ADVERTISEMENT
Saturday, September 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

Shwetha by Shwetha
September 5, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಮೂಡಿಗೆರೆ: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದ ವಿಚಾರವಾಗಿ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತದಿದ್ದರೆ ಅವರನ್ನು ಮೂಲೆಗೆ ಕೂರಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯದಲ್ಲಿ ಮಹಿಳೆಯರ ಅಸಹಾಯಕ ಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾವು ಗಟ್ಟಿ ಮತ್ತು ಸಮರ್ಥರು ಎಂಬುದನ್ನು ತೋರಿಸಿಕೊಡದಿದ್ದರೆ ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯು ನಮ್ಮನ್ನು ಕಡೆಗಣಿಸುತ್ತದೆ ಎಂದು ಅವರು ವಿಷಾದಿಸಿದರು.

Related posts

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

September 5, 2026
ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

September 5, 2026

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಈ ಬಗ್ಗೆ ಕಿವಿಮಾತು ಹೇಳಿದ್ದನ್ನು ಸ್ಮರಿಸಿದ ಮೋಟಮ್ಮ, ಸಚಿವ ಸ್ಥಾನ ನಿನಗೆ ಸಿಗಲಿ ಅಥವಾ ನನಗೆ ಸಿಗಲಿ, ಅದು ಮುಖ್ಯವಲ್ಲ. ಆದರೆ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಬೇಕೇ ಬೇಕು ಎಂದು ನಾವೆಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಹೇಳಿದ್ದೆ. ಆ ರೀತಿ ಸಂಘಟಿತ ಹೋರಾಟ ಮಾಡದಿದ್ದರೆ ಯಾರೂ ನಮ್ಮನ್ನು ಕೇರ್ ಮಾಡುವುದಿಲ್ಲ ಎಂದು ನೇರವಾಗಿ ನುಡಿದರು.

ಮನೆಯ ಉದಾಹರಣೆ ನೀಡುತ್ತಾ ಮಹಿಳೆಯರನ್ನು ಹುರಿದುಂಬಿಸಿದ ಅವರು, ಮನೆಯಲ್ಲಾಗಲಿ ಅಥವಾ ರಾಜಕಾರಣದಲ್ಲಾಗಲಿ ಹೆಣ್ಣುಮಕ್ಕಳು ಗಟ್ಟಿಯಾಗಿ ಮಾತನಾಡದಿದ್ದರೆ ಗಂಡ ಅಥವಾ ಮಾವ ಕೂಡ ಗುರುತಿಸುವುದಿಲ್ಲ. ಅದೇ ರೀತಿ ರಾಜಕೀಯದಲ್ಲೂ ನಮ್ಮ ಸ್ಥಾನಮಾನಕ್ಕಾಗಿ ನಾವೇ ಹೋರಾಡಬೇಕಿದೆ. ಇಲ್ಲವಾದರೆ ಸುಮ್ಮನೆ ಒಂದು ಮೂಲೆಯಲ್ಲಿ ಕೂರಿಸುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಚನೆಯಾದ ಸಂಪುಟದಲ್ಲಿ ಹೆಚ್ಚಿನ ಮಹಿಳೆಯರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗದಿರುವುದು ಈಗ ಪಕ್ಷದ ಒಳಗಿನ ಹಿರಿಯ ನಾಯಕಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಮೋಟಮ್ಮ ಅವರ ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ShareTweetSendShare
Join us on:

Related Posts

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

by Shwetha
September 5, 2026
0

ಉದ್ಯೋಗಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಿರುವ ಬಾಕಿ ಅಥವಾ ಬಡ್ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ...

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

by Shwetha
September 5, 2026
0

ಬೆಂಗಳೂರು: ಶಸ್ತ್ರಸಜ್ಜಿತ ನಕ್ಸಲಿಸಂ ಗಿಂತಲೂ ಇಂದು ದೇಶವನ್ನು ಒಳಗಿನಿಂದಲೇ ನಶಿಸುವಂತೆ ಮಾಡುತ್ತಿರುವ ಬೌದ್ಧಿಕ ಅಥವಾ ದಿಮಾಗಿ ನಕ್ಸಲಿಸಂ ಅತ್ಯಂತ ಅಪಾಯಕಾರಿಯಾಗಿದೆ. ಈ ಅದೃಶ್ಯ ಶತ್ರುಗಳ ವಿರುದ್ಧ ಸಮಾಜದಲ್ಲಿ...

ಫೋಕ್ಸ್‌ವ್ಯಾಗನ್‌ಗೆ ಭಾರೀ ಪುನರ್‌ರಚನೆ: ವಿಶ್ವಾದ್ಯಂತ 1 ಲಕ್ಷ ಉದ್ಯೋಗ ಕಡಿತಕ್ಕೆ ನಿರ್ಧಾರ

ಫೋಕ್ಸ್‌ವ್ಯಾಗನ್‌ಗೆ ಭಾರೀ ಪುನರ್‌ರಚನೆ: ವಿಶ್ವಾದ್ಯಂತ 1 ಲಕ್ಷ ಉದ್ಯೋಗ ಕಡಿತಕ್ಕೆ ನಿರ್ಧಾರ

by Shwetha
September 5, 2026
0

ಜಾಗತಿಕ ಆಟೋಮೊಬೈಲ್‌ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಜರ್ಮನಿಯ ಕಾರು ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್‌ ಭಾರೀ ಪ್ರಮಾಣದ ಪುನರ್‌ರಚನೆಗೆ ಮುಂದಾಗಿದೆ. ಸಂಸ್ಥೆಯ ಕಾರ್ಯಾಚರಣಾ ವೆಚ್ಚವನ್ನು ಕಡಿಮೆ ಮಾಡುವುದು,...

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ

by Shwetha
September 5, 2026
0

ಮಥುರಾ: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭೂತಪೂರ್ವ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಥುರಾದಲ್ಲಿ...

21 ಉನ್ನತ ಶಿಕ್ಷಣ ಪ್ರಾಧ್ಯಾಪಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

21 ಉನ್ನತ ಶಿಕ್ಷಣ ಪ್ರಾಧ್ಯಾಪಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

by Shwetha
September 5, 2026
0

ವಿಶ್ವವಿದ್ಯಾಲಯಗಳ ಬೋಧನೆ ಇದೀಗ ಕೇವಲ ತರಗತಿ ಕೊಠಡಿಗಳಿಗೆ ಸೀಮಿತವಾಗದೆ, ಅಪರಾಧ ಪ್ರಯೋಗಾಲಯಗಳು, ಹವಾಮಾನ ಮುನ್ಸೂಚನೆ ಕೇಂದ್ರಗಳು ಹಾಗೂ ಸಮುದಾಯ ಆಧಾರಿತ ಕ್ಷೇತ್ರ ಯೋಜನೆಗಳವರೆಗೆ ವಿಸ್ತರಿಸಿದೆ. ಶಿಕ್ಷಣ, ಸಂಶೋಧನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram