ADVERTISEMENT
Sunday, August 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ರಾಮ್‌ದೇವ್‌ ಈಗ ವಿದೇಶಿ ಚಡ್ಡಿ ಮಾರುತ್ತಿದ್ದಾರೆ:ಧಮ್ ಇದ್ದರೆ ಬೀದಿಗೆ ಬಂದು‌ ಗಂಡಸಿನಂತೆ ಹೋರಾಡಿ ಎಂದ ಬ್ರಿಜ್‌ಭೂಷಣ್‌

Shwetha by Shwetha
August 23, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಗೋಂಡಾ: ಯೋಗಗುರು ಬಾಬಾ ರಾಮ್‌ದೇವ್‌ ಅವರ ಸ್ವದೇಶಿ ಬ್ರ್ಯಾಂಡ್‌ ಮತ್ತು ಇತ್ತೀಚಿನ ಹೋರಾಟದ ಎಚ್ಚರಿಕೆಯ ವಿರುದ್ಧ ಬಿಜೆಪಿ ಮಾಜಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮ್‌ದೇವ್‌ ಆರಂಭಿಸಿದ ಸ್ವದೇಶಿ ಚಳವಳಿ ಈಗ ಹಾದಿ ತಪ್ಪಿದ್ದು, ಅವರು ವಿದೇಶಿ ಒಳಉಡುಪುಗಳನ್ನು ಮಾರಾಟ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ವಾಕ್ಸಮರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಸ್ವದೇಶಿ ಹೆಸರಲ್ಲಿ ನಕಲಿ ಉತ್ಪನ್ನಗಳ ದಂಧೆ

Related posts

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

August 23, 2026
ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

August 23, 2026

ಗೋಂಡಾ ಜಿಲ್ಲೆಯ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಜ್‌ಭೂಷಣ್‌ ಸಿಂಗ್‌, ರಾಮ್‌ದೇವ್‌ ಅವರ ಉತ್ಪನ್ನಗಳ ಗುಣಮಟ್ಟವನ್ನು ಪ್ರಶ್ನಿಸಿದರು. ಆರಂಭದಲ್ಲಿ ದೇಶಿ ಉತ್ಪನ್ನಗಳ ಪರವಾಗಿ ಧ್ವನಿ ಎತ್ತಿದ್ದಾಗ ರಾಮ್‌ದೇವ್‌ ಅವರ ಹೋರಾಟಕ್ಕೆ ಬೆಂಬಲವಿತ್ತು. ಆದರೆ ಈಗ ಅವರ ಉದ್ದೇಶ ಬದಲಾಗಿದೆ. ನಕಲಿ ಉತ್ಪನ್ನಗಳು ಮತ್ತು ವಿದೇಶಿ ಶೈಲಿಯ ಒಳಉಡುಪುಗಳನ್ನೂ ಸ್ವದೇಶಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗಂಡಸಿನಂತೆ ಬೀದಿಗೆ ಬಂದು ಹೋರಾಡಿ

ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದ ರಾಮ್‌ದೇವ್‌ ಅವರಿಗೆ ಬ್ರಿಜ್‌ಭೂಷಣ್‌ ನೇರ ಸವಾಲು ಎಸೆದಿದ್ದಾರೆ. ರಾಮ್‌ದೇವ್‌ ಅವರಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಕೇವಲ ಹೇಳಿಕೆಗಳಿಗೆ ಸೀಮಿತವಾಗಬಾರದು. ಗಂಡಸಿನಂತೆ ಬೀದಿಗೆ ಬಂದು ನಿರ್ಣಾಯಕ ಹೋರಾಟ ನಡೆಸಲಿ. ಆಗ ಅವರ ಅಸಲಿ ಶಕ್ತಿ ಏನೆಂಬುದು ತಿಳಿಯುತ್ತದೆ ಎಂದು ಕಿಡಿಕಾರಿದ್ದಾರೆ. ರಾಮ್‌ದೇವ್‌ ಅವರ ಪ್ರತಿಭಟನಾ ಬೆದರಿಕೆಯನ್ನು ಬ್ರಿಜ್‌ಭೂಷಣ್‌ ಗಂಭೀರವಾಗಿ ಪರಿಗಣಿಸದೆ ಲೇವಡಿ ಮಾಡಿದ್ದಾರೆ.

ಕೇಂದ್ರಕ್ಕೆ ರಾಮ್‌ದೇವ್‌ ಎಚ್ಚರಿಕೆ ನೀಡಿದ್ದೇನು?

ದೇಶದ ಶಿಕ್ಷಣ ಮತ್ತು ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದ ಬಾಬಾ ರಾಮ್‌ದೇವ್‌, ಕೂಡಲೇ ಈ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ತಾನು ಪ್ರತಿಭಟನೆ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಶಾಲೆಗಳಲ್ಲಿ ಕುಡಿಯುವ ನೀರು, ವಿದ್ಯುತ್ ಮತ್ತು ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಯುವಕರು ಉದ್ಯೋಗಕ್ಕಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಸರ್ಕಾರ ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು.

ಬಿಜೆಪಿ ನಾಯಕರ ಸರಣಿ ಟೀಕೆ

ಕೇವಲ ಬ್ರಿಜ್‌ಭೂಷಣ್‌ ಮಾತ್ರವಲ್ಲದೆ, ಇತ್ತೀಚೆಗೆ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಕೂಡ ಬಾಬಾ ರಾಮ್‌ದೇವ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಯೋಗಗುರು ಮತ್ತು ಬಿಜೆಪಿ ನಾಯಕರ ನಡುವಿನ ಈ ಬಹಿರಂಗ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಒಂದು ಕಾಲದಲ್ಲಿ ಸರ್ಕಾರದ ಪರವಾಗಿದ್ದ ರಾಮ್‌ದೇವ್‌, ಈಗ ಭ್ರಷ್ಟಾಚಾರದ ಹೆಸರಿನಲ್ಲಿ ಸರ್ಕಾರವನ್ನೇ ಪ್ರಶ್ನಿಸುತ್ತಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ರಾಮ್‌ದೇವ್‌ ಅವರ ಮುಂದಿನ ನಡೆ ಮತ್ತು ಬ್ರಿಜ್‌ಭೂಷಣ್‌ ಅವರ ಈ ಟೀಕೆಗೆ ಯೋಗಗುರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ShareTweetSendShare
Join us on:

Related Posts

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

by Shwetha
August 23, 2026
0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವುದು...

ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

ಪೊಲೀಸ್ ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕಿದೆ? ಅಮಿತ್ ಶಾ ನಿಮ್ಮ ಇಲಾಖೆ ನಡೆಸುತ್ತಿದ್ದಾರೆಯೇ? ದೆಹಲಿ ಪೊಲೀಸರನ್ನು ಬೆವರಿಳಿಸಿದ ರಾಹುಲ್ ಗಾಂಧಿ ಅವರ ಆಕ್ರೋಶದ ವಿಡಿಯೊ ವೈರಲ್

by Shwetha
August 23, 2026
0

ನವದೆಹಲಿ: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಪ್ರದರ್ಶಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಪ್ರಶ್ನಿಸಿದ್ದಾರೆ....

ಹಾವೇರಿಯಲ್ಲಿ ದುಷ್ಕರ್ಮಿಯ ಅಟ್ಟಹಾಸ: ಆಂಜನೇಯ ಸ್ವಾಮಿ ದೇವಸ್ಥಾನದಲ್ಲೇ ಮೂತ್ರ ವಿಸರ್ಜನೆ ಮಾಡಿದ ಮಹಮದ್ ಜಾಫರ್ ಬಂಧನ

ಹಾವೇರಿಯಲ್ಲಿ ದುಷ್ಕರ್ಮಿಯ ಅಟ್ಟಹಾಸ: ಆಂಜನೇಯ ಸ್ವಾಮಿ ದೇವಸ್ಥಾನದಲ್ಲೇ ಮೂತ್ರ ವಿಸರ್ಜನೆ ಮಾಡಿದ ಮಹಮದ್ ಜಾಫರ್ ಬಂಧನ

by Shwetha
August 23, 2026
0

ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಅಮಾನವೀಯ ಹಾಗೂ ಧರ್ಮನಿಂದನೆಯ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಗರ್ಭಗುಡಿಯ ಎದುರೇ ಮೂತ್ರ ವಿಸರ್ಜನೆ ಮಾಡಿ ಉದ್ಧಟತನ ತೋರಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ....

ಜಾತಿ ಬೇಡ, ಆರ್ಥಿಕ ಸ್ಥಿತಿ ನೋಡಿ ಮೀಸಲಾತಿ ನೀಡಿ: ದೆಹಲಿಯಲ್ಲಿ ಭುಗಿಲೆದ್ದ ಮೀಸಲಾತಿ ಹಟಾವೋ ಆಂದೋಲನ -ಮೋದಿ ಸರ್ಕಾರಕ್ಕೆ ಹೊಸ ಸಂಕಷ್ಟ

ಜಾತಿ ಬೇಡ, ಆರ್ಥಿಕ ಸ್ಥಿತಿ ನೋಡಿ ಮೀಸಲಾತಿ ನೀಡಿ: ದೆಹಲಿಯಲ್ಲಿ ಭುಗಿಲೆದ್ದ ಮೀಸಲಾತಿ ಹಟಾವೋ ಆಂದೋಲನ -ಮೋದಿ ಸರ್ಕಾರಕ್ಕೆ ಹೊಸ ಸಂಕಷ್ಟ

by Shwetha
August 23, 2026
0

ನವದೆಹಲಿ: ದೇಶದ ರಾಜಧಾನಿ ನವದೆಹಲಿಯ ಹೃದಯಭಾಗವಾದ ಜಂತರ್ ಮಂತರ್ ಈಗ ಹೊಸದೊಂದು ಬೃಹತ್ ಚಳವಳಿಗೆ ಸಾಕ್ಷಿಯಾಗಿದೆ. ಕೇವಲ ಸಾಮಾಜಿಕ ಜಾಲತಾಣದ ಹ್ಯಾಷ್‌ಟ್ಯಾಗ್‌ಗಳಿಗೆ ಸೀಮಿತವಾಗಿದ್ದ ಮೀಸಲಾತಿ ವಿರೋಧಿ ಧ್ವನಿ,...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (23-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 23, 2026
0

ದಿನ ಭವಿಷ್ಯ: 23-08-2026. 1. ಮೇಷ ರಾಶಿ ಉದ್ಯೋಗ ಮತ್ತು ಹಣಕಾಸು: ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ನಾಯಕತ್ವದ ಗುಣಗಳು ಎದ್ದು ಕಾಣಲಿವೆ. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ಆರ್ಥಿಕವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram