ರಾಯನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ
ಕಿಚ್ಚ ಸುದೀಪ್
ಹಿಂದಿನ ಬ್ಲಾಕ್ಬಸ್ಟರ್ ಯಶಸ್ಸಿನ ನಂತರ ರೆಗ್ಯುಲರ್, ಸಿದ್ಧಸೂತ್ರದ ಸಿನಿಮಾ ಮಾಡುವ ಸುಲಭ ಹಾದಿ ಹಿಡಿಯದೆ, ಭಿನ್ನವಾಗಿ (‘ಔಟ್ ಆಫ್ ದಿ ಬಾಕ್ಸ್’) ಯೋಚಿಸಿ ಹೊಸ ಪ್ರಯತ್ನ ಮಾಡಿದ್ದೀರಿ.
ಇಂತಹ ವಿಭಿನ್ನ ಹಾಗೂ ವಿನೂತನ ಕಥಾಹಂದರವನ್ನು ಕೈಗೆತ್ತಿಕೊಳ್ಳಲು ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು.
‘ಟಾಕ್ಸಿಕ್’ ಒಂದು ಶ್ಲಾಘನೀಯ ಪ್ರಯತ್ನವಾಗಿದ್ದು, ಇದರಲ್ಲಿ ಕುತೂಹಲ ಕೆರಳಿಸುವ, ಆರೋಗ್ಯಕರ ಚರ್ಚೆಗೆ ಮತ್ತು ಕಲಿಕೆಗೆ ದಾರಿ ಮಾಡಿಕೊಡುವ ಹಲವು ಅಂಶಗಳಿವೆ.
ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಹೊಸ ಪ್ರಯೋಗ ಮಾಡಲು ಧೈರ್ಯ ತೋರಿದ್ದಕ್ಕೆ ಅಭಿನಂದನೆಗಳು.
ಸ್ನೇಹಿತ, ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.








