ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

admin by admin
August 27, 2026
in Newsbeat, Politics, Uncategorized, ರಾಜ್ಯ
ashoka-demands-drought-declaration-farmer-loan-waiver-nagendra-resignation

ashoka-demands-drought-declaration-farmer-loan-waiver-nagendra-resignation

Share on FacebookShare on TwitterShare on WhatsappShare on Telegram

ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ, ನಮ್ಮ ಹೋರಾಟಕ್ಕೆ ಬೆಲೆ ಸಿಗಲಿದೆ

ಬೆಂಗಳೂರು,  ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಣೆ ಮಾಡಿದೆ. ಆದರೆ 175 ತಾಲೂಕುಗಳಲ್ಲಿ ಬರ ಘೋಷಿಸಿ, ಹಣ ಬಿಡುಗಡೆ ಬಗ್ಗೆ ಸರಿಯಾಗಿ ತಿಳಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

Related posts

allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

August 27, 2026
chikkanna-lakshmiputra-movie-release-date-november-27

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ: ನವೆಂಬರ್ 27ಕ್ಕೆ ತೆರೆಗೆ

August 27, 2026

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಳ್ಳೆ ಹೊಡೆದ ಮೇಲೆ ಕೋಟೆಯ ಬಾಗಿಲು ಹಾಕಿದಂತೆ ರಾಜ್ಯ ಸರ್ಕಾರ ನಾಲ್ಕು ತಿಂಗಳ ಬರಗಾಲ ಘೋಷಣೆ ಮಾಡಿದೆ. ಆರಂಭದಲ್ಲೇ ಬರ ಘೋಷಣೆ ಮಾಡಿ ಎಂದು ನಾನು ಪತ್ರ ಬರೆದಿದ್ದೆ. 89 ತಾಲೂಕುಗಳಲ್ಲಿ ತೀವ್ರ ಹಾಗೂ 12 ತಾಲೂಕುಗಳಲ್ಲಿ ಕಡಿಮೆ ಬರ ಎಂದು ಘೋಷಣೆ ಮಾಡಲಾಗಿದೆ. ಮಂಡ್ಯ, ಮೈಸೂರು ಮೊದಲಾದ ಭಾಗಗಳಲ್ಲಿ ನಾನು ಪ್ರವಾಸ ಮಾಡಿದ್ದೆ. ಬಿಜೆಪಿ ಶಾಸಕರು ಕೂಡ ಅಧ್ಯಯನ ಮಾಡಿದ್ದರು. 175 ತಾಲೂಕುಗಳಲ್ಲಿ ಬರ ಘೋಷಣೆ ಮಾಡಬೇಕಿತ್ತು. ಆದರೆ ಹಣದ ಕೊರತೆಯಿಂದಾಗಿ ತಾಲೂಕುಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಒಂದು ತಾಲೂಕಿಗೆ ಕೇವಲ ಒಂದು ಕೋಟಿ ರೂ.ನೀಡಲಾಗಿದೆ. ಎಕರೆಗೆ 50,000 ರೂ. ನೀಡಬೇಕೆಂದು ಆಗ್ರಹ ಮಾಡಿದ್ದರೂ ಅದನ್ನು ಪರಿಗಣಿಸಿಲ್ಲ. ಮೇವು ಎಷ್ಟು ಸಂಗ್ರಹ ಇದೆ, ಕುಡಿಯುವ ನೀರು, ಬೋರ್‌ವೆಲ್‌ಗೆ ಏನು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ರೈತರು ಪ್ರತಿಭಟಿಸುತ್ತಿರುವುದರಿಂದ ಕಾಟಾಚಾರಕ್ಕೆ ಬರ ಘೋಷಿಸಲಾಗಿದೆ ಎಂದರು.

