ADVERTISEMENT
Thursday, September 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ಗಾಡ್ ಪ್ರಾಮಿಸ್’ ಚಿತ್ರೀಕರಣ ಸಂಪೂರ್ಣ: ನವೆಂಬರ್‌ನಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾದ ಸೂಚನ್ ಶೆಟ್ಟಿ ಸಿನಿಮಾ!

admin by admin
September 17, 2026
in Cinema, Newsbeat, Uncategorized, ಮನರಂಜನೆ
god-promise-movie-shooting-completed-soochan-shetty-november-release

god-promise-movie-shooting-completed-soochan-shetty-november-release

Share on FacebookShare on TwitterShare on WhatsappShare on Telegram

ಬೆಂಗಳೂರು: ಶೀರ್ಷಿಕೆಯ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಕುತೂಹಲ ಕೆರಳಿಸಿರುವ ಯುವ ಪ್ರತಿಭೆ ಸೂಚನ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಗಾಡ್ ಪ್ರಾಮಿಸ್’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಶೂಟಿಂಗ್ ಪೂರ್ಣಗೊಂಡಿರುವ ಸಂಭ್ರಮದಲ್ಲಿರುವ ಚಿತ್ರತಂಡ, ತೆರೆಮರೆಯ ಆಕರ್ಷಕ ಕ್ಷಣಗಳನ್ನು ಒಳಗೊಂಡ ಮೇಕಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.

ಚಿತ್ರೀಕರಣ ಮುಗಿದ ಬೆನ್ನಲ್ಲೇ ಬಿಡುಗಡೆಯ ಸುಳಿವು ನೀಡಿರುವ ಚಿತ್ರತಂಡ, “ಮೊದಲ ಕ್ಲ್ಯಾಪ್‌ನಿಂದ ಹಿಡಿದು ಕೊನೆಯ ಶಾಟ್‌ವರೆಗೆ ಇದೊಂದು ಸುಂದರ ಪಯಣ. ತೆರೆಯ ಹಿಂದೆ ಸೆರೆಹಿಡಿದ ಅಸಂಖ್ಯಾತ ನೆನಪುಗಳೊಂದಿಗೆ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ನಮ್ಮ ಕಥೆ ಈಗ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದೆ. ‘ಗಾಡ್ ಪ್ರಾಮಿಸ್’ ಇದೇ ನವೆಂಬರ್‌ನಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಸೂಚನ್ ಶೆಟ್ಟಿಗೆ ಜೋಡಿಯಾಗಿ ಜೂಹಿ ಜಯಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ಪವಿ ಕೇರ್‌ಟೇಕರ್’, ‘ತಲೈವನ್ ತಲೈವಿ’ ಹಾಗೂ ‘ಸುಮತಿ ಒಲವು’ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಜೂಹಿ, ಈ ಚಿತ್ರದ ಮೂಲಕ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

Related posts

rocking-star-yash-body-transformation-for-toxic-movie-panipuri-kitty

‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್

September 17, 2026
nna-from-mexico-puttamalli-song-released-dhananjaya-december-24-release

‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’ ರಿಲೀಸ್‌, ಸೋಶಿಯಲ್‌ ಮೀಡಿಯಾದಲ್ಲಿ ಹವಾ; ಡಿಸೆಂಬರ್ 24ಕ್ಕೆ ಡಾಲಿ ಧನಂಜಯ ಸಿನಿಮಾ ರಿಲೀಸ್!

September 17, 2026

ಕರಾವಳಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ತಾರಾಗಣವೇ ಈ ಚಿತ್ರದಲ್ಲಿದೆ. ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ರಘು ಪಾಂಡೇಶ್ವರ, ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಸಿದ್ಧಿ ಪ್ರಶಾಂತ್, ಪ್ರಸಿದ್ಧ್ ನಾಗ್, ಶೋಭಾ ಶೆಟ್ಟಿ, ಪ್ರತಿಮಾ ನಾಯಕ್, ಅಕ್ಷತಾ ರೈ, ರಾಧಾಕೃಷ್ಣ ಕುಂಬ್ಳೆ, ಪ್ರಭಾಕರ್ ಕುಂದರ್, ರಾಮ್ ಕುಮಾರ್ ಉಪ್ಪುಂದ, ಜಯಶೀಲಾ ಮರೋಳಿ, ಶ್ರುತಿ ಭಟ್, ವಿಶಾಲ್ ಜೈವಿಕ್, ಚಂದ್ರಿಕಾ ಕಾಮತ್ ಹಾಗೂ ಶ್ರಾವ್ಯ ಪುತ್ರನ್ ಸೇರಿದಂತೆ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ.

ಪಾಂಚಜನ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್‌ನಡಿ ಮಹೇಂದ್ರ ಶೆಟ್ಟಿ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಭರತ್ ಮಧುಸೂದನನ್ ಸಂಗೀತ ಸಂಯೋಜಿಸಿದ್ದು, ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ ಹಾಗೂ ನವೀನ್ ಶೆಟ್ಟಿ ಅವರ ಸಂಕಲನವಿದೆ. ಜೊತೆಗೆ ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಹಾಗೂ ಎನ್. ಸರವಣ ಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ‘ಗಾಡ್ ಪ್ರಾಮಿಸ್’ ತಂಡ, ನವೆಂಬರ್‌ನಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಪ್ರೇಕ್ಷಕರ ಎದುರು ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Tags: #GodPromise #SoochanShetty #JuhiJayakumar #PramodShetty #AravindBolar #NaveenDPadeel #PanchajanyaFilmProduction #Sandalwood Key Words: #saakshatv
ShareTweetSendShare
Join us on:

Related Posts

rocking-star-yash-body-transformation-for-toxic-movie-panipuri-kitty

‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್

by admin
September 17, 2026
0

ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಭರ್ಜರಿಯಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದರು. ಯಶ್ ಅವರ ಈ ಸಾಲಿಡ್...

nna-from-mexico-puttamalli-song-released-dhananjaya-december-24-release

‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’ ರಿಲೀಸ್‌, ಸೋಶಿಯಲ್‌ ಮೀಡಿಯಾದಲ್ಲಿ ಹವಾ; ಡಿಸೆಂಬರ್ 24ಕ್ಕೆ ಡಾಲಿ ಧನಂಜಯ ಸಿನಿಮಾ ರಿಲೀಸ್!

by admin
September 17, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ನೂತನ ‘ಪುಟ್ಟಮಲ್ಲಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ....

dr-shivarajkumar-abhishan-jeevinth-picasso-movie-first-look-released

ಡಾ. ಶಿವರಾಜ್‌ಕುಮಾರ್ ಮತ್ತು ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

by admin
September 17, 2026
0

ಚೆನ್ನೈ: ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಡಾ. ಶಿವರಾಜ್‌ಕುಮಾರ್ ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು,...

dr-vishnuvardhan-amrutha-mahotsava-grand-rally-half-kilometer-flag-bengaluru

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

by admin
September 17, 2026
0

ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದೊಂದಿಗೆ ಮಹಾ ಮೆರವಣಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ 18 ಗಂಟೆಗಳ ಸಂಭ್ರಮ ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ,...

seetha-circle-sri-krishnan-mane-kalle-beeja-lyrical-song-released

ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’: ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಲಿರಿಕಲ್ ಹಾಡು ರಿಲೀಸ್‌!

by admin
September 17, 2026
0

ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’: ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಲಿರಿಕಲ್ ಹಾಡು ರಿಲೀಸ್‌! ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram