ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೇಲುಕೋಟೆ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ದೆಹಲಿಯಲ್ಲಿ ಮಹತ್ವದ ಹೆಜ್ಜೆ

admin by admin
August 27, 2026
in Newsbeat, State, ರಾಜ್ಯ
darshan-puttannaiah-niti-aayog-melukote-development

darshan-puttannaiah-niti-aayog-melukote-development

Share on FacebookShare on TwitterShare on WhatsappShare on Telegram

ನೀತಿ ಆಯೋಗದೊಂದಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಚರ್ಚೆ

ಬೆಂಗಳೂರು/ದೆಹಲಿ: ಮೇಲುಕೋಟೆ ವಿಧಾನಸಭೆ ಕ್ಷೇತ್ರ ಹಾಗೂ ಕರ್ನಾಟಕದ ಸಮಗ್ರ ಹಾಗೂ ಸರ್ವಾಂಗೀಣ ಪ್ರಗತಿಯ ಗುರಿಯೊಂದಿಗೆ, ತಂತ್ರಜ್ಞಾನ ಆಧಾರಿತ ಕೃಷಿ ಸುಧಾರಣೆ ಮತ್ತು ಗ್ರಾಮೀಣ ಆರ್ಥಿಕತೆಯ ಸಬಲೀಕರಣದ ಕುರಿತು ದೆಹಲಿಯಲ್ಲಿ ನೀತಿ ಆಯೋಗದ ಉನ್ನತ ಅಧಿಕಾರಿಗಳೊಂದಿಗೆ ಮೇಲುಕೋಟೆ ಶಾಸಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಮುಖ ಸಭೆ ನಡೆಸಿದ್ದಾರೆ.
ರಾಜ್ಯದ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ನೀತಿ ಆಯೋಗದೊಂದಿಗೆ ಚರ್ಚಿಸಲಾದ ಪ್ರಮುಖ ವಿಷಯಗಳು ಇಲ್ಲಿವೆ:
ಡಿಜಿಟಲ್ ಕೃಷಿ ಕ್ರಾಂತಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಡಿಜಿಟಲೀಕರಣ, ರೈತರ ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಬೇಡಿಕೆ ಜೋಡಣೆ (Demand Matching) ಹಾಗೂ ನಬಾರ್ಡ್ ಸಹಭಾಗಿತ್ವದ ಕುರಿತು ವಿಸ್ತೃತ ಪ್ರೆಸೆಂಟೇಶನ್ ನೀಡಲಾಗಿದೆ.
ಮಹಿಳಾ ಕೃಷಿ-ಉದ್ಯಮಶೀಲತೆ (Agripreneurs): ಐಸಿಎಆರ್ (ICAR) ಮತ್ತು ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಸ್ಥಳೀಯ ಸಂಸ್ಕರಣಾ ಘಟಕಗಳು (Processing Units) ಹಾಗೂ ‘ಫಾರ್ಮ್ ಟು ಮಾರ್ಕೆಟ್’ ವ್ಯವಸ್ಥೆಯನ್ನು ರೂಪಿಸುವುದು.
