ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

35 ಎಕರೆ ಜಾಗದ ರಂಪಾಟ- ಎಚ್‌ಡಿಕೆ ನಟ ಸಾರ್ವಭೌಮ, ಅಶೋಕ್ ಶಕುನಿ: ಬಿಡದಿ ಜಾಗದ ಹೆಸರಲ್ಲಿ ನಾಟಕ ಆಡ್ತಿದ್ದಾರೆಂದು ಪ್ರದೀಪ್ ಈಶ್ವರ್ ಕಿಡಿ!

Shwetha by Shwetha
August 14, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಬಿಡದಿಯ 35 ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರ ವಿರುದ್ಧ ಕಾಂಗ್ರೆಸ್‌ನ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ನಟ ಸಾರ್ವಭೌಮ’ ಮತ್ತು ‘ನಾಟಕರತ್ನ’ ಎಂದು ಕರೆದಿರುವ ಅವರು, ವಿಧಾನಸಭೆ ಅಧಿವೇಶನದಲ್ಲಿ ಬಿಡದಿ ವಿಚಾರ ಚರ್ಚೆಗೆ ಬರುವುದನ್ನು ರೋಚಕ ನಾಟಕಕ್ಕೆ ಹೋಲಿಸಿ ಕಟುವಾಗಿ ಲೇವಡಿ ಮಾಡಿದ್ದಾರೆ.

ಸದನದಲ್ಲಿ ಪ್ರದರ್ಶನಗೊಳ್ಳಲಿದೆ ಬಿಡದಿ ಮಹಾನಾಟಕ

Related posts

ದಲಿತನೆಂಬ ಕಾರಣಕ್ಕೆ ವೇದಿಕೆಯನ್ನು ಗಂಗಾಜಲದಿಂದ ಶುದ್ಧೀಕರಣ: ಸಂಸತ್ತಿನಲ್ಲಿ ಭಾವುಕರಾದ ಖರ್ಗೆ, ಬಿಜೆಪಿಗೆ ಶೇಮ್ ಶೇಮ್ ಸ್ಲೋಗನ್ ಚಾಟಿಯೇಟು!

ದಲಿತನೆಂಬ ಕಾರಣಕ್ಕೆ ವೇದಿಕೆಯನ್ನು ಗಂಗಾಜಲದಿಂದ ಶುದ್ಧೀಕರಣ: ಸಂಸತ್ತಿನಲ್ಲಿ ಭಾವುಕರಾದ ಖರ್ಗೆ, ಬಿಜೆಪಿಗೆ ಶೇಮ್ ಶೇಮ್ ಸ್ಲೋಗನ್ ಚಾಟಿಯೇಟು!

August 14, 2026
ಅತಿಯಾದ ಮೊಬೈಲ್ ಬಳಕೆಯಿಂದ ಕುತ್ತಿಗೆ ಸಮಸ್ಯೆ;  ಶಸ್ತ್ರಚಿಕಿತ್ಸೆ ಬಳಿಕ ನಟಿ ಶಕೀಲಾ ಎಚ್ಚರಿಕೆ

ಅತಿಯಾದ ಮೊಬೈಲ್ ಬಳಕೆಯಿಂದ ಕುತ್ತಿಗೆ ಸಮಸ್ಯೆ; ಶಸ್ತ್ರಚಿಕಿತ್ಸೆ ಬಳಿಕ ನಟಿ ಶಕೀಲಾ ಎಚ್ಚರಿಕೆ

August 14, 2026

ಬಿಡದಿಯ ಭೂಮಿ ವಿಚಾರವಾಗಿ ಪ್ರತಿಪಕ್ಷಗಳು ಸದನದಲ್ಲಿ ವಿಷಯ ಪ್ರಸ್ತಾಪಿಸಲು ಸಿದ್ಧತೆ ನಡೆಸಿರುವುದನ್ನು ಟೀಕಿಸಿದ ಪ್ರದೀಪ್ ಈಶ್ವರ್, ನಾಳೆಯಿಂದ ವಿಧಾನಮಂಡಲದ ಕಲಾಪದಲ್ಲಿ ‘ಬಿಡದಿ ನಾಟಕ’ ಆರಂಭವಾಗಲಿದೆ. ಈ ನಾಟಕಕ್ಕೆ ಮುಖ್ಯ ಪಾತ್ರಧಾರಿ ಹಾಗೂ ಕಥಾನಾಯಕ ಬೇರೆ ಯಾರೂ ಅಲ್ಲ, ಸ್ವತಃ ಎಚ್.ಡಿ. ಕುಮಾರಸ್ವಾಮಿ ಅವರೇ. ಇನ್ನು ಹಿನ್ನೆಲೆಯಲ್ಲಿ ಕುತಂತ್ರ ನಡೆಸುವ ‘ಶಕುನಿ’ ಪಾತ್ರವನ್ನು ಬಿಜೆಪಿ ನಾಯಕ ಆರ್. ಅಶೋಕ್ ನಿರ್ವಹಿಸಲಿದ್ದಾರೆ. ಮಹಾಭಾರತದ ‘ದುಶ್ಯಾಸನ’ನ ಪಾತ್ರಕ್ಕೆ ಎಂಎಲ್‌ಸಿ ರವಿಕುಮಾರ್ ಅಥವಾ ಛಲವಾದಿ ನಾರಾಯಣಸ್ವಾಮಿ ಬರಲಿದ್ದಾರೆ ಎಂದು ಪ್ರದೀಪ್ ಈಶ್ವರ್ ಪಾತ್ರಗಳನ್ನು ಹಂಚಿ ಹಾಸ್ಯಾಸ್ಪದವಾಗಿ ಟೀಕಿಸಿದ್ದಾರೆ.

ಈ ಇಡೀ ನಾಟಕದ ರಂಗಸಜ್ಜಿಕೆಯು ನಿಖಿಲ್ ಕುಮಾರಸ್ವಾಮಿ ಅವರಿಗೆ ಸೇರಿದ 35 ಎಕರೆ ಜಮೀನಿನ ಅಂಗಳದಲ್ಲೇ ನಡೆಯಲಿದೆ ಎಂದು ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರ ಕೈಗಡಿಯಾರದ ವಿಚಾರವನ್ನು ಎಳೆದುತಂದ ಶಾಸಕರು, ಸಮಯ ನನ್ನ ವಾಚ್‌ನಲ್ಲಿ 75 ಲಕ್ಷ ರೂಪಾಯಿ ತೋರಿಸಬಹುದು, ಆದರೆ ಕುಮಾರಣ್ಣ ಹಾಕುವ ಸಿಂಪಲ್ ವಾಚ್‌ನಲ್ಲಿ ಸರಿಯಾದ ಸಮಯ ತೋರಿಸುತ್ತದೆ. ಹಾಗಾಗಿ ಈ ನಾಟಕ ಯಾವ ಸಮಯಕ್ಕೆ ಆರಂಭವಾಗಬೇಕು ಎಂಬುದನ್ನು ಕುಮಾರಸ್ವಾಮಿ ಅವರೇ ತಮ್ಮ ಸಿಂಪಲ್ ವಾಚ್ ನೋಡಿ ನಿಗದಿ ಮಾಡಲಿ ಎಂದು ಸವಾಲು ಎಸೆದಿದ್ದಾರೆ.

ಬಿಡದಿ ಟೌನ್‌ಶಿಪ್ ಮತ್ತು ಜಮೀನಿನ ವಿಚಾರವು ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕಲಾಪದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ ಪ್ಲಾನ್ ಮಾಡಿದೆ. ಆದರೆ ಕಲಾಪ ನಡುವೆ ಪ್ರದೀಪ್ ಈಶ್ವರ್ ಅವರು ಪ್ರತಿಪಕ್ಷ ನಾಯಕರನ್ನೇ ನಾಟಕದ ಪಾತ್ರಧಾರಿಗಳನ್ನಾಗಿ ಮಾಡಿ ದಾಳಿ ನಡೆಸಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಬಿಡದಿ ವಿಷಯ ಕಲಾಪಕ್ಕೆ ಬರುತ್ತಿದ್ದಂತೆ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ಮತ್ತು ಭಾರಿ ಗದ್ದಲ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ShareTweetSendShare
Join us on:

Related Posts

ದಲಿತನೆಂಬ ಕಾರಣಕ್ಕೆ ವೇದಿಕೆಯನ್ನು ಗಂಗಾಜಲದಿಂದ ಶುದ್ಧೀಕರಣ: ಸಂಸತ್ತಿನಲ್ಲಿ ಭಾವುಕರಾದ ಖರ್ಗೆ, ಬಿಜೆಪಿಗೆ ಶೇಮ್ ಶೇಮ್ ಸ್ಲೋಗನ್ ಚಾಟಿಯೇಟು!

ದಲಿತನೆಂಬ ಕಾರಣಕ್ಕೆ ವೇದಿಕೆಯನ್ನು ಗಂಗಾಜಲದಿಂದ ಶುದ್ಧೀಕರಣ: ಸಂಸತ್ತಿನಲ್ಲಿ ಭಾವುಕರಾದ ಖರ್ಗೆ, ಬಿಜೆಪಿಗೆ ಶೇಮ್ ಶೇಮ್ ಸ್ಲೋಗನ್ ಚಾಟಿಯೇಟು!

by Shwetha
August 14, 2026
0

ನವದೆಹಲಿ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿ ತೆರಳಿದ ನಂತರ, ಆ...

ಅತಿಯಾದ ಮೊಬೈಲ್ ಬಳಕೆಯಿಂದ ಕುತ್ತಿಗೆ ಸಮಸ್ಯೆ;  ಶಸ್ತ್ರಚಿಕಿತ್ಸೆ ಬಳಿಕ ನಟಿ ಶಕೀಲಾ ಎಚ್ಚರಿಕೆ

ಅತಿಯಾದ ಮೊಬೈಲ್ ಬಳಕೆಯಿಂದ ಕುತ್ತಿಗೆ ಸಮಸ್ಯೆ; ಶಸ್ತ್ರಚಿಕಿತ್ಸೆ ಬಳಿಕ ನಟಿ ಶಕೀಲಾ ಎಚ್ಚರಿಕೆ

by Shwetha
August 14, 2026
0

ಅತಿಯಾದ ಮೊಬೈಲ್ ಬಳಕೆ ಹಾಗೂ ಗಂಟೆಗಟ್ಟಲೆ ಗೇಮ್ಸ್ ಮತ್ತು ವಿಡಿಯೋ ವೀಕ್ಷಿಸುವ ಅಭ್ಯಾಸದಿಂದ ತೀವ್ರ ಕುತ್ತಿಗೆ ನೋವಿಗೆ ಒಳಗಾಗಿದ್ದು, ಇತ್ತೀಚೆಗೆ ₹3 ಲಕ್ಷ ವೆಚ್ಚದಲ್ಲಿ ಪ್ರಮುಖ ಕುತ್ತಿಗೆ...

‘ವಾಲ್ಮೀಕಿ ಸಮುದಾಯದ ಬಗ್ಗೆ ಗೌರವವಿದ್ದರೆ ನಾಗೇಂದ್ರ ರಾಜೀನಾಮೆ ನೀಡಲಿ’: ವಿಜಯೇಂದ್ರ

‘ವಾಲ್ಮೀಕಿ ಸಮುದಾಯದ ಬಗ್ಗೆ ಗೌರವವಿದ್ದರೆ ನಾಗೇಂದ್ರ ರಾಜೀನಾಮೆ ನೀಡಲಿ’: ವಿಜಯೇಂದ್ರ

by Shwetha
August 14, 2026
0

ವಾಲ್ಮೀಕಿ ಸಮುದಾಯದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ....

ಕಟ್ಟಿದ ಮನೆಗೆ ಬಂದು ಅಧಿಕಾರ ಉಂಡು ಹೊರಟರೆ ಹೇಗೆ:ಎಂದರೆ ಸಿದ್ಧವಾದ ಮನೆ, ಅಧಿಕಾರ ಮುಗಿದ ಮೇಲೆ ಜಾರಿಕೊಳ್ಳಬೇಡಿ- ಸಿದ್ದರಾಮಯ್ಯಗೆ ರಮೇಶ್ ಕುಮಾರ್  ಟಾಂಗ್!

ಕಟ್ಟಿದ ಮನೆಗೆ ಬಂದು ಅಧಿಕಾರ ಉಂಡು ಹೊರಟರೆ ಹೇಗೆ:ಎಂದರೆ ಸಿದ್ಧವಾದ ಮನೆ, ಅಧಿಕಾರ ಮುಗಿದ ಮೇಲೆ ಜಾರಿಕೊಳ್ಳಬೇಡಿ- ಸಿದ್ದರಾಮಯ್ಯಗೆ ರಮೇಶ್ ಕುಮಾರ್ ಟಾಂಗ್!

by Shwetha
August 14, 2026
0

ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ರಾಜ್ಯದಲ್ಲಿ ಪ್ರಸ್ತುತ ರಾಜಕೀಯ ವಾತಾವರಣ ಸರಿಯಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಅಂಗಳದಲ್ಲೇ ತೀವ್ರ ವಿರೋಧ...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 14, 2026
0

ದಿನ ಭವಿಷ್ಯ: 14-08-2026. ಮೇಷ ರಾಶಿ ಸಾಮಾನ್ಯ ಫಲ: ಇಂದು ನಿಮಗೆ ಉತ್ಸಾಹಭರಿತ ದಿನವಾಗಿರುತ್ತದೆ. ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಆತ್ಮವಿಶ್ವಾಸ ಎದ್ದು ಕಾಣುತ್ತದೆ ಮತ್ತು ನಿಮ್ಮ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram