣ ಮಕ್ಕಳಿಗೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಕಟ್ಟಿಕೊಡಲು ಇದೇ ಹಳ್ಳಿ ಗುಗ್ಗುಗಳು ಬರಬೇಕಾಯ್ತು- ಪ್ರಿಯಾಂಕ್ ಖರ್ಗೆಗೆ ಅಂಕಿಅಂಶಗಳ ಸಮೇತ ಎಚ್.ಡಿ. ರೇವಣ್ಣ ಖಡಕ್ ತಿರುಗೇಟು

by Shwetha
November 7, 2026
0

ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದು ಜರಿದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯು ಇದೀಗ ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿದೆ....

ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ :ತುಳು ಭಾಷೆಗೆ ಗೌರವ ನೀಡಿದ್ದು ಕಾಂಗ್ರೆಸ್ ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ ಎಂದ  ಪ್ರಿಯಾಂಕ್ ಖರ್ಗೆ

ಇದು ಉತ್ತರ ಪ್ರದೇಶವಲ್ಲ, ನಾಲಿಗೆ ಹರಿಬಿಟ್ಟರೆ ಜೈಲಲ್ಲಿ ಕಂಬಿ ಎಣಿಸಬೇಕಾಗುತ್ತದೆ: ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

by Shwetha
November 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಕೀಳು ಮಟ್ಟಕ್ಕೆ ಇಳಿಯುತ್ತಿರುವ ಭಾಷಾ ಪ್ರಯೋಗ ಹಾಗೂ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ವಿರೋಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram