ADVERTISEMENT
Tuesday, September 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ

admin by admin
September 1, 2026
in Newsbeat, State, Uncategorized, ರಾಜ್ಯ
mysuru-drought-drinking-water-fodder-cattle-g-parameshwara |

mysuru-drought-drinking-water-fodder-cattle-g-parameshwara |

Share on FacebookShare on TwitterShare on WhatsappShare on Telegram

Related posts

hebbal-first-grade-college-new-building-10-crore-byrathi-suresh

10 ಕೋ. ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ –  ಕಾಮಗಾರಿ ಶಿಲಾನ್ಯಾಸ ನೆರವೇರಿಸಿದ ಸಾರಿಗೆ ಸಚಿವ ಬೈರತಿ ಸುರೇಶ್

September 1, 2026
mysuru-severe-drought-8-taluks-rainfall-deficit-g-parameshwara

ಮೈಸೂರಿನಲ್ಲಿ ಶೇ.55ರಷ್ಟು ಮಳೆ ಕೊರತೆ ; 8 ತಾಲೂಕುಗಳು ತೀವ್ರ ಬರ ಪೀಡಿತ ಎಂದು ಘೋಷಣೆ

September 1, 2026
ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಜಲಾಶಯಗಳಲ್ಲಿನ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಯಾವುದೇ ಗ್ರಾಮ – ನಗರ ಪ್ರದೇಶಗಳಲ್ಲಿ ಯಾರೊಬ್ಬರಿಗೂ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಕೊರತೆ ಹೆಚ್ಚಾಗುವ ಸಂದರ್ಭಗಳಲ್ಲಿ ಜನರು ನೀರನ್ನು ಶೇಖರಿಸಿಟ್ಟುಕೊಳ್ಳುತ್ತಾರೆ. ಇದರಿಂದ  ಡೆಂಗ್ಯೂ, ಚಿಕೂನ್‌ ಗುನ್ಯಾ ರೀತಿಯ ಸಾಂಕ್ರಾಮಿಕಗಳು ಹರಡಬಹುದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ನಿಯಮಿತವಾಗಿ ಟಾಸ್ಕ್‌ ಫೋರ್ಸ್‌, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ನಿರ್ದೇಶಿಸಿದರು.
ಸಾಮಾನ್ಯವಾಗಿ ಬರಗಾಲದ ವರ್ಷಗಳಲ್ಲಿ ಕಲುಷಿತ ನೀರು ಕುಡಿದು ಸಮಸ್ಯೆಗೆ ಸಿಲುಕಿಕೊಳ್ಳುವವರ ಪ್ರಮಾಣ ಹೆಚ್ಚಿರುತ್ತದೆ. ಈ ಕುರಿತು ನೀವುಗಳು ಹೆಚ್ಚಿನ ನಿಗಾವಹಿಸಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು. ಎಲ್‌ ನಿನೊ ಇರುವ ವರ್ಷಗಳಲ್ಲಿ ಸಾಮಾನ್ಯವಾಗಿ ಬಿಟ್ಟು ಬಿಟ್ಟು ಮಳೆ ಬರುವುದರಿಂದ ಹಠಾತ್‌ ಪ್ರವಾಹಗಳು, ಸಿಡಿಲುಗಳು ಬರುವ ಸಂಭವಗಳು ಹೆಚ್ಚಿರುತ್ತವೆ. ಹವಾಮಾನ ಸೂಚನೆಗಳನ್ನು ಆಧರಿಸಿ ಕ್ರಮವಹಿಸಬೇಕು ಎಂದು ತಿಳಿಸಿದರು.
ಬಿತ್ತನೆ ಬೀಜ ಕೊರತೆ ಆಗಬಾರದು. ಬೀಜ ಬಿತ್ತನೆ ಮಾಡಿದ ಮೇಲೆ ಮಳೆ ಇಲ್ಲವಾಗಿ ಮತ್ತೆ ಮಳೆ ಬಂದರೆ ಮತ್ತೆ ಬೀಜ-ಗೊಬ್ಬರಕ್ಕೆ ಬೇಡಿಕೆ ಬರಬಹುದು. ಅದಕ್ಕೆ ಸಿದ್ಧರಾಗಿ. ಬೆಳೆ ಒಣಗಿ ಮತ್ತೆ ಮಳೆ ಬಿದ್ದಾಗ ಏಕಾಏಕಿ ಬಿತ್ತನೆ ಬೀಜ, ಗೊಬ್ಬರಗಳಿಗೆ ಬೇಡಿಕೆ ಹೆಚ್ಚಬಹುದು. ರೈತರ ಒತ್ತಡ ಹೆಚ್ಚಾಗಲೂಬಹುದು ಅದನ್ನು ನಿರ್ವಹಿಸಲು ಬೇಕಾದ  ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ನಿಮ್ಮ ವರದಿಗಳ ಪ್ರಕಾರ  ಜಾನುವಾರುಗಳಿಗೆ ಮೇವಿನ ಸಂಗ್ರಹ ಕಡಿಮೆ ಇದೆ. ಇದನ್ನು  ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳು ನಿಮ್ಮ ತಂಡದ ಮೂಲಕ ಪರಿಶೀಲನೆ ಮಾಡಿಸಿ ಖಚಿತ ಪಡಿಸಿಕೊಳ್ಳಿ. ಕೊಳವೆ ಬಾವಿ ಸೇರಿದಂತೆ ಯಾರ್ಯಾರಲ್ಲಿ ನೀರಿನ ಮೂಲಗಳಿವೆಯೊ ಅವರು ಮೇವು ಬೆಳೆಯುವಂತೆ ಪ್ರೋತ್ಸಾಹ ನೀಡಿ. ಮೇವಿನ  ಬೀಜಗಳ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ಯಾವ ಜನವಸತಿ ಪ್ರದೇಶಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ನೀರಿನ ಸಂಗ್ರಹಣೆಗಳು ಹೆಚ್ಚು ಕಾಲ ಇರುವಂತಾದರೆ ಡೆಂಗ್ಯೂನಂತಹ ಕಾಯಿಲೆಗಳು ತೀವ್ರಗೊಳ್ಳಬಹುದು. ಅದರ ಕುರಿತು ಮುನ್ನೆಚ್ಚರಿಕೆ ವಹಿಸಿ. ರೈತರಿಗೆ ಕಡಿಮೆ ಮಳೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವಂತೆ ತಿಳಿಸಿದರು.
ನಿಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತುರ್ತು ಅಗತ್ಯಗಳಿಗಾಗಿ  5 ಕೋಟಿ ರೂ. ಗಳನ್ನು ಒದಗಿಸಿದ್ದೇವೆ. ಅದನ್ನು ಬಳಕೆ ಮಾಡಿ. ಕುಡಿಯುವ ನೀರಿಗೆ ಜಲಾಶಯಗಳ ನೀರನ್ನು ಬಳಸಿ. ಕೊಳವೆ ಬಾವಿಗಳಲ್ಲಿ ಖಾಲಿಯಾದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಳ್ಳಿ. ನಂತರವೂ ಸಮಸ್ಯೆಗಳಿದ್ದರೆ ಕೊಳವೆ ಬಾವಿಗಳನ್ನು ಡೀಪನಿಂಗ್‌ ಮಾಡಿ. ಕಡೆಯ ಆದ್ಯತೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು. ಈ ನಡುವೆ ತುರ್ತು ಅಗತ್ಯಗಳಿದ್ದರೆ ಟ್ಯಾಂಕರ್‌ ಬಳಸಿ ಎಂದು ಸೂಚಿಸಿದರು.
ರಾಜ್ಯದ ಪ್ರತಿ ತಾಲ್ಲೂಕಿಗೂ ಒಬ್ಬೊಬ್ಬರಂತೆ ಹಿರಿಯ ಕೆಎಎಸ್ ಅಧಿಕಾರಿಗಳನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಇವರನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಮುಖ್ಯ ಕಾರ್ಯದರ್ಶಿಯವರು ಈ ಕುರಿತು ಗಮನ ಹರಿಸಬೇಕು ಎಂದರು.
ಒಟ್ಟಾರೆ  ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಅಗತ್ಯ ಲಸಿಕೆ ಇತ್ಯಾದಿಗಳ ಕುರಿತು ಗಮನ ಹರಿಸಿ. ರೈತರಿಗೆ ಬೇಕಿರುವ ಬಿತ್ತನೆ ಬೀಜ, ಗೊಬ್ಬರಗಳ ದಾಸ್ತಾನನ್ನು  ಸಮರ್ಪಕವಾಗಿಟ್ಟುಕೊಳ್ಳಿ. ಕುಡಿಯುವ ನೀರಿಗೆ ತೊಂದರೆಯಾಗದಂತೆ  ನೋಡಿಕೊಳ್ಳಿ. ಈ ಭಾಗದಲ್ಲಿ ಉದ್ಯೋಗಕ್ಕಾಗಿ ಗುಳೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ನರೇಗಾ ಯೋಜನೆ ಕೂಡ ಮಾರ್ಪಾಟಾಗಿದೆ. ಲಭ್ಯ ಅನುದಾನ ಮತ್ತು ಯೋಜನೆಗಳನ್ನು ಬಳಸಿಕೊಂಡು ಜನರಿಗೆ ಉದ್ಯೋಗವನ್ನು ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
Tags: #MysuruDrought #GParameshwara #DrinkingWater #DroughtRelief #KarnatakaDrought #CattleCare #Fodder #Dengue #Chikungunya #WaterSupply #Tankers #Borewell #Farmers #MGNREGA #KarnatakaGovernment
ShareTweetSendShare
Join us on:

Related Posts

hebbal-first-grade-college-new-building-10-crore-byrathi-suresh

10 ಕೋ. ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ –  ಕಾಮಗಾರಿ ಶಿಲಾನ್ಯಾಸ ನೆರವೇರಿಸಿದ ಸಾರಿಗೆ ಸಚಿವ ಬೈರತಿ ಸುರೇಶ್

by admin
September 1, 2026
0

ಬೆಂಗಳೂರು: ಹೆಬ್ಬಾಳ ವಿಧಾನಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಂದು ಸುಸಜ್ಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಕ್ಷೇತ್ರದ ಶಾಸಕರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್...

mysuru-severe-drought-8-taluks-rainfall-deficit-g-parameshwara

ಮೈಸೂರಿನಲ್ಲಿ ಶೇ.55ರಷ್ಟು ಮಳೆ ಕೊರತೆ ; 8 ತಾಲೂಕುಗಳು ತೀವ್ರ ಬರ ಪೀಡಿತ ಎಂದು ಘೋಷಣೆ

by admin
September 1, 2026
0

ಮೈಸೂರು, : ಇಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಮೈಸೂರಿನ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾ...

karnataka-water-interests-legal-fight-chaluvarayaswamy-delhi-meeting |

“ರಾಜ್ಯದ ಜಲ ಹಿತಾಸಕ್ತಿ ರಕ್ಷಣೆಗೆ ರಾಜಿಯಿಲ್ಲ – ಕಾನೂನು ಹೋರಾಟ ಚುರುಕು – ಕಾನೂನು ತಂಡಕ್ಕೆ ಸಚಿವ ಚಲುವರಾಯಸ್ವಾಮಿ ಖಡಕ್ ಸೂಚನೆ”

by admin
September 1, 2026
0

"ದೆಹಲಿಯಲ್ಲಿ ಸಚಿವ ಚಲುವರಾಯಸ್ವಾಮಿ ಮೆಗಾ ಸಭೆ - ಕಾವೇರಿ, ಕೃಷ್ಣಾ, ಮಹದಾಯಿ, ಪೆನ್ನೈಯಾರ್ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ವಾದಕ್ಕೆ ರಣತಂತ್ರ" "ಮೇಕೆದಾಟು DPR, ಅರಣ್ಯ ಅನುಮೋದನೆಗೆ...

charchge-barada-bjp-eega-padayatre-priyank-kharge

ಚರ್ಚೆಗೆ ಬಾರದ ಬಿಜೆಪಿ ಈಗ ಪಾದಯಾತ್ರೆ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ

by admin
September 1, 2026
0

ಕಲಬುರಗಿ - ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿ ಬಿಜೆಪಿ ಆರಂಭಿಸಿರುವ ಪಾದಯಾತ್ರೆಯ ಉದ್ದೇಶವೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

bhraṣṭacharada-pitamaharinda-padayatre-shivaraj-tangadagi

ಭ್ರಷ್ಟಾಚಾರದ ಪಿತಾಮಹರಿಂದಲೇ ಪಾದಯಾತ್ರೆ: ಸಚಿವ ಶಿವರಾಜ ಎಸ್ ತಂಗಡಗಿ ಕಿಡಿ

by admin
September 1, 2026
0

ಕೊಪ್ಪಳ: ‘ಭ್ರಷ್ಟಾಚಾರದ ಪಿತಾಮಹರೇ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ನಡೆಸುತ್ತಿರುವ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂದೆ ಯಾಕೆ ಜೈಲಿಗೆ ಹೋಗಿದ್ದರು? ಅಕ್ರಮಗಳ ಹಿನ್ನೆಲೆ ಜೈಲು ಪಾಲಾಗಿದ್ದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram