ಮಾಧ್ಯಮ ಆಹ್ವಾನ
ಸಂಪಾದಕರು/ ಮುಖ್ಯವರದಿಗಾರರು/ಕ್ರೀಡಾ ಸಂಪಾದಕರು
ಸಿಎಂ ಕಪ್ ಆಯೋಜಿಸಿದ್ದ 9 ಡ್ರಿಮ್ಸ್ ತಂಡವು ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ಜಿಕೆವಿಕೆ ಮೈದಾನದಲ್ಲಿ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ ಆಯೋಜಿಸಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ. ಸೆಪ್ಟೆಂಬರ್ 5ರ ಸಂಜೆ 4.30ಕ್ಕೆ ಮಾನ್ಯ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಈ ಟೂರ್ನಿಯಲ್ಲಿ ಮಾಧ್ಯಮ ಮಿತ್ರರು, ಪೆÇಲೀಸ್ ಅಧಿಕಾರಿಗಳು, ಸೆಲೆಬ್ರಿಟಿಗಳು ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರು ಕ್ರೀಡಾಪಟುವಾಗಿ ಕಣಕ್ಕಿಳಿಯಲಿದ್ದಾರೆ. ಟೂರ್ನಿಯ ಉದ್ಘಾಟನಾ ಕಾರ್ಯಕ್ರಮ ಹಾಗೂ ಪಂದ್ಯಗಳ ವರದಿಗಾಗಿ ತಮ್ಮ ಮಾಧ್ಯಮದ ವರದಿಗಾರರು ಮತ್ತು ಛಾಯಾಗ್ರಾಹಕರನ್ನು ಕಳುಹಿಸಿಕೊಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ- ಜಿಕೆವಿಕೆ ಮೈದಾನ ಬಳ್ಳಾರಿ ರಸ್ತೆ
ದಿನಾಂಕ -2026 ಸೆಪ್ಟೆಂಬರ್ 5 ಮತ್ತು 6
ಉದ್ಘಾಟನೆ -2026 ಸೆಪ್ಟೆಂಬರ್ 5, ಸಮಯ ಸಂಜೆ 4.30ಕ್ಕೆ
ಹೆಚ್ಚಿನ ಮಾಹಿತಿಗಾಗಿ
8105932421
ಬ್ಯಾಟ್ & ಬಾಲ್ ಸಮರಕ್ಕೆ ಸಜ್ಜಾದ ಮಾಧ್ಯಮ ಲೋಕ..!
ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ
ಬೆಂಗಳೂರು: ಸದಾ ಸುದ್ದಿ, ಕ್ಯಾಮೆರಾ ಮತ್ತು ಮೈಕ್ ಹಿಡಿದು ಓಡಾಡುವ ಮಾಧ್ಯಮ ಮಿತ್ರರು ಇದೀಗ ಬ್ಯಾಟ್ & ಬಾಲ್ ಹಿಡಿದು ಕ್ರಿಕೆಟ್ ಅಂಗಣಕ್ಕಿಳಿಯಲು ಸಜ್ಜಾಗಿದ್ದಾರೆ.
ಸಿಎಂ ಕಪ್ ಆಯೋಜಿಸಿದ್ದ 9 ಡ್ರಿಮ್ಸ್ ತಂಡವು ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ಜಿಕೆವಿಕೆ ಮೈದಾನದಲ್ಲಿ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ ಆಯೋಜಿಸಿದೆ.
ಎರಡು ದಿನಗಳ ಈ ಕ್ರಿಕೆಟ್ ಹಬ್ಬದಲ್ಲಿ 12 ತಂಡಗಳು ಹಾಗೂ 180ಕ್ಕೂ ಅಧಿಕ ಆಟಗಾರರು ಭಾಗವಹಿಸಲಿದ್ದಾರೆ. ಮಾಧ್ಯಮ ಮಿತ್ರರು, ಪೆÇಲೀಸ್ ಅಧಿಕಾರಿಗಳು, ಸೆಲೆಬ್ರಿಟಿಗಳು ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರು ಒಂದೇ ಮೈದಾನದಲ್ಲಿ ಮುಖಾಮುಖಿಯಾಗಲಿದ್ದಾರೆ.
ಬಿಡುವಿಲ್ಲದ ಕೆಲಸದ ಒತ್ತಡದ ನಡುವೆ ಮಾಧ್ಯಮ ಮಿತ್ರರನ್ನು ಕ್ರಿಕೆಟ್ ಮೈದಾನದಲ್ಲಿ ಒಗ್ಗೂಡಿಸುವುದೇ ಟೂರ್ನಿಯ ಪ್ರಮುಖ ಉದ್ದೇಶವಾಗಿದೆ. ಕ್ರಿಕೆಟ್ ಜೊತೆಗೆ ಸ್ನೇಹ, ಸೌಹಾರ್ದ ಮತ್ತು ಕ್ರೀಡಾಸ್ಫೂರ್ತಿಯ ಸಂಭ್ರಮಕ್ಕೂ ಈ ಟೂರ್ನಿ ವೇದಿಕೆಯಾಗಲಿದೆ.
ಜಮೀರ್ ಅಹಮ್ಮದ್ ಖಾನ್ ಅವರಿಂದ ಚಾಲನೆ
ಸೆಪ್ಟೆಂಬರ್ 5ರಂದು ಸಂಜೆ 4.30ಕ್ಕೆ ಮಾನ್ಯ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮಿ ನಾರಾಯಣ್, ಜಿಕೆವಿಕೆ ಕುಲಪತಿ ಡಾ. ಎಸ್.ವಿ. ಸುರೇಶ್, ಸಕ್ರಾ ವಲ್ರ್ಡ್ ಹಾಸ್ಪಿಟಲ್ನ ಸಹಾಯಕ ಉಪಾಧ್ಯಕ್ಷ ಗುರುಪ್ರದ ಪೂಂಜಾ, ಆರ್ಸಿಪಿಎಲ್ನ ಸಾರ್ವಜನಿಕ ಸಂವಹನ ಪ್ರತಿನಿಧಿ ಅರ್ನಾಬ್ ದುತ್ತಾ, ಝೆನ್ಹೊರಾ ಕಾಪೆರ್Çರೇಷನ್ನ ಸಂಸ್ಥಾಪಕ ಎನ್. ಹರಿಪ್ರಸಾದ್, 9 ಡ್ರೀಮ್ಸ್ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಟೂರ್ನಿಯ ಮೊದಲ ದಿನವಾದ ಸೆಪ್ಟೆಂಬರ್ 5ರಂದು ಲೀಗ್ ಪಂದ್ಯಗಳು ನಡೆಯಲಿದ್ದು, ಎರಡನೇ ದಿನವಾದ ಸೆಪ್ಟೆಂಬರ್ 6ರಂದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.
ಎರಡು ದಿನಗಳ ಈ ಕ್ರಿಕೆಟ್ ಸಮರದಲ್ಲಿ ಗೆಲುವಿಗಾಗಿ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿದ್ದು, ಮೈದಾನದಲ್ಲಿ ರೋಚಕ ಕ್ಷಣಗಳು, ಸಿಕ್ಸರ್ಗಳ ಸದ್ದು, ವಿಕೆಟ್ಗಳ ಸಂಭ್ರಮ ಹಾಗೂ ಕ್ರೀಡಾಸ್ಫೂರ್ತಿಯ ಕಳೆ ಮೂಡಲಿದೆ.
ಕಣಕ್ಕಿಳಿಯಲಿರುವ 12 ತಂಡಗಳು
ದೇವ್ ಬ್ಯಾಟಲರ್ಸ್
ವಿನಿಶಾ ವಾರಿಯರ್ಸ್
ಅರವಿಂದ್ ಅವೆಂಜರ್ಸ್
ಟೀಮ್ ಪವರ್ಂ
ಬಿ.ಝಡ್. ವಾರಿಯರ್ಸ್
ಬಿಎಸ್ ಬುಲ್ಸ್
ಟೀಮ್ ಅಪ್ಪು
ಅರುಣ್ ವಿನಯ ಸ್ಟ್ರೈಕರ್ಸ್
ನಂದಿ ಬ್ಲಾಸ್ಟರ್ಸ್
ಪ್ರತಿಧ್ವನಿ ಚಾಲೆಂಜರ್ಸ್
ಡೆವಿನ್ ವಂಡರ್ ವಾರಿಯರ್ಸ್
ಪೆÇ್ರೀ ವಿನ್ ಪ್ರೈಡ್ಸ್
ಒಟ್ಟಿನಲ್ಲಿ ಸುದ್ದಿ ಹೊತ್ತು ತರುವ ಕೈಗಳು ಈಗ ಚೆಂಡು ಬ್ಯಾಟ್ ಹಿಡಿದು ಮೈದಾನದಲ್ಲಿ ರಣಕಹಳೆ ಮೊಳಗಿಸಲಿದೆ. ಯಾರ ಬ್ಯಾಟ್ ಸದ್ದು ಮಾಡಲಿದೆ..? ಯಾರ ಬೌಲಿಂಗ್ ಮಿಂಚಲಿದೆ..?ಯಾರು ಚಾಂಪಿಯನ್..? ಯಾರು ರನ್ನರ್ಅಪ್..?
ಈ ಎಲ್ಲ ಕುತೂಹಲಗಳಿಗೆ ಸೆಪ್ಟೆಂಬರ್ 5 ಮತ್ತು 6ರಂದು ನಡೆಯಲಿರುವ ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ ಉತ್ತರ ನೀಡಲಿದೆ.