ಕಂದಾಯ ಸಚಿವರು ಕೇವಲ ಘೋಷಣೆ ಮಾಡುವುದಲ್ಲ. ಯಾವ ಕ್ರಮ ವಹಿಸಲಾಗಿದೆ, ಎಷ್ಟು ಹಣ ನೀಡಲಾಗಿದೆ ಎಂದು ನಿಖರವಾಗಿ ಹೇಳಬೇಕು. ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣ ನೀಡುತ್ತದೆ. ಆ ಹಣ ಎಷ್ಟಿದೆ ಎಂದು ತಿಳಿಸಬೇಕು. ತಮಿಳುನಾಡಿನ ಮುಖ್ಯಮಂತ್ರಿ ಬೆಳೆ ಬೆಳೆಯಿರಿ ಎಂದು ರೈತರಿಗೆ ಕರೆ ನೀಡಿದರೆ, ನಮ್ಮ ಮುಖ್ಯಮಂತ್ರಿ ಬೆಳೆ ಬೆಳೆಯಬೇಡಿ ಎಂಬ ಸಂದೇಶ ನೀಡುತ್ತಾರೆ. ಕಲಬುರ್ಗಿ ಮೊದಲಾದ ಭಾಗಗಳಲ್ಲಿ ಜನರು ವಲಸೆ ಹೋಗಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸವೂ ಅರ್ಧಕ್ಕೆ ಸ್ಥಗಿತಗೊಂಡಿದೆ. ಮಂಡ್ಯಕ್ಕೆ ವಲಸೆ ಬಂದ ಹೆಣ್ಣುಮಗಳೊಬ್ಬರ ಅತ್ಯಾಚಾರವಾಗಿದೆ. ವಲಸೆ ಹೋಗುವವರಿಗೆ ಸರಿಯಾದ ರಕ್ಷಣೆ ಇಲ್ಲ. ಇದರ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗಿದೆ, ಆ ಮಕ್ಕಳ ಶಿಕ್ಷಣಕ್ಕೆ ಯಾವ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಬೇಕಿತ್ತು. ಕಂದಾಯ ಸಚಿವರು ಈ ಬಗ್ಗೆ ಪ್ರಕಟಣೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಸಾಲ ಮನ್ನಾ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಾಲ ಮನ್ನಾ ಬಗ್ಗೆ ಹೇಳಿ ಎರಡು ತಿಂಗಳು ಕಳೆದಿದೆ. ಪ್ರತಿ ರೈತರಿಗೆ ಕನಿಷ್ಠ 1 ಲಕ್ಷ ರೂ. ಸಾಲ ಮನ್ನಾ ಮಾಡಬೇಕು. ವಿಬಿ ಜಿ ರಾಮ್‌ಜೀ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ ವಲಸೆ ತಪ್ಪಿಸಬಹುದು. ಆ ಬಗ್ಗೆಯೂ ಕ್ರಮ ವಹಿಸಬೇಕು. ಎಲ್‌ನಿನೊ ಬರುತ್ತದೆ ಎಂಬ ಮುನ್ನೆಚ್ಚರಿಕೆ ಇದ್ದರೂ ಕ್ರಮ ವಹಿಸಿಲ್ಲ. ನಾವು ಅಧ್ಯಯನ ಮಾಡಿದ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು.

ಸಚಿವ ನಾಗೇಂದ್ರ ರಾಜೀನಾಮೆ ಖಚಿತ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಮಾಡಿದ ಸಚಿವ ಬಿ.ನಾಗೇಂದ್ರ ವಿರುದ್ಧ ಸದನದಲ್ಲಿ ನಿರಂತರ ಹೋರಾಟ ಮಾಡಿದ್ದೇವೆ. ಆದ್ದರಿಂದ ಅವರು ರಾಜೀನಾಮೆ ನೀಡುವುದು ಖಚಿತ. ಸಿಬಿಐ ಹಾಗೂ ಇಡಿ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ದಲಿತರ ಹಣ ಲೂಟಿ ಮಾಡಿದಾಗ ಇವರಿಗೆ ತಾವು ದಲಿತರು ಎಂದು ಗೊತ್ತಿರಲಿಲ್ಲ. ಈಗ ಮಾತ್ರ ಜಾತಿಯ ರಕ್ಷಣೆ ಪಡೆಯುತ್ತಿದ್ದಾರೆ. ಹಗರಣ ನಡೆದಿಲ್ಲವೆಂದಾದರೆ ಚಂದ್ರಶೇಖರ್‌ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು? ಅವರನ್ನು ಮರಳಿ ಸಚಿವ ಸಂಪುಟಕ್ಕೆ ಸೇರಿಸಿದ್ದು ಏಕೆಂದು ಕಾರಣ ನೀಡಬೇಕು ಎಂದರು.

