ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕರ್ನಾಟಕ ನಾಗರಿಕ ಸೇವೆಗಳ ತಿದ್ದುಪಡಿ ನಿಯಮಗಳು-2026ರ ಕರಡು ಅಧಿಸೂಚನೆಯನ್ನು ಗ್ಯಾಜೆಟ್ನಲ್ಲಿ ಪ್ರಕಟಿಸಿದೆ.
ಇನ್ಮುಂದೆ ನೆಗೆಟಿವ್ ಮಾರ್ಕಿಂಗ್
ಹೊಸ ಕರಡು ನಿಯಮದ ಪ್ರಕಾರ, FDA ಮತ್ತು SDA ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಲ್ಲೂ ನೆಗೆಟಿವ್ ಮಾರ್ಕಿಂಗ್ ಜಾರಿಗೆ ಬರಲಿದೆ.
ಅಭ್ಯರ್ಥಿಗಳು ನೀಡುವ ಪ್ರತಿಯೊಂದು ತಪ್ಪು ಉತ್ತರಕ್ಕೆ ಆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ 1/4 ಭಾಗವನ್ನು ಕಡಿತಗೊಳಿಸಲಾಗುತ್ತದೆ.
ಈ ಹಿಂದಿನ FDA-SDA ನೇಮಕಾತಿ ಪರೀಕ್ಷೆಗಳಲ್ಲಿ ಇಂತಹ ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಹೊಸ ನಿಯಮವು ಪರೀಕ್ಷಾರ್ಥಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಮೆರಿಟ್ಗೆ ಕನಿಷ್ಠ 35% ಅಂಕ ಕಡ್ಡಾಯ
ಇದರ ಜೊತೆಗೆ, ಅಭ್ಯರ್ಥಿಗಳು ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕನಿಷ್ಠ ಶೇ.35ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯ ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
ಹೀಗಾಗಿ ಮುಂದಿನ FDA-SDA ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಊಹೆ ಆಧಾರದಲ್ಲಿ ಉತ್ತರಿಸುವುದಕ್ಕಿಂತ ನಿಖರವಾದ ಉತ್ತರಗಳ ಮೇಲೆ ಹೆಚ್ಚಿನ ಗಮನಹರಿಸುವುದು ಮುಖ್ಯವಾಗಲಿದೆ.
ಗಮನಿಸಿ: ಇದು ಸದ್ಯ ಕರಡು ನಿಯಮವಾಗಿದ್ದು, ಅಂತಿಮ ಅಧಿಸೂಚನೆ ಹೊರಬಂದ ಬಳಿಕವೇ ನಿಯಮಗಳು ಅಧಿಕೃತವಾಗಿ ಜಾರಿಗೆ ಬರಲಿವೆ.








