ADVERTISEMENT
Saturday, September 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ನನಗಾದ ಅನ್ಯಾಯಕ್ಕೆ ನಾನೂ ಜಿರಳೆಯಾಗಬೇಕಿತ್ತೇ?ಸಾಲಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೂ ನನ್ನನ್ನು ದೇಶಭ್ರಷ್ಟ ಎನ್ನುವುದೇಕೆ? :ಭಾರತ ಸರ್ಕಾರದ ವಿರುದ್ಧ ವಿಜಯ್ ಮಲ್ಯ ಆಕ್ರೋಶ

Shwetha by Shwetha
September 12, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಸುಮಾರು 9,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ, ಭಾರತೀಯ ತನಿಖಾ ಸಂಸ್ಥೆಗಳು ಹಾಗೂ ಸರ್ಕಾರದ ವಿರುದ್ಧ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಅನ್ಯಾಯದ ವಿರುದ್ಧದ ಪ್ರತಿಭಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಅವರು, ನನ್ನ ಜೀವನದಲ್ಲಿ ಅನುಭವಿಸಿದ ಮತ್ತು ಎದುರಿಸುತ್ತಿರುವ ಅನ್ಯಾಯವನ್ನು ನೋಡಿದರೆ, ನಾನೂ ಜಿರಳೆಯಾಗಬೇಕಿತ್ತೇ ಅನಿಸುತ್ತದೆ. ಬಹುಶಃ ಜಿರಳೆಯಾಗಿ ಬದುಕುವುದು ಉತ್ತಮವೇನೋ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ವಿರುದ್ಧದ ಕಾನೂನು ಕ್ರಮಗಳನ್ನು ಪ್ರಶ್ನಿಸಿ ಸರಣಿ ಪೋಸ್ಟ್ ಮಾಡಿರುವ ಮಲ್ಯ, ಜಾರಿ ನಿರ್ದೇಶನಾಲಯ (ಇ.ಡಿ) ಜತೆಗಿನ ತಮ್ಮ ಹಳೆಯ ವಿವಾದ ಹಾಗೂ ಸಾಲ ಮರುಪಾವತಿಯ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.

Related posts

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

September 12, 2026
ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

September 12, 2026

ಜಾರಿ ನಿರ್ದೇಶನಾಲಯವು ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿರುವ ಮಲ್ಯ, ಇ.ಡಿ ಸಲ್ಲಿಸಿರುವ ಅಧಿಕೃತ ದಾಖಲೆ ಪ್ರಕಾರ, 2021ರಲ್ಲೇ ನನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸುಮಾರು 14,131.60 ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗಿದೆ. ಮೂಲ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್‌ಗಳು ವಸೂಲಿ ಮಾಡಿಕೊಂಡಿದ್ದರೂ, ಕಳೆದ ಐದು ವರ್ಷಗಳಿಂದ ನನ್ನನ್ನು ಇಂದಿಗೂ ವಂಚಕ ಮತ್ತು ದೇಶಭ್ರಷ್ಟ ಎಂದು ಬಿಂಬಿಸುತ್ತಿರುವುದು ದುರಂತ. ಸಾಲ ತೀರುವಳಿಯಲ್ಲಿ ನ್ಯಾಯಯುತ ಲೆಕ್ಕಪತ್ರ ಸಲ್ಲಿಕೆಯಾಗುತ್ತಿಲ್ಲ, ಹೆಚ್ಚುವರಿಯಾಗಿ ಮುಟ್ಟುಗೋಲು ಹಾಕಿಕೊಂಡ ಹಣದಿಂದ ನನಗೆ ಎಷ್ಟು ಮರುಪಾವತಿಯಾಗಬೇಕಿದೆ ಎಂಬುದನ್ನು ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ ಎಂದು ದೂರಿದ್ದಾರೆ.

ದೇಶಭ್ರಷ್ಟ ಹಣೆಪಟ್ಟಿಗೆ ಆಕ್ಷೇಪ

ತಮಗೆ ನೀಡಿರುವ ಪಲಾಯನಗೈದ ಆರೋಪಿ ಎಂಬ ಹಣೆಪಟ್ಟಿಯನ್ನು ಬಲವಾಗಿ ವಿರೋಧಿಸಿರುವ ಅವರು, ಸಾಲ ಮರುಪಾವತಿಯು ಭಾರತದಲ್ಲಿನ ತಮ್ಮ ಭೌತಿಕ ಉಪಸ್ಥಿತಿಯ ಮೇಲೆ ಅವಲಂಬಿತವಾಗಿರಬಾರದು ಎಂದು ವಾದಿಸಿದ್ದಾರೆ. ನಾನು 1992ರಿಂದ ಯುನೈಟೆಡ್ ಕಿಂಗ್‌ಡಮ್‌ನ (UK) ಶಾಶ್ವತ ನಿವಾಸಿಯಾಗಿದ್ದೇನೆ. ಬ್ರಿಟನ್‌ನಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ನನ್ನನ್ನು ಈ ದೇಶ ತೊರೆಯದಂತೆ ತಡೆದಿವೆ. ಹೀಗಿದ್ದರೂ ನನ್ನನ್ನು ಭಾರತಕ್ಕೆ ಬರಲು ನಿರಾಕರಿಸುತ್ತಿರುವ ಭಗೋಡ ಎಂದು ಕರೆಯಲಾಗುತ್ತಿದೆ. ಶಾಶ್ವತ ನಿವಾಸ ಮತ್ತು ಪೌರತ್ವದ ನಡುವಿನ ವ್ಯತ್ಯಾಸವನ್ನು ಜನರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಭಾರತದಲ್ಲಿ 2018ರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿಯಲ್ಲಿ ದೇಶಭ್ರಷ್ಟ ಅಪರಾಧಿ’ ಎಂದು ಘೋಷಿಸಲ್ಪಟ್ಟ 15 ಜನರಲ್ಲಿ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಪ್ರಮುಖರು. ಈ ವಿಚಾರವಾಗಿ ಬಾಂಬೆ ಹೈಕೋರ್ಟ್‌ನಲ್ಲಿ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಲಯದ ವಿಚಾರಣೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿರುವ ವ್ಯಕ್ತಿಗೆ ಯಾವುದೇ ತಡೆಯಾಜ್ಞೆ ಅಥವಾ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಹೈಕೋರ್ಟ್, ಭಾರತಕ್ಕೆ ಹಿಂತಿರುಗುವ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಲು ಅಂತಿಮ ಅವಕಾಶವನ್ನು ನೀಡಿತ್ತು.

ShareTweetSendShare
Join us on:

Related Posts

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

by Shwetha
September 12, 2026
0

ಬೆಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಈಗ ಸರ್ಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಿದ್ಧತೆ ನಡೆಸಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ವಿಚಾರ ಮತ್ತು ಸರ್ಕಾರಿ ನೌಕರರ ಹಿತರಕ್ಷಣೆಯನ್ನು...

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

by Shwetha
September 12, 2026
0

ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯು ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ವಿಶೇಷವೆಂದರೆ, ಈ ಅಂತರಾಷ್ಟ್ರೀಯ ಮಟ್ಟದ ವಿಚಾರದಲ್ಲಿ ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್...

ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ನನ್ನ ಕಲ್ಪನೆ, ಅನ್ನಭಾಗ್ಯ ಮಾತ್ರ ಸಿದ್ದರಾಮಯ್ಯ ಅವರದ್ದು: ಸಿಎಂ ಡಿ.ಕೆ. ಶಿವಕುಮಾರ್

ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ನನ್ನ ಕಲ್ಪನೆ, ಅನ್ನಭಾಗ್ಯ ಮಾತ್ರ ಸಿದ್ದರಾಮಯ್ಯ ಅವರದ್ದು: ಸಿಎಂ ಡಿ.ಕೆ. ಶಿವಕುಮಾರ್

by Shwetha
September 12, 2026
0

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಪಂಚ ಗ್ಯಾರಂಟಿಗಳ ಪೈಕಿ 10 ಕೆ.ಜಿ. ಅಕ್ಕಿ...

ಸರ್ಕಾರದ ನಿಲುವು ತಿಳಿಸಲು ಎಂಟು ಸಾರಥಿಗಳು ಸಚಿವ ಸಂಪುಟದ ಪ್ರಭಾವಿ ನಾಯಕರಿಗೆ ಹೊಸ ಜವಾಬ್ದಾರಿ

ಸರ್ಕಾರದ ನಿಲುವು ತಿಳಿಸಲು ಎಂಟು ಸಾರಥಿಗಳು ಸಚಿವ ಸಂಪುಟದ ಪ್ರಭಾವಿ ನಾಯಕರಿಗೆ ಹೊಸ ಜವಾಬ್ದಾರಿ

by Shwetha
September 12, 2026
0

ಮಾಧ್ಯಮಗಳು ಸೇರಿದಂತೆ ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ರಾಜ್ಯ ಸರ್ಕಾರದ ನಿಲುವುಗಳನ್ನು ಸಮರ್ಥವಾಗಿ ಮಂಡಿಸಲು ಹಾಗೂ ಸರ್ಕಾರದ ಪರವಾಗಿ ಅಧಿಕೃತ ಸ್ಪಷ್ಟೀಕರಣ ನೀಡುವ ಮಹತ್ವದ ಜವಾಬ್ದಾರಿಯನ್ನು ಎಂಟು ಮಂದಿ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 12, 2026
0

ದಿನ ಭವಿಷ್ಯ: 12-09-2026 ಮೇಷ ರಾಶಿ (Aries) ಇಂದು ನಿಮಗೆ ಅತ್ಯಂತ ಕ್ರಿಯಾಶೀಲ ಮತ್ತು ಲಾಭದಾಯಕ ದಿನವಾಗಿದೆ. ಶನಿ ದೇವನ ಪ್ರಭಾವದಿಂದ ನಿಮ್ಮ ಶ್ರಮಕ್ಕೆ ತಕ್ಕ ಫಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram