ನಾಳೆಯಿಂದ ಕೊವಾಕ್ಸಿನ್ ಮಾನವ ಪ್ರಯೋಗ ಆರಂಭ
ನವದೆಹಲಿ : ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಭಾರತ್ ಬಯೋಟೆಕ್ ಮತ್ತು ಜಿಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೊವಾಕ್ಸಿನ್ ನ ಮಾನವ ಕ್ಲಿನಿಕಲ್ ಪ್ರಯೋಗವು ನಾಳೆಯಿಂದ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ನಡೆಯಲಿದೆ.
ಈ ಬಗ್ಗೆ ಏಮ್ಸ್ ಪ್ರಾಧ್ಯಾಪಕ ಸಂಜಯ್ ರೈ ಅವರು ಮಾಹಿತಿ ನೀಡಿದ್ದು, ಕೊವಾಕ್ಸಿನ್ ನ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಏಮ್ಸ್ ಎಥಿಕ್ಸ್ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ. ನಾಳೆಯಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲಿದ್ದು, 18ರಿಂದ 55 ವರ್ಷ ವಯೋಮಾನದವರಗಿನ ಆರೋಗ್ಯವಂತ ಹಾಗೂ ಕೋವಿಡ್-19 ಇಲ್ಲದವರನ್ನು ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಈ ಪ್ರಯೋಗದಲ್ಲಿ ಭಾಗವಹಿಸಲು ಇಚ್ಚಿಸುವ ಆರೋಗ್ಯವಂತ ವ್ಯಕ್ತಿಯು Ctaiims.covid19@gmail.comಗೆ ಇಮೇಲ್ ಕಳುಹಿಸಬಹುದು ಅಥವಾ SMS ಕಳುಹಿಸಬಹುದು ಅಥವಾ 7428847499ಗೆ ಕರೆ ಮಾಡಬಹುದು. ಮೊದಲ ಮತ್ತು ಎರಡನೇ ಹಂತದಲ್ಲಿ 375 ಸ್ವಯಂಸೇವಕರಲ್ಲಿ 100 ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಜಯ್ ರೈ ಅವರು ತಿಳಿಸಿದ್ದಾರೆ.