ಹಗರಣದ ಮೂಲ ಸೂತ್ರದಾರರು ಹೈಕಮಾಂಡ್‌ ಎಂಬುದು ಬಯಲಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ದಲಿತರ ಹಣ ನುಂಗಿದವರು ಸಂಪುಟದಲ್ಲಿ ಇರಬಾರದು ಎಂಬ ಸಂದೇಶವನ್ನು ನಾವು ನೀಡಿದ್ದೇವೆ. ನಮ್ಮ ಹೋರಾಟಕ್ಕೆ ಖಂಡಿತ ಬೆಲೆ ಸಿಗಲಿದ್ದು, ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ. ಒಂದು ವಾರದಲ್ಲಿ ತೀರ್ಮಾನವಾಗದೇ ಇದ್ದರೆ ಸಿಎಂ ಮನೆಗೂ ಮುತ್ತಿಗೆ ಹಾಕುತ್ತೇವೆ ಎಂದರು.

ಬಿಡದಿ ಟೌನ್‌ಶಿಪ್‌, ನೈಸ್‌ ಮೊದಲಾದ ವಿಷಯಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಮುಂದಿನ ಸದನದಲ್ಲಿ ಈ ಬಗ್ಗೆ ಮಾತಾಡುತ್ತೇವೆ. ನಾನು ವಿರೋಧ ಪಕ್ಷದ ನಾಯಕನಾಗಿದ್ದರೂ, ಪತ್ರ ಬರೆದರೂ ಮನೆ ನೀಡಿಲ್ಲ. ಕಾಂಗ್ರೆಸ್‌ ನಾಯಕರ ಅಗತ್ಯ ನನಗಿಲ್ಲ. ನನ್ನ ಗುರುಗಳು ಅಟಲ್‌ ಬಿಹಾರಿ ವಾಜಪೇಯಿ ಹಾಗೂ ನನ್ನ ಪಕ್ಷ ಬಿಜೆಪಿ ಮಾತ್ರ ಎಂದರು.

ಅನೇಕ ಕ್ಲಬ್‌ಗಳು ಇನ್ನೂ ನೋಂದಣಿಯಾಗಿಲ್ಲ. ಗಣೇಶ ಸಂಘಗಳು, ಕ್ರೈಸ್ತ ಸಂಘಗಳು ಯಾವುದಕ್ಕೂ ನೋಂದಣಿ ಬೇಕಿಲ್ಲ. ಆದರೆ ಖರ್ಗೆ ಸಂವಿಧಾನದಲ್ಲಿ ಮಾತ್ರ ಆರ್‌ಎಸ್‌ಎಸ್‌ ನೋಂದಣಿಯಾಗಬೇಕು ಎಂದು ಹೇಳುತ್ತಾರೆ. ಆದರೆ ನಾವು ಬಾಬಾ ಸಾಹೇಬ್‌ ಅಂಬೇಡ್ಕರ್‌ರ ಸಂವಿಧಾನ ಪಾಲಿಸುತ್ತೇವೆ. ಕಸದಿಂದ ಸ್ವಾತಂತ್ರ್ಯ ಎಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ. ಈಗ ಪಾದಾಚಾರಿ ಮಾರ್ಗಗಳಲ್ಲೇ ಅಂಗಡಿಗಳಿವೆ. ಎಲ್ಲ ರಸ್ತೆಗಳ ಬದಿಗಳಲ್ಲಿ ಹಳೆ ಕಾರುಗಳಿವೆ. ಸಮಿತಿಗಳನ್ನು ರಚಿಸುವುದರಿಂದ ಏನೂ ಉದ್ಧಾರವಾಗಲ್ಲ. ಅನುದಾನ, ಅನುಷ್ಠಾನ ಮಾಡುವ ಅಧಿಕಾರಿಗಳು ಹಾಗೂ ಯೋಜನೆ ರೂಪಿಸುವ ಇಲಾಖೆ ಬೇಕು. ಅದ್ಯಾವುದೂ ಸರ್ಕಾರದಲ್ಲಿ ಇಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಇದ್ದರೂ ಅದನ್ನು ಜಾರಿ ಮಾಡಿಲ್ಲ ಎಂದರು.

Tags: #RAshoka #KarnatakaPolitics #DroughtRelief #FarmerLoanWaiver #KarnatakaFarmers #BJPKarnataka #BNagendra #ValmikiScam #KarnatakaGovt
ShareTweetSendShare
Join us on:

Related Posts

allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

by admin
August 27, 2026
0

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಅವರು ಫೋರ್ಬ್ಸ್ ಇಂಡಿಯಾದ ಪ್ರತಿಷ್ಠಿತ 'ಶೋಸ್ಟಾಪರ್ಸ್ 2026' ಆವೃತ್ತಿಯ ಕವರ್ ಸ್ಟಾರ್ ಆಗಿ ಸ್ಥಾನ ಪಡೆದಿದ್ದಾರೆ....

chikkanna-lakshmiputra-movie-release-date-november-27

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ: ನವೆಂಬರ್ 27ಕ್ಕೆ ತೆರೆಗೆ

by admin
August 27, 2026
0

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ, ಇದೀಗ ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ...

andavapura-atma-scheme-krishi-sakhi-workshop-darshan-puttannaiah

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ: ಪಾಂಡವಪುರದಲ್ಲಿ ಕೃಷಿ ಪರಿಣತರಿಂದ ತರಬೇತಿ

by admin
August 27, 2026
0

ಮಂಡ್ಯ: ಪಾಂಡವಪುರ ತಾಲ್ಲೂಕಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ (ಕೃಷಿ ಸಖಿಯರು) ಒಟ್ಟು 120 ಮಂದಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ...

dudda-mega-free-health-camp-darshan-puttannaiah

ದುದ್ದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

by admin
August 27, 2026
0

ಮಂಡ್ಯ: ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಕಿದ್ವಾಯಿ ಸಂಸ್ಥೆ (ಬೆಂಗಳೂರು), ಭಾರತೀಯ ರೆಡ್ ಕ್ರಾಸ್...

melukote-bindhalli-bio-resource-centre-organic-farming

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರಿಂದ ಮಹತ್ವದ ಯೋಜನೆ ಪುಟ್ಟಣ್ಣಯ್ಯ ಫೌಂಡೇಶನ್‌ ಸಹಯೋಗ

by admin
August 27, 2026
0

ಮೇಲುಕೋಟೆ ಕ್ಷೇತ್ರವನ್ನು 'ಸಾವಯವ ತಾಲೂಕು' ಗೊಳಿಸುವತ್ತ ಮತ್ತೊಂದು ಹೆಜ್ಜೆ ಬಿಂಡಳ್ಳಿಯಲ್ಲಿ ಶೀಘ್ರವೇ 'ಬಯೋ ರಿಸೋರ್ಸ್ ಸೆಂಟರ್' ಸ್ಥಾಪನೆ! ಮಂಡ್ಯ: ಮೇಲುಕೋಟೆ ಕ್ಷೇತ್ರವನ್ನು ಸಂಪೂರ್ಣ 'ಸಾವಯವ ತಾಲೂಕು' ಆಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram