ADVERTISEMENT
Tuesday, September 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ

admin by admin
September 15, 2026
in Newsbeat, National, ದೇಶ - ವಿದೇಶ, ನ್ಯೂಸ್ ಬೀಟ್
mandalao-vantara-launch-historic-elephant-conservation-programme-laos

mandalao-vantara-launch-historic-elephant-conservation-programme-laos

Share on FacebookShare on TwitterShare on WhatsappShare on Telegram

* ಈ ಪಾಲುದಾರಿಕೆಯು ಆನೆಗಳ ಪಶುವೈದ್ಯಕೀಯ ಸಾಮರ್ಥ್ಯವನ್ನು ವಿಸ್ತರಿಸಲಿದೆ. ಆನೆಗಳಿಗೆ ವಿಶ್ರಾಂತಿ ಹಾಗೂ ಆಜೀವ ಆರೈಕೆಯನ್ನು ಒದಗಿಸಲಿದೆ ಮತ್ತು ಲಾವೋಸ್‌ನ ಕಾಡು ಆನೆಗಳ ಸಂರಕ್ಷಣೆಗೆ ಬಲ ತುಂಬಲಿದೆ.

ಲುವಾಂಗ್ ಪ್ರಬಾಂಗ್, ಲಾವೋಸ್ | ಸೆಪ್ಟೆಂಬರ್ 09, 2026: ಲಾವೋಸ್‌ನಲ್ಲಿ ಆನೆಗಳ ಕಲ್ಯಾಣ, ವಿಶೇಷ ಪಶುವೈದ್ಯಕೀಯ ಆರೈಕೆ ಮತ್ತು ಸಂರಕ್ಷಣೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ‘ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್’ ಮತ್ತು ಭಾರತದ ಗುಜರಾತ್ ಮೂಲದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ‘ವಂತರಾ’ ಇಂದು ಮಹತ್ವದ ಜಂಟಿ ಕಾರ್ಯಕ್ರಮವನ್ನು ಘೋಷಿಸಿವೆ. ಉಭಯ ಸಂಸ್ಥೆಗಳ ನಡುವೆ ಅಧಿಕೃತವಾಗಿ ಒಡಂಬಡಿಕೆ (ಎಂಒಯು ) ಸಹಿ ಹಾಕಲಾಗಿದೆ.

Related posts

hosa-ashaya-noothana-kayakalpadondige-karnataka-sangha-qatar-kannada-pathashale-punararambha

ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕರ್ನಾಟಕ ಸಂಘ ಕತಾರ್‌ನ ‘ಕನ್ನಡ ಪಾಠಶಾಲೆ’ ಪುನರಾರಂಭ

September 15, 2026
mukesh-ambani-calls-for-more-women-leadership-in-corporate-sector

ಕಾರ್ಪೊರೇಟ್‌ ವಲಯಕ್ಕೆ ಮಹಿಳಾ ನಾಯಕತ್ವ ಅಗತ್ಯ: ಮುಕೇಶ್‌ ಅಂಬಾನಿ

September 15, 2026

ಲಾವೋಸ್‌ನ ಆನೆಗಳ ಪ್ರಸ್ತುತ ಸ್ಥಿತಿಗತಿ:

ಒಂದು ಕಾಲದಲ್ಲಿ “ಒಂದು ಮಿಲಿಯನ್ ಆನೆಗಳ ಭೂಮಿ” ಎಂದೇ ಖ್ಯಾತಿ ಪಡೆದಿದ್ದ ಲಾವೋಸ್‌ನಲ್ಲಿ, ಪ್ರಸ್ತುತ ಅಂದಾಜು 400 ಕಾಡು ಆನೆಗಳು ಮತ್ತು 400ಕ್ಕೂ ಹೆಚ್ಚು ಸಾಕು ಆನೆಗಳು ಮಾತ್ರ ಉಳಿದಿವೆ. ಈ ಎರಡೂ ಗುಂಪುಗಳ ಸಂಖ್ಯೆ ನಿರಂತರವಾಗಿ ಕುಸಿಯುತ್ತಿದ್ದು, ಕಾಡಾನೆಗಳ ಆವಾಸಸ್ಥಾನ ನಾಶ, ಮಾನವ-ಆನೆ ಸಂಘರ್ಷ ಹಾಗೂ ಬೇಟೆಯಾಡುವಿಕೆಯಿಂದ ಬಳಲುತ್ತಿದ್ದರೆ; ಸಾಕು ಆನೆಗಳು ಮರ ಕಡಿಯುವ ಕೆಲಸ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿವೆ. ಲಾವೋಸ್‌ನಲ್ಲಿ ಪ್ರತಿ 1 ರಿಂದ 2 ಆನೆಗಳು ಜನಿಸಿದರೆ, ಸುಮಾರು 10 ಆನೆಗಳು ಸಾವನ್ನಪ್ಪುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ರಾಷ್ಟ್ರೀಯ ತುರ್ತು ಸ್ಪಂದನಾ ತಂಡ ಮತ್ತು ಮೊಬೈಲ್ ಘಟಕ:

ಈ ಬಿಕ್ಕಟ್ಟಿಗೆ ತಕ್ಷಣ ಸ್ಪಂದಿಸುವ ಸಲುವಾಗಿ, ಲಾವೋಸ್ ಸರ್ಕಾರದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಲುವಾಂಗ್ ಪ್ರಬಾಂಗ್‌ನ ಮಂಡಲಾವೊ ಸಂರಕ್ಷಣಾ ಕೇಂದ್ರದಲ್ಲಿ ‘ಎಲಿಫೆಂಟ್ ರಾಪಿಡ್ ರೆಸ್ಪಾನ್ಸ್ ಟೀಮ್’ ಅನ್ನು ಲೋಕಾರ್ಪಣೆಗೊಳಿಸಲಾಗಿದೆ.

ವಂತರಾ ಸಂಸ್ಥೆಯು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಮೊಬೈಲ್ ಎಲಿಫೆಂಟ್ ವೆಟರ್ನರಿ ಯೂನಿಟ್ (ಸಂಚಾರಿ ಪಶುವೈದ್ಯಕೀಯ ಘಟಕ) ಅನ್ನು ಒದಗಿಸಿದ್ದು, ಇದು ದೇಶದ ಯಾವುದೇ ಭಾಗದಲ್ಲಿರುವ ಅನಾರೋಗ್ಯಕ್ಕೀಡಾದ ಅಥವಾ ಗಾಯಗೊಂಡ ಕಾಡು ಹಾಗೂ ಸಾಕು ಆನೆಗಳಿಗೆ ತುರ್ತು ಚಿಕಿತ್ಸೆ ನೀಡಲಿದೆ. ಇದರೊಂದಿಗೆ ತುರ್ತು ಚಿಕಿತ್ಸೆ, ದೀರ್ಘಕಾಲೀನ ಆರೈಕೆ ಮತ್ತು ಪುನರ್ವಸತಿಗಾಗಿ ವಿಶೇಷ ಆಸ್ಪತ್ರೆಯೊಂದನ್ನು ಸಹ ಸ್ಥಾಪಿಸಲಾಗುತ್ತಿದೆ.

43 ವರ್ಷದ ಹೆಣ್ಣಾನೆ ‘ಮೈ ಖಮ್ನಾಯ್’ ರಕ್ಷಣೆ:

ಈ ಕಾರ್ಯಕ್ರಮದ ಆರಂಭದ ದಿನವೇ ಜೀವಮಾನವೆಲ್ಲಾ ಮರ ಕಡಿಯುವ ಕಠಿಣ ಕೆಲಸ ಮಾಡಿ ನರಳುತ್ತಿದ್ದ 43 ವರ್ಷದ ‘ಮೈ ಖಮ್ನಾಯ್’ ಎಂಬ ಹೆಣ್ಣಾನೆಯನ್ನು ರಕ್ಷಿಸಲಾಗಿದೆ. ಈ ಆನೆಗೆ ಮಂಡಲಾವೊ ಕೇಂದ್ರದಲ್ಲಿ ಸುರಕ್ಷಿತ ನಿವೃತ್ತಿ ಜೀವನ, ಪೌಷ್ಟಿಕ ಆಹಾರ ಹಾಗೂ ಇAತಹದೇ ಇತರ ಆನೆಗಳೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶ ಕಲ್ಪಿಸಲಾಗಿದೆ.

ಪಶುವೈದ್ಯಕೀಯ ಸಾಮರ್ಥ್ಯ ವರ್ಧನೆ:

ಉದ್ಘಾಟನೆಯ ಭಾಗವಾಗಿ, ವಂತರಾ ಮತ್ತು ಮಂಡಲಾವೊದ ಪಶುವೈದ್ಯರ ತಂಡವು 12 ಆನೆಗಳಿಗೆ ಬೃಹತ್ ಆರೋಗ್ಯ ಶಿಬಿರ ನಡೆಸಿ ಸಮಗ್ರ ತಪಾಸಣೆ ನಡೆಸಿದೆ. ಜೊತೆಗೆ ಸ್ಥಳೀಯ ಪಶುವೈದ್ಯರು ಮತ್ತು ಆನೆಗಳ ಪಾಲಕರಿಗೆ ವಿಶೇಷ ತರಬೇತಿ ನೀಡುವ ಮೂಲಕ ಲಾವೋಸ್‌ನಲ್ಲಿ ದೀರ್ಘಕಾಲೀನ ಪ್ರಾಣಿ ಸಂರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತದೆ.

ಈ ಸಂದರ್ಭ ಮಾತನಾಡಿರುವ ಮಂಡಲಾವೋದ ಆನೆ ಪಶು ವೈದ್ಯಕೀಯ ತಜ್ಞ ಡಾ. ಟಿಮ್ ಬೌಟ್ಸ್‌, “ಈ ತುರ್ತು ಸ್ಪಂದನಾ ತಂಡದ ಸ್ಥಾಪನೆಯು ಲಾವೋಸ್ ಆನೆಗಳ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಆನೆಗಳ ಮಾಲೀಕರಿಗೆ ಮತ್ತು ಸರ್ಕಾರಿ ಇಲಾಖೆಗಳಿಗೆ ನಾವು ಈ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದೇವೆ. ವಂತರಾದ ಸಹಕಾರಕ್ಕೆ ನಮ್ಮ ಧನ್ಯವಾದಗಳು.ʼʼ ಎಂದರು.

ವಂತರಾದ ಅನುಸರಣೆ ಮತ್ತು ಶ್ರದ್ಧೆ ವಿಭಾಗದ ವಿಶೇಷ ನಿರ್ದೇಶಕ ಅಜಿತ್ ಕುಲಕರ್ಣಿ ಮಾತನಾಡಿ, “ಲಾವೋಸ್‌ನ ಆನೆಗಳ ರಕ್ಷಣೆಗಾಗಿ ಮಂಡಲಾವೊ ಜೊತೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಸ್ಥಳೀಯರ ಕೌಶಲ ವೃದ್ಧಿಸುವ ಮೂಲಕ ಲಾವೋಸ್ ಆನೆಗಳ ಭವಿಷ್ಯಕ್ಕೆ ಶಾಶ್ವತ ನೆರವು ನೀಡಲು ನಾವು ಬದ್ಧರಾಗಿದ್ದೇವೆ ” ಎಂದರು.

ShareTweetSendShare
Join us on:

Related Posts

hosa-ashaya-noothana-kayakalpadondige-karnataka-sangha-qatar-kannada-pathashale-punararambha

ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕರ್ನಾಟಕ ಸಂಘ ಕತಾರ್‌ನ ‘ಕನ್ನಡ ಪಾಠಶಾಲೆ’ ಪುನರಾರಂಭ

by admin
September 15, 2026
0

ದೋಹಾ (ಕತಾರ್): ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಪರಿಚಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ (KSQ)...

mukesh-ambani-calls-for-more-women-leadership-in-corporate-sector

ಕಾರ್ಪೊರೇಟ್‌ ವಲಯಕ್ಕೆ ಮಹಿಳಾ ನಾಯಕತ್ವ ಅಗತ್ಯ: ಮುಕೇಶ್‌ ಅಂಬಾನಿ

by admin
September 15, 2026
0

ಮುಂಬಯಿ: ಭಾರತದ ಕಾರ್ಪೊರೇಟ್‌ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ತಾಯಂದಿರನ್ನು ಬೆಂಬಲಿಸಲು ಎಲ್ಲರೂ ಒಟ್ಟಾಗಿ ಉತ್ತಮ ವ್ಯವಸ್ಥೆಯನ್ನು ರೂಪಿಸಬೇಕು. ಇಲ್ಲಿ ಮಹಿಳಾ ನಾಯಕತ್ವ ಹೆಚ್ಚಬೇಕು ಎಂದು...

jio-users-free-canva-pro-12-months-offer

ಜಿಯೋ ಬಳಕೆದಾರರಿಗೆ 12 ತಿಂಗಳ ಉಚಿತ ಕ್ಯಾನ್ವಾ ಪ್ರೊ

by admin
September 15, 2026
0

* 399 ರೂ.ಗಳ ಪ್ಲಾನ್‌ನಲ್ಲಿ ಕ್ಯಾನ್ವಾ ಪ್ರೊ, ಆಯ್ದ 2 ಜಿಬಿ / ದಿನದ ಯೋಜನೆಗಳಲ್ಲಿ ಕ್ಯಾನ್ವಾ ಪ್ರೊ ಲೈಟ್ ರೂ.349 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ...

vantara-madhuri-mahadevi-kolhapur-statement

ವಂತಾರಾದಿಂದ ಕೋಲ್ಹಾಪುರದ ಹೆಣ್ಣಾನೆ ಮಾಧುರಿ ಬಗ್ಗೆ ಹೇಳಿಕೆ ಬಿಡುಗಡೆ

by admin
September 15, 2026
0

ಜಾಮ್ ನಗರ (ಗುಜರಾತ್),  ಹೆಣ್ಣಾನೆ ಮಾಧುರಿ (ಮಹಾದೇವಿ) ಕುರಿತು ಅನಂತ್ ಅಂಬಾನಿ ನೇತೃತ್ವದಲ್ಲಿ ನಡೆಯುತ್ತಿರುವ ವಂತಾರಾದಿಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ. ವನ್ಯಜೀವಿಗಳ ಸಂರಕ್ಷಣೆ, ಪಾಲನೆ- ಪೋಷಣೆಗಾಗಿ ಮೀಸಲಾದ...

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

by Shwetha
September 13, 2026
0

ತುಮಕೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ಸರಣಿ ದಾಳಿಯ ವಿರುದ್ಧ ಸಹಕಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram