ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ: ಶಕ್ತಿ ಪೀಠಗಳ ಪೈಕಿ ಪ್ರಸಿದ್ಧ ಪುಣ್ಯಕ್ಷೇತ್ರ

admin by admin
August 26, 2026
in Astrology, Newsbeat, Uncategorized, ಜ್ಯೋತಿಷ್ಯ
saakshatv.com/kolhapur-mahalakshmi-ambabai-temple-history-and-significance

saakshatv.com/kolhapur-mahalakshmi-ambabai-temple-history-and-significance

Share on FacebookShare on TwitterShare on WhatsappShare on Telegram

ಮಹಾರಾಷ್ಟ್ರದ ಅತ್ಯಂತ ಸನಾತನ ನಗರ ಕೊಲ್ಹಾಪುರ. ಇಲ್ಲಿ ಶಕ್ತಿಯುತವಾದ ವೈಶಿಷ್ಟ ಪೂರ್ಣ ದೇವಾಲಯಗಳು ಇವೆ. ಪುಣ್ಯಕ್ಷೇತ್ರವಾದ ಹಾಗೂ ಪ್ರವಾಸಿ ಕೇಂದ್ರವಾದ ಕೊಲ್ಹಾಪುರದ ಹೃದಯ ಭಾಗ ಪಂಚಗಂಗಾ ನದಿಯ ದಡದಲ್ಲಿ
ರುವ ಪ್ರಸಿದ್ಧ ದೇವಸ್ಥಾನದಲ್ಲಿ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ನೆಲೆಸಿದ್ದು, ಲಕ್ಷ್ಮಿಗೆ ಸಮರ್ಪಿತ ವಾದ ಹಿಂದೂ ದೇವಾಲಯವಾಗಿದೆ. ಇದು 51 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿ ಪುರಾಣ ಪ್ರಸಿದ್ಧ ಅದ್ಭುತ ದೇವಸ್ಥಾನ ಎಂಬ ಪ್ರಖ್ಯಾತಿ ಪಡೆದಿದೆ. ಹಿಂದೆ ದಕ್ಷ ಪುತ್ರಿ ದಾಕ್ಷಾಯಿಣಿ ಅವಮಾನದಿಂದ ಯಜ್ಞದಲ್ಲಿ ಬಲಿಯಾದಳು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

Related posts

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ‘ಮಹಾಕಾಳಿ’ ಚಿತ್ರದ ‘ಶುಕ್ರಚಾರ್ಯ’ ಗ್ಲಿಂಪ್ಸ್ ಬಿಡುಗಡೆ: 2027ರ ಜನವರಿ 8ಕ್ಕೆ ಗ್ರ್ಯಾಂಡ್ ರಿಲೀಸ್

August 26, 2026
saakshatv.com/akshay-kumar-saif-ali-khan-haikwan-movie-trailer-released

ಬಾಲಿವುಡ್‌ನಲ್ಲಿ ಹೈ-ವೋಲ್ಟೇಜ್ ಮುಖಾಮುಖಿ: ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್ – ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್

August 26, 2026

ಬಲಿಯಾದ ಸತಿಯ ದೇಹವನ್ನು ಮಹಾವಿಷ್ಣು 51 ಭಾಗವಾಗಿ ತುಂಡರಿಸಿದಾಗ ದೇಹದ (ನಯನ) ಕಣ್ಣುಗಳು ಬಿದ್ದ ಸ್ಥಳವೇ ಕೊಲ್ಲಾಪುರ ಆಗಿರುವುದರಿಂದ ಇದು 18ನೇ ಶಕ್ತಿ ಪೀಠ ವಾಗಿದೆ. ಸ್ಥಳೀಯರು ಮಹಾಲಕ್ಷ್ಮಿ ದೇವಿಯನ್ನು ಪ್ರೀತಿಯಿಂದ “ಅಂಬಾಬಾಯಿ” ಎಂದು ಕರೆದು ಪೂಜಿಸುತ್ತಾರೆ. ಏಕೆಂದರೆ ಮಹಾಲಕ್ಷ್ಮಿಯು ತ್ರಿದೇವಿಯರ ಭಾಗವಾಗಿ, ಮೂರು ಸರ್ವೋಚ್ಛ ದೇವತೆಗಳಾದ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯರ ಸಂಕೇತ ವಾಗಿದ್ದಾಳೆ. ಲಕ್ಷ್ಮಿ ಮಹಾವಿಷ್ಣುವೀನ ಪತ್ನಿಯಾಗಿದ್ದು ಪೋಷಣೆಯಲ್ಲಿ ಪರಮೋಚ್ಚ ದೇವರು ಮತ್ತು ಸಂಪತ್ತು- ಸಮೃದ್ಧಿ ಹಾಗೂ ಫಲವತ್ತತೆಯ ದೇವತೆ ಎಂದು ಪರಿ ಗಣಿಸುತ್ತಾರೆ. ಅಂಬಾಬಾಯಿ ದೇವಸ್ಥಾನ ಎಂದು ಕರೆಯುವ ಈ ಪೂಜಾ ಸ್ಥಳವೂ ಮಹಾರಾಷ್ಟ್ರ ರಾಜ್ಯದ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಶಕ್ತಿಪೀಠಗಳಲ್ಲೇ ಪವಿತ್ರ ಶಕ್ತಿಪೀಠವಾಗಿದೆ. ಕೊಲ್ಲಾಪುರ ಪೀಠವನ್ನು “ದಕ್ಷಿಣ ಕಾಶಿ” ಎಂದು ಸಹ ಉಲ್ಲೇಖಿಸಲಾಗಿದೆ.

ಎಲ್ಲವೂ ಕಾರ್ಯಕಾರಣಕ್ಕಾಗಿ ನಡೆದಿರುತ್ತದೆ. ದಂತ ಕಥೆಯಂತೆ ಕೊಲ್ಲಾಪುರದಲ್ಲಿ ಕೊಲ್ಹಾಸುರ ಎಂಬ ರಾಕ್ಷಸನಿದ್ದ. ಈತ ಕೊಲ್ಲಾಪುರದ ಜನಗಳಿಗೆ ಹಿಂಸೆ ಕೊಡುತ್ತಿದ್ದ
ಊರಿನ ಕೊಳದ ನೀರನ್ನೆಲ್ಲಾ ಕುಡಿದು ಖಾಲಿ ಮಾಡುತ್ತಿದ್ದ. ಇದರಿಂದ ಜನ- ಜಾನು ವಾರು, ಪಶು, ಪಕ್ಷಿಗಳಿಗೆ ನೀರು ಇರುತ್ತಿರಲಿಲ್ಲ. ರಾಕ್ಷಸನ ಕಾಟದಿಂದ ಬೇಸತ್ತ ಜನರು ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿದರು. ಪ್ರಸನ್ನಳಾದ ಪಾರ್ವತಿಯ
ಅಭಿಪ್ರಾಯ ಲಕ್ಷ್ಮಿಗೆ ತಿಳಿಯಿತು. ಅದೇ ಸಂದರ್ಭ ಕಾರಣಗಳಿಂದ ಕೋಪಗೊಂಡ
ವೈಕುಂಠಕ್ಕೆ ಬಂದ ಭೃಗು ಮಹರ್ಷಿಗಳು ಶ್ರೀಹರಿಯ ಎದೆಗೆ ಒದ್ದರು. ಕಾಲಿನಿಂಂದ
ಬಂದಿರುವ ಜಾಗ ಶ್ರೀಹರಿಯ ವಕ್ಷ ಸ್ಥಳವನ್ನು ಒದ್ದ ಕಾರಣ ಅಲ್ಲಿ ನೆಲೆಸಿದ್ದ ಲಕ್ಷ್ಮಿಗೆ ಕೋಪ ಬಂದಿತು. ಇಷ್ಟಾಗಿಯೂ ಶ್ರೀಹರಿ ಭೃಗು ಮಹರ್ಷಿಗಳಿಗೆ ಏನನ್ನು ಹೇಳದೆ, ಆದರದಿಂದ ಸತ್ಕರಿಸಿ ಆತಿಥ್ಯ ಮಾಡಿ ಗೌರವಿಸಿದ ಕಾರಣ ಶ್ರೀಹರಿ ಮೇಲೆ ಮತ್ತ ಷ್ಟು ಕೋಪ ಬಂದು ಲಕ್ಷ್ಮಿ ವೈಕುಂಠವನ್ನು ತೊರೆದು ಭೂಲೋಕಕ್ಕೆ ಬಂದಳು. ಇಲ್ಲಿ ಅನೇಕ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ನಾರಾಯಣನಲ್ಲಿ ಐಕ್ಯವಾದಳು.

ಲಕ್ಷ್ಮಿ ಬಂದ ಪ್ರದೇಶದಲ್ಲಿ ಕರವೀರ ಮಹಾತ್ಮಿಯಾ ಕೊಲ್ಹಾಸುರ ಎಂಬ ಅಸುರನಿ ದ್ದನು. ಅವನನ್ನು ಸಂಹರಿಸಿದ ಲಕ್ಷ್ಮಿ ಈ ಪವಿತ್ರ ಸ್ಥಳವನ್ನು ತನ್ನ ವಾಸಕ್ಕಾಗಿ ತೆಗೆದುಕೊಂಡಳು. ಆ ಕ್ಷಣದಲ್ಲಿ ರಾಕ್ಷಸ ಲಕ್ಷ್ಮಿಯನ್ನು ಪ್ರಾರ್ಥಿಸಿ ಈ ಸ್ಥಳಕ್ಕೆ ನನ್ನ ಹೆಸರನ್ನು ಇಡಬೇಕು ಎಂದು ಕೇಳಿಕೊಂಡ. ಅವನ ಆಸೆಯಂತೆ ಈ ಸ್ಥಳಕ್ಕೆ ಕೊಲ್ಲಾಪುರ ಅಥವಾ ಕರವೀರಪುರ ಎಂಬ ಹೆಸರು ಬಂದಿತು. ಆನಂತರ ಈ ಕ್ಷೇತ್ರವನ್ನು ಕಾಪಾಡಲು ಮಹಾಲಕ್ಷ್ಮಿ ಶಾಶ್ವತವಾಗಿ ಇಲ್ಲೇ ನೆಲೆಸಿ “ಕೊಲ್ಲಾಪುರ” ಮಹಾಲಕ್ಷ್ಮಿಯಾದಳು. ಮುಂದೆ” ಮಹಾಲಕ್ಷ್ಮಿ”ಗೆ ಭವ್ಯ ಮಂದಿರವನ್ನು ನಿರ್ಮಿಸ ಲಾಯಿತು.

ಈ ದೇವಾಲಯವನ್ನು ಹಿಂದೆ ಚಾಲುಕ್ಯರಾಜ ಕರ್ಣದೇವ “ಪಿರಮಿಡ್” ಮಾದರಿ ಯಲ್ಲಿ ನಿರ್ಮಿಸಿದನು. ದೇವಾಲಯದ ಕಂಬಗಳು ಅತ್ಯಂತ ನಿಗೂಢವಾಗಿದ್ದು
ಒಳಗಿನ ಪ್ರಾಂಗಣವು ದೀಪಮಾಲಾಸ್ ಎಂದು ಕರೆಯಲಾಗಿದ್ದು ಆಕರ್ಷಕ ವಾಗಿದೆ. ದೇವಾಲಯದ ಸುತ್ತ ನಾಲ್ಕು ದ್ವಾರಗಳಿದ್ದು ಪಶ್ಚಿಮ ದಿಕ್ಕಿನಲ್ಲಿ ಮುಖ್ಯ ದ್ವಾರವಿದೆ. ಪಶ್ಚಿಮ ದ್ವಾರದ ಮುಂದೆ ಕಲ್ಲಿನ ಮಂಟಪದಲ್ಲಿ ಗಣೇಶ ನೆಲೆಸಿದ್ದಾನೆ. ವಿಶಾಲವಾದ ಪ್ರಾಂಗಾಣದ ನಡುವೆ ಮಹಾಲಕ್ಷ್ಮಿಯ ಗರ್ಭಗುಡಿ ಇದೆ. ಪಶ್ಚಿಮಾ ಭಿಮುಖವಾಗಿ ಲಕ್ಷ್ಮಿ ಭಕ್ತರಿಗೆ ದರ್ಶನ ಕೊಡುತ್ತಾಳೆ. ಗರ್ಭಗುಡಿಯ ಅಕ್ಕ ಪಕ್ಕ ಮಹಾಕಾಳಿ, ಮಹಾ ಸರಸ್ವತಿಯ, ಗುಡಿಗಳಿವೆ. ಒಂದು ಗೋಡೆಯ ಮೇಲೆ “ಶ್ರೀಚಕ್ರ”ಯಂತ್ರವಿದೆ. ಇದನ್ನು ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ಶಂಕರಾಚಾರ್ಯರು ಶ್ರೀಚಕ್ರ ಯಂತ್ರವನ್ನು ಸ್ಥಾಪಿಸಿದ ದೇವಾಲಯಗಳೆಲ್ಲಾ ಪ್ರಸಿದ್ಧಿ ಹೊಂದಿದ್ದು, ಜನರನ್ನು ಆಕರ್ಷಿಸುತ್ತದೆ ಹಾಗೂ ಹಣದ ಹೊಳೆ ಹರಿದು ಬರುತ್ತದೆ ಎಂಬ ನಂಬಿಕೆ ಇದೆ. ತಿರುಪತಿ, ಕೊಲ್ಲೂರು, ಶೃಂಗೇರಿ, ಹೆಬ್ಬೂರು, ತಮಿಳುನಾಡಿನ ಮೀನಾಕ್ಷಿ ದೇವಸ್ಥಾನ, ಶ್ರೀರಂಗಂ, ಇನ್ನು ಮುಂತಾದ ಕಡೆ ಆದಿಗುರು ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪಿಸಿದ್ದು ಈ ಕ್ಷೇತ್ರಗಳು ಧನಾಕರ್ಷಣೆ ಮತ್ತು ಜನಾಕರ್ಷಣೆ ಯಿಂದ ಪ್ರಸಿದ್ಧಿಯಾಗಿದೆ ಎಂಬುದು ಇತಿಹಾಸ.

ಕೊಲ್ಲಾಪುರ ಮಹಾಲಕ್ಷ್ಮಿಯ ವಿಗ್ರಹವು 6,000 ವರ್ಷಗಳಷ್ಟು ಪ್ರಾಚೀನವಾದ ಸುಂದರ ಕಪ್ಪು ಶಿಲೆ ವಿಗ್ರಹ ನಿಂತಿರುವ ಭಂಗಿಯಲ್ಲಿದೆ. ವಿಗ್ರಹದ ತೂಕ 40 ಕೆ. ಜಿ ಇದೆ ಎನ್ನುತ್ತಾರೆ. ಶೇಷನಾಗನ ಚಿತ್ರವಿರುವ ಕಿರೀಟ ಶಿರವನ್ನು ಅಲಂಕರಿಸಿದೆ. ಕೌಮೋದಿನಿ, ಕೇತಕಿ, ರಸಪಾತ್ರ ಧರಿಸಿ ಸಿಂಹಾಸನಾದೀಶ್ವರಿಯಾಗಿ ಅಸಂಖ್ಯಾತ ನೆರಿಗೆಗಳಿರುವ ಸೀರೆ ಉಟ್ಟು ರತ್ನದ ಕಲ್ಲುಗಳು ಮತ್ತು ಆಭರಣಗಳಿಂದ ಸರ್ವಾ ಲಂಕಾರ ಭೂಷಿತಳಾಗಿ ದೇವಿ ಮಹಾಲಕ್ಷ್ಮಿ ಭಕ್ತರಿಗೆ ದರ್ಶನ ಕೊಡುತ್ತಿದ್ದಾಳೆ. ಅವಳ ನಾಲ್ಕು ಕೈಗಳಲ್ಲಿ ದೊಡ್ಡ ಗದೆ, ಗುರಾಣಿ, ಬಟ್ಟಲು ಮತ್ತು ಹಣ್ಣುಗಳನ್ನು ಹಿಡಿದಿದ್ದಾಳೆ. ದೇವಾಲಯದ ವಿಶಾಲವಾದ ಅಂಗಳದಲ್ಲಿ ಸುತ್ತ ದೇವಾಲಯ ಗಳಿಂದ ತುಂಬಿದೆ.

ಇಲ್ಲಿ ನೆಲೆಸಿರುವ ಶಿವನನ್ನು “ಅತಿಬಲೇಶ್ವರ” ಎಂಬ ಹೆಸರಿನಿಂದ ಪೂಜಿಸುತ್ತಾರೆ.
ದೇವಾಲಯದ ಪ್ರಾಕಾರದಲ್ಲಿ ನವಗ್ರಹ, ಸೂರ್ಯದೇವ, ಮಹಿಷಾಸುರ ಮರ್ದಿನಿ, ಭವಾನಿ, ಸರ್ವಮಂಗಳೆ ಮುಂತಾದ ದೇವಾಲಯಗಳಿವೆ. ಗರ್ಭಗುಡಿಯ ಹಿಂದೆ ಚಿಕ್ಕ ಕಿಟಕಿ ಇದ್ದು ಫೆಬ್ರವರಿ- ನವೆಂಬರ್ ತಿಂಗಳಲ್ಲಿ ಸೂರ್ಯನ ಕಿರಣ ದೇವಿಯ ಕಿರೀಟದ ಮೇಲೆ ಬೀಳುತ್ತದೆ ಆ ದಿನಗಳನ್ನು “ಕಿರಣೋತ್ಸವ” ಎಂದು ಕರೆಯು ತ್ತಾರೆ. ನವರಾತ್ರಿ ವೈಭವವಾಗಿರುತ್ತದೆ. ಶುಕ್ರವಾರ ವಿಶೇಷ ಪೂಜೆ ಇರುತ್ತದೆ. ಚೈತ್ರ ಮಾಸದ ಹುಣ್ಣಿಮೆ ದಿನ ನಗರದ ಸುತ್ತ ದೇವಿಯ ಉತ್ಸವ ವೈಭವದಿಂದ ನಡೆಯು ತ್ತದೆ. ಇಲ್ಲಿನ ಜನರು ದೇವಿಯನ್ನು “ಅಂಬಾಬಾಯಿ” ಎಂದು ಪ್ರೀತಿಯಿಂದ ಕರೆಯು ತ್ತಾರೆ. ಇಲ್ಲಿ ಸೂರ್ಯೋದಯಕ್ಕೂ ಮೊದಲೇ ದೇವಿಗೆ ಅಭಿಷೇಕ ಮಾಡುತ್ತಾರೆ. ಆ ಸಮಯದಲ್ಲಿ ಮಾತ್ರ ದೇವಿಯ ಮೂಲ ವಿಗ್ರಹ ದರ್ಶನ ಮಾಡಬಹುದು.

ದೇವಸ್ಥಾನದ ಇನ್ನೊಂದು ಮಹತ್ವ ಹಾಗೂ ವಿಶೇಷ ಎಂದರೆ “ಕಂಬಗಳು”. ಇವು ಸಾಧಾರಣ ಕಂಬಗಳಲ್ಲ. ಇಲ್ಲಿರುವ ಕಂಬಗಳು ನಿಗೂಢವಾಗಿದ್ದು ಎಷ್ಟಿದೆ ಎಂದು ಇದುವರೆಗೂ ಯಾರಿಗೂ ತಿಳಿದಿಲ್ಲ. ಹಾಗೆ ದೇವಿಯು ಪಶ್ಚಿಮಕ್ಕೆ ಮುಖ ಮಾಡಿದ್ದು ಸೂರ್ಯನ ಬೆಳಕು ವರ್ಷಕ್ಕೆ ಮೂರು ಸಲದಲ್ಲಿ ಅವಳ ಮುಖವನ್ನು ಸ್ಪರ್ಶಿಸುತ್ತದೆ ಗರ್ಭಗುಡಿಯ ಮೇಲಿನ ದೇಗುಲದಲ್ಲಿ ಶಿವಲಿಂಗ ಮತ್ತು ನಂದೇ ಇರುವುದು ಗರ್ಭಗುಡಿಯ ಸಣ್ಣ ಕಿಟಕಿಯ ಮೂಲಕ ಕಾಣುತ್ತದೆ. ಉಳಿದ ಕಡೆ ಅನೇಕ ಉಪ ದೇವಾಲಯಗಳಿವೆ. ಈ ಸಂಕೀರ್ಣದಲ್ಲೇ ಮಣಿಕರ್ಣಿಕಾ ನೀರಿನ ಕುಂಡವಿದೆ. ಇನ್ನು ಕಂಬಗಳ ವೈಶಿಷ್ಟ್ಯ ಹೇಳತೀರದು ಅಂದರೆ ಚಾಲುಕ್ಯ ರಾಜ ಕರ್ಣದೇವನ ಮಗ ರಾಜ್ಯಭಾರ ಮಾಡುವಾಗ ದೇವಸ್ಥಾನದಲ್ಲಿದ್ದ ಸುಂದರ ಕೆತ್ತನೆಯ ಕಂಬಗಳಿಂದ ಆಕರ್ಷಿತನಾಗಿ, ತನ್ನ ಆಸ್ಥಾನದಲ್ಲಿ ಈ ಕಂಬಗಳನ್ನು ಹಾಕಬೇಕೆಂದು ಲೆಕ್ಕಾಚಾರ ಹಾಕಿದ ಕೆಲವೇ ದಿನಗಳಲ್ಲಿ ಮರಣ ಹೊಂದಿದನಂತೆ ಈ ವಿಷಯ ಇಂದಿಗೂ ಪ್ರಸ್ತುತವಾಗಿದ್ದು ಈ ವಿಷಯ ಪ್ರಮುಖವಾಗಿದೆ. ಹಾಗೆ ಮತ್ತೊಮ್ಮೆ ಮೊಘಲರು ಈ ದೇವಸ್ಥಾನದ ಮೇಲೆ ಕಣ್ಣಿಟ್ಟಿದ್ದರು ಆದರೆ ದೇವಸ್ಥಾನವನ್ನು ಅಲುಗಾಡಿಸಲು ಆಗಲಿಲ್ಲ. ಇನ್ನೊಂದು ಕಥೆಯ ಪ್ರಕಾರ ಬ್ರಿಟಿಷ್ ಅಧಿಕಾರಿಯೊಬ್ಬ ಇಲ್ಲಿನ ಕಂಬಗ ಳನ್ನು ಎಣಿಸಲು ಹೋಗಿ ಅಲ್ಲೇ ಸಾವನ್ನಪ್ಪಿದನಂತೆ. ಈ ಕಂಬಗಳ ವಿಚಾರದಲ್ಲಿ ಯಾರು ದುರಾಲೋಚನೆ ಮಾಡುವರೋ ಅವರೆಲ್ಲ ಮರಣ ಹೊಂದಿರುವಂತಹ ಅಹಿತಕರ ಘಟನೆಗಳು ಸಾಕಷ್ಟು ನಡೆದಿದೆ ಎನ್ನುತ್ತಾರೆ.

ಈ ದೇವಾಲಯದ ದಂತಕತೆಯ ಪ್ರಕಾರ ಪ್ರಳಯ ಕಾಲದಲ್ಲಿ ಶಿವನು ಕಾಶಿಯನ್ನು ರಕ್ಷಿಸಿದಂತೆ, ಕೊಲ್ಲಾಪುರವನ್ನು ಮಹಾಲಕ್ಷ್ಮಿ ತನ್ನ ಕರಗಳಿಂದ ಎತ್ತಿ ಹಿಡಿದು ರಕ್ಷಿಸಿ ದ್ದಾಳೆ ಎಂಬ ನಂಬಿಕೆ ಇದ್ದು, ಇದನ್ನು “ಕರವೀರಪುರ” ಕ್ಷೇತ್ರ ಎಂದು ಕರೆಯುತ್ತಾರೆ. ಒಮ್ಮೆ ಶಿವಭಕ್ತರಾದ ಅಗಸ್ತ್ಯ ಮಹರ್ಷಿಗಳು, ಕಾಶಿಗೆ ಸಮನಾದ ಇನ್ನೊಂದು ಕ್ಷೇತ್ರ ಯಾವುದು ಎಂದು ಶಿವನನ್ನು ಕೇಳಿದರಂತೆ. ಕಾಶಿಗೆ ಸಮನಾದ ಇನ್ನೊಂದು ಕ್ಷೇತ್ರ ಎಂದರೆ “ಕೊಲ್ಲಾಪುರ” ಎಂದು ಶಿವನು ಹೇಳಿದನಂತೆ. ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ಮಾಡಿದರೆ, ಕಾಶಿ ವಿಶ್ವನಾಥನ ದರ್ಶನ ಮಾಡಿದಷ್ಟು ಪುಣ್ಯಲಭಿಸುತ್ತದೆ ಎಂಬ ನಂಬಿಕೆ ಇದೆ. ಹಾಗೆ ತಿರುಪತಿ ಶ್ರೀನಿವಾಸನ ದರ್ಶನ ಮಾಡಿ ಕೊಲ್ಲಾಪುರಕ್ಕೆ ಬಂದು ತಾಯಿ ದರ್ಶನ ಮಾಡಿದರೆ ಲಕ್ಷ್ಮೀನಾರಾಯಣರ ದರ್ಶನ ಮಾಡಿದಷ್ಟು ಪೂರ್ಣಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ..

ದೇಶ ವಿದೇಶಗಳಿಂದ ಲಕ್ಷಾಂತರ ಜನರು ಈ ದೇವಾಲಯಕ್ಕೆ ಬೇಟಿ ಕೊಡುತ್ತಾರೆ.
ದೇವಿಗೆ ಧಾರ್ಮಿಕ ಆರಾಧನ ಸೇವೆಗಳನ್ನು ನಿತ್ಯವೂ ಐದು ಸಲ ಮಾಡಲಾಗುತ್ತದೆ. ಬೆಳಗ್ಗೆ 5:00 ಗಂಟೆಯಿಂದ ರಾತ್ರಿಯ ತನಕ ಪೂಜೆ, ಅರ್ಚನೆ, ನೈವೇದ್ಯ, ಆರತಿ ನಡೆಯುತ್ತದೆ. ಅಷ್ಟೋತ್ತರ- ಸಹಸ್ರನಾಮ- ಸ್ತೋತ್ರ ಪಠಿಸುತ್ತಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಧಾರ್ಮಿಕ ಉತ್ಸವಾಚರಣೆ ನಡೆಯುತ್ತದೆ. ತದಿಗೆ, ನವರಾತ್ರಿ, ಶ್ರಾವಣ ಮಾಸಗಳಲ್ಲಿ ಸಂಭ್ರಮಾಚರಣೆಯಾದರೆ, ‌ಶುಕ್ರವಾರ ಮತ್ತು ಹುಣ್ಣಿಮೆ ದಿನಗಳಲ್ಲಿ ದೇವಾಲ ಯದ ಪ್ರಾಂಗಣದ ಸುತ್ತ ದೇವಿಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ ಮಾಡುತ್ತಾರೆ.
ದೇವಿ ಇಲ್ಲಿ ನೆಲೆಸಿದಾಗಿನಿಂದ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಇಷ್ಟಗಳನ್ನು ನೆರವೇರಿಸುತ್ತಾ, ಸಮಸ್ಯೆಗಳಿಗೆ ಪರಿಹಾರ ಕೊಡುತ್ತಾ, ಭಕ್ತರ ಬೇಡಿಕೆಯನ್ನು ನೆರವೇರಿಸುತ್ತಾಳೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಇಲ್ಲಿ ಸಿಗುತ್ತದೆ ಎಂದು ಜನರು ದೃಢವಾಗಿ ನಂಬಿದ್ದಾರೆ.

ನಮಸ್ತೇ ಜಗದ್ಧಾತ್ರಿ ಸದ್ಬ್ರಹ್ಮ ರೂಪೇ
ನಮಸ್ತೇ ಹರೋಪೇಂದ್ರ ಧಾತ್ರಾದಿ ವಂದ್ಯೇ!
ನಮಸ್ತೇ ಪ್ರಪನ್ನೇಷ್ಟದಾನೈಕ ದಕ್ಷೇ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ!!

Tags: #KolhapurMahalakshmi #AmbabaiTemple #ShaktiPeetha #Mahalakshmi #Kolhapur #DevotionalNews #SaakshaTV
ShareTweetSendShare
Join us on:

Related Posts

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ‘ಮಹಾಕಾಳಿ’ ಚಿತ್ರದ ‘ಶುಕ್ರಚಾರ್ಯ’ ಗ್ಲಿಂಪ್ಸ್ ಬಿಡುಗಡೆ: 2027ರ ಜನವರಿ 8ಕ್ಕೆ ಗ್ರ್ಯಾಂಡ್ ರಿಲೀಸ್

by admin
August 26, 2026
0

'ಹನು-ಮಾನ್' ಸಿನಿಮಾದ ಜಾಗತಿಕ ಯಶಸ್ಸಿನ ನಂತರ ಕ್ರಿಯೇಟಿವ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರ 'ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್' (PVCU) ಅಡಿಯಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಪೌರಾಣಿಕ...

saakshatv.com/akshay-kumar-saif-ali-khan-haikwan-movie-trailer-released

ಬಾಲಿವುಡ್‌ನಲ್ಲಿ ಹೈ-ವೋಲ್ಟೇಜ್ ಮುಖಾಮುಖಿ: ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್ – ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್

by admin
August 26, 2026
0

ಬಾಲಿವುಡ್‌ನ ಬಹುನಿರೀಕ್ಷಿತ ಥ್ರಿಲ್ಲರ್ ಸಿನಿಮಾ ‘ಹೈವಾನ್’ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟೀಸರ್ ಬಿಡುಗಡೆಯಾದಾಗಿನಿಂದಲೂ ಸೃಷ್ಟಿಯಾಗಿದ್ದ ಭಾರೀ ಕುತೂಹಲಕ್ಕೆ ಈ...

saakshatv.com/param-vihara-15-veena-jugalbandi-srikrishna-vaibhavam-dance-performance

‘ಪರಮ್ ವಿಹಾರ-15’: ಮನಸೆಳೆದ ವೀಣಾ ನಾದ, ಕೃಷ್ಣ ವೈಭವ

by admin
August 26, 2026
0

​• ಪರಮ್ ಕಲ್ಚರ್ ಸಂಸ್ಥೆಯಿಂದ ಮಾಸಿಕ ಸರಣಿ ಯಶಸ್ವಿ ಆಯೋಜನೆ * ಲಹರಿ-ಸುನಿಧಿ ಜೋಡಿಯ ಸರಸ್ವತಿ ವೀಣಾ ಜುಗಲ್‌ಬಂದಿ * ಸಮನ್ವಯ ಅಕಾಡೆಮಿಯ ನೃತ್ಯ ರೂಪಕಕ್ಕೆ ಕಲಾಪ್ರೇಮಿಗಳ...

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

by Shwetha
August 26, 2026
0

ಆಂಧ್ರಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಈಗ ಸ್ಫೋಟಕ ಸತ್ಯವೊಂದು ಹೊರಬಂದಿದೆ. ಮೃತ ಎಂಜಿನಿಯರ್ ಬರೆದಿಟ್ಟಿರುವ ಡೆತ್ ನೋಟ್ ಇಡೀ ಪ್ರಕರಣಕ್ಕೆ...

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

by Shwetha
August 26, 2026
0

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಅಥವಾ ತಲೆಗೆ ಸ್ಕಾರ್ಫ್ ಧರಿಸಲು ಅನುಮತಿ ನೀಡಬೇಕು ಎಂದು ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ತರಗತಿಯಲ್ಲಿ ಹಿಜಾಬ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram