ಸಾವಯವ ಕಬ್ಬು ಬೆಳೆಗಾರರಿಗೆ ಹೊಸ ಮಾರುಕಟ್ಟೆ ಹಾಗೂ ಆಲೆಮನೆಗಳ ಸಹಯೋಗ!
ಮಂಡ್ಯ: ಮೇಲುಕೋಟೆ ಕ್ಷೇತ್ರವನ್ನು ಸಂಪೂರ್ಣ ‘ಸಾವಯವ ತಾಲೂಕು’ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹಾಗೂ ಪುಟ್ಟಣ್ಣಯ್ಯ ಫೌಂಡೇಶನ್ ಸಹಯೋಗದೊಂದಿಗೆ ಮತ್ತೊಂದು ಮಹತ್ವದ ಸಭೆ ಪುಟ್ಟಣ್ಣಯ್ಯ ಫೌಂಡೇಶನ್ ನಲ್ಲಿ ನಡೆಯಿತು. ಸಾವಯವ ಕೃಷಿಗೆ ಉತ್ತೇಜನ ನೀಡುವ ಮತ್ತು ರೈತರ ಆರ್ಥಿಕ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಸಾವಯವ ಕಬ್ಬು ಬೆಳೆಗಾರರು, ಸಾವಯವ ಬೆಲ್ಲ ಉತ್ಪಾದಕರು, ಆಲೆಮನೆ ಹಾಗೂ ಮಾರಾಟಗಾರರು ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಚರ್ಚೆ ನಡೆಸಿದರು.
ಸಭೆಯ ಪ್ರಮುಖ ಉದ್ದೇಶಗಳು:
ಮಾರುಕಟ್ಟೆ ವಿಸ್ತರಣೆ: ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆದ ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಹಾಗೂ ಬೆಳೆ ಬೆಳೆದ ಬಳಿಕ ರೈತರಿಗೆ ಯಾವುದೇ ರೀತಿಯ ಆರ್ಥಿಕ ತೊಂದರೆಯಾಗದಂತೆ ನೋಡಿಕೊಳ್ಳುವುದು.
ಆಲೆಮನೆಗಳ ಜೋಡಣೆ: ರಾಸಾಯನಿಕ ಮುಕ್ತವಾಗಿ ಬೆಳೆದ ಸಾವಯವ ಕಬ್ಬನ್ನು ಸಾಂಪ್ರದಾಯಿಕ ಆಲೆಮನೆಗಳೊಂದಿಗೆ ಬೆಸೆದು, ಉತ್ತಮ ಗುಣಮಟ್ಟದ ಸಾವಯವ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ರೈತರ ಕಷ್ಟಗಳಿಗೆ ಸ್ಪಂದಿಸುತ್ತಾ, ಬೆಳೆದ ಬೆಳೆಗೆ ತಕ್ಕ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಹಾಗೂ ಸಾವಯವ ಕೃಷಿಯನ್ನು ಲಾಭದಾಯಕವಾಗಿಸಲು ಸರ್ಕಾರಿ ಅಧಿಕಾರಿಗಳು, ರೈತ ಬಂಧುಗಳು ಹಾಗೂ ಆಲೆಮನೆ ಮಾಲೀಕರು ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ನಮ್ಮ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಮತ್ತು ಮೇಲುಕೋಟೆ ಹಸಿರು ಕ್ರಾಂತಿಯ ಮಾದರಿ ಕ್ಷೇತ್ರವಾಗಲಿ ಎಂದು ಆಶಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಸಿಇಒ ರಣಜಿತ್ ಹೆಚ್.ಎನ್., ಕವಿತಾ ಕುರುಗಂಟಿ, ಕವಿತಾ ಶ್ರೀನಿವಾಸ್, ಸುಂಕಾತೊಣ್ಣೂರು ದೇವೇಗೌಡ, ಶ್ಯಾಡನಹಳ್ಳಿ ಚಲುವೇಗೌಡ, ಹುಳುವಾಡಿ ಅನಿಲ್, ಬಿಟಿ ಕೊಪ್ಪಲು ಸೋಮಣ್ಣ ಸೇರಿದಂತೆ ಹಲವು ಗಣ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ದುದ್ದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಮಂಡ್ಯ: ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಕಿದ್ವಾಯಿ ಸಂಸ್ಥೆ (ಬೆಂಗಳೂರು), ಭಾರತೀಯ ರೆಡ್ ಕ್ರಾಸ್...