ಗ್ರಾಮೀಣ ಪ್ರವಾಸೋದ್ಯಮ (Rural & Farm Tourism): ರೈತರ ಮನೆ ಹಾಗೂ ತೋಟಗಳಲ್ಲಿ ಹೋಂ-ಸ್ಟೇಗಳನ್ನು ಪ್ರೋತ್ಸಾಹಿಸುವ ಮೂಲಕ ಪ್ರವಾಸೋದ್ಯಮವನ್ನು ಬೆಳೆಸಿ, ರೈತರಿಗೆ ಹೆಚ್ಚುವರಿ ಆದಾಯ ಕಲ್ಪಿಸುವುದು.
ಪಾಂಡವಪುರ ಹಾಗೂ ಸಣ್ಣ ನಗರಗಳ ಸ್ಮಾರ್ಟ್ ಅಭಿವೃದ್ಧಿ: ಶಾಲಾ ಮಕ್ಕಳ ಬಸ್ ಮಾರ್ಗಗಳ ವ್ಯವಸ್ಥೆ ಸೇರಿದಂತೆ ಸಂಚಾರ ಸುಧಾರಣೆಗೆ ಡೇಟಾ ಆಧಾರಿತ ಸಾರಿಗೆ (Mobility) ಯೋಜನೆ ಮತ್ತು ‘ಬೀಜ ಬ್ಯಾಂಕ್ ಗ್ರಾಮ’ (Seed Bank Village) ಪರಿಕಲ್ಪನೆಗಳ ಅನುಷ್ಠಾನ.
ರೈತ ಪರ 6 ಸಮಗ್ರ ಕೃಷಿ ಮಸೂದೆಗಳು: ರೈತರ ಆಮೂಲಾಗ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಹಾಗೂ ಮೌಲ್ಯ ಸರಪಳಿಯ ವ್ಯವಸ್ಥಿತ ಮರುರೂಪಣೆಯ ಮೂಲಕ ರೈತರು ಆರ್ಥಿಕವಾಗಿ ಸ್ಥಿರವಾಗಿರುವಂತೆ ಖಚಿತಪಡಿಸುವುದು ಈ ಎಲ್ಲಾ ಪ್ರಯತ್ನಗಳ ಮುಖ್ಯ ಆಶಯವಾಗಿದೆ. ಇದಕ್ಕಾಗಿ ರೈತರ ಆರ್ಥಿಕ ಸಾರ್ವಭೌಮತ್ವ, ಸಹಕಾರಿ ಸಂಘಗಳ ಪ್ರಜಾಸತ್ತಾತ್ಮಕ ಆಡಳಿತ, ಎಂಎಸ್‌ಪಿ ಬದಲು ಬೆಲೆ ನಿಗದಿ ಸ್ವಾತಂತ್ರ್ಯ, ಭೂ ಹಕ್ಕುಗಳು ಮತ್ತು ಸ್ವಾಧೀನ ಸಮಾನತೆ, ಸಾಲ ತಡೆಗಟ್ಟುವಿಕೆ ಹಾಗೂ ಹವಾಮಾನ ಅಪಾಯದಿಂದ ರಕ್ಷಣೆ ನೀಡುವ 6 ಸಮಗ್ರ ಕೃಷಿ ಮಸೂದೆಗಳನ್ನು ಸಿದ್ಧಪಡಿಸಲಾಗಿದೆ.
ಜೊತೆಗೆ, ಆಡಳಿತ ಮಸೂದೆಗಳು, ರೈತ ಮಸೂದೆಗಳು, ಹವಾಮಾನ ಮಸೂದೆ ಹಾಗೂ ಯುವ ಉದ್ಯೋಗ ಮಸೂದೆಗಳನ್ನು ಸಿದ್ಧಪಡಿಸಲಾಗಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಸಾರ್ವಜನಿಕ ನೀತಿಗಳಲ್ಲಿ ಆಗಬೇಕಾದ ಆಮೂಲಾಗ್ರ ಪರಿವರ್ತನೆ ಕುರಿತ ವಿಷಯಗಳನ್ನು ಮಂಡಿಸಲಾಗಿದೆ. ವ್ಯವಸ್ಥಿತ ಬದಲಾವಣೆಗಳ ಮೂಲಕ ಕೃಷಿ ಸಮುದಾಯಕ್ಕೆ ಬಲ ತುಂಬಲು ಮತ್ತು ರೈತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಬದ್ಧವಾಗಿರುವುದಾಗಿ ಶಾಸಕರು ತಿಳಿಸಿದ್ದಾರೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಲು ಕರ್ನಾಟಕ 2.0 www.ktkgov2.org ಲಿಂಕ್ ಅನ್ನು ಬಳಸಬಹುದು ಎಂದು ತಿಳಿಸಲಾಗಿದೆ.

Related posts

dudda-mega-free-health-camp-darshan-puttannaiah

ದುದ್ದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

August 27, 2026
melukote-bindhalli-bio-resource-centre-organic-farming

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರಿಂದ ಮಹತ್ವದ ಯೋಜನೆ ಪುಟ್ಟಣ್ಣಯ್ಯ ಫೌಂಡೇಶನ್‌ ಸಹಯೋಗ

August 27, 2026
Tags: #Melukote #DarshanPuttannaiah #NITIAayog #KarnatakaDevelopment #DigitalAgriculture #FarmerEmpowerment #SmartDevelopment #RuralTourism #FarmToMarket #Karnataka20
ShareTweetSendShare
Join us on:

Related Posts

dudda-mega-free-health-camp-darshan-puttannaiah

ದುದ್ದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

by admin
August 27, 2026
0

ಮಂಡ್ಯ: ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಕಿದ್ವಾಯಿ ಸಂಸ್ಥೆ (ಬೆಂಗಳೂರು), ಭಾರತೀಯ ರೆಡ್ ಕ್ರಾಸ್...

melukote-bindhalli-bio-resource-centre-organic-farming

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರಿಂದ ಮಹತ್ವದ ಯೋಜನೆ ಪುಟ್ಟಣ್ಣಯ್ಯ ಫೌಂಡೇಶನ್‌ ಸಹಯೋಗ

by admin
August 27, 2026
0

ಮೇಲುಕೋಟೆ ಕ್ಷೇತ್ರವನ್ನು 'ಸಾವಯವ ತಾಲೂಕು' ಗೊಳಿಸುವತ್ತ ಮತ್ತೊಂದು ಹೆಜ್ಜೆ ಬಿಂಡಳ್ಳಿಯಲ್ಲಿ ಶೀಘ್ರವೇ 'ಬಯೋ ರಿಸೋರ್ಸ್ ಸೆಂಟರ್' ಸ್ಥಾಪನೆ! ಮಂಡ್ಯ: ಮೇಲುಕೋಟೆ ಕ್ಷೇತ್ರವನ್ನು ಸಂಪೂರ್ಣ 'ಸಾವಯವ ತಾಲೂಕು' ಆಗಿ...

melukote-organic-farming-sugarcane-jaggery-initiative

ಮೇಲುಕೋಟೆಯನ್ನು ‘ಸಾವಯವ ತಾಲೂಕು’ ಮಾಡುವತ್ತ ಮತ್ತೊಂದು ದಿಟ್ಟ ಹೆಜ್ಜೆ

by admin
August 27, 2026
0

ಸಾವಯವ ಕಬ್ಬು ಬೆಳೆಗಾರರಿಗೆ ಹೊಸ ಮಾರುಕಟ್ಟೆ ಹಾಗೂ ಆಲೆಮನೆಗಳ ಸಹಯೋಗ! ಮಂಡ್ಯ: ಮೇಲುಕೋಟೆ ಕ್ಷೇತ್ರವನ್ನು ಸಂಪೂರ್ಣ 'ಸಾವಯವ ತಾಲೂಕು' ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ...

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

by Shwetha
August 27, 2026
0

ಬೆಂಗಳೂರು : ಅಧಿಕಾರ ಇರಲಿ, ಬಿಡಲಿ ಶೋಷಿತರ ಮತ್ತು ಅವಕಾಶ ವಂಚಿತರ ಪರವಾದ ನನ್ನ ಧ್ವನಿ ಸದಾ ಮೊಳಗುತ್ತಲೇ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

by Shwetha
August 27, 2026
0

ಬೆಂಗಳೂರು: ರಾಷ್ಟ್ರೀಯ ಗೀತೆ ವಂದೇ ಮಾತರಂ ಗಾಯನದ ಕುರಿತು ನಡೆಯುತ್ತಿರುವ ರಾಜಕೀಯ ಜಟಾಪಟಿಯ ನಡುವೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram