ADVERTISEMENT
Thursday, September 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’: ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಲಿರಿಕಲ್ ಹಾಡು ರಿಲೀಸ್‌!

admin by admin
September 17, 2026
in Cinema, Newsbeat, Uncategorized, ಮನರಂಜನೆ
seetha-circle-sri-krishnan-mane-kalle-beeja-lyrical-song-released

seetha-circle-sri-krishnan-mane-kalle-beeja-lyrical-song-released

Share on FacebookShare on TwitterShare on WhatsappShare on Telegram

ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’: ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಲಿರಿಕಲ್ ಹಾಡು ರಿಲೀಸ್‌!

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಚಿತ್ರತಂಡದಿಂದ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಮಹಾನ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರತೀತ್ ಅಕ್ಕಿ ನಿರ್ಮಿಸಿರುವ ಈ ಕಾಮಿಡಿ ಥ್ರಿಲ್ಲರ್ ಡ್ರಾಮಾ ಸಿನಿಮಾದ ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಎಂಬ ಮಜವಾದ ಲಿರಿಕಲ್ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Related posts

dr-shivarajkumar-abhishan-jeevinth-picasso-movie-first-look-released

ಡಾ. ಶಿವರಾಜ್‌ಕುಮಾರ್ ಮತ್ತು ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

September 17, 2026
dr-vishnuvardhan-amrutha-mahotsava-grand-rally-half-kilometer-flag-bengaluru

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

September 17, 2026

ಈ ಹಾಡಿಗೆ ಗಾಯಕ ದಿವ್ಯ ಕುಮಾರ್ ಧ್ವನಿಯಾಗಿದ್ದು, ರಾಘವೇಂದ್ರ ವಿ. ಅವರ ಆಕರ್ಷಕ ಸಂಗೀತ ಸಂಯೋಜನೆ ಕೇಳುಗರನ್ನು ಗುನುಗುವಂತೆ ಮಾಡಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಅಭಿನಂದನ್ ದೇಶಪ್ರಿಯ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಭೂಷಣ್ ಅವರ ನೃತ್ಯ ನಿರ್ದೇಶನ ಮತ್ತು ಉಜ್ವಲ್ ಚಂದ್ರ ಅವರ ಸಂಕಲನ ಹಾಡಿನ ದೃಶ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು, ಯುವ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಹೊಸತನ ಮತ್ತು ಪ್ರಯೋಗಶೀಲತೆಯೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿರುವ ಈ ಚಿತ್ರತಂಡ ಈಗಾಗಲೇ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ ಮತ್ತು ಹೊನ್ನಾವರದ ನಯನಮನೋಹರ ತಾಣಗಳಲ್ಲಿ ವಿಷ್ಣು ಪ್ರಸಾದ್, ವಿಶ್ವ ಪಾಟೀಲ್ ಹಾಗೂ ವಿದ್ಯಾ ಕಿರಣ್ ಅವರ ಕ್ಯಾಮೆರಾ ಕಣ್ಣಿನಲ್ಲಿ ಸಿನಿಮಾ ಸೆರೆಯಾಗಿದೆ. ಚೇತನ್ ರಾವ್ ಅವರ ಹಿನ್ನೆಲೆ ಸಂಗೀತ ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಚಿತ್ರದಲ್ಲಿ ಯುವನ್ ಹಣಕೋಡ್ ಹಾಗೂ ಅರ್ಜುನ್ ವೇದಾಂತ ಜೊತೆಗೆ ರಕ್ಷಿತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇವರೊಂದಿಗೆ ಹಿರಿಯ ನಟ ದತ್ತಣ್ಣ, ವಿಜಯ್ ಚಂಡೂರ್, ನವೀಂದ್ರ, ಅನಿಲ್ ಸಿದ್ದು, ನಾಗರಾಜ್ ಮೂರ್ತಿ, ಮಿಮಿಕ್ರಿ ಗೋಪಿ, ಮನ್‌ದೀಪ್ ರಾಯ್, ಪ್ರಶಾಂತ್ ವೈ.ಎನ್ ಮತ್ತು ವಿ. ರವಿ ಶಂಕರ್ ನಾಗ್ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದೆ. ಎಲ್ಲಿಯ ಸೀತಾ? ಎಲ್ಲಿಯ ಕೃಷ್ಣ? ಆ ಮನೆಯ ಮರ್ಮವೇನು ಎಂಬ ಕುತೂಹಲವನ್ನು ಹುಟ್ಟುಹಾಕಿರುವ ಚಿತ್ರತಂಡ, ಶೀಘ್ರದಲ್ಲೇ ಸಿನಿಮಾವನ್ನು ರಿಲೀಸ್ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ.

Tags: #SeethaCircleSriKrishnanMane #KalleBeejaSong #AbhinandanDeshapriya #YuvanHanakode #ArjunVedanta #Rakshitha #RaghavendraV #Sandalwood #saakshatv
ShareTweetSendShare
Join us on:

Related Posts

dr-shivarajkumar-abhishan-jeevinth-picasso-movie-first-look-released

ಡಾ. ಶಿವರಾಜ್‌ಕುಮಾರ್ ಮತ್ತು ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

by admin
September 17, 2026
0

ಚೆನ್ನೈ: ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಡಾ. ಶಿವರಾಜ್‌ಕುಮಾರ್ ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು,...

dr-vishnuvardhan-amrutha-mahotsava-grand-rally-half-kilometer-flag-bengaluru

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

by admin
September 17, 2026
0

ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದೊಂದಿಗೆ ಮಹಾ ಮೆರವಣಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ 18 ಗಂಟೆಗಳ ಸಂಭ್ರಮ ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ,...

actress-roja-to-attend-dr-vishnuvardhan-amrutha-mahotsava-bengaluru

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

by admin
September 17, 2026
0

‘ಯಜಮಾನ್ರ’ ಫೋಟೋ ನೋಡುತ್ತಿದ್ದಂತೆಯೇ ರೋಜಾ ಅವರ ಬಾಯಿಂದ ಬಂದ ಮೊದಲ ಪದ — “ಲೆಜೆಂಡ್” ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವಕ್ಕೆ ಬಹುಭಾಷಾ ಖ್ಯಾತ...

birbal-case-2-movie-announced-kvn-productions-shivarajkumar-mg-srinivas

ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಮತ್ತೊಂದು ಸಿನಿಮಾ : ‘ಬೀರ್‌ಬಲ್ ಕೇಸ್ 2’ ಅನೌನ್ಸ್; ಶಿವಣ್ಣ ಅತಿಥಿ ಪಾತ್ರ, ಖುಷ್ಬೂ-ಡೈಸಿ ಬೋಪಣ್ಣ ಭರ್ಜರಿ ಕಮ್‌ಬ್ಯಾಕ್!*

by admin
September 17, 2026
0

ಬೆಂಗಳೂರು: ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸಿನಿಪ್ರಿಯರಿಗೆ ಭರ್ಜರಿ ಕೊಡುಗೆ ನೀಡಿದೆ. ಗುಣಮಟ್ಟದ ಹಾಗೂ ಬೃಹತ್ ಕ್ಯಾನ್ವಾಸ್‌ನ ಸಿನಿಮಾಗಳ ಮೂಲಕ ಗಮನಸೆಳೆದಿರುವ ನಿರ್ಮಾಪಕ...

zee5-ott-new-avatar-ai-technology-free-5-hollywood-movies

ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ: AI ಆಧಾರಿತ ತಂತ್ರಜ್ಞಾನ, ಉಚಿತ ಮನರಂಜನೆಯ ‘ಫ್ರೀ 5’ ಮತ್ತು ಹಾಲಿವುಡ್ ಸಿನಿಮಾಗಳ ಭರ್ಜರಿ ಎಂಟ್ರಿ!

by admin
September 17, 2026
0

  ನವದೆಹಲಿ: ಭಾರತದ ಪ್ರಮುಖ ಸ್ವದೇಶಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ‘ಜೀ5’ (Zee5) ತನ್ನ ಬಳಕೆದಾರರಿಗೆ ಕಂಟೆಂಟ್ ಹುಡುಕಾಟ ಮತ್ತು ವೀಕ್ಷಣೆಯ ಅನುಭವವನ್ನು ಸಂಪೂರ್ಣವಾಗಿ ಹೊಸ ಎತ್ತರಕ್ಕೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram