ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬೆಲ್‌ ಬಾಟಮ್ʼ ನಿರ್ಮಾಪಕರ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಡಬ್ಬಿಂಗ್ ಪೂರ್ಣ; ಬಿಡುಗಡೆಗೆ ಸಜ್ಜಾಗುತ್ತಿದೆ ಉತ್ತರ ಕರ್ನಾಟಕ ಸೊಗಡಿನ ಸಿನಿಮಾ!

admin by admin
August 26, 2026
in Cinema, Newsbeat, ಮನರಂಜನೆ
saakshatv.com/bell-bottom-producers-hubballi-hunters-dubbing-completed/

saakshatv.com/bell-bottom-producers-hubballi-hunters-dubbing-completed/

Share on FacebookShare on TwitterShare on WhatsappShare on Telegram

ಬೆಂಗಳೂರು: ರಿಷಬ್‌ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ ‘ಬೆಲ್ ಬಾಟಮ್’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ‘ಗೋಲ್ಡನ್ ಹಾರ್ಸ್ ಸಿನಿಮಾ’ ಬ್ಯಾನರ್‌ನಡಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣವು ಜುಲೈ ತಿಂಗಳ ಆರಂಭದಲ್ಲೇ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಚಿತ್ರದ ಡಬ್ಬಿಂಗ್ ಕೆಲಸಗಳು ಕೂಡ ಪೂರ್ಣಗೊಂಡಿವೆ. ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಪಕ್ಕಾ ಉತ್ತರ ಕರ್ನಾಟಕದ ಸೊಗಡನ್ನು ಒಳಗೊಂಡಿರುವ ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ಹುಬ್ಬಳ್ಳಿಯಲ್ಲೇ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡು ಶೂಟಿಂಗ್ ಆರಂಭಿಸಿತ್ತು. ಚಿತ್ರತಂಡವು ಮೊದಲ ಹಂತದಲ್ಲಿ 14 ದಿನಗಳ ಕಾಲ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ, ನಂತರ ಶಿರಸಿಯಲ್ಲಿ 22 ದಿನಗಳು ಹಾಗೂ ಧಾರವಾಡದಲ್ಲಿ 2 ದಿನಗಳ ಕಾಲ ಚಿತ್ರೀಕರಣ ನಡೆಸಿ ಒಟ್ಟಾರೆ ಶೂಟಿಂಗ್‌ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸಿದೆ. ಸ್ಥಳೀಯ ಪರಿಸರ ಹಾಗೂ ಕಥೆಯ ನೈಜತೆಗೆ ತಕ್ಕಂತೆ ನೈಜ ತಾಣಗಳಲ್ಲೇ ಚಿತ್ರೀಕರಣ ನಡೆಸಿರುವುದು ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.

Related posts

saakshatv.com/nagabhushana-new-movie-announced-on-birthday-kasturi-talkies

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; 90ರ ದಶಕದ ಫ್ಯಾಮಿಲಿ ಡ್ರಾಮಾದಲ್ಲಿ ‘ಟಗರು ಪಲ್ಯ’ ಹೀರೋ

August 26, 2026
saakshatv.com/sai-durga-tej-sambarala-yeti-gattu-shooting-completed-release-date-announced

ಸಾಯಿ ದುರ್ಗಾ ತೇಜ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಾಲ ಯೇಟಿ ಗಟ್ಟು’ ಶೂಟಿಂಗ್ ಕಂಪ್ಲೀಟ್; 2027ರ ಸಂಕ್ರಾಂತಿಗೆ ರಿಲೀಸ್

August 26, 2026

ಚೇತನ್ ಮಾರಂಬೀಡ್, ಪವನ್ ಕುಲಕರ್ಣಿ, ಸುಮಿತ್ ಸಂಕೋಜಿ, ನಮನ್ ಅರೋರ, ದೀಪಕ್ ರಾವ್, ಶಿವು ಗುಂಡಣ್ಣನವರ್, ವಿನಯ್ ದೊಡ್ಡಮನಿ, ಧನ್ಯ ಸುಜೀತ್, ಪವನ್ ಅಣ್ಣೆಗೇರಿ ಇವರೊಂದಿಗೆ ‘ಮಹಾನಟಿ’ ರಿಯಾಲಿಟಿ ಶೋ ಖ್ಯಾತಿಯ ಧನ್ಯಶ್ರೀ ಸುಜಿತ್ ಮತ್ತು ವನು ಪಾಟೀಲ್, ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟರಾದ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತು ಕೃಷ್ಣ ಹೆಬ್ಬಾಳೆ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬಹುತೇಕ ಸೋಷಿಯಲ್ ಮೀಡಿಯಾದ ಜನಪ್ರಿಯ ಕಂಟೆಂಟ್‌ ಕ್ರಿಯೇಟರ್ಸ್‌ ಕೂಡ ಬಣ್ಣ ಹಚ್ಚಿರುವುದು ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಅವರೊಂದಿಗೆ ಸೇರಿ ಸಂಭಾಷಣೆ ರಚಿಸಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಹಾಗೂ ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನವಿದ್ದು, ಸದ್ಯದಲ್ಲೇ ಚಿತ್ರತಂಡ ತೆರೆಯ ಮೇಲೆ ಬರಲು ಸಿದ್ಧತೆ ನಡೆಸುತ್ತಿದೆ.

Tags: #HubballiHunters #KannadaCinema #BellBottom #SamarthBKadakol #GoldenHorseCinema #Sandalwood #SaakshaTV
ShareTweetSendShare
Join us on:

Related Posts

saakshatv.com/nagabhushana-new-movie-announced-on-birthday-kasturi-talkies

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; 90ರ ದಶಕದ ಫ್ಯಾಮಿಲಿ ಡ್ರಾಮಾದಲ್ಲಿ ‘ಟಗರು ಪಲ್ಯ’ ಹೀರೋ

by admin
August 26, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, 'ಟಗರು ಪಲ್ಯ' ಖ್ಯಾತಿಯ ನಾಗಭೂಷಣ್ ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ...

saakshatv.com/sai-durga-tej-sambarala-yeti-gattu-shooting-completed-release-date-announced

ಸಾಯಿ ದುರ್ಗಾ ತೇಜ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಾಲ ಯೇಟಿ ಗಟ್ಟು’ ಶೂಟಿಂಗ್ ಕಂಪ್ಲೀಟ್; 2027ರ ಸಂಕ್ರಾಂತಿಗೆ ರಿಲೀಸ್

by admin
August 26, 2026
0

ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆ್ಯಕ್ಷನ್-ಡ್ರಾಮಾ 'ಸಂಬರಾಲ ಯೇಟಿ ಗಟ್ಟು' (SYG) ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರತಿಷ್ಠಿತ...

saakshatv.com/prasanth-varma-pvcu-mahakali-shukracharya-glimpse-released

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ‘ಮಹಾಕಾಳಿ’ ಚಿತ್ರದ ‘ಶುಕ್ರಚಾರ್ಯ’ ಗ್ಲಿಂಪ್ಸ್ ಬಿಡುಗಡೆ: 2027ರ ಜನವರಿ 8ಕ್ಕೆ ಗ್ರ್ಯಾಂಡ್ ರಿಲೀಸ್

by admin
August 26, 2026
0

'ಹನು-ಮಾನ್' ಸಿನಿಮಾದ ಜಾಗತಿಕ ಯಶಸ್ಸಿನ ನಂತರ ಕ್ರಿಯೇಟಿವ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರ 'ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್' (PVCU) ಅಡಿಯಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಪೌರಾಣಿಕ...

saakshatv.com/akshay-kumar-saif-ali-khan-haikwan-movie-trailer-released

ಬಾಲಿವುಡ್‌ನಲ್ಲಿ ಹೈ-ವೋಲ್ಟೇಜ್ ಮುಖಾಮುಖಿ: ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್ – ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್

by admin
August 26, 2026
0

ಬಾಲಿವುಡ್‌ನ ಬಹುನಿರೀಕ್ಷಿತ ಥ್ರಿಲ್ಲರ್ ಸಿನಿಮಾ ‘ಹೈವಾನ್’ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟೀಸರ್ ಬಿಡುಗಡೆಯಾದಾಗಿನಿಂದಲೂ ಸೃಷ್ಟಿಯಾಗಿದ್ದ ಭಾರೀ ಕುತೂಹಲಕ್ಕೆ ಈ...

saakshatv.com/kolhapur-mahalakshmi-ambabai-temple-history-and-significance

ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ: ಶಕ್ತಿ ಪೀಠಗಳ ಪೈಕಿ ಪ್ರಸಿದ್ಧ ಪುಣ್ಯಕ್ಷೇತ್ರ

by admin
August 26, 2026
0

ಮಹಾರಾಷ್ಟ್ರದ ಅತ್ಯಂತ ಸನಾತನ ನಗರ ಕೊಲ್ಹಾಪುರ. ಇಲ್ಲಿ ಶಕ್ತಿಯುತವಾದ ವೈಶಿಷ್ಟ ಪೂರ್ಣ ದೇವಾಲಯಗಳು ಇವೆ. ಪುಣ್ಯಕ್ಷೇತ್ರವಾದ ಹಾಗೂ ಪ್ರವಾಸಿ ಕೇಂದ್ರವಾದ ಕೊಲ್ಹಾಪುರದ ಹೃದಯ ಭಾಗ ಪಂಚಗಂಗಾ ನದಿಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram